»   » ಎಲ್ಲರ ತಾಳ್ಮೆ ಪರೀಕ್ಷೆ ಮಾಡುತ್ತಿರುವ ಜಗನ್: ಪಿತ್ತ ನೆತ್ತಿಗೇರಿಸಿಕೊಂಡ ಚಂದನ್.!

ಎಲ್ಲರ ತಾಳ್ಮೆ ಪರೀಕ್ಷೆ ಮಾಡುತ್ತಿರುವ ಜಗನ್: ಪಿತ್ತ ನೆತ್ತಿಗೇರಿಸಿಕೊಂಡ ಚಂದನ್.!

Posted By:
Subscribe to Filmibeat Kannada
ಎಲ್ಲರ ತಾಳ್ಮೆ ಪರೀಕ್ಷೆ ಮಾಡುತ್ತಿರುವ ಜಗನ್: ಪಿತ್ತ ನೆತ್ತಿಗೇರಿಸಿಕೊಂಡ ಚಂದನ್ | Filmibeat Kannada

'ಬಿಗ್ ಬಾಸ್' ಮನೆಯೊಳಗೆ ಇಲ್ಲಿಯವರೆಗೂ ಜಗನ್ ಆಡಿರುವ ಜಗಳಗಳ ಲೆಕ್ಕವೇ ಇಲ್ಲ. ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದೆ, ಸರಿ-ತಪ್ಪು ತೂಕ ಹಾಕದೆ, ಕಣ್ಣು ದೊಡ್ಡದು ಮಾಡಿ ಏರು ದನಿಯಲ್ಲೇ ಮಾತನಾಡುವ ಜಗನ್ ತಮ್ಮ ಕೆಟ್ಟ ಕೋಪದಿಂದಾಗಿ 'ಬಿಗ್ ಬಾಸ್' ಮನೆಯಲ್ಲಿ ಇರುವವರೆಲ್ಲರ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಬರೀ ಸ್ಪರ್ಧಿಗಳ ತಾಳ್ಮೆ ಮಾತ್ರ ಅಲ್ಲ, 'ಬಿಗ್ ಬಾಸ್' ನೋಡುತ್ತಿರುವ ವೀಕ್ಷಕರ ತಾಳ್ಮೆಯನ್ನೂ ಜಗನ್ ಪರೀಕ್ಷೆ ಮಾಡುತ್ತಿದ್ದಾರೆ ಅಂದ್ರೆ ಖಂಡಿತ ತಪ್ಪಾಗಲ್ಲ.!

ರಿಯಾಝ್, ದಿವಾಕರ್, ಸಮೀರಾಚಾರ್ಯ.... ಇವರೆಲ್ಲರ ಜೊತೆಗೂ ವಾಕ್ಸಮರ ನಡೆಸಿರುವ ಜಗನ್ನಾಥ್ ವಿರುದ್ಧ ಚಂದನ್ ಶೆಟ್ಟಿ ಮೊಟ್ಟ ಮೊದಲ ಬಾರಿಗೆ ತಿರುಗಿ ಬಿದ್ದಿದ್ದಾರೆ.

ರಿಯಾಝ್ ಆಡಿದ ಒಂದೇ ಒಂದು ಮಾತಿಗೆ ಕೆರಳಿದ 'ಹುಲಿ' ಜಗನ್.!

'ಗಂಧದ ಗುಡಿ' ಟಾಸ್ಕ್ ನಲ್ಲಿ ಒಂದೇ ಸಮ ಕಿರುಚಾಡುತ್ತಿದ್ದ ಜಗನ್ ವಿರುದ್ಧ ಚಂದನ್ ಶೆಟ್ಟಿ ಕೋಪಗೊಂಡು ಕೂಗಾಡಿದ್ದಾರೆ. ಹಾಗ್ನೋಡಿದ್ರೆ, ಚಂದನ್ ಶೆಟ್ಟಿ ತಾಳ್ಮೆ ಕಳೆದುಕೊಂಡು 'ಬಿಗ್ ಬಾಸ್' ಮನೆಯಲ್ಲಿ ಈ ರೇಂಜ್ ಗೆ ಕೂಗಾಡಿರುವುದು ಇದೇ ಮೊದಲ ಬಾರಿಗೆ.! ಮುಂದೆ ಓದಿರಿ...

ಇದೇ ಮೊಟ್ಟ ಮೊದಲ ಬಾರಿಗೆ

ಯಾವುದೇ ಟಾಸ್ಕ್ ಆದರೂ, ಅದನ್ನ ಜಾಣತನದಿಂದ ಆಡುವ ಚಂದನ್ ಶೆಟ್ಟಿ ಅಷ್ಟು ಸುಲಭವಾಗಿ ತಾಳ್ಮೆ ಕಳೆದುಕೊಂಡವರಲ್ಲ. ತಮ್ಮ ಟಿ-ಶರ್ಟ್ ನ ದಿವಾಕರ್ ಹರಿದು ಹಾಕಿದಾಗಲೂ, ಚಂದನ್ ಶೆಟ್ಟಿ ತಾಳ್ಮೆಯಿಂದ ಇದ್ದರು. ಚಂದನ್ ಶೆಟ್ಟಿ ರವರ ತಾಳ್ಮೆಗೆ ಸುದೀಪ್ ಕೂಡ ಹ್ಯಾಟ್ಸ್ ಆಫ್ ಹೇಳಿದ್ದರು.

ಚಂದನ್ ಶೆಟ್ಟಿ ತಾಳ್ಮೆಗೆ ಹ್ಯಾಟ್ಸ್ ಆಫ್ ಎಂದ ಸುದೀಪ್.!

ಕೋತಿ ಬಲೆಗೆ ಬೀಳುವಾಗ...

'ಗಂಧದ ಗುಡಿ' ಟಾಸ್ಕ್ ಆರಂಭ ಆದ್ಮೇಲೆ ರಿಯಾಝ್ ಹಾಗೂ ಅಕುಲ್ ಜೊತೆ ಮಾತಿನ ಚಕಮಕಿ ನಡೆಸಿದ್ದ ಜಗನ್ನಾಥ್, ಅನುಪಮಾ (ಕೋತಿ) ರವರನ್ನ ಬಲೆಗೆ ಬೀಳಿಸುವಾಗ ಕಿರುಚಲು ಶುರು ಮಾಡಿದರು.

ಜಗನ್ ಘರ್ಜನೆಗೆ 'ಮಾಸ್ಟರ್' ಅಕುಲ್ ಕೂಡ ಹೊರತಾಗಲಿಲ್ಲ.!

ಇವೆಲ್ಲ ಬೇಕಿತ್ತಾ.?

''ಏಟು ಆದರೂ ಆಗಲಿ, ಬರಲ್ಲ ಅಂದ್ರೆ ಬರಲ್ಲ..'' ಅಂತ ಅನುಪಮಾ (ಕೋತಿ) ಹೇಳುತ್ತಿದ್ದರೆ, ''ಜನರಿಗೆ ಏಟು ಆಗುತ್ತಿದೆ... ಹೆಣ್ಮಕ್ಕಳ ಬಟ್ಟೆ... ಮನುಷ್ಯತ್ವದಲ್ಲಿ ಆಡಿರಿ...'' ಅಂತ ಕಿರುಚಾಡಿದರು.

ಪಿತ್ತ ನೆತ್ತಿಗೇರಿಸಿಕೊಂಡ ಚಂದನ್

ಒಂದೇ ಸಮ ಜಗನ್ (ಹುಲಿ) ಕೂಗಾಡುತ್ತಿದ್ದನ್ನ ನೋಡಿದ್ಮೇಲೆ ಚಂದನ್ ಶೆಟ್ಟಿಗೆ ಪಿತ್ತ ನೆತ್ತಿಗೇರಿತು. ''ಯಾಕೋ ಕಿರುಚ್ತೀಯಾ... ಇವನೊಬ್ಬನಿಗೆ ಕಿರುಚಲು ಬರುವುದು... ಕಿರುಚ್ತಾನೆ....'' ಚಂದನ್ ಶೆಟ್ಟಿ ತಮ್ಮ ಉಗ್ರ ರೂಪವನ್ನ ತೋರಿಸಿದರು.

ಅಸಮಾಧಾನಗೊಂಡ ವೀಕ್ಷಕರು

ಜಗನ್ ರವರ ಜಗಳಗಳನ್ನ ನೋಡಿ ನೋಡಿ ವೀಕ್ಷಕರಂತೂ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನವನ್ನ ಹೊರ ಹಾಕುತ್ತಲೇ ಇರುತ್ತಾರೆ. ಈ ಬಾರಿಯೂ ಅದೇ ಮುಂದುವರೆದಿದೆ.

English summary
Bigg Boss Kannada 5: Week 8: Verbal fight between Chandan Shetty and Jaganath

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada