Don't Miss!
- News
ಕೂರ್ಮಗಿರಿ ಎಲ್ಲೋಡು ಆದಿನಾರಾಯಣಸ್ವಾಮಿ ಬ್ರಹ್ಮರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ
- Technology
ಸ್ಮಾರ್ಟ್ಫೋನ್ಗಳಲ್ಲಿನ ಸೆನ್ಸರ್ಗಳ ಬಗ್ಗೆ ನಿಮಗೆ ಗೊತ್ತಾ?..ಇವುಗಳಿಂದ ಲಾಭವೇನು?
- Automobiles
ಭಾರತದಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ನ ಬೆಲೆ ಹೆಚ್ಚಿಸಿದ ಟೊಯೊಟಾ
- Sports
Border-Gavaskar Trophy: ಭಾರತ vs ಆಸ್ಟ್ರೇಲಿಯಾ ಅತಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿ
- Finance
Real Estate Deal: ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ಗೆ ಹೂಡಿಕೆ ಮಾಡಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜಗಳಗಂಟ ಜಗನ್ ಗೆ ಮಾತಲ್ಲೇ ಗುಂಡ್ ಪಿನ್ ಚುಚ್ಚಿದ ಸಂಯುಕ್ತ ಹೆಗ್ಡೆ.!
Recommended Video

ಮಾತು ಮಾತಿಗೂ ಉರಿದು ಬಿದ್ದು, ಎಲ್ಲರ ಮೇಲೂ ಕೂಗಾಡುವ 'ಜಗಳಗಂಟ' ಜಗನ್ನಾಥ್ ಚಂದ್ರಶೇಖರ್ ಗೆ 'ಕಿರಿಕ್' ಹುಡುಗಿ ಸಂಯುಕ್ತ ಹೆಗ್ಡೆ ತಮ್ಮ ಮಾತಲ್ಲೇ ಗುಂಡ್ ಪಿನ್ ಚುಚ್ಚಿದ್ದಾರೆ.
''ನಿಮ್ಮನ್ನ ಮನೆಗೆ ಕಳುಹಿಸಿದ್ಮೇಲೆ ನಾನು ಮನೆಗೆ ಹೋಗೋದು'' ಅಂತ ಜಗನ್ನಾಥ್ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ ನಟಿ ಸಂಯುಕ್ತ ಹೆಗ್ಡೆ. ಸಾಲದಕ್ಕೆ, ''ಹೊರಗಡೆ ಗರ್ಲ್ ಫ್ರೆಂಡ್ ಇದ್ದರೂ, ಆಶಿತಾ ಜೊತೆ ಮಾಡಿದ್ದೇನು.?'' ಎಂದು ನೇರವಾಗಿ ಪ್ರಶ್ನಿಸಿದ್ದಾರೆ ಮಿಸ್.ಸಂಯುಕ್ತ.
ಎಲ್ಲರ
ತಾಳ್ಮೆ
ಪರೀಕ್ಷೆ
ಮಾಡುತ್ತಿರುವ
ಜಗನ್:
ಪಿತ್ತ
ನೆತ್ತಿಗೇರಿಸಿಕೊಂಡ
ಚಂದನ್.!
'ಬಿಗ್ ಬಾಸ್' ಮನೆಯೊಳಗೆ 'ವೈಲ್ಡ್ ಕಾರ್ಡ್ ಎಂಟ್ರಿ' ರೂಪದಲ್ಲಿ ಎಂಟ್ರಿಕೊಟ್ಟಿರುವ ನಟಿ ಸಂಯುಕ್ತ ಹೆಗ್ಡೆ, ಜಗನ್ ಜೊತೆ ಮಾಡಿಕೊಂಡ 'ಕಿರಿಕ್' ಕುರಿತ ಸಂಪೂರ್ಣ ವಿವರ ಇಲ್ಲಿದೆ. ಮುಂದೆ ಓದಿರಿ...

ಜಗನ್ ಗೆ ಪ್ರಶ್ನೆ ಹಾಕಿದ ಸಂಯುಕ್ತ
'ಬಿಗ್ ಬಾಸ್' ಮನೆಯೊಳಗೆ ಕಾಲಿಡುತ್ತಿದ್ದಂತೆಯೇ, ಎಲ್ಲರ ಬಗ್ಗೆ ಕಾಮೆಂಟ್ ಮಾಡಲು ಶುರು ಮಾಡಿದ ಸಂಯುಕ್ತ, ''ನಿಮಗೆ ಒಂದು ಪ್ರಶ್ನೆ ಕೇಳ್ತೀನಿ. ನಿಜವಾದ ಉತ್ತರ ನೀಡಬೇಕು'' ಎಂದು ಜಗನ್ ಜೊತೆ ಮಾತಿಗಿಳಿದರು.
ಜಗನ್
ಘರ್ಜನೆಗೆ
'ಮಾಸ್ಟರ್'
ಅಕುಲ್
ಕೂಡ
ಹೊರತಾಗಲಿಲ್ಲ.!

ಸಂಯುಕ್ತ ಕೇಳಿದ ಪ್ರಶ್ನೆ ಏನು.?
''ನಿಮಗೆ ದುಬೈನಲ್ಲಿ ಗರ್ಲ್ ಫ್ರೆಂಡ್ ಇದ್ದಾರೆ ಅಲ್ವಾ.?'' ಅಂತ ಸಂಯುಕ್ತ ಪ್ರಶ್ನೆ ಕೇಳಿದಾಗ ''ಹೌದು'' ಎಂದು ಜಗನ್ ಒಪ್ಪಿಕೊಂಡರು. ಆಗ, ''ಮತ್ತೆ ಆಶಿತಾ ಜೊತೆ ನಿಮ್ಮ ಕಡೆಯಿಂದ ಏನಿತ್ತು.?'' ಎಂದು ಪ್ರಶ್ನಿಸಿದರು ನಟಿ ಸಂಯುಕ್ತ
ಜಗನ್
ಗೆ
ಆಶಿತಾ
ಮುತ್ತು
ಕೊಟ್ಟ
ಗುಟ್ಟು
ಅನುಪಮಾ
ಮುಂದೆ
ರಟ್ಟು.!

ಜಗನ್ ಕೊಟ್ಟ ಉತ್ತರ ಏನು.?
''ನಾನು ಆಶಿತಾನ ಯಾವತ್ತೂ ಗರ್ಲ್ ಫ್ರೆಂಡ್ ತರಹ ನೋಡೇ ಇಲ್ಲ. ನಾನು ಯಾವತ್ತೂ ಆ ತರಹ ನಡೆದುಕೊಂಡಿಲ್ಲ. ನಾವು ಒಂದು ಫ್ಯಾಮಿಲಿ ತರಹ ಇದ್ವಿ'' ಎಂದು ಜಗನ್ ಉತ್ತರಿಸಿದಾಗ ಸಂಯುಕ್ತ ಪ್ರತಿಕ್ರಿಯೆ ಸಕಾರಾತ್ಮಕವಾಗಿರಲಿಲ್ಲ.
ಜಗನ್,
ಆಶಿತಾ
ಕಂಡ್ರೆ
ಉರಿದು
ಬೀಳ್ತಿದ್ದಾರೆ
'ಬಿಗ್
ಬಾಸ್'
ವೀಕ್ಷಕರು.!

ಜಗನ್ ಕೇಳಿದ್ದೇನು.?
ಸಂಯುಕ್ತ ನೇರ ನುಡಿ ನೋಡಿ ''ಎಷ್ಟು ದಿನ ಇರ್ತೀರಾ ಅಂತ ಡಿಸೈಡ್ ಮಾಡಿದ್ದೀರಾ.?'' ಎಂದು ಜಗನ್ ಕೇಳಿದರು.
ಅನುಪಮಾ
ಮಾಜಿ
ಪ್ರಿಯಕರನ
ಕೆನ್ನೆಗೆ
ಆಶಿತಾ
ಸಿಹಿ
ಮುತ್ತು:
ಜಗನ್
ಕೆನ್ನೆ
ಕೆಂಪು.!

ತಿರುಗೇಟು ಕೊಟ್ಟ ಸಂಯುಕ್ತ
''ನಿಮ್ಮನ್ನ ಕಳುಹಿಸಿ ಆದ್ಮೇಲೆ ನಾನು ಮನೆಗೆ ಹೋಗೋದು ಅಂತ ಡಿಸೈಡ್ ಮಾಡಿಕೊಂಡೇ ಬಂದಿದ್ದೇನೆ'' ಎಂದು ಜಗನ್ ಗೆ ತಿರುಗೇಟು ಕೊಟ್ಟರು ಸಂಯುಕ್ತ. ಅದಕ್ಕೆ ''ಸೋ ಸ್ವೀಟ್'' ಎಂದಷ್ಟೇ ಹೇಳಿ ಜಗನ್ ಸುಮ್ಮನಾದರು.

ಜಗಳಗಂಟ ಜಗನ್
''ತುಂಬಾ ಜಗಳ ಮಾಡ್ತೀರಾ. ಮಾತು ಮಾತಿಗೂ ಜಗಳ ಮಾಡ್ತೀರಾ. ಜಗಳಗಂಟ ಅಂತಾನೇ ಕಾಣಿಸಿಕೊಳ್ಳುತ್ತಿದ್ದೀರಾ'' ಎಂದು ಜಗನ್ ಬಗ್ಗೆ ಸಂಯುಕ್ತ ಕಾಮೆಂಟ್ ಮಾಡಿದರು.