Just In
Don't Miss!
- Sports
ಐಪಿಎಲ್ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್
- News
ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಶೇ.81ರಷ್ಟು ಪರಿಣಾಮಕಾರಿ
- Lifestyle
ದಿನ ಭವಿಷ್ಯ: ಗುರುವಾರದ ರಾಶಿಫಲ ಹೇಗಿದೆ ನೋಡಿ
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Automobiles
31 ಟನ್ ಸರಕು ಸಾಗಾಣಿಕೆ ಸಾಮರ್ಥ್ಯದ ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ
- Finance
ಚಿನ್ನದ ಬೆಲೆ ಕೊಂಚ ಇಳಿಕೆ: ಮಾರ್ಚ್ 03ರ ಬೆಲೆ ಎಷ್ಟಿದೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಕಿಪಿಡಿಯಾದಲ್ಲಿ 'ಬಿಗ್ ಬಾಸ್ ಕನ್ನಡ-5' ವಿಜೇತ ಬಹಿರಂಗ.! ವಿನ್ನರ್ ಯಾರ್ ಗೊತ್ತಾ.?

ನೋಡನೋಡುತ್ತಲೇ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಮುಕ್ತಾಯದ ಹಂತ ತಲುಪಿದೆ. ಕಣ್ಮುಚ್ಚಿ ಕಣ್ತೆರುವಷ್ಟರಲ್ಲಿ 'ಬಿಗ್ ಬಾಸ್' ಐದನೇ ಆವೃತ್ತಿ ಮುಗಿದಿದೆ. ಇದೇ ಶನಿವಾರ ಹಾಗೂ ಭಾನುವಾರ 'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆ ಪ್ರಸಾರ ಆಗಲಿದೆ.
ಹೀಗಿರುವಾಗಲೇ, ವಿಕಿಪಿಡಿಯಾದಲ್ಲಿ 'ಬಿಗ್ ಬಾಸ್ ಕನ್ನಡ-5' ವಿಜೇತ ಯಾರು ಎಂದು ಅನೌನ್ಸ್ ಆಗಿದೆ. ಅಷ್ಟೇ ಅಲ್ಲ, ಟಾಪ್ 3 ಹಂತಕ್ಕೆ ಹೋದವರು ಯಾರು.? ಎಂಬುದರ ಬಗ್ಗೆ ಕೂಡ ವಿಕಿಪಿಡಿಯಾದಲ್ಲಿ ಮಾಹಿತಿ ನೀಡಲಾಗಿದೆ.
ಇದೇನಪ್ಪಾ, ಆಗಲೇ 'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆ ಶೂಟಿಂಗ್ ಮುಗಿದು ಹೋಗಿದ್ಯಾ ಅಂತ ಶಾಕ್ ಆದ್ರಾ.? ಮೊದಲು ವಿಕಿಪಿಡಿಯಾದ ಈ ಸ್ಕ್ರೀನ್ ಶಾಟ್ಸ್ ನೋಡ್ಕೊಂಡ್ ಬನ್ನಿ..

ವಿಕಿಪಿಡಿಯಾ ಪ್ರಕಾರ 'ಬಿಗ್ ಬಾಸ್ ಕನ್ನಡ-5' ವಿನ್ನರ್ ಯಾರು ಗೊತ್ತಾ.?
ವಿಕಿಪಿಡಿಯಾದಲ್ಲಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಕುರಿತು ಸಮಗ್ರ ಮಾಹಿತಿ ಇದೆ. ಇದೇ ಪುಟದಲ್ಲಿ 'ಬಿಗ್ ಬಾಸ್ ಕನ್ನಡ-5' ವಿನ್ನರ್ ಘೋಷಣೆ ಆಗಿದೆ. ವಿಕಿಪಿಡಿಯಾದಲ್ಲಿ ಸದ್ಯ ಅಪ್ ಡೇಟ್ ಆಗಿರುವ ಪ್ರಕಾರ, ಜಯರಾಂ ಕಾರ್ತಿಕ್ 'ಬಿಗ್ ಬಾಸ್ ಕನ್ನಡ-5' ವಿಜೇತ.!
'ಫಿಲ್ಮಿಬೀಟ್' FB Poll ಪ್ರಕಾರ 'ಬಿಗ್ ಬಾಸ್ ಕನ್ನಡ-5' ವಿನ್ನರ್ 'ಇವರೇ'.!

ಬೇಕಾದ್ರೆ, ನೀವೇ ಈ ಸ್ಕ್ರೀನ್ ಶಾಟ್ ನೋಡಿ...
'ಬಿಗ್ ಬಾಸ್ ಕನ್ನಡ-5' ಸ್ಪರ್ಧಿಗಳ ಎಂಟ್ರಿ ಹಾಗೂ ಎಕ್ಸಿಟ್ ಕುರಿತು ವಿಕಿಪಿಡಿಯಾದ ಟೇಬಲ್ ನಲ್ಲಿ ಸ್ಪಷ್ಟ ಚಿತ್ರಣ ಇದೆ. ಇದೇ ಟೇಬಲ್ ನಲ್ಲಿ ಸದ್ಯ ನಮೂದಾಗಿರುವ ಪ್ರಕಾರ, ಜಯರಾಂ ಕಾರ್ತಿಕ್ ವಿನ್ನರ್.!

ಟಾಪ್ 3 ಹಂತ ತಲುಪಿರುವವರು ಯಾರು.?
ವಿಕಿಪಿಡಿಯಾದ ಟೇಬಲ್ ನಲ್ಲಿ ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್ ಹಾಗೂ ದಿವಾಕರ್ ಹೊರಬಂದಿರುವುದು 106ನೇ ದಿನ ಅಂತ ನಮೂದಿಸಲಾಗಿದೆ. ಅಲ್ಲಿಗೆ, ಈ ಮೂವರೇ ಟಾಪ್ 3 ಹಂತ ತಲುಪಿದ್ದಾರೆ ಅಂತರ್ಥ.

ನಾಲ್ಕು ಮತ್ತು ಐದನೇ ಸ್ಥಾನ ಯಾರಿಗೆ.?
ನಿವೇದಿತಾ ಗೌಡ ಹಾಗೂ ಶ್ರುತಿ ಪ್ರಕಾಶ್ 105ನೇ ದಿನ ಹೊರಬಂದಿದ್ದಾರೆ ಅಂತ ಹಾಕಲಾಗಿದೆ. ಹೀಗಾಗಿ, ಇವರಿಬ್ಬರಿಗೆ ನಾಲ್ಕು ಮತ್ತು ಐದನೇ ಸ್ಥಾನ ಲಭಿಸಿದೆ.!

ಇದನ್ನ ನಂಬಬಹುದಾ.?
ವಿಕಿಪಿಡಿಯಾದಲ್ಲಿ ಯಾರು ಬೇಕಾದರೂ ಎಡಿಟ್ ಮಾಡಬಹುದು. ಹೀಗಾಗಿ, ಇದೇ ಅಧಿಕೃತ ಮಾಹಿತಿ ಅಲ್ಲ ಎಂಬುದು ಮಾತ್ರ ಸ್ಪಷ್ಟ.

ವೋಟಿಂಗ್ ಲೈನ್ ಇನ್ನೂ ಓಪನ್ ಇದೆ.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಪ್ರಸಾರ ಆಗುವ ಸಂದರ್ಭದಲ್ಲಿ, ವೋಟಿಂಗ್ ಲೈನ್ ಗಳು ಶನಿವಾರ ಬೆಳಗ್ಗೆ 9 ಗಂಟೆವರೆಗೂ ಓಪನ್ ಇರಲಿದೆ ಎಂಬ ಸೂಚನೆ ನೀಡಲಾಗಿದೆ. ಹೀಗಾಗಿ, ಶನಿವಾರ ಮಧ್ಯಾಹ್ನದ ಮೇಲೆ ಗ್ರ್ಯಾಂಡ್ ಫಿನಾಲೆ ಶೂಟಿಂಗ್ ನಡೆಯಬೇಕು.

ಶೂಟಿಂಗ್ ಆಗದೇ ಅನೌನ್ಸ್ ಮೆಂಟ್ ಹೇಗೆ ಸಾಧ್ಯ.?
ವೋಟಿಂಗ್ ಲೈನ್ ಗಳು ಇನ್ನೂ ತೆರೆದಿರುವ ಕಾರಣ ಗ್ರ್ಯಾಂಡ್ ಫಿನಾಲೆ ಶೂಟಿಂಗ್ ಮುಗಿಯಲು ಸಾಧ್ಯವೇ ಇಲ್ಲ. ಹೀಗಿರುವಾಗ, ವಿಕಿಪಿಡಿಯಾದಲ್ಲಿ ಇಂತಹ ಅಪ್ ಡೇಟ್ ಹೇಗೆ ಸಾಧ್ಯ.? ಕಲರ್ಸ್ ಸೂಪರ್ ವಾಹಿನಿ ಸ್ಪಷ್ಟನೆ ನೀಡಬೇಕು.