For Quick Alerts
  ALLOW NOTIFICATIONS  
  For Daily Alerts

  ಅಕ್ಷತಾ ಕಣ್ಣೀರು ಹಾಕಿದರೂ, ರಾಕೇಶ್ ಬಿಡುವ ಹಾಗೆ ಕಾಣುತ್ತಿಲ್ಲ.!

  |
  Bigg Boss Kannada Season 6: ಅಕ್ಷತಾ ಕಣ್ಣೀರು ಹಾಕಿದರೂ, ರಾಕೇಶ್ ಬಿಡುವ ಹಾಗೆ ಕಾಣುತ್ತಿಲ್ಲ.!

  'ಬಿಗ್ ಬಾಸ್' ಮನೆಯೊಳಗೆ ಲಿಂಕಪ್ ಶುರು ಮಾಡಿಕೊಂಡರೆ, ಕೊನೆಯವರೆಗೂ ಆಟ ಆಡಬಹುದು ಎಂಬ ಸ್ಟ್ರಾಟೆಜಿ ರಾಕೇಶ್ ಗೆ ಇದ್ಯೋ, ಏನೋ... ಅದಕ್ಕೆ, ಮೊದಲ ವಾರದಿಂದಲೇ ಅಕ್ಷತಾ ಜೊತೆಗೆ ರಾಕೇಶ್ ಹೆಸರು ತಳುಕು ಹಾಕಿಕೊಂಡಿದೆ.

  ''ಅಕ್ಷತಾಗೆ ಮದುವೆ ಆಗಿದೆ. ಆಕೆಯೊಂದಿಗೆ ಆತ್ಮೀಯವಾಗಿ ಇರುವುದು ಸರಿ ಅಲ್ಲ'' ಅಂತ ಯಾರು ಎಷ್ಟೇ ಹೇಳಿದರೂ ರಾಕೇಶ್ ಕೇಳುತ್ತಿರಲಿಲ್ಲ. ''ನಾವಿಬ್ಬರು ಒಳ್ಳೆಯ ಸ್ನೇಹಿತರು'' ಅಂತ ರಾಕೇಶ್ ಆಗಾಗ ಸ್ಪಷ್ಟ ಪಡಿಸಿದ್ದರು.

  ಇಷ್ಟಾದರೂ, ರಾಕೇಶ್-ಅಕ್ಷತಾ ನಡುವಿನ ಸಂಬಂಧದ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಒಂದು ಡೌಟ್ ಇದ್ದೇ ಇದೆ. ಆ ಡೌಟ್ 'ಕಾಲ್ ಸೆಂಟರ್' ಟಾಸ್ಕ್ ನೆಪದಲ್ಲಿ ಹೊರಬಂತು.

  ಅಕ್ಷತಾ ಜೊತೆ ಅಂಟಿಕೊಂಡೇ ಇರುವ ರಾಕೇಶ್ ಗೆ ಬಿಸಿ ಮುಟ್ಟಿಸಿದ 'ಬಿಗ್ ಬಾಸ್' ಸ್ಪರ್ಧಿಗಳು.!

  ಅಕ್ಷತಾ ಮತ್ತು ರಾಕೇಶ್ ನಡುವಿನ ಸಂಬಂಧದ ಬಗ್ಗೆ ಜಯಶ್ರೀ, ಧನರಾಜ್ ಮತ್ತು ಸೋನು ಪಾಟೀಲ್ ನೇರವಾಗಿ ಪ್ರಶ್ನೆ ಮಾಡಿದರು. ಇದನ್ನೆಲ್ಲಾ ಗಮನಿಸಿದ ಮೇಲೆ ಅಕ್ಷತಾ ಕಣ್ಣೀರು ಹಾಕಿದ್ದಾರೆ.

  ''ಒಂದು ಮಾತು ಹೇಳುವೆ... ನಾನೇನಾದರೂ ಹೊರಗೆ ಹೋದರೆ, ಇದೇ ಕಾರಣ ಆಗುತ್ತೆ. ನಾನು ಒಬ್ಬಳೇ ಆಟ ಆಡಿದರೆ, ಎಲ್ಲರಿಗಿಂತ ಚೆನ್ನಾಗಿ ಆಟ ಆಡುವೆ. ಬ್ಯಾಡ್ ನೇಮ್. ಇದರಿಂದ ಹೆಸರು ಹಾಳಾಗುತ್ತಿದೆ. ನಾನು ಮದುವೆ ಆಗಿದ್ದೇನೆ. ಹಳ್ಳಿ ಹುಡುಗಿ.. ಈ ತರಹ ಅಂದ್ರೆ ಡ್ಯಾಮೇಜ್ ಆಗುತ್ತೆ'' ಎನ್ನುತ್ತಾ ಅಕ್ಷತಾ ಕಣ್ಣೀರು ಸುರಿಸಿದರು.

  'ಐ ಲವ್ ಯು ರಾಕಿ' ಎನ್ನುವ ಅಕ್ಷತಾ-ರಾಕೇಶ್ ನಡುವಿನ ಸಂಬಂಧ ಎಂಥದ್ದು.?

  ಆಗ ''ಹೆಸರು ಹಾಳಾಗುತ್ತಿದೆ ಅಂತ ಹೇಗೆ ಗೊತ್ತು. ಇವತ್ತು ಟಾಸ್ಕ್ ಇದ್ದ ಕಾರಣ ಇದೆಲ್ಲ ಬಂತು. ಇಷ್ಟು ದಿನ ಬಂದಿತ್ತಾ.? ಯಾಕಂದ್ರೆ, ಎಲ್ಲರ ಬಳಿ ಇದ್ದದ್ದು ಅದೊಂದೇ ಅಸ್ತ್ರ. ನೀವು ಹೊರಗೆ ಹೋಗಲು ನಾನೇ ಕಾರಣ ಅಂದ್ರೆ, ನಾನು ಹೊರಗೆ ಹೋಗಲು ನೀವೇ ಕಾರಣ ಆಗಬಹುದು ಅಲ್ವಾ.?'' ಅಂತ ರಾಕೇಶ್ ವಾದ ಮಾಡಿದರು.

  English summary
  Bigg Boss Kannada 6: Day 37: After hearing all the allegations Akshata becomes emotional.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X