For Quick Alerts
  ALLOW NOTIFICATIONS  
  For Daily Alerts

  ಕವಿತಾ ಜೊತೆಗೆ ಅಂಟಿಕೊಂಡು ಇರುವುದೇ ಶಶಿ ಗೇಮ್ ಪ್ಲಾನ್ ಅಂತೆ.!

  |

  ನೋಡಲು ಸುರಸುಂದರಾಂಗನಂತೆ ಕಂಡರೂ 'ರೈತ' ಅಂತ ಹೇಳಿಕೊಂಡು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಸ್ಪರ್ಧಿ ಶಶಿ ಕುಮಾರ್. 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ನಾಲ್ಕು ವಾರಗಳಲ್ಲಿ ಯಾವುದೇ ಜಗಳಕ್ಕೆ ಶಶಿ ನಾಂದಿ ಹಾಡಿಲ್ಲ. ಯಾರ ಕೆಂಗಣ್ಣಿಗೂ ಬಿದ್ದಿಲ್ಲ.

  ಆದ್ರೆ, ಗಾಸಿಪ್ ವೊಂದರಲ್ಲಿ ಮಾತ್ರ ಶಶಿ ಕುಮಾರ್ ಹೆಸರು ಕೇಳಿ ಬರುತ್ತಿದೆ. ಕವಿತಾ ಗೌಡ-ಶಶಿ ಕುಮಾರ್ ಹೆಸರು ಒಟ್ಟಿಗೆ ತಳುಕು ಹಾಕಿಕೊಂಡಿದೆ. ''ಕಿರುತೆರೆ ನಟಿ ಕವಿತಾ ಗೌಡ ಜೊತೆಗೆ ಶಶಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ'' ಎಂಬ ಗುಸು ಗುಸು 'ಬಿಗ್ ಬಾಸ್' ಮನೆಯಲ್ಲೇ ಕೇಳಿ ಬಂದಿದೆ.

  ''ಟಾಸ್ಕ್ ವಿಚಾರ ಬಂದಾಗ ಮಾತ್ರ ಟೀಮ್ ಜೊತೆಗೆ ಶಶಿ ಮಿಂಗಲ್ ಆಗುತ್ತಾರೆ ಅನ್ನೋದು ಬಿಟ್ಟರೆ ಬಾಕಿ ಸಮಯದಲ್ಲಿ ಕವಿತಾ ಜೊತೆಗೆ ಅಂಟಿಕೊಂಡು ಇರುತ್ತಾರೆ... ಇದು ಶಶಿ ಗೇಮ್ ಪ್ಲಾನ್'' ಎನ್ನುವುದು 'ಬಿಗ್ ಬಾಸ್' ಸ್ಪರ್ಧಿಗಳ ಅಭಿಪ್ರಾಯ. ಇನ್ನೂ ವೀಕ್ಷಕರು ಕೂಡ ಅದನ್ನೇ ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಮುಂದೆ ಓದಿರಿ...

  ನವೀನ್ ಹೇಳಿದ್ದೇನು.?

  ನವೀನ್ ಹೇಳಿದ್ದೇನು.?

  ''ಶಶಿ ಹೆಚ್ಚು ಸಮಯ ಬರೀ ಕವಿತಾ ಜೊತೆಗೇ ಇರುತ್ತಾನೆ. ಅದು ಅವನ ಸ್ಟ್ರಾಟರ್ಜಿ, ಗೇಮ್ ಪ್ಲಾನ್. ಒಂದಿನ ಕೂಡ ಶಶಿ ನಮ್ಮ ಜೊತೆಗೆ ಬಂದು ಮಾತನಾಡುವುದಿಲ್ಲ. ನಯನ, ಕವಿತಾ ಜೊತೆ ಚೆನ್ನಾಗಿ ಮಿಂಗಲ್ ಆಗುತ್ತಾನೆ. ಹುಡುಗರನ್ನ ಮಾತೇ ಆಡಿಸುವುದಿಲ್ಲ. ಇದೆಲ್ಲ ಫೇಕ್ ಅನ್ಸಲ್ವಾ.?'' ಎಂದು ಗಾಯಕ ನವೀನ್ ಸಜ್ಜು, ರಾಕೇಶ್ ಬಳಿ ಹೇಳಿದ್ದಾರೆ.

  ಏನು.. ಶಶಿ 'ರೈತ' ಅಂತ ಸುಳ್ಳು ಹೇಳಿಕೊಂಡು 'ಬಿಗ್ ಬಾಸ್' ಮನೆಗೆ ಬಂದ್ರಾ.?

  ರೈತರ ಮೇಲೆ ಪ್ರೀತಿ ಇಲ್ವಾ.?

  ರೈತರ ಮೇಲೆ ಪ್ರೀತಿ ಇಲ್ವಾ.?

  ''ರೈತ ಅಂತ ಹೇಳಿಕೊಂಡು ಬಂದ ಶಶಿ ಲವ್ವರ್ ಆಗಿದ್ದಾರೆ. ಇವರಿಗೆ ಕವಿತಾ ಮೇಲೆ ಇರುವ ಪ್ರೀತಿ ರೈತರ ಮೇಲೆ ಇಲ್ಲ'' ಎಂದು ವೀಕ್ಷಕರೊಬ್ಬರು ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಲ್ಲೇ ಕಾಮೆಂಟ್ ಮಾಡಿದ್ದಾರೆ.

  ಆಧುನಿಕ ರೈತ ಶಶಿಕುಮಾರ್ 5 ಚಿನ್ನದ ಪದಕಕ್ಕೆ ಒಡೆಯ.! ಎಲ್ಲಿ, ಹೇಗೆ.?

  ಬಿಲ್ಡಪ್ ರಾಜ ಶಶಿ.!

  ಬಿಲ್ಡಪ್ ರಾಜ ಶಶಿ.!

  ಪ್ರತಿ ದಿನ 'ಬಿಗ್ ಬಾಸ್' ಕಾರ್ಯಕ್ರಮವನ್ನು ಬಿಡದೆ ನೋಡುವ ವೀಕ್ಷಕರು ಶಶಿ ಕುಮಾರ್ ಗೆ 'ಬಿಲ್ಡಪ್ ರಾಜ' ಅಂತ ಬಿರುದು ಕೊಟ್ಟಿದ್ದಾರೆ. ಅದಕ್ಕೆ ಈ ಕಾಮೆಂಟ್ ಸಾಕ್ಷಿ.

  ಸೀರಿಯಲ್ ಚಿನ್ನು 'ಬಿಗ್ ಬಾಸ್'ಗೆ ಬಂದಿದ್ದು ಯಾಕೆ?

  ದೊಡ್ಡ ಚರ್ಚೆ ನಡೆಯುತ್ತಿದೆ.!

  ದೊಡ್ಡ ಚರ್ಚೆ ನಡೆಯುತ್ತಿದೆ.!

  ಶಶಿ ಗೇಮ್ ಪ್ಲಾನ್ ಬಗ್ಗೆ ಕೆಲವರು ಆಡಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಶಶಿ 'ಸ್ಟ್ರಾಂಗ್ ಸ್ಪರ್ಧಿ' ಅಂತ ಆತನ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ ಶಶಿ ಪರ-ವಿರೋಧ ಫೇಸ್ ಬುಕ್ ನಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ.

  English summary
  Bigg Boss Kannada 6: Day 24: Naveen Sajju comments about Shashi's game plan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X