»   » ಹಳೇ ಬಾಯ್ ಫ್ರೆಂಡ್ ಜಗನ್ ಕಂಡ್ರೆ ಅನುಪಮಾಗೆ ಅಷ್ಟಕಷ್ಟೆ.! ಯಾಕೆ.?

ಹಳೇ ಬಾಯ್ ಫ್ರೆಂಡ್ ಜಗನ್ ಕಂಡ್ರೆ ಅನುಪಮಾಗೆ ಅಷ್ಟಕಷ್ಟೆ.! ಯಾಕೆ.?

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಅನುಪಮಾ ಗೌಡಗೆ ಜಗನ್ ಕಂಡ್ರೆ ಅಷ್ಟಕ್ಕಷ್ಟೇ | Filmibeat Kannada

ಧಾರಾವಾಹಿಗಳಲ್ಲಿ ಅಭಿನಯಿಸುತ್ತಿರುವ ಜಗನ್ ಹಾಗೂ ಅನುಪಮಾ ಮಾಜಿ ಲವರ್ಸ್. ಒಂದ್ಕಾಲದಲ್ಲಿ ಪ್ರೇಮಿಗಳಾಗಿದ್ದವರು ಎರಡು ವರ್ಷಗಳ ಹಿಂದೆ ಬ್ರೇಕಪ್ ಮಾಡಿಕೊಂಡರು.

ಎರಡು ವರ್ಷಗಳಿಂದ ಸೀರಿಯಲ್ ಗಳಲ್ಲಿ ಹೆಚ್ಚಾಗಿ ತೊಡಗಿರುವ ಹಳೇ ಪ್ರಣಯ ಪಕ್ಷಿಗಳು ಇದೀಗ 'ಬಿಗ್ ಬಾಸ್' ಮನೆಯಲ್ಲಿ ಬಂಧಿಯಾಗಿವೆ.

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಾಗಿನಿಂದಲೂ, ಜಗನ್ ಹಾಗೂ ಅನುಪಮಾ ನಡುವೆ ಹೊಂದಾಣಿಕೆ ಆಗುತ್ತಿಲ್ಲ. ಜಗನ್ ಕಂಡ್ರೆ ಅನುಪಮಾಗೆ ಕಿರಿಕಿರಿ ಆಗುತ್ತಿದೆ. ಹೀಗ್ಯಾಕೆ.? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಮುಂದೆ ಓದಿರಿ....

'ಟ್ರೂತ್/ಡೇರ್' ಆಟದಲ್ಲಿ ಸತ್ಯ ಹೊರಗೆ ಬಂತು

ಜಗನ್, ಆಶಿತಾ, ಕೃಷಿ, ಅನುಪಮಾ 'ಟ್ರೂತ್/ಡೇರ್' ಆಟ ಆಡುತ್ತಿದ್ದರು. ಇದೇ ಆಟದಲ್ಲಿ ನಟಿ ಅನುಪಮಾ ಗೌಡ ಒಂದು ಸತ್ಯವನ್ನ ಹೊರಗೆ ಹಾಕಿದರು.

ಓಹೋ.! ಮಾಜಿ ಪ್ರೇಯಸಿ ಅನುಪಮಾ ರನ್ನ ತಬ್ಬಿಕೊಂಡು, ಮುತ್ತು ಕೊಟ್ಟ ಜಗನ್ನಾಥ್.!

ಆಶಿತಾ ಕೊಟ್ಟ ಡೇರ್ ಏನು.?

ನಟಿ ಅನುಪಮಾ ಗೌಡ ಸರದಿ ಬಂದಾಗ, ಆಕೆಗೆ ನಟಿ ಆಶಿತಾ ಒಂದು ಡೇರ್ ಕೊಟ್ಟರು. ''ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ, ನಿಮಗೆ ಜಗನ್ ಬಗ್ಗೆ ಕಿರಿಕಿರಿ ಎನಿಸಿದ ಒಂದು ವಿಷಯ ಹೇಳಬೇಕು'' ಎಂಬ ಡೇರ್ ನ ಅನುಪಮಾಗೆ ಆಶಿತಾ ನೀಡಿದರು.

ಜಗನ್ ಜೊತೆ ಪ್ರೀತಿ ಮುರಿದು ಬಿದ್ದಿದ್ದೇಕೆ.? ಅನುಪಮಾ ಗೌಡ ಕಣ್ಣೀರಧಾರೆ.!

ಅದು ಡೇರ್ ಎಂಬ ವಾದ.!

ಅದು ಡೇರ್ ಅಲ್ಲ, ಟ್ರೂತ್ ಎಂಬ ವಾದ ಆದ ನಂತರ, ಆಶಿತಾ ಕೇಳಿದಕ್ಕೆ ಅನುಪಮಾ ಉತ್ತರ ಕೊಟ್ಟರು. ಅದೇನಪ್ಪಾ ಅಂದ್ರೆ,

ಜಗನ್ ಮಾತನಾಡಲ್ಲ.!

''ನನ್ನನ್ನ ಅವನು (ಜಗನ್) ಮಾತನಾಡಿಸುವುದಿಲ್ಲ. ಅದೇ ನನಗೆ ಕಿರಿಕಿರಿ'' ಅಂತ ಅನುಪಮಾ ಗೌಡ ಹೇಳಿದರು.

ಜಗನ್ ಗೆ ಕಿರಿಕಿರಿ: ನಿವೇದಿತಾ ಗೌಡ ಕಣ್ಣಲ್ಲಿ ಗಂಗಾ-ಕಾವೇರಿ.!

ಹೊರಗಡೆ ಇದ್ದ ಹಾಗೆ ಇಲ್ಲ.!

''ಹೊರಗಡೆ ಮಾತನಾಡಿಸುವ ಹಾಗೆ ನನ್ನನ್ನ ಇಲ್ಲಿ ಮಾತನಾಡಿಸುತ್ತಿಲ್ಲ'' ಎಂದು ಅನುಪಮಾ ಹೇಳಿದಾಗ, ''ಅವಳ ಹತ್ತಿರನಾನು ಸರಿಯಾಗಿ ಮಾತನಾಡುತ್ತಿಲ್ಲ'' ಎಂದು ಜಗನ್ ಒಪ್ಪಿಕೊಂಡರು.

ಗ್ಯಾಪ್ ನಿಂದಾಗಿ ಕಿರಿಕಿರಿ

ಇಬ್ಬರ ನಡುವೆ ಮಾತಿನ ಗ್ಯಾಪ್ ಆಗಿರುವ ಕಾರಣ, ಆಗಾಗ ತಮ್ಮ ಲವ್ ಸ್ಟೋರಿ ಫ್ಲ್ಯಾಶ್ ಬ್ಯಾಕ್ ಹೇಳಿಕೊಂಡು ಕಣ್ಣೀರು ಸುರಿಸುತ್ತಿರುತ್ತಾರೆ ಅನುಪಮಾ ಗೌಡ.

English summary
Bigg Boss Kannada 5: Week 4: Why is Anupama irritated with Jaganath.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X