»   » ಮೊನ್ನೆಯಷ್ಟೇ 'ಬಿಗ್ ಬಾಸ್'ಗೆ ಬಂದ ನಟಿ ವೈಷ್ಣವಿ ಇಷ್ಟು ಬೇಗ ಔಟ್ ಆಗ್ಬಿಟ್ರೆ.?

ಮೊನ್ನೆಯಷ್ಟೇ 'ಬಿಗ್ ಬಾಸ್'ಗೆ ಬಂದ ನಟಿ ವೈಷ್ಣವಿ ಇಷ್ಟು ಬೇಗ ಔಟ್ ಆಗ್ಬಿಟ್ರೆ.?

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ವೈಷ್ಣವಿ ಚಂದ್ರನ್ ಮೆನನ್ ಬಿಗ್ ಮನೆಯಿಂದ ಹೊರ ಬರ್ತಾರಾ? | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ 51ನೇ ದಿನ 'ದೊಡ್ಮನೆ'ಯೊಳಗೆ ಕಾಲಿಟ್ಟಿದ್ದ ನಟಿ ವೈಷ್ಣವಿ ಸದ್ಯದಲ್ಲೇ ಔಟ್ ಆದರೆ ಅಚ್ಚರಿ ಇಲ್ಲ.

ಇದೇನಪ್ಪಾ, ಮೊನ್ನೆಮೊನ್ನೆಯಷ್ಟೇ ವೈಷ್ಣವಿ 'ವೈಲ್ಡ್ ಕಾರ್ಡ್ ಎಂಟ್ರಿ' ಮೂಲಕ 'ಬಿಗ್ ಬಾಸ್' ಮನೆಯೊಳಗೆ ಪದಾರ್ಪಣೆ ಮಾಡಿದ್ರು. ಅಷ್ಟು ಬೇಗ ಅದ್ಹೇಗೆ ಔಟ್ ಆಗ್ತಾರೆ ಅಂತ ಯೋಚನೆ ಮಾಡ್ತಿದ್ದೀರಾ.?

ನಟಿ ವೈಷ್ಣವಿ ಬೆನ್ನಿಗೆ ಪೆಟ್ಟು ಬಿದ್ದಿದೆ. 'ಗಂಧದ ಗುಡಿ' ಟಾಸ್ಕ್ ಚಾಲ್ತಿಯಲ್ಲಿದ್ದ ಸಂದರ್ಭದಲ್ಲಿ ವೈಷ್ಣವಿಗೆ ಪೆಟ್ಟಾಗಿದೆ. ಇಪ್ಪತ್ನಾಲ್ಕು ಗಂಟೆಗಳಲ್ಲಿ ವೈಷ್ಣವಿಗೆ ಬೆನ್ನು ನೋವು ಕಮ್ಮಿ ಆಗದೇ ಇದ್ದರೆ, ಬೇರೆ ದಾರಿಯಿಲ್ಲದೆ 'ಬಿಗ್ ಬಾಸ್' ಮನೆಯಿಂದ ವೈಷ್ಣವಿ ಆಚೆ ಬರಲೇಬೇಕು.! ಮುಂದೆ ಓದಿರಿ...

'ಗಂಧದ ಗುಡಿ' ಟಾಸ್ಕ್ ವೇಳೆ ಪೆಟ್ಟು

'ಬಿಗ್ ಬಾಸ್' ಮನೆಯೊಳಗೆ 'ಗಂಧದ ಗುಡಿ' ಟಾಸ್ಕ್ ಚಾಲ್ತಿಯಲ್ಲಿದ್ದ ಸಂದರ್ಭದಲ್ಲಿ ಪ್ರಾಣಿಗಳನ್ನು ಸೆರೆಹಿಡಿಯುವಾಗ ನಟಿ ವೈಷ್ಣವಿ ಬೆನ್ನಿಗೆ ಪೆಟ್ಟು ಬಿತ್ತು.

'ಬಿಗ್' ಬ್ರೇಕಿಂಗ್: 'ಬಿಗ್ ಬಾಸ್' ಮನೆಯೊಳಗೆ ಹೊಸ ನಟಿ ಎಂಟ್ರಿ.?

ತಲೆ ತಿರುಗಿ ಬಿದ್ದ ವೈಷ್ಣವಿ

ಸುಸ್ತಾದ ವೈಷ್ಣವಿ ತಲೆ ತಿರುಗಿ ಬಿದ್ದರು. ಬೆನ್ನು ನೋವಿನಿಂದ ಬಳಲುತ್ತಿದ್ದ ವೈಷ್ಣವಿಗೆ 'ಬಿಗ್ ಬಾಸ್' ಮನೆಯಲ್ಲಿ ತುರ್ತು ಚಿಕಿತ್ಸೆ ಲಭಿಸಿತು.

'ಬಿಗ್' ಮನೆಗೆ ಕಾಲಿಟ್ಟ 'ಮಸ್ತ್ ಮಸ್ತ್ ಹುಡುಗಿ' ವೈಷ್ಣವಿ ಯಾರು.?

ಬೆನ್ನಿಗೆ ಬೆಲ್ಟ್ ಧರಿಸಿ ಬಂದ ವೈಷ್ಣವಿ

ತುರ್ತು ಚಿಕಿತ್ಸೆ ಪಡೆದು ನಟಿ ವೈಷ್ಣವಿ 'ಬಿಗ್ ಬಾಸ್' ಮನೆಗೆ ವಾಪಸ್ ಬಂದಾಗ ಬೆನ್ನಿಗೆ ಬೆಲ್ಟ್ ಧರಿಸಿದ್ದರು.

ಹೊಸ ಸ್ಪರ್ಧಿ ವೈಷ್ಣವಿ ವಯಸ್ಸು ಎಷ್ಟು.? ಈಕೆ ನಿವೇದಿತಾಗಿಂತ ಚಿಕ್ಕವಳು.!

ವೈಷ್ಣವಿ ಹೇಳಿದ್ದೇನು.?

''ಟಾಸ್ಕ್ ಮಾಡಬೇಡಿ, ರೆಸ್ಟ್ ತೆಗೆದುಕೊಳ್ಳಿ ಅಂತ ಹೇಳಿದ್ದಾರೆ. 24 ಗಂಟೆ ರೆಸ್ಟ್ ತೆಗೆದುಕೊಂಡ ಬಳಿಕ ಇಲ್ಲಿ ಇರಬೇಕೋ, ಬೇಡ್ವೋ ಅಂತ ಹೇಳ್ತಾರಂತೆ'' ಎಂದು ಅಕುಲ್ ಬಳಿ ವೈಷ್ಣವಿ ಹೇಳಿದ್ದಾರೆ.

ನಡೆಯಲು ಆಗುತ್ತಿಲ್ಲ

''ನನಗೆ ನಡೆಯಲು ಆಗುತ್ತಿಲ್ಲ'' ಅಂತ ಹೇಳಿಕೊಂಡಿರುವ ವೈಷ್ಣವಿ ಒಂದು ವೇಳೆ ಚೇತರಿಸಿಕೊಳ್ಳದೇ ಇದ್ದರೆ ಔಟ್ ಆಗುವುದು ಗ್ಯಾರೆಂಟಿ.

English summary
Bigg Boss kannada 5: Week 8: Will Vaishnavi step out of the house because of Health reasons.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada