For Quick Alerts
  ALLOW NOTIFICATIONS  
  For Daily Alerts

  ಆಂಡ್ರ್ಯೂ-ಕವಿತಾಗೆ ನಾಚಿಕೆ ಆಗಬೇಕು ಎಂದ 'ಒಗ್ಗರಣೆ ಡಬ್ಬಿ' ಮುರಳಿ.!

  |
  Bigg Boss Kannada 6: ಆಂಡ್ರ್ಯೂ ಹಿಂಸೆ ಮಾಡುತ್ತಿದ್ದಾನೆ ಎಂದ ಕವಿತಾ

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಐದನೇ ವಾರದ ನಾಮಿನೇಷನ್ ಟಾಸ್ಕ್ ನಲ್ಲಿ ಸೇಫ್ ಆಗಲು ಕವಿತಾ ಗೌಡ ಒಂದು ಡೀಲ್ ಮಾಡಿಕೊಂಡರು. ಆದ್ರೆ, ಆ 'ಡೀಲ್' ಸದ್ಯಕ್ಕೆ ಅವರಿಗೆ ಕಿರಿಕಿರಿ ತಂದಿದೆ.

  ಪ್ರತಿ ದಿನ ಆಂಡ್ರ್ಯೂ ಜೊತೆಗೆ ಹತ್ತು ನಿಮಿಷ ಕಾಲ ಕಳೆಯಲು ಕವಿತಾ ಗೌಡ ಒಪ್ಪಿಕೊಂಡರು. ಇದೇ ಕಾರಣಕ್ಕೆ ಆಂಡ್ರ್ಯೂ ನಾಮಿನೇಟ್ ಆಗಲು ಮನಸ್ಸು ಮಾಡಿದರು. ಸುರಕ್ಷಾ ಕವಚವನ್ನೂ ಆಂಡ್ರ್ಯೂ ಬಳಸಲಿಲ್ಲ.

  ಈಗ ''ಆಂಡ್ರ್ಯೂ ಕಡೆಯಿಂದ ನನಗೆ ಹಿಂಸೆ ಆಗುತ್ತಿದೆ'' ಎಂದು ಎಲ್ಲರ ಮುಂದೆ ಕವಿತಾ ಗೌಡ ಆರೋಪ ಮಾಡಿದ್ದಾರೆ. ''ಅಂದು ಬಿಗ್ ಬಾಸ್ ಮುಂದೆ ಡೀಲ್ ಮಾಡಿಕೊಂಡು, ಇಂದು ಆರೋಪ ಮಾಡುತ್ತಿರುವುದು ಸರಿ ಅಲ್ಲ. ಕವಿತಾ ಕಡೆಯಿಂದ ನನಗೆ ಮೋಸ ಆಗಿದೆ'' ಅಂತ ಆಂಡ್ರ್ಯೂ ತಮ್ಮ ವಾದ ಮಂಡಿಸಿದರು.

  ಇಬ್ಬರ ವಾದ-ಪ್ರತಿವಾದ ಆಲಿಸಿದ ನಂತರ 'ನ್ಯಾಯ ಇಲ್ಲಿದೆ' ಟಾಸ್ಕ್ ಅನುಸಾರ ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತಿದ್ದ 'ಒಗ್ಗರಣೆ ಡಬ್ಬಿ' ಖ್ಯಾತಿಯ ಮುರಳಿ ಏನಂದರು ಗೊತ್ತಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ನಾಚಿಕೆ ಆಗಬೇಕು.!

  ನಾಚಿಕೆ ಆಗಬೇಕು.!

  ''ಇದನ್ನ ಮನೆ ಅಂದುಕೊಂಡಿದ್ದೀರಾ.. ಪಾರ್ಕ್ ಅಂದುಕೊಂಡಿದ್ದೀರಾ.? ಸಾವಿರಾರು ಜನ ನೋಡುತ್ತಿರುತ್ತಾರೆ ಅಂತ ಜ್ಞಾನ ಇಲ್ವಾ.? ನಾಚಿಕೆ ಆಗಬೇಕು ನಿಮಗೆಲ್ಲಾ...'' ಅಂತ ಆಂಡ್ರ್ಯೂ ಮತ್ತು ಕವಿತಾಗೆ ಮುರಳಿ ಕ್ಲಾಸ್ ತೆಗೆದುಕೊಂಡರು.

  'ಆಂಡ್ರ್ಯೂ ನನ್ನನ್ನು ಹಿಂಸಿಸುತ್ತಿದ್ದಾನೆ': 'ಬಿಗ್' ಆರೋಪ ಮಾಡಿದ 'ಚಿನ್ನು' ಕವಿತಾ

  ವ್ಯಕ್ತಿತ್ವಗಳ ಪ್ರದರ್ಶನ

  ವ್ಯಕ್ತಿತ್ವಗಳ ಪ್ರದರ್ಶನ

  ''ಕೊಂಡು-ಕೊಳ್ಳುವ ಸಂಬಂಧ ಇದು. ನಿಮ್ಮನ್ನ ನೀವು ನೋಡಿಕೊಳ್ಳುತ್ತಿದ್ದೀರಾ. ಜನ ನೋಡುತ್ತಿದ್ದಾರೆ ಅಂತ ಜ್ಞಾನ ಇಲ್ಲ. ನಾಳೆ ಹೊರಗೆ ಹೋದಾಗ, ಏನು ಉತ್ತರ ಕೊಡ್ತೀರಾ.? ನಿಮ್ಮ ವ್ಯಕ್ತಿತ್ವಗಳ ಪ್ರದರ್ಶನ ಇಲ್ಲಿ ಕಾಣುತ್ತಿದೆ'' ಎಂದು ಆಂಡ್ರ್ಯೂ ಮತ್ತು ಕವಿತಾಗೆ ಮುರಳಿ ಎಚ್ಚರಿಸಿದರು.

  'ಕವಿತಾ ಕಡೆಯಿಂದ ನನಗೆ ಮೋಸ ಆಗಿದೆ' ಎಂದ ಆಂಡ್ರ್ಯೂ.!

  ಭರವಸೆ ಕೊಟ್ಟ ಮುರಳಿ

  ಭರವಸೆ ಕೊಟ್ಟ ಮುರಳಿ

  ''ನೀವು ಮಾಡಿಕೊಂಡಿರುವ 'ಡೀಲ್'ನ ಸಮಸ್ಯೆ ಅಂತ ಇಲ್ಲಿಗೆ ತಂದಿದ್ದೀರಿ. ಕವಿತಾ ಕೇಳಿರೋದು, ಆಂಡ್ರ್ಯೂ ಕೊಟ್ಟಿರೋದು ಇಲ್ಲಿ ಕಾಣುತ್ತಿದೆ. ನಮಗಿಂತ ಚೆನ್ನಾಗಿ ಜನರು ನೋಡಿರುತ್ತಾರೆ. ಆದ್ದರಿಂದ ಇನ್ಮೇಲೆ ನೀವು (ಆಂಡ್ರ್ಯೂ) ಅವರ (ಕವಿತಾ) ಸಹವಾಸಕ್ಕೆ ಹೋಗಬೇಡಿ. ಆಂಡ್ರ್ಯೂ ಕಡೆಯಿಂದ ಇನ್ಮೇಲೆ ನಿಮಗೆ (ಕವಿತಾ) ಯಾವುದೇ ತೊಂದರೆ ಆಗಲ್ಲ ಅಂತ ನಾನು ಭರವಸೆ ಕೊಡುವೆ'' ಎಂದರು ಮುರಳಿ

  ನೀವೇನಂತೀರಿ.?

  ನೀವೇನಂತೀರಿ.?

  ಆಂಡ್ರ್ಯೂ ಮತ್ತು ಕವಿತಾ ಮಾಡಿಕೊಂಡ ಡೀಲ್ ಬಗ್ಗೆ ನಿಮ್ಮ ಅಭಿಪ್ರಾಯ ಏನು.? ಕವಿತಾ ಮಾಡಿರುವ ಆರೋಪ ಸರಿ ಅಂತ ನಿಮಗೆ ಅನಿಸುತ್ತಾ.? ಆಂಡ್ರ್ಯೂಗೆ ಮೋಸ ಆಗಿದೆ ಅಂತ ನೀವು ಭಾವಿಸುತ್ತೀರಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Bigg Boss Kannada 6: Day 32: Murali advices Kavitha Gowda and Andrew.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X