»   » ಮಾಡೋದೆಲ್ಲ ಮಾಡಿ ಈಗ ಕ್ಷಮೆ ಕೇಳಿದ್ರೆ ಸರಿ ಹೋಗುತ್ತಾ.?

ಮಾಡೋದೆಲ್ಲ ಮಾಡಿ ಈಗ ಕ್ಷಮೆ ಕೇಳಿದ್ರೆ ಸರಿ ಹೋಗುತ್ತಾ.?

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ರಿಯಾಜ್ ಬಳಿ ಕ್ಷಮೆ ಕೇಳಿದ ದಿವಾಕರ್ | Oneindia Kannada

ತಮಗೆ ಸಂಬಂಧ ಪಡೆದೇ ಇದ್ದರೂ... ಮಧ್ಯೆ ಮೂಗು ತೂರಿಸಿ... ಬಾಯಿಗೆ ಬಂದ ಹಾಗೆ ಮಾತನಾಡಿ... ಥೂ ಎಂದು ಉಗಿದು... ಎಷ್ಟೇ ಸಮಾಧಾನ ಮಾಡಿದರೂ ಸುಮ್ಮನಾಗದೆ 'ಬಿಗ್ ಬಾಸ್' ಮನೆಯಲ್ಲಿ ಮಧ್ಯರಾತ್ರಿ ಸೀನ್ ಕ್ರಿಯೇಟ್ ಮಾಡಿದ ದಿವಾಕರ್ ಬಳಿಕ ಅದೇ ರಿಯಾಝ್ ಬಳಿ ಹೋಗಿ ಮಾತನಾಡಲು ಪ್ರಯತ್ನ ಪಟ್ಟರು.

ಕೆಲವೇ ನಿಮಿಷಗಳ ಹಿಂದೆಯಷ್ಟೇ ''ನಾಟಕ ಮಾಡ್ತಿದ್ದಾರೆ, ಡ್ರಾಮಾ ಆರ್ಟಿಸ್ಟ್'' ಅಂತೆಲ್ಲ ಕೂಗಾಡಿದ್ದ ದಿವಾಕರ್ ನಂತರ ಕೂಲ್ ಆಗಿ ರಿಯಾಝ್ ಬಳಿ ಹೋಗಿ ''ಕೋಪ ಮಾಡಿಕೊಳ್ಳಬೇಡಿ'' ಅಂದ್ರೆ ಯಾರೇ ಆದರೂ ತಾಳ್ಮೆಯಿಂದ ವರ್ತಿಸಲ್ಲ. ರಿಯಾಝ್ ಮಾಡಿದ್ದೂ ಅದನ್ನೇ.!

'ನಾಟಕ' ಮಾಡುವ ರಿಯಾಝ್ ಗೆ 'ಥೂ' ಎಂದ ದಿವಾಕರ್.!

ಅಷ್ಟಕ್ಕೂ, ರಿಯಾಝ್ ಬಳಿ ದಿವಾಕರ್ ಹೀಗೆ ನಡೆದುಕೊಳ್ಳುತ್ತಿರುವುದು ಇದೇ ಮೊದಲ ಬಾರಿಗೆ ಅಲ್ಲ. ಬರೀ ರಿಯಾಝ್ ಬಳಿ ಮಾತ್ರ ಅಲ್ಲ, ಜಯಶ್ರೀನಿವಾಸನ್ ಬಗ್ಗೆಯೂ ದಿವಾಕರ್ ಮನಬಂದಂತೆ ಮಾತನಾಡುತ್ತಾರೆ. ಇದೇ ವಿಷಯಕ್ಕೆ ದಿವಾಕರ್ ಗೆ ಸುದೀಪ್ ಬುದ್ಧಿ ಹೇಳಿದ್ದರೂ, ಅವರಿಗೆ ಜ್ಞಾನೋದಯ ಆದ ಹಾಗಿಲ್ಲ.

'ಜಯಶ್ರೀನಿವಾಸನ್ 420' ಎಂದ ದಿವಾಕರ್ ಗೆ ಸುದೀಪ್ ಗದಾ ಪ್ರಹಾರ.!

ಎಕ್ಸ್ ಟ್ರಾ ಮೆಣಸಿನಕಾಯಿ

ಕರಡಿಯನ್ನ (ಸಮೀರಾಚಾರ್ಯ) ಸೆರೆ ಹಿಡಿಯುವಾಗ ಕೋತಿ (ದಿವಾಕರ್) ಗೆ ಸಂಬಂಧವೇ ಇರಲಿಲ್ಲ. ತಾವು ಬಚಾವ್ ಆಗುವುದನ್ನು ಬಿಟ್ಟು, ಬೇಡದ ವಿಷಯಕ್ಕೆ ದಿವಾಕರ್ ಎಕ್ಸ್ ಟ್ರಾ ಮೆಣಸಿನಕಾಯಿ ಹಾಕಿದರು. ಇದರಿಂದ ಮಾತುಗಳು ಎಲ್ಲಿಂದ ಎಲ್ಲಿಗೋ ಹೋಯ್ತು.

ಒಳ್ಳೆಯ ಮಾತುಗಳಲ್ಲಿ ಹೇಳಿದಿದ್ರೆ....

ರಿಯಾಝ್ 'ಮಗನೇ..' ಅಂತ ಹೇಳಿದಾಗ, ಒಳ್ಳೆಯ ಮಾತುಗಳಲ್ಲಿ ದಿವಾಕರ್ ಬುದ್ಧಿ ಹೇಳಿದಿದ್ರೆ ಬಹುಶಃ ದಿವಾಕರ್ ಹೀರೋ ಆಗ್ತಿದ್ರೇನೋ... ಆದ್ರೆ, ಹಾಗೆ ಆಗಲಿಲ್ಲ.

ಬುದ್ಧಿ ಹೇಳಿದ ಅಕುಲ್

''ಆ ಸಂದರ್ಭದಲ್ಲಿ ಅದು ಬೇಕಾಗಿರಲಿಲ್ಲ. ಮಾತಾಡಿದ್ದು ಅವರೊಬ್ಬರೇ ಅಲ್ಲ'' ಅಂತ ಅಕುಲ್ ಪರಿಸ್ಥಿತಿಯನ್ನ ವಿವರಿಸಿದ ಮೇಲೆ ದಿವಾಕರ್ ಗೆ ತಮ್ಮ ತಪ್ಪಿನ ಅರಿವಾಯ್ತು.

ಟಾರ್ಗೆಟ್ ಮಾಡಿ ಮಾತನಾಡಿದ ದಿವಾಕರ್ ಗೆ ಬುದ್ಧಿ ಹೇಳಿದ ಅಕುಲ್

ರಿಯಾಝ್ ಜೊತೆ ಮಾತನಾಡಿದಾಗ...

ತಮ್ಮ ತಪ್ಪಿನ ಅರಿವಾದ ಮೇಲೆ, ''ಬನ್ನಿ ಇಲ್ಲಿ ಒಂದು ನಿಮಿಷ, ಕೋಪ ಮಾಡಿಕೊಳ್ಳಬೇಡಿ'' ಎಂದು ರಿಯಾಝ್ ಹತ್ತಿರ ದಿವಾಕರ್ ಮಾತನಾಡಲು ಪ್ರಯತ್ನ ಪಟ್ಟರು. ಆದ್ರೆ, ''ಹತ್ತಿರ ಬರಬೇಡ'' ಎಂದು ರಿಯಾಝ್ ಗರಂ ಆಗಿ ಪ್ರತಿಕ್ರಿಯೆ ನೀಡಿದರು.

ರಿಯಾಝ್ ಮತ್ತು ದಿವಾಕರ್ ನಡುವೆ ಮೂಡಿದೆ ಮನಸ್ತಾಪ.!

ಅದಕ್ಕೂ ಬೈಯ್ಕೊಂಡ್ರೆ...

''ಹತ್ತಿರ ಬರಬೇಡ'' ಅಂತ ರಿಯಾಝ್ ಸಿಟ್ಟಿನಲ್ಲಿ ಹೇಳಿದಕ್ಕೆ, ''ನೀವು ಅದೇ ಮನಸ್ಸಿನಲ್ಲಿ ಇಟ್ಟುಕೊಳ್ತೀರಾ. ಬದಲಾಗಲ್ಲ'' ಅಂತ ದಿವಾಕರ್ ಬೈಯ್ಕೊಂಡ್ರು.

ದಿವಾಕರ್ ಬದಲಾಗಿದ್ದಾರಾ.? ರಿಯಾಝ್ ಗೆ ಅಷ್ಟು ಬೇಸರ ಯಾಕೆ.?

ಎಲ್ಲವೂ ಸರಿಹೋಗುತ್ತಾ.?

ಟಾಸ್ಕ್ ನಲ್ಲಿ ಆಗಿದ್ದಾಯ್ತು ಅಂತ ರಿಯಾಝ್ ಸುಮ್ಮನಾಗ್ತಾರೋ... ತಮ್ಮ ತಪ್ಪಿನ ಅರಿವಾದ್ಮೇಲೆ ದಿವಾಕರ್ ಬದಲಾಗುತ್ತಾರೋ... ಕಾದು ನೋಡಬೇಕು.

English summary
Bigg Boss Kannada 5: Week 8: After Verbal spat, Diwakar tries speaking to Riyaz.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada