For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಯಲ್ಲಿ ಗುಂಪುಗಾರಿಕೆ: ತ್ರಿಮೂರ್ತಿಗಳ ಮೇಲೆ ಎಲ್ಲರ ಕಣ್ಣು.!

  |

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ನಡುವಿನ ತಿಕ್ಕಾಟ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಹಾಗ್ನೋಡಿದ್ರೆ, ಶೋ ಶುರುವಾಗಿ ನಾಲ್ಕು ವಾರಗಳು ಉರುಳಿವೆ ಅಷ್ಟೇ. ಅಷ್ಟರಲ್ಲಿ ಹಲವು ಬಾರಿ ಕಿತ್ತಾಟಗಳು ನಡೆದು ಹೋಗಿವೆ.

  ಸದ್ಯ 'ಬಿಗ್ ಬಾಸ್' ಮನೆಯಲ್ಲಿ ಎಲ್ಲರ ಕಣ್ಣು 'ತ್ರಿಮೂರ್ತಿ'ಗಳ ಮೇಲೆ ಬಿದ್ದಿದೆ. 'ತ್ರಿಮೂರ್ತಿ'ಗಳು ಯಾರಪ್ಪಾ ಅಂದ್ರೆ.. ಜಯಶ್ರೀ, ಕವಿತಾ ಗೌಡ ಮತ್ತು ಶಶಿ ಕುಮಾರ್. ''ಈ ಮೂವರು ಗುಂಪು ಮಾಡಿಕೊಂಡು ಆಟ ಆಡುತ್ತಿದ್ದಾರೆ. ಈ ಮೂವರು ಇತರರನ್ನು ಒಮ್ಮತದಿಂದ ಟಾರ್ಗೆಟ್ ಮಾಡುತ್ತಿದ್ದಾರೆ. ಈ ಮೂವರು ತೆಗೆದುಕೊಳ್ಳುವ ನಿರ್ಧಾರದಿಂದ ಇತರರಿಗೆ ಕಷ್ಟವಾಗುತ್ತಿದೆ'' ಎಂದು ಆಂಡ್ರ್ಯೂ, ರಶ್ಮಿ, ನವೀನ್, ರಾಕೇಶ್ ಸೇರಿದಂತೆ ಬಹುತೇಕ ಸ್ಪರ್ಧಿಗಳು ಬೆಟ್ಟು ಮಾಡಿ ತೋರಿಸಿದ್ದಾರೆ.

  ಇದನ್ನೇ 'ನ್ಯಾಯ ಇಲ್ಲಿದೆ' ಟಾಸ್ಕ್ ನಲ್ಲಿ ಗುಂಪುಗಾರಿಕೆ ವಿರುದ್ಧ ನವೀನ್ ಸಜ್ಜು ಆರೋಪ ಮಾಡಿದರು. ಗುಂಪುಗಾರಿಕೆಯನ್ನ ಜಯಶ್ರೀ, ಶಶಿ ಮತ್ತು ಕವಿತಾ ಸಮರ್ಥಿಸಿಕೊಂಡಿದ್ದು ಹೇಗೆ ಗೊತ್ತಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ

  'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ

  ಇತರೆ ಸ್ಪರ್ಧಿಗಳ ಕುರಿತು ದೂರು ಹೇಳಲು 'ನ್ಯಾಯ ಇಲ್ಲಿದೆ' ಎಂಬ ಚಟುವಟಿಕೆ ಮೂಲಕ 'ಬಿಗ್ ಬಾಸ್' ಅವಕಾಶ ಕಲ್ಪಿಸಿದರು. ನ್ಯಾಯಾಧೀಶರ ಸ್ಥಾನದಲ್ಲಿ ಮುರಳಿ ಕುಳಿತರು. ಈ ಚಟುವಟಿಕೆ ಅನುಸಾರ, ಗುಂಪುಗಾರಿಕೆ ಬಗ್ಗೆ ನವೀನ್ ಆರೋಪಿಸಿದರು.

  'ಕವಿತಾ ಕಡೆಯಿಂದ ನನಗೆ ಮೋಸ ಆಗಿದೆ' ಎಂದ ಆಂಡ್ರ್ಯೂ.!

  ನವೀನ್ ಮಾಡಿದ ಆರೋಪ ಏನು.?

  ನವೀನ್ ಮಾಡಿದ ಆರೋಪ ಏನು.?

  ''ಇಲ್ಲಿ ಗುಂಪುಗಾರಿಕೆ ಆಟ ನಡೆಯುತ್ತಿದೆ. ಯಾರ ಜೊತೆಗೆ ಅವರು ಕಮ್ಫರ್ಟ್ ಇರ್ತಾರೋ, ಅವರ ಜೊತೆಗೆ ಇರಲಿ. ಆದ್ರೆ, ಯಾವುದೇ ಟಾಸ್ಕ್ ಬಂದರೂ ಎಲ್ಲರ ಜೊತೆಗೆ ಇರಬೇಕು. ಆಗಲೇ ಟಾಸ್ಕ್ ಚೆನ್ನಾಗಿ ಆಗುವುದು. ಟಾಸ್ಕ್ ನಲ್ಲಿ ಗುಂಪುಗಾರಿಕೆ ಮಾಡಬೇಡಿ'' ಅಂತ ಶಶಿ, ಜಯಶ್ರೀ ಮತ್ತು ಕವಿತಾಗೆ ನವೀನ್ ಹೇಳಿದರು.

  'ಬಿಗ್ ಬಾಸ್' ಮನೆಯಲ್ಲಿ 'ರೈತ' ಶಶಿ ಇಷ್ಟ ಪಡುತ್ತಿರುವ 'ಚೆಲುವೆ' ಯಾರು.?

  ಜಯಶ್ರೀ ಕೊಟ್ಟ ಸಮರ್ಥನೆ ಏನು.?

  ಜಯಶ್ರೀ ಕೊಟ್ಟ ಸಮರ್ಥನೆ ಏನು.?

  ''ನಾನು ಎಲ್ಲರ ಜೊತೆಗೆ ಮಾತನಾಡುವೆ. ನವೀನ್ ಗ್ರೂಪ್ ನಲ್ಲಿ ನಾನು ಕೂರಲು ಹೋದಾಗ 'ಎದ್ದು ಹೋಗಿ' ಎಂದರು. ನಮ್ಮದು ಗುಂಪುಗಾರಿಕೆ ಅಂದ್ರೆ, ಅವರದ್ದು ಗುಂಪುಗಾರಿಕೆ ಅಲ್ಲವೇ.?'' ಎಂದು ಪ್ರಶ್ನಿಸುತ್ತಾರೆ ಜಯಶ್ರೀ.

  ಕಳಪೆ ಪ್ರದರ್ಶನ ಕೊಟ್ಟ ರಾಪಿಡ್ ರಶ್ಮಿಗೆ ಜೈಲೇ ಗತಿ.!

  ಕವಿತಾ ಹೇಳುವುದೇನು.?

  ಕವಿತಾ ಹೇಳುವುದೇನು.?

  ''ಪ್ರತಿಯೊಬ್ಬರು ಗುಂಪು ಅಂತಾರೆ. ಎಲ್ಲರೂ ಎಲ್ಲರ ಜೊತೆಗೆ ಮಾತನಾಡುತ್ತಾರೆ. ಆದರೆ, ನಮ್ಮ ಮೂರು ಜನಕ್ಕೆ ಮಾತ್ರ ಯಾಕೆ ಗುಂಪು ಅಂತಾರೆ.? ನಮ್ಮ ವೈಯುಕ್ತಿಕ ವಿಚಾರವನ್ನು ನಮ್ಮಲ್ಲಿ ನಾವು ಚರ್ಚೆ ಮಾಡುತ್ತೇವೆ ಅಷ್ಟೇ'' ಎಂಬುದು ಕವಿತಾ ಗೌಡ ಪಾಯಿಂಟ್.

  ಎರಡು ಚಟುವಟಿಕೆಯಲ್ಲಿ ಸೋಲು: ಅವಕಾಶ ಸಿಗದ ರಶ್ಮಿಗೆ ಉರಿ ಉರಿ.!

  ಶಶಿ ಏನಂದರು.?

  ಶಶಿ ಏನಂದರು.?

  ''ನಾಲ್ಕು ಜನರ ಜೊತೆಗೆ ನನ್ನ ಕಮ್ಫರ್ಟ್ ಝೋನ್ ಇದೆ. ಅವರ ಜೊತೆಗೆ ನಾನು ಇರುತ್ತೇನೆ. ಅದು ಅವರಿಗೆ ಗುಂಪು ತರಹ ಕಾಣುತ್ತೆ ಅಂದ್ರೆ ನಾನೇನೂ ಮಾಡಲು ಆಗಲ್ಲ. ನನ್ನ ಜೀವನ ಉದ್ದಕ್ಕೂ ನಾನು ಜಯಶ್ರೀ, ಕವಿತಾ ಮತ್ತು ಧನರಾಜ್ ಜೊತೆಗೆ ಇರುತ್ತೇನೆ. ನನ್ನ ಕಷ್ಟ-ಸುಖಗಳನ್ನು ಹಂಚಿಕೊಳ್ಳುವೆ'' ಎಂದರು ಶಶಿ ಕುಮಾರ್.

  ನವೀನ್ ಪಾಯಿಂಟ್ ಇಷ್ಟೇ.!

  ನವೀನ್ ಪಾಯಿಂಟ್ ಇಷ್ಟೇ.!

  ''ಎಲ್ಲಾ ಸಮಯದಲ್ಲೂ ಗುಂಪಿನಲ್ಲೇ ಇರಿ, ನಮಗೆ ತೊಂದರೆ ಇಲ್ಲ. ಆದರೆ ಟಾಸ್ಕ್ ನಲ್ಲಿ ಗುಂಪುಗಾರಿಕೆ ಮಾಡಬೇಡಿ ಎಂಬುದಷ್ಟೇ ನನ್ನ ಕೋರಿಕೆ'' ಎಂದರು ನವೀನ್. ಆದ್ರೆ, ಅದನ್ನ ಒಪ್ಪಿಕೊಳ್ಳಲು ಜಯಶ್ರೀ ಅಂಡ್ ಗ್ರೂಪ್ ರೆಡಿ ಇರಲಿಲ್ಲ.

  English summary
  Bigg Boss Kannada 6: Day 33: Naveen Sajju complaints about Groupism by Jayashree, Kavitha Gowda and Shashi Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X