For Quick Alerts
  ALLOW NOTIFICATIONS  
  For Daily Alerts

  ಪರಸ್ಪರ ಹಾರ ಹಾಕಿಕೊಂಡ ರಾಕೇಶ್-ಕವಿತಾ: ಮುನಿಸಿಕೊಂಡ ಅಕ್ಷತಾ.!

  |

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಇಲ್ಲಿಯವರೆಗಿನ ಯಾವುದೇ ಸಂಚಿಕೆ ನೋಡಿದರೂ, ರಾಕೇಶ್ ಮತ್ತು ಅಕ್ಷತಾ ಒಟ್ಟಿಗೆ ಇರುವುದು ನಿಮ್ಮ ಕಣ್ಣಿಗೆ ಬಿದ್ದೇ ಬೀಳುತ್ತೆ.

  ಹಾಗ್ನೋಡಿದ್ರೆ, ಮೊದಲ ವಾರವೇ ರಾಕೇಶ್ ಮತ್ತು ಅಕ್ಷತಾ ಬಗ್ಗೆ 'ಬಿಗ್ ಬಾಸ್' ಮನೆಯಲ್ಲೇ ಗಾಸಿಪ್ ಹರಿದಾಡಲಾರಂಭಿಸಿತು. ''ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅಷ್ಟೇ'' ಅಂತ ಎಲ್ಲರ ಮುಂದೆ ರಾಕೇಶ್ ಸ್ಪಷ್ಟ ಪಡಿಸಿದ್ದರೂ, ಆಗಾಗ ''ಐ ಲವ್ ಯು ರಾಕಿ'' ಅಂತ ಅಕ್ಷತಾ ಬಹಿರಂಗವಾಗಿ ಹೇಳಿರುವುದು ಎಲ್ಲಾ ಸ್ಪರ್ಧಿಗಳ ತಲೆಗೆ ಹೆಬ್ಬಾವು ಬಿಟ್ಟಂಗಾಗಿದೆ.

  ಇತ್ತ ರಾಕೇಶ್-ಅಕ್ಷತಾ ನಡುವಿನ ಗೆಳೆತನ ವೀಕ್ಷಕರಿಗೂ ಇಷ್ಟ ಆಗುತ್ತಿಲ್ಲ. ಹೀಗಿರುವಾಗಲೇ, ರಾಕೇಶ್ ಮೇಲೆ ಅಕ್ಷತಾ ಮುನಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಕವಿತಾ.!

  'ಇಷ್ಟ ಕಷ್ಟ' ಟಾಸ್ಕ್ ನಲ್ಲಿ ಕವಿತಾ ಮತ್ತು ರಾಕೇಶ್ ಪರಸ್ಪರ ಹಾರ ಹಾಕಿಕೊಂಡರು. ಅದಾದ ಮೇಲೂ ಕವಿತಾ ಜೊತೆಗೆ ರಾಕೇಶ್ ಆತ್ಮೀಯವಾಗಿ ಮಾತನಾಡಿದ್ದು ಅಕ್ಷತಾಗೆ ಕೋಪ ತರಿಸಿದೆ. ಮುಂದೆ ಓದಿರಿ...

  'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ

  'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ

  ಮನೆಯ ಎಲ್ಲಾ ಸ್ಪರ್ಧಿಗಳಿಗೂ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದರು. ಅದೇ 'ಇಷ್ಟ ಕಷ್ಟ'. ಈ ಚಟುವಟಿಕೆ ಅನುಸಾರ, ತಮಗೆ ಇಷ್ಟ ಆಗುವ ಒಬ್ಬರಿಗೆ ಸ್ಪರ್ಧಿಗಳು ಹಾರ ಹಾಕಬೇಕಿತ್ತು. ಇಷ್ಟ ಪಡದ ಇಬ್ಬರು ಸದಸ್ಯರ ಮುಖಕ್ಕೆ ಸ್ಪರ್ಧಿಗಳು ಮಸಿ ಬಳಿಯಬೇಕಿತ್ತು.

  ರಾಕೇಶ್-ಅಕ್ಷತಾ ನಡುವೆ ಏನಿದೆ-ಏನಿಲ್ಲ.? ಗಾಸಿಪ್ ಗಳಿಗೆ ಸಿಕ್ಕ ಸ್ಪಷ್ಟನೆ ಇದು..

  ಪರಸ್ಪರ ಹಾರ ಹಾಕಿಕೊಂಡ ಕವಿತಾ-ರಾಕೇಶ್

  ಪರಸ್ಪರ ಹಾರ ಹಾಕಿಕೊಂಡ ಕವಿತಾ-ರಾಕೇಶ್

  'ಇಷ್ಟ ಕಷ್ಟ' ಚಟುವಟಿಕೆ ಅನುಸಾರ, ಆಂಡ್ರ್ಯೂಗೆ ಕ್ಷಮೆ ಕೇಳಿದ ಕವಿತಾ ದೊಡ್ಡ ಗುಣವನ್ನು ಶ್ಲಾಘಿಸುತ್ತಾ ಆಕೆಗೆ ರಾಕೇಶ್ ಹಾರ ಹಾಕಿದರು. ಇನ್ನೂ ಮನನೊಂದಿದ್ದ ಕವಿತಾಗೆ ಹುರುಪು ತುಂಬುವ ಕೆಲಸ ಮಾಡಿದ ರಾಕೇಶ್ ಗೆ ಆಕೆ ಮಾಲಾರ್ಪಣೆ ಮಾಡಿದರು. ಅಲ್ಲಿಗೆ, ಇಷ್ಟ ಕಷ್ಟ ಟಾಸ್ಕ್ ನಲ್ಲಿ ಕವಿತಾ-ರಾಕೇಶ್ ಪರಸ್ಪರ ಹಾರ ಬದಲಾಯಿಸಿಕೊಂಡಂತಾಯಿತು.

  ಕ್ಯಾಪ್ಟನ್ ಸೋನು ಪಾಟೀಲ್ ಆಗಿರಬಹುದು, ಆದ್ರೆ ಮಾಸ್ಟರ್ ಮೈಂಡ್ ಮಾತ್ರ ರಾಕೇಶ್.!

  ಕವಿತಾ ಜೊತೆ ರಾಕೇಶ್ ಮಾತುಕತೆ

  ಕವಿತಾ ಜೊತೆ ರಾಕೇಶ್ ಮಾತುಕತೆ

  ಇಷ್ಟು ದಿನ ಅಕ್ಷತಾ ಜೊತೆಗೆ ಇರುತ್ತಿದ್ದ ರಾಕೇಶ್, ಇದೀಗ ಕವಿತಾ ಜೊತೆಗೆ ಆತ್ಮೀಯವಾಗಿ ಇರಲು ಆರಂಭಿಸಿದ್ದಾರೆ. ಇದು ಅಕ್ಷತಾಗೆ ಕಿರಿಕಿರಿ ತರಿಸಿದೆ. ''ನೀನು ದೊಡ್ಡ ಫ್ಲರ್ಟ್'' ಎನ್ನುತ್ತಾ ರಾಕೇಶ್ ಮೇಲೆ ಅಕ್ಷತಾ ಮುನಿಸಿಕೊಂಡಿದ್ದರು. ಬಳಿಕ ರಾಕೇಶ್-ಅಕ್ಷತಾ ಪ್ಯಾಚಪ್ ಆದರು.

  ಅಕ್ಷತಾ-ರಾಕೇಶ್ ನ ಮೊದಲು ಹೊರಗೆ ಹಾಕಿ: ಇದು ವೀಕ್ಷಕರ ಕೋರಿಕೆ.!

  ಪರಸ್ಪರ ಹಾರ ಹಾಕಿಕೊಂಡ ಶಶಿ-ಧನರಾಜ್

  ಪರಸ್ಪರ ಹಾರ ಹಾಕಿಕೊಂಡ ಶಶಿ-ಧನರಾಜ್

  'ಇಷ್ಟ ಕಷ್ಟ' ಟಾಸ್ಕ್ ನಲ್ಲಿ ಬರೀ ಕವಿತಾ-ರಾಕೇಶ್ ಮಾತ್ರ ಅಲ್ಲ.. ಶಶಿ-ಧನರಾಜ್ ಹಾಗೂ ರಶ್ಮಿ-ಮುರಳಿ ಕೂಡ ಪರಸ್ಪರ ಭೇಷ್ ಎನ್ನುತ್ತಾ ಹಾರ ಹಾಕಿಕೊಂಡರು.

  English summary
  Bigg Boss Kannada 6: Day 36: Rakesh and Kavitha Gowda exchange garlands.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X