»   » ಅಂತೂ ಚಂದನ್ ಶೆಟ್ಟಿ ನಂಬರ್ ಬಂದೇ ಬಿಡ್ತು: ಈ ಬಾರಿ ತಪ್ಪಿಸಿಕೊಳ್ಳಲು ಆಗ್ಲಿಲ್ಲ.!

ಅಂತೂ ಚಂದನ್ ಶೆಟ್ಟಿ ನಂಬರ್ ಬಂದೇ ಬಿಡ್ತು: ಈ ಬಾರಿ ತಪ್ಪಿಸಿಕೊಳ್ಳಲು ಆಗ್ಲಿಲ್ಲ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸತತ ಏಳು ವಾರಗಳಿಂದ ನಾಮಿನೇಟ್ ಆಗದೆ ಸಂಪೂರ್ಣವಾಗಿ ಸುರಕ್ಷಿತವಾಗಿದ್ದ ಚಂದನ್ ಶೆಟ್ಟಿ ಇದೀಗ ಮೊಟ್ಟ ಮೊದಲ ಬಾರಿಗೆ ಎಂಟನೇ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.

ಏಳು ವಾರಗಳಿಂದ ಹಾಗೋ ಹೀಗೋ ತಪ್ಪಿಸಿಕೊಂಡು ಸೇಫ್ ಆಗಿದ್ದ ಚಂದನ್ ಶೆಟ್ಟಿ ಈ ಬಾರಿ ಎಸ್ಕೇಪ್ ಆಗಲು ಸಾಧ್ಯವಾಗಲಿಲ್ಲ. ಎಂದಿನಂತೆ ನಾಮಿನೇಷನ್ ಪ್ರಕ್ರಿಯೆ ನಡೆಸದೆ, ವೀಕ್ಷಕರ ಅಭಿಪ್ರಾಯ ತಿಳಿಯುವ ಉದ್ದೇಶದಿಂದ ಕ್ಯಾಪ್ಟನ್ ಹಾಗೂ ಹೊಸ ಸ್ಪರ್ಧಿಯನ್ನು ಹೊರತು ಪಡಿಸಿ ಎಲ್ಲರನ್ನೂ 'ಬಿಗ್ ಬಾಸ್' ನೇರವಾಗಿ ನಾಮಿನೇಟ್ ಮಾಡಿದರು.

ಅದೃಷ್ಟವಶಾತ್ ಕ್ಯಾಪ್ಟನ್ ಆದ ಚಂದನ್ ಶೆಟ್ಟಿ: ಈ ವಾರ ಕೂಡ ಸೇಫ್.!

ಹೀಗಾಗಿ, ಚಂದನ್ ಶೆಟ್ಟಿ ಮೊಟ್ಟ ಮೊದಲ ಬಾರಿಗೆ ಡೇಂಜರ್ ಝೋನ್ ಗೆ ಬಂದಿದ್ದಾರೆ. ಮುಂದೆ ಓದಿರಿ....

ನಾಲ್ಕು ಪ್ಲಸ್ ಎರಡು

'ಬಿಗ್ ಬಾಸ್' ಮನೆಯಲ್ಲಿ ನಾಲ್ಕು ವಾರಗಳ ಕಾಲ ಸತತವಾಗಿ ನಾಮಿನೇಟ್ ಆಗದ ಚಂದನ್ ಶೆಟ್ಟಿ, ಐದನೇ ವಾರ ಕ್ಯಾಪ್ಟನ್ ಆಗಿ ಸೇಫ್ ಆಗಿದ್ದರು. ಆರನೇ ವಾರ ನಾಮಿನೇಟ್ ಆಗಿದ್ದರೂ, ಎಲಿಮಿನೇಷನ್ ಇರಲಿಲ್ಲ. ಹೀಗಾಗಿ, ಆರನೇ ವಾರದ ನಾಮಿನೇಷನ್ ಪ್ರಕ್ರಿಯೆ ಆಟಕ್ಕುಂಟು ಲೆಕ್ಕಕ್ಕಿರಲಿಲ್ಲ.

ಅದೃಷ್ಟ ಅಂದ್ರೆ ಇದು.! ಏನ್ ಗುರು ಚಂದನ್ ಶೆಟ್ಟಿ ಲಕ್ಕು.!

ಏಳನೇ ವಾರ ಏನಾಯ್ತು.?

ಇನ್ನೂ ಏಳನೇ ವಾರ ಚಂದನ್ ಶೆಟ್ಟಿಯನ್ನ 'ಬಿಗ್ ಬಾಸ್' ಮನೆಯ ಸದಸ್ಯರು ಸೇಫ್ ಮಾಡಿದರು. ಹೀಗಾಗಿ, ಏಳನೇ ವಾರವೂ ಚಂದನ್ ಶೆಟ್ಟಿಗೆ ನಾಮಿನೇಷನ್ ತಲೆಬಿಸಿ ಇರಲಿಲ್ಲ.!

ಚಂದನ್ ಶೆಟ್ಟಿ ಲೆಕ್ಕಾಚಾರ ಮಾಡಿ ಆಡ್ತಿದ್ದಾರಾ? ಸುದೀಪ್ ಆಡಿದ ಮಾತಿನ ಅರ್ಥವೇನು?

ಮೊಟ್ಟ ಮೊದಲ ಬಾರಿಗೆ...

ಏಳು ವಾರಗಳಿಂದ ಬಚಾವ್ ಆಗಿದ್ದ ಚಂದನ್ ಶೆಟ್ಟಿ ಎಂಟನೇ ವಾರ ತಗಲಾಕೊಂಡಿದ್ದಾರೆ. ಎಲ್ಲರನ್ನೂ 'ಬಿಗ್ ಬಾಸ್' ನೇರವಾಗಿ ನಾಮಿನೇಟ್ ಮಾಡಿದ ಕಾರಣ ಚಂದನ್ ಶೆಟ್ಟಿ ಈ ವಾರ ಎಲಿಮಿನೇಷನ್ ಭೀತಿಯನ್ನ ಎದುರಿಸಲೇಬೇಕು.

ಸತತ ಏಳು ವಾರ ಸೇಫ್ ಆದ ಚಂದನ್ ಶೆಟ್ಟಿ: ಇದು ದಾಖಲೆ ಅಲ್ಲದೇ ಮತ್ತೇನು.?

ಇಬ್ಬರು ಮಾತ್ರ ಸೇಫ್

ಸದ್ಯ ಕ್ಯಾಪ್ಟನ್ ಆಗಿರುವ ಜಗನ್ ಮತ್ತು ಹೊಸ ಸ್ಪರ್ಧಿ ವೈಷ್ಣವಿ ಮಾತ್ರ ಈ ವಾರ ನಾಮಿನೇಷನ್ ನಿಂದ ಸೇಫ್ ಆಗಿದ್ದಾರೆ.

ಚಂದನ್ ಶೆಟ್ಟಿ ಭವಿಷ್ಯ ನಿಮ್ಮ ಕೈಯಲ್ಲಿ...

ಏಳು ವಾರಗಳಿಂದ ವೀಕ್ಷಕರ ಬೆಂಬಲ ಪಡೆಯದ ಚಂದನ್ ಶೆಟ್ಟಿ, ಎಂಟನೇ ವಾರ ನಿಮ್ಮ ಮತಗಳ ಕೃಪೆಗಾಗಿ ಎದುರು ನೋಡುತ್ತಿದ್ದಾರೆ. ನೀವು ಚಂದನ್ ಶೆಟ್ಟಿಗೆ ವೋಟ್ ಹಾಕಿ ಸೇಫ್ ಮಾಡುತ್ತೀರಾ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ... 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...

English summary
Bigg Boss Kannada 5: Week 8: Chandan Shetty gets nominated for the first time

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada