»   » ಜಗನ್ ಗೆ ಒಲಿದು ಬಂತು ಅದೃಷ್ಟ: ಇಂತಹ ಚಾನ್ಸ್ ಯಾರಿಗುಂಟು ಯಾರಿಗಿಲ್ಲ.!

ಜಗನ್ ಗೆ ಒಲಿದು ಬಂತು ಅದೃಷ್ಟ: ಇಂತಹ ಚಾನ್ಸ್ ಯಾರಿಗುಂಟು ಯಾರಿಗಿಲ್ಲ.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಜಗನ್ ಈ ವಾರ ಲಕ್ಕಿ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಐವತ್ತು ದಿನಗಳು... ಅಂದ್ರೆ ಏಳು ವಾರಗಳು ಕಳೆದ್ಮೇಲೆ ಮನೆಯ ಕ್ಯಾಪ್ಟನ್ ಆಗಿ ಜಗನ್ ಆಯ್ಕೆ ಆಗಿದ್ದಾರೆ. ಕ್ಯಾಪ್ಟನ್ ಆಗಿ ಜಗನ್ ಆಯ್ಕೆ ಆದ ವಾರವೇ, ಇಡೀ ಮನೆ ನೇರವಾಗಿ ನಾಮಿನೇಟ್ ಆಗಿದೆ.

ಜಗನ್ ಹಾಗೂ ಹೊಸ ಸ್ಪರ್ಧಿ ವೈಷ್ಣವಿ ಬಿಟ್ಟರೆ ಇನ್ನೆಲ್ಲರೂ ಡೇಂಜರ್ ಝೋನ್ ನಲ್ಲಿ ಇದ್ದಾರೆ. ಸ್ಪರ್ಧಿಗಳ ಬಗ್ಗೆ ವೀಕ್ಷಕರ ಅಭಿಪ್ರಾಯವನ್ನು ಏಕಕಾಲಕ್ಕೆ ಸಂಗ್ರಹಿಸಲು 'ಬಿಗ್ ಬಾಸ್' ಈ ನಿರ್ಣಯವನ್ನ ತೆಗೆದುಕೊಂಡು ಮನೆಯ ಎಲ್ಲ ಸದಸ್ಯರನ್ನೂ ನೇರವಾಗಿ ನಾಮಿನೇಟ್ ಮಾಡ್ಬಿಟ್ಟಿದ್ದಾರೆ.

ಎಲ್ಲರನ್ನೂ ಡೇಂಜರ್ ಝೋನ್ ಗೆ ತಳ್ಳಿ ಶಾಕ್ ಕೊಟ್ಟ 'ಬಿಗ್ ಬಾಸ್'.!

ಇಂತಹ ಸಂದರ್ಭದಲ್ಲಿ ಜಗನ್ ಕ್ಯಾಪ್ಟನ್ ಆಗಿರುವುದರಿಂದ ನಾಮಿನೇಷನ್ ನಿಂದ ಸೇಫ್ ಆಗಿದ್ದಾರೆ. ಮೊದಲೇ ಜಗನ್ ಹಾಗೂ ಅವರ ರೋಷಾವೇಷದ ಬಗ್ಗೆ ವೀಕ್ಷಕರಿಗೆ ಬೇಸರ ಇದೆ. ಮೊದಲಿನಿಂದಲೂ ಜಗನ್ ಔಟ್ ಆಗಬೇಕು ಅಂತ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯಿಸುತ್ತಿದ್ದಾರೆ. ಅಂಥದ್ರಲ್ಲಿ ಈ ವಾರ ಜಗನ್ ಸೇಫ್ ಆಗಿರುವುದು ನಿಜಕ್ಕೂ ಅದೃಷ್ಟವೇ ಸರಿ. ಇಂತಹ ಚಾನ್ಸ್ ಯಾರಿಗುಂಟು ಯಾರಿಗಿಲ್ಲ ಹೇಳಿ...

ಕ್ಯಾಪ್ಟನ್ ಅಯ್ಕೆಗಾಗಿ 'ಬಿಗ್ ಬಾಸ್' ಕೊಟ್ಟ ಟಾಸ್ಕ್ ಏನು.?

ಪ್ರತಿ ಬಾರಿ ಬಝರ್ ಆದಾಗ ಪಾನೀಯದ ಬಾಟಲ್ ನ ಪಡೆಯುವ ಸದಸ್ಯರು, ಅದರಿಂದ ಒಂದು ಗುಟುಕು ಪಾನೀಯ ಕುಡಿದು, ಅದನ್ನು ಲಿವಿಂಗ್ ಏರಿಯಾದಲ್ಲಿ ಇರುವ ಮೇಜಿನ ಮೇಲೆ ಇಟ್ಟು ನಂತರ ಬಝರ್ ಆಗುವವರೆಗೂ ಕಾಯಬೇಕು. ಬಝರ್ ಆದ ಕೂಡಲೆ ಕ್ಯಾಪ್ಟನ್ ಆಗಲು ಅನರ್ಹ ಎಂದು ತಮಗೆ ಎನಿಸುವ ಒಬ್ಬ ಸದಸ್ಯರಿಗೆ ಪಾನೀಯ ಬಾಟಲ್ ನ ಹಸ್ತಾಂತರಿಸಬೇಕು. ಕೊನೆಗೆ ಪಾನೀಯದ ಬಾಟಲ್ ನ ಪಡೆಯದ ಸದಸ್ಯರೇ ಈ ಚಟುವಟಿಕೆಯ ವಿಜೇತರು ಎಂದು 'ಬಿಗ್ ಬಾಸ್' ಘೋಷಿಸಿದರು.

ಸದಾ ಕೆಂಡಕಾರುವ ಜಗನ್ನಾಥ್ ಗೆ ಸರಿಯಾಗಿ ಬೆಂಡೆತ್ತಿದ ಮೈಸೂರಿನ ಕಾಲರ್.!

ಜಗನ್ ಕೈಗೆ ಪಾನೀಯದ ಬಾಟಲ್ ಬರಲೇ ಇಲ್ಲ.!

ಕಳೆದ ವಾರದ ಕ್ಯಾಪ್ಟನ್ ಜೆಕೆಯಿಂದ ಶುರುವಾದ ಈ ಚಟುವಟಿಕೆ ದಿವಾಕರ್, ಸಮೀರಾಚಾರ್ಯ, ಅನುಪಮಾ ಗೌಡ, ನಿವೇದಿತಾ ಗೌಡ ಸೇರಿದಂತೆ ಎಲ್ಲರಿಗೂ ಹಸ್ತಾಂತರವಾಯಿತು. ಕೊನೆಯಲ್ಲಿ ಜಗನ್ ಮಾತ್ರ ಪಾನೀಯದ ಬಾಟಲ್ ಪಡೆಯದ ಕಾರಣ ಮನೆಯ ಕ್ಯಾಪ್ಟನ್ ಆದರು.

ಧಿಮಾಕು ದೌಲತ್ತಿನ ಜಗನ್ 'ಬಿಗ್ ಬಾಸ್' ಇತಿಹಾಸದಲ್ಲಿಯೇ 'ಕಳಪೆ' ಸ್ಪರ್ಧಿ.!

ಶಾಕ್ ಕೊಟ್ಟ 'ಬಿಗ್ ಬಾಸ್'

ಜಗನ್ ಕ್ಯಾಪ್ಟನ್ ಆಗಿ ಆಯ್ಕೆ ಆದ್ಮೇಲೆ, ನಾಮಿನೇಷನ್ ಪ್ರಕ್ರಿಯೆ ಆರಂಭ ಆಯ್ತು. ಎಂದಿನಂತೆ ನಾಮಿನೇಷನ್ ಪ್ರಕ್ರಿಯೆ ನಡೆಸದೆ, ಕ್ಯಾಪ್ಟನ್ ಜಗನ್ ಹಾಗೂ ಹೊಸ ಸ್ಪರ್ಧಿ ವೈಷ್ಣವಿ ರನ್ನ ಹೊರತು ಪಡಿಸಿ ಎಲ್ಲರನ್ನೂ 'ಬಿಗ್ ಬಾಸ್' ನೇರವಾಗಿ ನಾಮಿನೇಟ್ ಮಾಡಿದರು.

ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದ ಜಗನ್ ಗೆ ಕೂಗಾಡೋದು ಬಿಟ್ಟು ಬೇರೇನೂ ಬರಲ್ಲ.!

ಕಾರಣ ಏನು.?

ಮನೆಯ ಸದಸ್ಯರ ಬಗ್ಗೆ ವೀಕ್ಷಕರ ಅಭಿಪ್ರಾಯವನ್ನು ಏಕ ಕಾಲಕ್ಕೆ ತಿಳಿಯುವ ಸಲುವಾಗಿ ಎಲ್ಲರನ್ನೂ ಬಿಗ್ ಬಾಸ್ ನಾಮಿನೇಟ್ ಮಾಡಿದ್ದಾರೆ.

ಸುದೀಪ್ ನಿರೂಪಣೆ ಸರಿ ಇರ್ಲಿಲ್ಲ, ಜಗನ್ ಔಟ್ ಆಗಲಿಲ್ಲ, ಜನ ಬೈಯ್ಯುವುದನ್ನ ನಿಲ್ಲಿಸುತ್ತಿಲ್ಲ.!

ಸೇಫ್ ಆದ ಜಗನ್

ವೀಕ್ಷಕರ ಅಭಿಪ್ರಾಯವನ್ನು 'ಬಿಗ್ ಬಾಸ್' ಸಂಗ್ರಹಿಸುತ್ತಿರುವ ಸಂದರ್ಭದಲ್ಲಿ ಜಗನ್ನಾಥ್ ಸೇಫ್ ಆಗಿದ್ದಾರೆ. ಇದು ಲಕ್ ಅಲ್ಲದೇ ಮತ್ತೇನು.?

ಜಗನ್ ಗೆ 'ಹುಷಾರು' ಎಂದು ಎಚ್ಚರಿಸಿ, ಬುದ್ಧಿಮಾತು ಹೇಳಿದ ಕಿಚ್ಚ ಸುದೀಪ್.!

ಹೆಚ್ಚು ಟ್ರೋಲ್ ಗೆ ಒಳಗಾಗಿದ್ದ ಜಗನ್.!

ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಟ್ರೋಲ್ ಗೆ ಒಳಗಾಗಿರುವವರ ಪೈಕಿ ಜಗನ್ ಕೂಡ ಒಬ್ಬರು. ಅಂಥದ್ರಲ್ಲಿ ಜಗನ್ ಈ ವಾರ ಸುರಕ್ಷಿತವಾಗಿದ್ದಾರೆ. ಇಡೀ ಮನೆ ಡೇಂಜರ್ ಝೋನ್ ನಲ್ಲಿ ಇರುವಾಗ, ಜಗನ್ ಗೆ ಯಾವುದೇ ತಲೆ ನೋವಿಲ್ಲ. ಇಂತಹ ಅದೃಷ್ಟ ಯಾರಿಗುಂಟು ಯಾರಿಗಿಲ್ಲ.!?

English summary
Bigg Boss Kannada 5: Week 8: Jaganath Chandrashekar becomes captain

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada