For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ 'ಇವರೆಲ್ಲ' ಸ್ಪರ್ಧಿಗಳಂತೆ.! ಹೌದೇನು.?

  By Harshitha
  |
  ಬಿಗ್ ಬಾಸ್ ಮನೆಯಲ್ಲಿ ಅವನಿದ್ರೆ ನಾವು ಬರಲ್ಲ ಅಂತ ಹೇಳ್ತಿದ್ದಾರೆ ಸೆಲೆಬ್ರಿಟಿಗಳು..! | Filmibeat Kannada

  'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಮುಗಿದು ನಾಲ್ಕೈದು ತಿಂಗಳು ಉರುಳಿವೆ ಅಷ್ಟೇ. ಕನ್ನಡ Rapper ಚಂದನ್ ಶೆಟ್ಟಿ 'ಬಿಗ್ ಬಾಸ್' ಟ್ರೋಫಿಗೆ ಮುತ್ತಿಟ್ಟು ಬೇರೆ ಬೇರೆ ರಿಯಾಲಿಟಿ ಶೋಗಳಲ್ಲೇ ಇನ್ನೂ ಬಿಜಿಯಾಗಿದ್ದಾರೆ. ಹೀಗಿರುವಾಗಲೇ, ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಪ್ರೋಮೋ ಪ್ರಸಾರ ಆಗುತ್ತಿದೆ.

  ಇನ್ನೆರಡು ಮೂರು ತಿಂಗಳಲ್ಲಿ 'ಬಿಗ್ ಬಾಸ್ ಕನ್ನಡ-6' ರಿಯಾಲಿಟಿ ಶೋ ಆರಂಭ ಆಗಲಿದೆ. ಕಳೆದ ಸೀಸನ್ ನಂತೆ ಈ ಬಾರಿಯೂ ಕಲರ್ಸ್ ಸೂಪರ್ ವಾಹಿನಿಯಲ್ಲೇ 'ಬಿಗ್ ಬಾಸ್' ಟೆಲಿಕಾಸ್ಟ್ ಆಗಲಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲಿಯೇ ಕಾರ್ಯಕ್ರಮ ಮೂಡಿ ಬರಲಿದೆ.

  ಈಗಾಗಲೇ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಪ್ರೀ-ಪ್ರೊಡಕ್ಷನ್ ವರ್ಕ್ ಗೆ ಚಾಲನೆ ಕೊಡಲಾಗಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ 'ಬಿಗ್ ಬಾಸ್ ಕನ್ನಡ-6'ನಲ್ಲಿನ ಸ್ಪರ್ಧಿಗಳ 'ಸಂಭಾವ್ಯ ಪಟ್ಟಿ' ಹರಿದಾಡುತ್ತಿದೆ. ಹಾಗ್ನೋಡಿದ್ರೆ, ಕಲರ್ಸ್ ವಾಹಿನಿಯವರೇ ಇನ್ನೂ ಸ್ಪರ್ಧಿಗಳ ಹುಡುಕಾಟ ಶುರು ಮಾಡಿದ್ದಾರೋ, ಇಲ್ವೋ... ಆದ್ರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ 'ಸಂಭಾವ್ಯ ಪಟ್ಟಿ'ಗಳ ಸುದ್ದಿ ಜೋರಾಗಿದೆ.

  ಅಂದ್ಹಾಗೆ, ಸಂಭಾವ್ಯ ಪಟ್ಟಿಯಲ್ಲಿ ಯಾರ್ಯಾರ ಹೆಸರಿದೆ ಅಂತ ತಿಳಿದುಕೊಳ್ಳುವ ಕುತೂಹಲ ಇದ್ದರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

  'ನಾಗಮಂಡಲ' ವಿಜಯಲಕ್ಷ್ಮಿ

  'ನಾಗಮಂಡಲ' ವಿಜಯಲಕ್ಷ್ಮಿ

  ಕಳೆದ ಎರಡು 'ಬಿಗ್ ಬಾಸ್' ಸೀಸನ್ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲೂ ನಟಿ ವಿಜಯಲಕ್ಷ್ಮಿ ಹೆಸರಿತ್ತು. ಈ ಬಾರಿಯೂ ನಟಿ ವಿಜಯಲಕ್ಷ್ಮಿ ಹೆಸರು ಎಲ್ಲೆಡೆ ಕೇಳಿಬರುತ್ತಿದೆ. ಹಾಗ್ನೋಡಿದ್ರೆ, 'ಬಿಗ್ ಬಾಸ್'ನಲ್ಲಿ ಆಸಕ್ತಿ ಇಲ್ಲ ಎಂಬ ಕಾರಣಕ್ಕೆ ಕಳೆದ ಬಾರಿ ಸಿಕ್ಕ ಆಫರ್ ನ ವಿಜಯಲಕ್ಷ್ಮಿ ರಿಜೆಕ್ಟ್ ಮಾಡಿದ್ದರು. ಆದ್ರೀಗ, ಅವಕಾಶಗಳನ್ನು ಅರಸಿ ಮರಳಿ ಬೆಂಗಳೂರಿಗೆ ಬಂದಿರುವ ವಿಜಯಲಕ್ಷ್ಮಿ 'ಬಿಗ್ ಬಾಸ್' ಮನೆಗೆ ಹೋಗಲು ಮನಸ್ಸು ಮಾಡಬಹುದೇ.?

  ಚಂದನ್ ಶೆಟ್ಟಿ ಗೆಲುವಿಗೆ ಇದ್ಯಾ ಲಕ್ಕಿ ನಂಬರ್ ನಂಟು.? ಹೀಗೊಂದು ಡೌಟು.!ಚಂದನ್ ಶೆಟ್ಟಿ ಗೆಲುವಿಗೆ ಇದ್ಯಾ ಲಕ್ಕಿ ನಂಬರ್ ನಂಟು.? ಹೀಗೊಂದು ಡೌಟು.!

  'ಡಿಂಪಲ್ ಕ್ವೀನ್' ರಚಿತಾ ರಾಮ್

  'ಡಿಂಪಲ್ ಕ್ವೀನ್' ರಚಿತಾ ರಾಮ್

  ಸಾಲು ಸಾಲು ಸಿನಿಮಾಗಳ ನಡುವೆ 'ಡಿಂಪಲ್ ಕ್ವೀನ್' ರಚಿತಾ ರಾಮ್ ಕಿರುತೆರೆಯಲ್ಲಿಯೂ ಬಿಜಿಯಾಗಿದ್ದಾರೆ. ಅಂದ್ಮೇಲೆ, 'ಬಿಗ್ ಬಾಸ್' ಮನೆಯಲ್ಲಿ ಲಾಕ್ ಆಗಲು ರಚಿತಾ ರಾಮ್ ಒಪ್ಪಿಕೊಳ್ತಾರಾ.?

  ಕಾಮನ್ ಮ್ಯಾನ್-ಸೆಲೆಬ್ರಿಟಿ ಭೇದಭಾವಕ್ಕೆ ತೆರೆ ಎಳೆದ 'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆಕಾಮನ್ ಮ್ಯಾನ್-ಸೆಲೆಬ್ರಿಟಿ ಭೇದಭಾವಕ್ಕೆ ತೆರೆ ಎಳೆದ 'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ

  'ಪುಟ್ಟಗೌರಿ' ರಂಜನಿ ರಾಘವನ್

  'ಪುಟ್ಟಗೌರಿ' ರಂಜನಿ ರಾಘವನ್

  'ಬಿಗ್ ಬಾಸ್ ಕನ್ನಡ-6' ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ 'ಪುಟ್ಟಗೌರಿ ಮದುವೆ' ಖ್ಯಾತಿಯ ರಂಜನಿ ರಾಘವನ್ ಹೆಸರು ಕೂಡ ಇದೆ. ಧಾರಾವಾಹಿ ಬಿಟ್ಟು ರಂಜನಿ 'ಬಿಗ್ ಬಾಸ್' ಮನೆಗೆ ಹೋಗ್ತಾರಾ ಅನ್ನೋದೇ ನಮ್ಮ ಡೌಟು.! ಇಲ್ಲಾಂದ್ರೆ, ಅಷ್ಟರಲ್ಲಿ 'ಪುಟ್ಟಗೌರಿ ಮದುವೆ'ಗೆ ಫುಲ್ ಸ್ಟಾಪ್ ಬೀಳಬಹುದಾ.?

  ವೀಕ್ಷಕರ ಆಸೆ ಈಡೇರಿತು: ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆದ್ದುಬಿಟ್ಟರು.!ವೀಕ್ಷಕರ ಆಸೆ ಈಡೇರಿತು: ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆದ್ದುಬಿಟ್ಟರು.!

  'ಮುಂಗಾರು ಮಳೆ' ನೇಹಾ ಶೆಟ್ಟಿ

  'ಮುಂಗಾರು ಮಳೆ' ನೇಹಾ ಶೆಟ್ಟಿ

  'ಮುಂಗಾರು ಮಳೆ-2' ಸಿನಿಮಾ ಆದ್ಮೇಲೆ ಟಾಲಿವುಡ್ ಕಡೆಗೆ ನೇಹಾ ಶೆಟ್ಟಿ ಮುಖ ಮಾಡಿದ್ದರು. ಹೀಗಿರುವಾಗ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ನೇಹಾ ಶೆಟ್ಟಿ ಸ್ಪರ್ಧಿಸುತ್ತಾರಾ.? ನಮಗಂತೂ ಗೊತ್ತಿಲ್ಲ.

  ನಾಟ್ಯ 'ಮಯೂರಿ'

  ನಾಟ್ಯ 'ಮಯೂರಿ'

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬಂದ ಡ್ಯಾನ್ಸ್ ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿದ್ದವರು ಮಯೂರಿ. ಇದೇ ಮಯೂರಿ 'ಬಿಗ್ ಬಾಸ್'ಗೆ ಬರಬೇಕು ಎಂಬುದು ಕೆಲವರ ಬಯಕೆ. ಅದು ಈಡೇರುತ್ತಾ.?

  Rapid ರಶ್ಮಿ

  Rapid ರಶ್ಮಿ

  ಬಾಯಿ ತೆಗೆದರೆ ಪಟ ಪಟ ಅಂತ ಮಾತನಾಡುವ Rapid ರಶ್ಮಿ ಇತ್ತೀಚೆಗಷ್ಟೇ ವಿವಾದದ ಸುಳಿಯಲ್ಲಿ ಸಿಲುಕಿದ್ದರು. ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ರಶ್ಮಿಗೆ 'ಬಿಗ್ ಬಾಸ್' ಕಡೆಯಿಂದ ಆಫರ್ ಹೋಗಿದ್ಯಾ.?

  'ಸಿಲ್ಲಿ ಲಲ್ಲಿ' ರವಿಶಂಕರ್ ಗೌಡ

  'ಸಿಲ್ಲಿ ಲಲ್ಲಿ' ರವಿಶಂಕರ್ ಗೌಡ

  ನಗಿಸುವ ಕಲೆ, ಅಭಿನಯ, ಹಾಡುಗಾರಿಕೆ... ಇವೆಲ್ಲ ಹೊಂದಿರುವ ಮನರಂಜನೆಯ ಕಂಪ್ಲೀಟ್ ಪ್ಯಾಕೇಜ್ ಆಗಿರುವ ರವಿಶಂಕರ್ ಗೌಡ ಹೆಸರು ಕೂಡ 'ಬಿಗ್ ಬಾಸ್ ಕನ್ನಡ-6' ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದೆ.

  ನ್ಯೂಸ್ ಆಂಕರ್ ರಾಧಾ ಹಿರೇಗೌಡರ್

  ನ್ಯೂಸ್ ಆಂಕರ್ ರಾಧಾ ಹಿರೇಗೌಡರ್

  ಕಳೆದ ಎರಡ್ಮೂರು ಆವೃತ್ತಿಗಳಿಂದಲೂ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ರಾಧಾ ಹಿರೇಗೌಡರ್ ಹೆಸರು ಇತ್ತು. ಈ ಬಾರಿಯೂ ಅದೇ ಮುಂದುವರೆದಿದೆ. ಇಲ್ಲಿಯವರೆಗೂ 'ಬಿಗ್ ಬಾಸ್' ಮನೆ ಕಡೆಗೆ ಮುಖ ಮಾಡದ ರಾಧಾ ಹಿರೇಗೌಡರ್ ಈ ಬಾರಿ ಏನ್ಮಾಡ್ತಾರೋ.?

  ನಟ ಅನಿರುದ್ಧ್

  ನಟ ಅನಿರುದ್ಧ್

  ಡಾ.ವಿಷ್ಣುವರ್ಧನ್ ರವರ ಅಳಿಯ ನಟ ಅನಿರುದ್ಧ್ ಹೆಸರು ಈ ಬಾರಿ ಕೇಳಿಬರುತ್ತಿದೆ. ಹಾಗಾದ್ರೆ, ಅನಿರುದ್ಧ್ ರನ್ನ ಕಲರ್ಸ್ ವಾಹಿನಿ ಅಪ್ರೋಚ್ ಮಾಡಿದ್ಯಾ.?

  ನಿರೂಪ್ ಭಂಡಾರಿ

  ನಿರೂಪ್ ಭಂಡಾರಿ

  'ರಾಜರಥ' ಸಿನಿಮಾ ಬಿಡುಗಡೆ ಆದ ಸಂದರ್ಭದಲ್ಲಿ ವಿವಾದದ ಕೇಂದ್ರ ಬಿಂದು ಆಗಿದ್ದ ನಿರೂಪ್ ಭಂಡಾರಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರಾ.?

  'ಕಿರಿಕ್ ಪಾರ್ಟಿ' ಚಂದನ್ ಆಚಾರ್

  'ಕಿರಿಕ್ ಪಾರ್ಟಿ' ಚಂದನ್ ಆಚಾರ್

  'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಗೆಳೆಯನಾಗಿ ಕಾಣಿಸಿಕೊಂಡಿದ್ದ ಚಂದನ್ ಆಚಾರ್ ಈ ಬಾರಿ 'ಬಿಗ್ ಬಾಸ್' ಮನೆಗೆ ಹೋಗುವ ಸಾಧ್ಯತೆ ಇದೆ.

  ಸರಿಗಮಪ ವಿಜೇತ ಚನ್ನಪ್ಪ

  ಸರಿಗಮಪ ವಿಜೇತ ಚನ್ನಪ್ಪ

  'ಸರಿಗಮಪ' ರಿಯಾಲಿಟಿ ಶೋನಲ್ಲಿ ಗೆಲುವಿನ ನಗೆ ಬೀರಿದ್ದ ಚನ್ನಪ್ಪ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎನ್ನಲಾಗಿದೆ.

  ನಟ ಅಚ್ಯುತ್ ಕುಮಾರ್

  ನಟ ಅಚ್ಯುತ್ ಕುಮಾರ್

  ಹಲವಾರು ಕನ್ನಡ ಸಿನಿಮಾಗಳಲ್ಲಿ ಅದ್ಭುತ ಅಭಿನಯ ನೀಡಿರುವ ಅಚ್ಯುತ್ ಕುಮಾರ್ 'ಬಿಗ್ ಬಾಸ್' ಮನೆಯಲ್ಲಿ ಲಾಕ್ ಆಗಲು ಹಸಿರು ನಿಶಾನೆ ತೋರುತ್ತಾರಾ.?

  ಹೀರೋ ಪೃಥ್ವಿ

  ಹೀರೋ ಪೃಥ್ವಿ

  'ನಾನು ಮತ್ತು ವರಲಕ್ಷ್ಮಿ' ಸಿನಿಮಾದಲ್ಲಿ ಅಭಿನಯಿಸಿದ್ದ ನಟ ಪೃಥ್ವಿ ಹೆಸರೂ ಕೂಡ ಕೇಳಿಬರುತ್ತಿದೆ. ಪೃಥ್ವಿ ಜೊತೆಗೆ 'ಬಿಗ್ ಬಾಸ್' ತಂಡ ಮಾತುಕತೆ ನಡೆಸಿದ್ಯಾ.?

  'ಒಗ್ಗರಣೆ ಡಬ್ಬಿ' ಮುರಳಿ

  'ಒಗ್ಗರಣೆ ಡಬ್ಬಿ' ಮುರಳಿ

  'ಒಗ್ಗರಣೆ ಡಬ್ಬಿ' ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿರುವ ಮುರಳಿ 'ಬಿಗ್ ಬಾಸ್'ಗೂ ಬರ್ತಾರಾ.? ಕಾದು ನೋಡಬೇಕು.

  English summary
  Bigg Boss is back in Kannada. According to latest Grapevine, Kannada Actress Vijayalakshmi, Ranjani Raghavan, Rapid Rashmi, Chandan Achar are considered in the Bigg Boss Kannada 6 contestants list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X