Just In
Don't Miss!
- Automobiles
ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ
- News
ರೈತರ ಹೋರಾಟ ಬೆಂಬಲಿಸಿ ಜ.20ರಂದು ರಾಜ್ ಭವನ ಚಲೋ
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನುಪಮಾ, ಶ್ರುತಿ, ಸಮೀರಾಚಾರ್ಯ: ಮೂವರಲ್ಲಿ ಉತ್ತಮ ಯಾರು.? ಕಳಪೆ ಯಾರು.?

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆಗಿ ಮೂರು ವಾರಗಳು ಕಳೆದಿವೆ. ಮೂವರು ಸ್ಪರ್ಧಿಗಳು (ಸುಮಾ ರಾಜ್ ಕುಮಾರ್, ಮೇಘ, ದಯಾಳ್ ಪದ್ಮನಾಭನ್) ಎಲಿಮಿನೇಟ್ ಆಗಿದ್ದಾರೆ.
ಇದರ ಜೊತೆಗೆ 'ಬಿಗ್ ಬಾಸ್' ಮನೆ ಮೂರು ಕ್ಯಾಪ್ಟನ್ ಗಳನ್ನ ನೋಡಿದೆ. ಅನುಪಮಾ ಗೌಡ, ಶ್ರುತಿ ಪ್ರಕಾಶ್ ಹಾಗೂ ಸಮೀರಾಚಾರ್ಯ ಕ್ಯಾಪ್ಟನ್ ಆಗಿ ಇಲ್ಲಿಯವರೆಗೂ ಒಂದೊಂದು ವಾರ ಕಾರ್ಯ ನಿರ್ವಹಿಸಿದ್ದಾರೆ.
ಹಾಲಿಗಾಗಿ ಕೋಲಾಹಲ: ಹಾಲು ಮುಚ್ಚಿಟ್ಟ ಮಹಾನುಭಾವರಿಗೆ ಸುದೀಪ್ ಚಾಟಿಯೇಟು.!
ಈ ಮೂವರಲ್ಲಿ ಉತ್ತಮ ಕ್ಯಾಪ್ಟನ್ ಯಾರು.? ಕಳಪೆ ಕ್ಯಾಪ್ಟನ್ ಯಾರು.? ಈ ಪ್ರಶ್ನೆಯನ್ನ ಎಲ್ಲರ ಮುಂದೆ ಸುದೀಪ್ ಇಟ್ಟಾಗ, 'ಬಿಗ್ ಬಾಸ್' ಮನೆ ಸದಸ್ಯರು ಕೊಟ್ಟ ಉತ್ತರಗಳು ಇವು....

ಜೆಕೆ ಪ್ರಕಾರ ಅನುಪಮಾ ಬೆಸ್ಟ್
''ಅನುಪಮಾ ಬೆಸ್ಟ್ ಕ್ಯಾಪ್ಟನ್. ಯಾಕಂದ್ರೆ, ಮೊದಲ ವಾರದಲ್ಲಿ ಏನೂ ಗೊತ್ತಿಲ್ಲದೇ ಇದ್ದರೂ ಚೆನ್ನಾಗಿ ಮ್ಯಾನೇಜ್ ಮಾಡಿದರು. ಇನ್ನೂ, ಸಮೀರಾಚಾರ್ಯ ವರ್ಸ್ಟ್ ಕ್ಯಾಪ್ಟನ್. ಯಾಕಂದ್ರೆ, ಯಾವುದೇ ನಿರ್ಧಾರ ತೆಗೆದುಕೊಳ್ಳಲು ತುಂಬಾ ಹಿಂಜರಿಯುತ್ತಿದ್ದರು'' ಎಂದು ಜೆಕೆ ಹೇಳಿದರು.
'ಬಿಗ್ ಬಾಸ್' ಮನೆಯಲ್ಲಿದ್ದಾರೆ ಹಾಲು ಕಳ್ಳರು: ಛೀಮಾರಿ ಹಾಕಿದ ವೀಕ್ಷಕರು.!

ದಯಾಳ್ ಪ್ರಕಾರ ಸಮೀರಾಚಾರ್ಯ ವರ್ಸ್ಟ್
''ಅನುಪಮಾ ಬೆಸ್ಟ್ ಕ್ಯಾಪ್ಟನ್. ಕಾರಣ ಏನಂದ್ರೆ, ಅವರಲ್ಲಿ ಲೀಡರ್ ಶಿಪ್ ಕ್ವಾಲಿಟಿ ಇತ್ತು. ಮನೆಯಲ್ಲಿ ಭೇದಭಾವ ಮಾಡಲಿಲ್ಲ. ಇನ್ನೂ ಸಮೀರಾಚಾರ್ಯ ವರ್ಸ್ಟ್ ಕ್ಯಾಪ್ಟನ್. ಯಾಕಂದ್ರೆ, ಅವರಲ್ಲಿ ನಾಯಕತ್ವದ ಗುಣಗಳು ಇಲ್ಲ. ಹಾಗೇ, ತುಂಬಾ ಚೈಲ್ಡಿಶ್'' ಎಂದರು ನಿರ್ದೇಶಕ ದಯಾಳ್ ಪದ್ಮನಾಭನ್.

ದಿವಾಕರ್ ಗೆ ಯಾರೂ ಇಷ್ಟ ಆಗಲಿಲ್ಲ.
ಕ್ಯಾಪ್ಟನ್ ಆಗಿ ಮೂರು ಜನ ಕೂಡ 'ಸೇಲ್ಸ್ ಮ್ಯಾನ್' ದಿವಾಕರ್ ಗೆ ಇಷ್ಟ ಆಗಲಿಲ್ವಂತೆ.

ಶ್ರುತಿ ಬೆಸ್ಟ್ ಎಂದ ರಿಯಾಝ್
''ಶ್ರುತಿ ಪ್ರಕಾಶ್ ಬೆಸ್ಟ್ ಕ್ಯಾಪ್ಟನ್. ಒಂದು ತಪ್ಪು ನಿರ್ಧಾರ ಮಾಡಿದ್ದನ್ನ ಬಿಟ್ಟರೆ ಇಡೀ ಮನೆಯನ್ನ ತುಂಬಾ ಚೆನ್ನಾಗಿ ಮ್ಯಾನೇಜ್ ಮಾಡಿದರು. ಕ್ಯಾಪ್ಟನ್ ಆಗಿ ಸಮೀರಾಚಾರ್ಯ ವರ್ಸ್ಟ್. ಯಾಕಂದ್ರೆ, ಎಲ್ಲರನ್ನೂ ಮೆಚ್ಚಿಸುವ ಗುಣ ಅವರಲ್ಲಿ ಇದೆ. ಯಾರ ಮನಸ್ಸನ್ನೂ ನೋಯಿಸಬಾರದು ಎಂದುಕೊಂಡು ಸೀರಿಯಸ್ ಆಗಿ ನಿರ್ಧಾರಗಳನ್ನು ಮಾಡಿಲ್ಲ'' ಎಂದರು ರಿಯಾಝ್.

ನಿವೇದಿತಾ, ಸಿಹಿ ಕಹಿ ಚಂದ್ರು ಪ್ರಕಾರ ಯಾರು ಉತ್ತಮ.?
ನಿವೇದಿತಾ ಗೌಡ ಪ್ರಕಾರ, ಅನುಪಮಾ ಬೆಸ್ಟ್ ಹಾಗೂ ಶ್ರುತಿ ಪ್ರಕಾಶ್ ವರ್ಸ್ಟ್. ಇನ್ನೂ ಸಿಹಿ ಕಹಿ ಚಂದ್ರು ಪ್ರಕಾರ ಶ್ರುತಿ ಉತ್ತಮ ಕ್ಯಾಪ್ಟನ್ ಹಾಗೂ ಸಮೀರಾಚಾರ್ಯ ಕಳಪೆ ಕ್ಯಾಪ್ಟನ್.

ಜಯಶ್ರೀನಿವಾಸನ್ ಪ್ರಕಾರ ಯಾರು ಕಳಪೆ.?
ಜಯಶ್ರೀನಿವಾಸನ್ ಪ್ರಕಾರ ಶ್ರುತಿ ಪ್ರಕಾಶ್ ಅತ್ಯುತ್ತಮ ಕ್ಯಾಪ್ಟನ್. ತಮ್ಮ ಪರ ದನಿ ಎತ್ತಿದ್ದರೂ, ಸಪೋರ್ಟ್ ಮಾಡದ ಸಮೀರಾಚಾರ್ಯ ವರ್ಸ್ಟ್ ಕ್ಯಾಪ್ಟನ್ ಎಂದುಬಿಟ್ಟರು ಜಯಶ್ರೀನಿವಾಸನ್.

ನಾನೇ ಬೆಸ್ಟ್ ಎಂದ ಅನುಪಮಾ
''ನಾನೇ ಬೆಸ್ಟ್ ಅನ್ಸುತ್ತೆ. ಮೊದಲ ವಾರ ನನಗೆ ತುಂಬಾ ಕಷ್ಟ ಇತ್ತು. ವರ್ಸ್ಟ್ ಸಮೀರಾಚಾರ್ಯ. ಯಾಕಂದ್ರೆ ಅವರು ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳಲಿಲ್ಲ'' ಎಂದು ಅನುಪಮಾ ಗೌಡ ಹೇಳಿದರು.

ನಾನೇ ಉತ್ತಮ ಎಂದ ಶ್ರುತಿ
''ನಾನೇ ಬೆಸ್ಟ್ ಕ್ಯಾಪ್ಟನ್'' ಎಂದು ಶ್ರುತಿ ಪ್ರಕಾಶ್ ಹೇಳಿಕೊಂಡರು.

ವಿಫಲ ಆದೆ ಎಂದು ಒಪ್ಪಿಕೊಂಡ ಸಮೀರಾಚಾರ್ಯ
''ಕಳಪೆ ಕ್ಯಾಪ್ಟನ್ ನಾನೇ. ಜನ ಸ್ನೇಹಿ ಕ್ಯಾಪ್ಟನ್ ಆಗಲು ಹೋಗಿ ವಿಫಲ ಆದೆ'' ಎಂದು ಸಮೀರಾಚಾರ್ಯ ಒಪ್ಪಿಕೊಂಡರು.

ಉತ್ತಮ ಕ್ಯಾಪ್ಟನ್ ಇನ್ನೂ ಬಂದಿಲ್ಲ.!
''ಕ್ಯಾಪ್ಟನ್ ಅಂದ್ರೆ ರೂಲ್ಸ್ ಫಾಲೋ ಮಾಡಬೇಕು. ರೂಲ್ಸ್ ಫಾಲೋ ಮಾಡಿಸಬೇಕು. ಮಾಡುವ ಎಲ್ಲ ಕೆಲಸದಲ್ಲಿ ಸ್ಪಷ್ಟತೆ ಇರಬೇಕು. ಭೇದಭಾವ ಮಾಡಬಾರದು. ಕ್ಯಾಪ್ಟನ್ ಅಂದ್ರೆ ಮಿಕ್ಕಿದವರಿಗೆ ಗೌರವ, ಭಯ ಇರಬೇಕು. ಮೂರು ಜನ ಕ್ಯಾಪ್ಟನ್ ಗಳನ್ನು ನೋಡಿದಾಗ, ಈ ಎಲ್ಲ ಗುಣಗಳು ಇರುವ ಕ್ಯಾಪ್ಟನ್ ಈ ಮನೆಗೆ ಬರಬೇಕು ಅಂತ ಅನ್ಸುತ್ತೆ ಹೊರತು ಬಂದಿದ್ದಾರೆ ಅಂತ ಅನ್ಸಲ್ಲ'' ಎಂದು ಸುದೀಪ್ ಹೇಳಿದರು.