For Quick Alerts
  ALLOW NOTIFICATIONS  
  For Daily Alerts

  ರಿಯಾಲಿಟಿ ಶೋಗೆ ಹೋಗಿ ತಪ್ಪು ಮಾಡಿದೆ ಎಂದು ಕಣ್ಣೀರಿಟ್ಟ ಅಕ್ಷತಾ.!

  |

  ರಾಜ್ಯ ಪ್ರಶಸ್ತಿ ಪುರಸ್ಕೃತ ನಟಿ, ರಂಗಭೂಮಿ ಕಲಾವಿದೆ, 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಸ್ಪರ್ಧಿ ಅಕ್ಷತಾ ಪಾಂಡವಪುರ ಅಪ್ಸೆಟ್ ಆಗಿದ್ದಾರೆ. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ, ಅಕ್ಷತಾ ನೊಂದಿದ್ದಾರೆ.

  ಸೋಷಿಯಲ್ ಮೀಡಿಯಾದಲ್ಲಿ ಬಂದಿರುವ ಟ್ರೋಲ್ಸ್, ನೆಗೆಟಿವ್ ಕಾಮೆಂಟ್ಸ್, ಆಪ್ತರ ಫೀಡ್ ಬ್ಯಾಕ್ ಕೇಳಿ ಅಕ್ಷತಾ ಪಾಂಡವಪುರ ಬೇಸರಗೊಂಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ, 'ಬಿಗ್ ಬಾಸ್' ಕಾರ್ಯಕ್ರಮದ ಕೆಲ ಸಂಚಿಕೆಗಳನ್ನು ನೋಡಿ ಅಕ್ಷತಾ ಕೊಂಚ ಡಿಸ್ಟರ್ಬ್ ಆಗಿದ್ದಾರೆ.

  'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ತಮ್ಮನ್ನು ಪ್ರೊಜೆಕ್ಟ್ ಮಾಡಿರುವ ರೀತಿ ಅಕ್ಷತಾಗೆ ಇಷ್ಟ ಆಗಿಲ್ಲ. ಹೀಗಾಗಿ ಸಂದರ್ಶನವೊಂದರಲ್ಲಿ ತಮ್ಮ ಅಸಮಾಧಾನವನ್ನು ಅಕ್ಷತಾ ಪಾಂಡವಪುರ ಹೊರ ಹಾಕಿದ್ದಾರೆ. ಮುಂದೆ ಓದಿರಿ...

  ಹೊರಗೆ ಬಂದ್ಮೇಲೆ ಆಘಾತ

  ಹೊರಗೆ ಬಂದ್ಮೇಲೆ ಆಘಾತ

  ''ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ ಆಗಿರುವ ಆಘಾತವನ್ನು ಸುಧಾರಿಸಿಕೊಳ್ಳಲು ಆಗುತ್ತಿಲ್ಲ. ಟ್ರೋಲ್ಸ್ ಬಗ್ಗೆ ನಗಬೇಕೋ, ಅಳಬೇಕೋ.. ಗೊತ್ತಾಗುತ್ತಿಲ್ಲ'' ಎಂದು ಸಂದರ್ಶನವೊಂದರಲ್ಲಿ ಅಕ್ಷತಾ ಪಾಂಡವಪುರ ಹೇಳಿಕೊಂಡಿದ್ದಾರೆ.

  ಕವಿತಾ ಹೊರಗೆ ಬಂದ್ಮೇಲೆ ಕಪಾಳಕ್ಕೆ ಹೊಡೆಯುವೆ ಎಂದು ಗುಡುಗಿದ ಅಕ್ಷತಾ.! ಯಾಕೆ.?

  ಯಾರೂ ಅರ್ಥ ಮಾಡಿಕೊಳ್ಳಲಿಲ್ಲ.!

  ಯಾರೂ ಅರ್ಥ ಮಾಡಿಕೊಳ್ಳಲಿಲ್ಲ.!

  ''ನಾನು ರಾಕೇಶ್ ರಲ್ಲಿ ನನ್ನ ತಾಯಿಯನ್ನು ಕಾಣುತ್ತಿದ್ದೆ. ಒಂದು ಟಾಸ್ಕ್ ನಲ್ಲಿ ಹಾಗೇ ಹೇಳಿದ್ದೇ ಕೂಡ. ಹೀಗಿದ್ದರೂ, ಅದನ್ನ ಯಾಕೆ ಯಾರೂ ಅರ್ಥ ಮಾಡಿಕೊಳ್ಳಲಿಲ್ಲ.?'' ಎಂದು ಬೇಸರದಿಂದ ಪ್ರಶ್ನಿಸುತ್ತಾರೆ ಅಕ್ಷತಾ.

  ರಾಕೇಶ್ ಬಗ್ಗೆ ಅಕ್ಷತಾ ಪಾಂಡವಪುರ ತಾಯಿಗೆ ಕೆಂಡದಷ್ಟು ಕೋಪ.?

  ತಪ್ಪು ಮಾಡಿದೆ

  ತಪ್ಪು ಮಾಡಿದೆ

  ''ರಿಯಾಲಿಟಿ ಶೋಗೆ ಹೋಗಿ ತಪ್ಪು ಮಾಡಿದೆ ಅಂತ ಅನಿಸುತ್ತಿದೆ. ಪಶ್ಚಾತ್ತಾಪ ಪಡಲು ಆಗಲ್ಲ ಈಗ.. ನುಗ್ಗಬೇಕು ಅಷ್ಟೇ. ನನ್ನನ್ನ ಪ್ರೊಜೆಕ್ಟ್ ಮಾಡಿರುವ ರೀತಿ ಬಗ್ಗೆ ನನಗೆ ಅಸಮಾಧಾನ ಇದೆ'' ಅಂತಾರೆ ಅಕ್ಷತಾ.

  ಎಂ.ಜೆ.ರಾಕೇಶ್ ಜೊತೆ ಸೇರಿ ಅಕ್ಷತಾ ಪಾಂಡವಪುರ ಫೂಲ್ ಆಗುತ್ತಿದ್ದಾರೆ.!

  ರಾಕೇಶ್ ನ ಮೀಟ್ ಮಾಡ್ತೀರಾ.?

  ರಾಕೇಶ್ ನ ಮೀಟ್ ಮಾಡ್ತೀರಾ.?

  ''ರಾಕೇಶ್ ನ ಮೀಟ್ ಮಾಡ್ತೀನಾ ಇಲ್ವಾ ಅನ್ನೋದು ಗೊತ್ತಿಲ್ಲ. ಫ್ರೆಂಡ್ಸ್ ಆಗಿ ಇರ್ತೀವಾ ಅನ್ನೋದು ಕೂಡ ಗೊತ್ತಿಲ್ಲ'' ಎಂದಿದ್ದಾರೆ ಅಕ್ಷತಾ. [ಕೃಪೆ: ಫಸ್ಟ್ ನ್ಯೂಸ್]

  ಇನ್ನಾದರೂ ಅಕ್ಷತಾ ಪಾಂಡವಪುರ ಎಚ್ಚೆತ್ತುಕೊಂಡರೆ ಆಕೆಗೆ ಒಳಿತು.!

  English summary
  Bigg Boss Kannada 6: Akshata Pandavapura is upset after coming out of BB House.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X