»   » 'ಬಿಗ್' ಬ್ರೇಕಿಂಗ್: 'ಬಿಗ್ ಬಾಸ್' ಮನೆಯೊಳಗೆ ಹೊಸ ನಟಿ ಎಂಟ್ರಿ.?

'ಬಿಗ್' ಬ್ರೇಕಿಂಗ್: 'ಬಿಗ್ ಬಾಸ್' ಮನೆಯೊಳಗೆ ಹೊಸ ನಟಿ ಎಂಟ್ರಿ.?

Posted By:
Subscribe to Filmibeat Kannada
'ಬಿಗ್' ಬ್ರೇಕಿಂಗ್: 'ಬಿಗ್ ಬಾಸ್' ಮನೆಯೊಳಗೆ ಹೊಸ ನಟಿ ಎಂಟ್ರಿ.? | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಏಳು ವಾರಗಳು ಮುಗಿದು, ಎಂಟನೇ ವಾರ ಆರಂಭವಾಗಿದೆ. ವಾರದಿಂದ ವಾರಕ್ಕೆ ಒಬ್ಬೊಬ್ಬ ಸ್ಪರ್ಧಿ ಎಲಿಮಿನೇಟ್ ಆಗುತ್ತಿರುವಾಗಲೇ, 'ಬಿಗ್ ಬಾಸ್' ಮನೆಯೊಳಗೆ ಹೊಸ ಸ್ಪರ್ಧಿ ಕಾಲಿಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈಗಾಗಲೇ ಐವತ್ತು ದಿನ ಪೂರೈಸಿ, ಅರ್ಧ ಆಟ ಮುಗಿಸಿರುವ ಹನ್ನೆರಡು ಸ್ಪರ್ಧಿಗಳ ಮಧ್ಯೆ ಹೊಸ ಸ್ಪರ್ಧಿ ಎಂಟ್ರಿಕೊಟ್ಟಿದ್ದಾರೆ ಎನ್ನಲಾಗಿದೆ. ಸ್ಯಾಂಡಲ್ ವುಡ್ ನ ನಟಿಯೊಬ್ಬರು 'ಬಿಗ್ ಬಾಸ್' ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದಾರಂತೆ.

ಯಾರದು ಅಂತ ತಿಳಿದುಕೊಳ್ಳುವ ಕುತೂಹಲ ಇದ್ಯಾ.? ಹಾಗಾದ್ರೆ, ಫೋಟೋ ಸ್ಲೈಡ್ ಗಳನ್ನು ನೋಡಿರಿ...

ಈಕೆಯೇ ವೈಲ್ಡ್ ಕಾರ್ಡ್ ಸ್ಪರ್ಧಿ.?

ಸದ್ಯ 'ಬಿಗ್ ಬಾಸ್' ಮನೆ ಸೇರಿರುವ ನವನಟಿ ಈಕೆಯೇ.. ಇವರ ಹೆಸರು ವೈಷ್ಣವಿ ಚಂದ್ರನ್ ಮೆನನ್.

ಯಾರು ಈ ವೈಷ್ಣವಿ.?

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ವಿಜೇತ ಪ್ರಥಮ್ ನಾಯಕನಾಗಿ ಅಭಿನಯಿಸುತ್ತಿರುವ 'ದೇವ್ರಂಥ ಮನುಷ್ಯ' ಚಿತ್ರದ ನಾಯಕಿ ಈ ವೈಷ್ಣವಿ ಚಂದ್ರನ್ ಮೆನನ್.

ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರಾ.?

'ಬಿಗ್ ಬಾಸ್' ಮನೆಯೊಳಗೆ ವೈಷ್ಣವಿ ಚಂದ್ರನ್ ಮೆನನ್ ಇರುವ ಫೋಟೋ ಸದ್ಯ ಕಲರ್ಸ್ ಸೂಪರ್ ಫೇಸ್ ಬುಕ್ ಪುಟದಿಂದಲೇ ಬಹಿರಂಗವಾಗಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ವೈಷ್ಣವಿ ಎಂಟ್ರಿಕೊಟ್ಟಿದ್ದಾರೋ, ಅಥವಾ ಇದರಲ್ಲಿ ಬೇರೇನಾದ್ರೂ ಟ್ವಿಸ್ಟ್ ಇದ್ಯೋ ಅಂತ ಇವತ್ತಿನ ಸಂಚಿಕೆಯಲ್ಲಿ ನೋಡ್ಬೇಕು.

ಸದ್ಯ ಮನೆಯಲ್ಲಿದ್ದಾರೆ ಹನ್ನೆರಡು ಸ್ಪರ್ಧಿಗಳು

ಏಳು ವಾರಗಳಲ್ಲಿ ಐದು ಜನ ಎಲಿಮಿನೇಟ್ ಆಗಿದ್ದಾರೆ. ಕೃಷಿ ರೀಎಂಟ್ರಿ ಕೊಟ್ಟಿದ್ದಾರೆ. ಸದ್ಯ ಮನೆಯಲ್ಲಿ ಇರುವ ಹನ್ನೆರಡು ಸ್ಪರ್ಧಿಗಳ ಜೊತೆ ವೈಷ್ಣವಿ ಕೂಡ ಸೇರಿಕೊಳ್ಳಲಿದ್ದಾರೆ ಎನ್ನುತ್ತಿವೆ ಕಲರ್ಸ್ ಸೂಪರ್ ಮೂಲಗಳು.

ಮುಂದೇನಾಗುತ್ತೋ.?

ಕರೆಕ್ಟಾಗಿ ಐವತ್ತು ದಿನ ಪೂರೈಸಿದ್ಮೇಲೆ, ವೈಷ್ಣವಿ ಚಂದ್ರನ್ ಮೆನನ್ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದಾರೆ. ಅಪ್ಪಿ ತಪ್ಪಿ ಅವರು ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿದ್ದರೆ, ಅವರಿಗೆ 'ಬಿಗ್ ಬಾಸ್' ಮನೆಯ ಲೆಕ್ಕಾಚಾರ ಗೊತ್ತಾಗಿರಲೇಬೇಕು. ಎಲ್ಲವನ್ನ ಗಮನಿಸಿ ವೈಷ್ಣವಿ ಹೇಗೆ ಗೇಮ್ ಪ್ಲಾನ್ ಮಾಡ್ತಾರೋ, ನೋಡ್ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ವೈಷ್ಣವಿ ಪ್ರಥಮ್ ಜೊತೆ ನಾಯಕಿ ಆಗಿ ನಟಿಸಿದವರು ಅನ್ನೋದು ನೆನಪಿರಲಿ.

English summary
Bigg Boss Kannada 5: Week 8: Kannada Actress Vaishnavi Chandran Menon to enter Bigg Boss House as Wild Card Contestant.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada