»   » 'ನಾಟಕ' ಮಾಡುವ ರಿಯಾಝ್ ಗೆ 'ಥೂ' ಎಂದ ದಿವಾಕರ್.!

'ನಾಟಕ' ಮಾಡುವ ರಿಯಾಝ್ ಗೆ 'ಥೂ' ಎಂದ ದಿವಾಕರ್.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ರಿಯಾಜ್ ಗೆ ಬಾಯಿಗೆ ಬಂದಹಾಗೆ ಬೈದ ದಿವಾಕರ್ | Filmibeat Kannada

'ಬಿಗ್ ಬಾಸ್' ಮನೆಯಲ್ಲಿ ಮೊದಲೆರಡು ವಾರ ಇಡೀ ಮನೆ ದಿವಾಕರ್ ವಿರುದ್ಧ ತಿರುಗಿ ಬಿದ್ದಿದ್ದಾಗ, ದಿವಾಕರ್ ಪರ ದನಿ ಎತ್ತಿದ್ದು ರಿಯಾಝ್. ಆದ್ರೀಗ ಅದೇ ರಿಯಾಝ್ ಮತ್ತು ದಿವಾಕರ್ ಹಾವು-ಮುಂಗುಸಿಯಂತೆ ಕಚ್ಚಾಡುತ್ತಿದ್ದಾರೆ.

'ಗಂಧದ ಗುಡಿ' ಟಾಸ್ಕ್ ನಲ್ಲಿ ರಿಯಾಝ್ ಗೆ ದಿವಾಕರ್ 'ಥೂ' ಎಂದು ಉಗಿದಿದ್ದಾರೆ. ರಿಯಾಝ್ ಕೂಡ ದಿವಾಕರ್ ಮೇಲೆ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಾರೆ.

ಪ್ರಥಮ್ ನ ಫಾಲೋ ಮಾಡುತ್ತಾ ನಾಟಕ ಆಡ್ತಿದ್ದಾರಾ ದಿವಾಕರ್.?

ಸಾಲದಕ್ಕೆ, ಕರ್ನಾಟಕದ ಜನತೆ ಮುಂದೆ, ಕ್ಯಾಮರಾ ಮುಂದೆ ರಿಯಾಝ್ ನಾಟಕ ಮಾಡುತ್ತಿದ್ದಾರೆ ಎಂದಿದ್ದಾರೆ ದಿವಾಕರ್. ಅಷ್ಟಕ್ಕೂ, ಆಗಿದ್ದೇನು.? ಸಂಪೂರ್ಣ ವಿವರ ಇಲ್ಲಿದೆ ಓದಿರಿ...

'ಬಿಗ್ ಬಾಸ್' ನೀಡಿದ್ದ ಟಾಸ್ಕ್ ಏನು.?

'ಬಿಗ್ ಬಾಸ್' ನೀಡಿದ್ದ 'ಗಂಧದ ಗುಡಿ' ಟಾಸ್ಕ್ ನಲ್ಲಿ ಸಮೀರಾಚಾರ್ಯ (ಕರಡಿ), ಜಗನ್ (ಹುಲಿ), ದಿವಾಕರ್ (ಕೋತಿ), ನಿವೇದಿತಾ (ಮರಿ ಆನೆ), ಆಶಿತಾ (ಗಿಳಿ) ಹಾಗೂ ಅನುಪಮಾ (ಕೋತಿ) ಕಾಡು ಪ್ರಾಣಿಗಳಾದರೆ... ಕಾರ್ತಿಕ್, ಚಂದನ್ ಶೆಟ್ಟಿ, ರಿಯಾಝ್, ವೈಷ್ಣವಿ, ಶ್ರುತಿ, ಕೃಷಿ ಹಾಗೂ ಜಯಶ್ರೀನಿವಾಸನ್ ಕಾಡು ಜನರಾದರು. ಇನ್ನೂ 'ಬಿಗ್ ಬಾಸ್' ಮನೆಯೊಳಗೆ ವಿಶೇಷ ಅತಿಥಿಯಾಗಿ ಬಂದ ಅಕುಲ್ ಬಾಲಾಜಿ ''ನಾಡಿನಿಂದ ಕಾಡಿಗೆ ಬಂದ'' ಮಾಸ್ಟರ್ ಪಾತ್ರವನ್ನ ವಹಿಸಿಕೊಂಡರು.

'ಜಯಶ್ರೀನಿವಾಸನ್ 420' ಎಂದ ದಿವಾಕರ್ ಗೆ ಸುದೀಪ್ ಗದಾ ಪ್ರಹಾರ.!

ಮಾಸ್ಟರ್ ಅಕುಲ್ ಗೆ ಸವಾಲು

ಗಂಧದ ಗುಡಿಗೆ ಒಳ್ಳೆಯ ಉದ್ದೇಶ ಇಟ್ಟುಕೊಂಡು ಬಂದ ಮಾಸ್ಟರ್ ಗೆ ಬಿಗ್ ಬಾಸ್ ಮೊದಲ ಹಂತದ ಸವಾಲು ನೀಡಿದರು. ಮಾಸ್ಟರ್, ಕಾಡು ಜನರ ಸಹಾಯದಿಂದ ಗಂಧದ ಗುಡಿಯಲ್ಲಿ ವಾಸ ಇರುವ ಆರು ಪ್ರಾಣಿಗಳಲ್ಲಿ ನಾಲ್ಕು ಪ್ರಾಣಿಗಳನ್ನ ಉಪಾಯದಿಂದ ಸೆರೆ ಹಿಡಿದು, ಅವುಗಳನ್ನು ಪ್ರತ್ಯೇಕವಾಗಿ ನಾಲ್ಕು ಪಂಜರಗಳಲ್ಲಿ ಬಂಧಿಸಬೇಕಿತ್ತು. ನಾಲ್ಕು ಪ್ರಾಣಿಗಳನ್ನು ಸೆರೆ ಹಿಡಿಯಲು ರಾತ್ರಿ ತನಕ ಅವಕಾಶ ಇತ್ತು.

ಹೇರ್ ಸ್ಟೈಲ್ ಜೊತೆಗೆ ದಿವಾಕರ್ ಬುದ್ಧಿ ಕೂಡ ಬದಲಾಗಿದೆ.!

ಮರಿ ಆನೆ, ಕೋತಿ ಬಂಧಿಯಾಗಿತ್ತು.!

ಮರಿ ಆನೆ (ನಿವೇದಿತಾ), ಕೋತಿ (ಅನುಪಮಾ ಗೌಡ) ಮೊದಲು ಬಂಧಿಯಾದವು. ಕತ್ತಲಾದ್ಮೇಲೆ, ಬಾತ್ ರೂಮ್ ಗೆ ಹೋಗಲು ಕರಡಿ ಹಾಗೂ ಗಿಳಿ ಪ್ರಯತ್ನ ಪಟ್ಟಾಗ ಕಾಡು ಜನರು ಸಿಕ್ಕಿಬಿದ್ವು.

ದಿವಾಕರ್ ಬದಲಾಗಿದ್ದಾರಾ.? ರಿಯಾಝ್ ಗೆ ಅಷ್ಟು ಬೇಸರ ಯಾಕೆ.?

ತಪ್ಪಿಕೊಂಡ ಗಿಳಿ.!

ಕಾಡು ಜನರಿಂದ ಗಿಳಿ ತಪ್ಪಿಸಿಕೊಂಡರೆ, ಕರಡಿ (ಸಮೀರಾಚಾರ್ಯ) ಬಲೆಗೆ ಬಿದ್ದರು. ಸಮೀರಾಚಾರ್ಯ ರವರನ್ನ ಹಿಡಿಯುತ್ತಿದ್ದಾಗ, ರಿಯಾಝ್ ಗೆ ಪೆಟ್ಟು ಬಿತ್ತು. ಆಗ ಕೋಪಗೊಂಡ ರಿಯಾಝ್ ಸಿಟ್ಟಲ್ಲಿ, ''ಮಗನೇ..'' ಎಂದುಬಿಟ್ಟರು.

ರಿಯಾಝ್ ಮತ್ತು ದಿವಾಕರ್ ನಡುವೆ ಮೂಡಿದೆ ಮನಸ್ತಾಪ.!

ರೊಚ್ಚಿಗೆದ್ದ ದಿವಾಕರ್.!

ಪಕ್ಕದಲ್ಲಿ ನಿಂತಿದ್ದ ದಿವಾಕರ್, ''ಮರ್ಯಾದೆ ಇಂದ ಮಾತನಾಡಬೇಕು. ಯಾರು ಭಾಷೆ ಕಲಿಸಿಕೊಟ್ಟಿದ್ದು.? ಬರೀ ದೌಲತ್ತು, ನಾಟಕ, ಡ್ರಾಮಾ ನಿಂದು ಥೂ... ಮಾನ ಮರ್ಯಾದೆ ಸ್ವಲ್ಪನಾದರೂ ಇರಬೇಕು'' ಅಂತ ರಿಯಾಝ್ ಗೆ ಬೈಯ್ಯಲು ಆರಂಭಿಸಿದರು.

ಆಕ್ಟಿಂಗ್ ಮಾಡ್ತಿದ್ದಾರಂತೆ ರಿಯಾಝ್

''ಕರ್ನಾಟಕ ಜನತೆ ಮುಂದೆ ಆಕ್ಟಿಂಗಾ.? ಥೂ... ಬರೀ ನಾಟಕ.. ಕ್ಯಾಮರಾ ಮುಂದೆ ಬರೀ ಡ್ರಾಮಾ... ಅಡುಗೆ ಕಮ್ಮಿ ಕೊಟ್ಟಿದ್ದಾರೆ ಅಂತ ಮನೆಗೆ ಬಂದವರನ್ನೆಲ್ಲ ದೂರ ಮಾಡಲು ನೋಡಿದೆ'' - ದಿವಾಕರ್

ಥರ್ಡ್ ಕ್ಲಾಸ್ ಎಂದ ರಿಯಾಝ್

ದಿವಾಕರ್ ಆಡುತ್ತಿದ್ದ ಮಾತುಗಳನ್ನು ಕೇಳಿ ರಿಯಾಝ್ ಕೂಡ ''ಥರ್ಡ್ ಕ್ಲಾಸ್'' ಎಂದು ಅವಾಚ್ಯ ಶಬ್ದಗಳನ್ನು ಬಳಸಿದರು.

ನಿಮ್ಮ ಅಭಿಪ್ರಾಯ ಏನು.?

ಸಹಾಯ ಮಾಡಿದವರನ್ನ ಎಂದೂ ಮರೆಯಲ್ಲ ಅಂತ ಹೇಳಿದ್ದ ದಿವಾಕರ್ ಈಗ ಮಾಡುತ್ತಿರುವುದೇನು.? ದಿವಾಕರ್ ಹೇಳಿದ್ರಲ್ಲಿ ಸರಿ ಇದ್ಯಾ.? ರಿಯಾಝ್ ನಿಜ ಬಣ್ಣ ಬಯಲಾಯ್ತಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ... 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...

English summary
Bigg Boss Kannada 5: Week 8: Verbal fight between Diwakar and Riyaz Basha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada