For Quick Alerts
  ALLOW NOTIFICATIONS  
  For Daily Alerts

  ಕವಿತಾ ಹೊರಗೆ ಬಂದ್ಮೇಲೆ ಕಪಾಳಕ್ಕೆ ಹೊಡೆಯುವೆ ಎಂದು ಗುಡುಗಿದ ಅಕ್ಷತಾ.! ಯಾಕೆ.?

  |

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಸ್ಪರ್ಧಿಗಳ ಪೈಕಿ ಅಕ್ಷತಾ ಪಾಂಡವಪುರ ಕೂಡ ಒಬ್ಬರು. ಎಂ.ಜೆ.ರಾಕೇಶ್ ಜೊತೆಗಿನ Intense ಫ್ರೆಂಡ್ ಶಿಪ್ ನಿಂದಾಗಿ ಅಕ್ಷತಾ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದರು. ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲೂ ಟ್ರೋಲ್ ಆಗಿದ್ದರು. ಅಕ್ಷತಾ ಮತ್ತು ರಾಕೇಶ್ ರನ್ನ ಹೊರಗೆ ಹಾಕಿ ಅಂತ ಮೈಸೂರಿನಲ್ಲಿ ಪ್ರತಿಭಟನೆ ಕೂಡ ನಡೆದಿತ್ತು.

  ತಮ್ಮ ಬಗ್ಗೆ ಹೊರಗಿನ ಜಗತ್ತಿನಲ್ಲಿ ಇಷ್ಟೆಲ್ಲಾ ನಡೆಯುತ್ತಿದೆ ಅನ್ನೋದು ಪಾಪ ಅಕ್ಷತಾಗೆ ಅರಿವಿರಲಿಲ್ಲ. ಅದ್ಯಾವಾಗ 'ಬಿಗ್ ಬಾಸ್' ಮನೆಯಿಂದ ಹೊರಗೆ ಕಾಲಿಟ್ಟರೋ, ಅಕ್ಷತಾಗೆ ದೊಡ್ಡ ಆಘಾತವೇ ಆಗಿದೆ. ನೆಗೆಟಿವ್ ಕಾಮೆಂಟ್ಸ್, ಟ್ರೋಲ್ಸ್ ನೋಡಿ ಅಕ್ಷತಾ ಸಿಕ್ಕಾಪಟ್ಟೆ ಅಪ್ ಸೆಟ್ ಆಗಿದ್ದಾರೆ.

  ಅಸಲಿಗೆ, ಅಕ್ಷತಾ ಮತ್ತು ರಾಕೇಶ್ ಬಗ್ಗೆ ಮೊದಲು ಗಾಸಿಪ್ ಮಾಡಿದವರು ಕವಿತಾ ಗೌಡ. ಈ ಸತ್ಯ 'ಬಿಗ್ ಬಾಸ್' ಮನೆಯಲ್ಲಿದ್ದಾಗ ಅಕ್ಷತಾಗೆ ಗೊತ್ತಿರಲಿಲ್ಲ.

  ಹೊರಗೆ ಬಂದ್ಮೇಲೆ, ಸಂಚಿಕೆಗಳನ್ನೆಲ್ಲಾ ನೋಡಿರುವ ಅಕ್ಷತಾಗೆ ಕವಿತಾ ಮಾಡಿದ 'ಗುಸು ಗುಸು' ಕೆಲಸ ಕಣ್ಣಿಗೆ ಬಿದ್ದಿದೆ. ಹೀಗಾಗಿ, ಕವಿತಾ ಮೇಲೆ ಅಕ್ಷತಾ ಯದ್ವಾತದ್ವಾ ಗರಂ ಆಗಿದ್ದಾರೆ. ಕವಿತಾ ಹೊರಗೆ ಬಂದ್ಮೇಲೆ ಕಪಾಳಕ್ಕೆ ಹೊಡೆಯುವೆ ಎಂದು ಸಂದರ್ಶನವೊಂದರಲ್ಲಿ ಅಕ್ಷತಾ ಗುಡುಗಿದ್ದಾರೆ. ಮುಂದೆ ಓದಿರಿ...

  ಕವಿತಾ ಕಪಾಳಕ್ಕೆ ಹೊಡೆಯುವೆ

  ಕವಿತಾ ಕಪಾಳಕ್ಕೆ ಹೊಡೆಯುವೆ

  ''ಕವಿತಾ ಆಚೆ ಬಂದ್ಮೇಲೆ ಕಪಾಳಕ್ಕೆ ಬಾರಿಸಬೇಕು ಅಂತಿದ್ದೇನೆ. ಎರಡನೇ ವಾರದಲ್ಲಿ ಅವಳೇ ನನ್ನ ಬಗ್ಗೆ ಗಾಸಿಪ್ ಸೃಷ್ಟಿ ಮಾಡಿರುವುದು'' ಎಂದು ಸಂದರ್ಶನವೊಂದಲ್ಲಿ ಅಕ್ಷತಾ ಪಾಂಡವಪುರ ಹೇಳಿದ್ದಾರೆ.

  ಎಂ.ಜೆ.ರಾಕೇಶ್ ಜೊತೆ ಸೇರಿ ಅಕ್ಷತಾ ಪಾಂಡವಪುರ ಫೂಲ್ ಆಗುತ್ತಿದ್ದಾರೆ.!

  ಇದನ್ನೆಲ್ಲ ತೋರಿಸಿಲ್ಲ ಯಾಕೆ.?

  ಇದನ್ನೆಲ್ಲ ತೋರಿಸಿಲ್ಲ ಯಾಕೆ.?

  ''ಕವಿತಾ ಯಾವತ್ತೋ ಆಚೆ ಬರಬೇಕಿತ್ತು. ಯಾಕೆ ಇನ್ನೂ ಇದ್ದಾಳೆ ಅನ್ನೋದು ಗೊತ್ತಾಗುತ್ತಿಲ್ಲ. ರಾತ್ರಿ ಲೈಟ್ಸ್ ಆಫ್ ಆದ್ಮೇಲೆ, ಕವಿತಾ ಮತ್ತು ಶಶಿ ಒಂದು ಬ್ಲಾಂಕೆಟ್ ಒಳಗೆ ಕೂತು ಮಾತನಾಡುತ್ತಿದ್ದರು. ಅದು ಪ್ರೊಜೆಕ್ಟ್ ಆಗಿಲ್ಲ. ಇದೆಲ್ಲ ನನಗೆ ಬೇಸರ ಇದೆ'' ಎಂದಿದ್ದಾರೆ ಅಕ್ಷತಾ.

  ಅಕ್ಷತಾ ವಿಚಾರದಲ್ಲಿ ರಾಕೇಶ್ ಮುಖವಾಡ ಕಳಚಿದ ಸುದೀಪ್.!

  ತಾರತಮ್ಯ ಯಾಕೆ.?

  ತಾರತಮ್ಯ ಯಾಕೆ.?

  ''ಕವಿತಾಗೆ ಕೊಟ್ಟಿರುವ ಮರ್ಯಾದೆ ಅಕ್ಷತಾಗೆ ಯಾಕಿಲ್ಲ.? ಕವಿತಾ ಹೆಣ್ಣು. ಅಕ್ಷತಾ ಕೂಡ ಹೆಣ್ಣು. ಕವಿತಾ ಮತ್ತು ಶಶಿ ಬಗ್ಗೆ ಪಾಯಿಂಟ್ಸ್ ಯಾಕೆ ಬರಲಿಲ್ಲ.? ಕವಿತಾ ಮಾಡಿದ ಗಾಸಿಪ್ ಬಗ್ಗೆ ಸುದೀಪ್ ಸರ್ ನಮಗೆ ಯಾಕೆ ಕ್ಲಿಯರ್ ಮಾಡಲಿಲ್ಲ.? ಈ ಎಲ್ಲಾ ಪ್ರಶ್ನೆಗಳು ನನಗೆ ಕಾಡುತ್ತಿದೆ'' ಅಂತ ಬೇಸರ ವ್ಯಕ್ತಪಡಿಸಿದ್ದಾರೆ ಅಕ್ಷತಾ.

  ಇನ್ನಾದರೂ ಅಕ್ಷತಾ ಪಾಂಡವಪುರ ಎಚ್ಚೆತ್ತುಕೊಂಡರೆ ಆಕೆಗೆ ಒಳಿತು.!

  ಶಶಿ-ಕವಿತಾ ಮಾತ್ರ ಗೆಲ್ಲಬಾರದು

  ಶಶಿ-ಕವಿತಾ ಮಾತ್ರ ಗೆಲ್ಲಬಾರದು

  ''ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಶಶಿಯನ್ನ ಪ್ರೊಜೆಕ್ಟ್ ಮಾಡಿರುವ ರೀತಿ ನೋಡಿದರೆ, ಅವನೇ ಗೆಲ್ಲಬಹುದು. ಆದ್ರೆ, ನನ್ನ ಪ್ರಕಾರ ಶಶಿ ಮತ್ತು ಕವಿತಾ ಬಿಟ್ಟು ಬೇರೆ ಯಾರಾದರೂ ಗೆಲ್ಲಲಿ'' ಅಂತಾರೆ ಅಕ್ಷತಾ ಪಾಂಡವಪುರ. [ಕೃಪೆ: ಫಸ್ಟ್ ನ್ಯೂಸ್]

  English summary
  Bigg Boss Kannada 6: Akshata Pandavapura wants to slap Kavitha Gowda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X