»   » ರಿಯಾಝ್ ಆಡಿದ ಒಂದೇ ಒಂದು ಮಾತಿಗೆ ಕೆರಳಿದ 'ಹುಲಿ' ಜಗನ್.!

ರಿಯಾಝ್ ಆಡಿದ ಒಂದೇ ಒಂದು ಮಾತಿಗೆ ಕೆರಳಿದ 'ಹುಲಿ' ಜಗನ್.!

Posted By:
Subscribe to Filmibeat Kannada
ರಿಯಾಝ್ ಆಡಿದ ಒಂದೇ ಒಂದು ಮಾತಿಗೆ ಕೆರಳಿದ 'ಹುಲಿ' ಜಗನ್ | Filmibeat Kannada

ಆಟದಲ್ಲಿ ಹೆಚ್ಚು ಆಕ್ರಮಣಕಾರಿ ಆಗಬೇಡಿ... ಕಣ್ಣು ದೊಡ್ಡದು ಮಾಡಿಕೊಳ್ಳುವುದನ್ನು ನಿಲ್ಲಿಸಿ... ಎಲ್ಲರ ಮೇಲೆ ಜೋರು ಮಾಡಬೇಡಿ ಅಂತ ಕಿಚ್ಚ ಸುದೀಪ್ ಬುದ್ಧಿ ಮಾತು ಹೇಳಿದರೂ ಜಗನ್ನಾಥ್ ಚಂದ್ರಶೇಖರ್ ಗೆ ಜ್ಞಾನೋದಯ ಆದ ಹಾಗೆ ಕಾಣುತ್ತಿಲ್ಲ.

ಜಗನ್ ಗೆ 'ಹುಷಾರು' ಎಂದು ಎಚ್ಚರಿಸಿ, ಬುದ್ಧಿಮಾತು ಹೇಳಿದ ಕಿಚ್ಚ ಸುದೀಪ್.!

'ಬಿಗ್ ಬಾಸ್' ನೀಡಿರುವ 'ಗಂಧದ ಗುಡಿ' ಟಾಸ್ಕ್ ನಲ್ಲಿ 'ಹುಲಿ' ಆಗಿರುವ ಜಗನ್ನಾಥ್ 'ದೊಡ್ಮನೆ'ಯಲ್ಲಿ ಅಕ್ಷರಶಃ ಹುಲಿಯಂತೆ ಘರ್ಜಿಸುತ್ತಿದ್ದಾರೆ, ಆರ್ಭಟ ಮಾಡುತ್ತಿದ್ದಾರೆ.

ಟಾಸ್ಕ್ ನಡುವೆ ರಿಯಾಝ್ ಆಡಿದ ಒಂದು ಮಾತಿನಿಂದ ಜಗನ್ನಾಥ್ ಕೆರಳಿ, ದೊಡ್ಡ ರಾದ್ಧಾಂತಕ್ಕೆ ನಾಂದಿ ಹಾಡಿದರು. ಅಷ್ಟಕ್ಕೂ, ಆಗಿದ್ದೇನು.? ಸಂಪೂರ್ಣ ವಿವರ ಇಲ್ಲಿದೆ ಓದಿರಿ....

'ಬಿಗ್ ಬಾಸ್' ನೀಡಿದ್ದ ಟಾಸ್ಕ್ ಏನು.?

ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ವಿಶಿಷ್ಟ ಬಾಂಧವ್ಯ ಹಾಗೂ ಸಂಬಂಧವನ್ನು ಪರಿಚಯಿಸುವ ಸಲುವಾಗಿ 'ಗಂಧದ ಗುಡಿ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನ 'ಬಿಗ್ ಬಾಸ್' ನೀಡಿದರು. ಇದರ ಅನುಸಾರ, ಸಮೀರಾಚಾರ್ಯ (ಕರಡಿ), ಜಗನ್ (ಹುಲಿ), ದಿವಾಕರ್ (ಕೋತಿ), ನಿವೇದಿತಾ (ಮರಿ ಆನೆ), ಆಶಿತಾ (ಗಿಣಿ) ಹಾಗೂ ಅನುಪಮಾ (ಕೋತಿ) ಕಾಡು ಪ್ರಾಣಿಗಳಾದರೆ... ಕಾರ್ತಿಕ್, ಚಂದನ್ ಶೆಟ್ಟಿ, ರಿಯಾಝ್, ವೈಷ್ಣವಿ, ಶ್ರುತಿ, ಕೃಷಿ ಹಾಗೂ ಜಯಶ್ರೀನಿವಾಸನ್ ಕಾಡು ಜನರಾದರು. ಇನ್ನೂ 'ಬಿಗ್ ಬಾಸ್' ಮನೆಯೊಳಗೆ ವಿಶೇಷ ಅತಿಥಿಯಾಗಿ ಬಂದ ಅಕುಲ್ ಬಾಲಾಜಿ ''ನಾಡಿನಿಂದ ಕಾಡಿಗೆ ಬಂದ'' ಮಾಸ್ಟರ್ ಪಾತ್ರವನ್ನ ವಹಿಸಿಕೊಂಡರು.

ಮತ್ತೆ ರೊಚ್ಚಿಗೆದ್ದು ಏಕವಚನ ಬಳಸಿದ ಜಗನ್.! ಇದು ಸೀಕ್ರೆಟ್ ಟಾಸ್ಕ್.?

ಮಾಸ್ಟರ್ ಅಕುಲ್ ಗೆ ಸವಾಲು

ಗಂಧದ ಗುಡಿಗೆ ಒಳ್ಳೆಯ ಉದ್ದೇಶ ಇಟ್ಟುಕೊಂಡು ಬಂದ ಮಾಸ್ಟರ್ ಗೆ ಬಿಗ್ ಬಾಸ್ ಮೊದಲ ಹಂತದ ಸವಾಲು ನೀಡಿದರು. ಮಾಸ್ಟರ್, ಕಾಡು ಜನರ ಸಹಾಯದಿಂದ ಗಂಧದ ಗುಡಿಯಲ್ಲಿ ವಾಸ ಇರುವ ಆರು ಪ್ರಾಣಿಗಳಲ್ಲಿ ನಾಲ್ಕು ಪ್ರಾಣಿಗಳನ್ನ ಉಪಾಯದಿಂದ ಸೆರೆ ಹಿಡಿದು, ಅವುಗಳನ್ನು ಪ್ರತ್ಯೇಕವಾಗಿ ನಾಲ್ಕು ಪಂಜರಗಳಲ್ಲಿ ಬಂಧಿಸಬೇಕಿತ್ತು. ನಾಲ್ಕು ಪ್ರಾಣಿಗಳನ್ನು ಸೆರೆ ಹಿಡಿಯಲು ರಾತ್ರಿ ತನಕ ಅವಕಾಶ ಇತ್ತು.

ಸುದೀಪ್ ನಿರೂಪಣೆ ಸರಿ ಇರ್ಲಿಲ್ಲ, ಜಗನ್ ಔಟ್ ಆಗಲಿಲ್ಲ, ಜನ ಬೈಯ್ಯುವುದನ್ನ ನಿಲ್ಲಿಸುತ್ತಿಲ್ಲ.!

ಬಲೆ ಹಿಡಿದು ಬಂದ ಅಕುಲ್

ಬಲೆ ಮೂಲಕ ಪ್ರಾಣಿಗಳನ್ನು ಹಿಡಿಯಲು ಕಾಡು ಜನರ ಜೊತೆ ಮಾಸ್ಟರ್ ಅಕುಲ್ ಬಂದಾಗ ಪ್ರಾಣಿಗಳು ಬಲೆಯನ್ನ ಕಿತ್ತುಕೊಂಡವು. ಒಂದು ಬಲೆಯನ್ನ ಕರಡಿ (ಸಮೀರಾಚಾರ್ಯ) ಮರದ ಕೊಂಬೆಯೊಳಗೆ ಬಚ್ಚಿಡ್ತು.

ಬಲೆಗಾಗಿ ಕಿತ್ತಾಟ

ಬಲೆಗಾಗಿ ಮಾಸ್ಟರ್ ಹಾಗೂ ಪ್ರಾಣಿಗಳ ನಡುವೆ ವಾದ ನಡೆಯುತ್ತಿರುವಾಗ ಎಲ್ಲವನ್ನೂ ಹಳ್ಳಿಯಿಂದ ಬೆಟ್ಟಪ್ಪ (ರಿಯಾಝ್) ಗಮನಿಸುತ್ತಿದ್ದರು.

ಧಿಮಾಕು ದೌಲತ್ತಿನ ಜಗನ್ 'ಬಿಗ್ ಬಾಸ್' ಇತಿಹಾಸದಲ್ಲಿಯೇ 'ಕಳಪೆ' ಸ್ಪರ್ಧಿ.!

ವಾದ ಮಾಡಿದ ಅಕುಲ್

''ಬಲೆಯನ್ನ ವಾಪಸ್ ಕೊಡಬೇಕು'' ಅಂತ ಅಕುಲ್ ವಾದ ಮಾಡುತ್ತಿದ್ದಾಗ, ಒಂದು ಬಲೆಯನ್ನ ವಾಪಸ್ ಕೊಡಲು ಹುಲಿರಾಯ (ಜಗನ್) ಸಮ್ಮತಿ ನೀಡ್ತು. ಇನ್ನೊಂದು ಬಲೆ ಹರಿದು ಹೋಗಿದೆ ಅಂತ ಜಗನ್ ವಾದ ಮಾಡುತ್ತಿದ್ದಾಗ,

ಬಲೆ ಮರದ ಒಳಗೆ ಇದೆ ಅಂತ ಅಕುಲ್ ಗೆ ರಿಯಾಝ್ ಹೇಳಿದರು. ಆಗ ಕೋಪಗೊಂಡ ಜಗನ್ ''ಅವರು ಯಾಕೆ ಮಾತನಾಡಬೇಕು.? ಮಾತನಾಡುವ ಹಾಗೇ ಇಲ್ಲ'' ಎಂದರು.


ಸದಾ ಕೆಂಡಕಾರುವ ಜಗನ್ನಾಥ್ ಗೆ ಸರಿಯಾಗಿ ಬೆಂಡೆತ್ತಿದ ಮೈಸೂರಿನ ಕಾಲರ್.!

ರಿಯಾಝ್ ಪರ ವಹಿಸಿದ ಅಕುಲ್

''ನಿಮ್ಮ ಸುರಕ್ಷತೆಗೆ ಅಷ್ಟು ಜನ ಹೇಗೆ ಬರ್ತಿದ್ದಾರೋ, ಹಾಗೆ ಅವರು ದೂರದಿಂದ ಸಹಾಯ ಮಾಡುತ್ತಿದ್ದಾರೆ. ಅವರು ಒಳಗೆ ಬಂದಿಲ್ಲ'' ಎಂದು ರಿಯಾಝ್ ಪರ ಅಕುಲ್ ವಾದ ಮಾಡಿದರು.

ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದ ಜಗನ್ ಗೆ ಕೂಗಾಡೋದು ಬಿಟ್ಟು ಬೇರೇನೂ ಬರಲ್ಲ.!

ರಿಯಾಝ್ ಹೇಳಿದ್ದೇನು.?

''ನಾನು ಹಳ್ಳಿಯಲ್ಲೇ ನಿಂತುಕೊಂಡಿದ್ದೇನೆ. ಒಳಗೆ ಬಂದರೆ ಕಥೆ ಬೇರೆ ಆಗುತ್ತೆ'' ಅಂತ ರಿಯಾಝ್ ಹೇಳುತ್ತಿದ್ದಂತೆಯೇ, ಜಗನ್ ಪಿತ್ತ ನೆತ್ತಿಗೇರ್ತು.

ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್.!

ಉರಿದು ಬಿದ್ದ ಜಗನ್

''ಕಥೆ ಏನು ಬೇರೆ ಆಗುತ್ತೆ..? ಅವೆಲ್ಲ ಮಾತನಾಡಬಾರದು... ತಪ್ಪು ತಪ್ಪೆಲ್ಲ ಮಾತನಾಡಬಾರದು ನನ್ನ ಹತ್ತಿರ... ಮರಕ್ಕಿಂತ ಮರ ದೊಡ್ಡದು ಇರುತ್ತೆ. ಟಾಸ್ಕ್ ನ ಟಾಸ್ಕ್ ತರಹ ಮಾಡಿ. ಕಥೆ ಬೇರೆ ಆಗುತ್ತೆ ಅಂತ ಮಾತನಾಡಬಾರದು. ವ್ಯಕ್ತಿತ್ವಕ್ಕೆ ಬೆದರಿಕೆ ಹಾಕಬಾರದು'' ಅಂತ ಜಗನ್ ಜೋರು ಮಾಡಿದರು.

ರಿಯಾಝ್ ವಾದ ಇಷ್ಟೇ...

''ಒಳಗೆ ಬಂದರೆ ಬೇರೆ ಕಥೆ ಆಗುತ್ತೆ ಅಂದೆ. ಆದ್ರೆ, ಹುಲಿರಾಯ ಹತ್ತಿರ ಮಾತನಾಡಿಲ್ಲ'' ಅಂತ ರಿಯಾಝ್ ಹೇಳುತ್ತಿದ್ದರೂ, ಪಾತ್ರದಿಂದ ಹೊರಬಂದ ಜಗನ್, ಹುಲಿರಾಯನ ಮುಖವಾಡ ತೆಗೆದು ಮಾತಿನ ಚಕಮಕಿ ನಡೆಸಿದರು.

English summary
Bigg Boss Kannada 5: Week 8: Verbal fight between Jaganath and Riyaz Basha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada