For Quick Alerts
  ALLOW NOTIFICATIONS  
  For Daily Alerts

  ಅಕ್ಷತಾ ಜೊತೆ ಅಂಟಿಕೊಂಡೇ ಇರುವ ರಾಕೇಶ್ ಗೆ ಬಿಸಿ ಮುಟ್ಟಿಸಿದ 'ಬಿಗ್ ಬಾಸ್' ಸ್ಪರ್ಧಿಗಳು.!

  |

  ''ನಾನು ಪ್ಲೇಯರ್'', ''ಟಾಸ್ಕ್ ನಲ್ಲಿ ಒಳ್ಳೆತನ ತೋರಿಸುವೆ'', ''ಸ್ನೇಹದ ಸಂದೇಶ ಸಾರುವೆ'' ಅಂತೆಲ್ಲಾ ಹೇಳಿಕೊಂಡು ಆಗಾಗ ಬಿಲ್ಡಪ್ ಕೊಡುವ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಸ್ಪರ್ಧಿ ಎಂ.ಜೆ.ರಾಕೇಶ್.

  'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಾಗಿನಿಂದಲೂ ರಾಕೇಶ್-ಅಕ್ಷತಾ ಜೊತೆಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಅಕ್ಷತಾಗೆ ಅದಾಗಲೇ ಮದುವೆ ಆಗಿದೆ ಅಂತ ಗೊತ್ತಿದ್ದರೂ, ಆಕೆಯೊಂದಿಗೆ ರಾಕೇಶ್ ಆತ್ಮೀಯವಾಗಿದ್ದಾರೆ.

  ರಾಕೇಶ್ ಮತ್ತು ಅಕ್ಷತಾ ಕುರಿತು ಮೊದಲ ವಾರವೇ ಗಾಸಿಪ್ ಸೃಷ್ಟಿ ಆಯ್ತು. ''ನಾವಿಬ್ಬರು ಗೆಳೆಯರು'' ಅಂತ ಎಲ್ಲರ ಮುಂದೆ ರಾಕೇಶ್ ಸ್ಪಷ್ಟ ಪಡಿಸಿದ್ದರೂ, ಆಗಾಗ ''ಐ ಲವ್ ಯು ರಾಕಿ'' ಅಂತ ಅಕ್ಷತಾ ಹೇಳುವುದು ಹಲವರಿಗೆ ಕನ್ ಫ್ಯೂಶನ್ ತರಿಸಿದೆ.

  ಅಕ್ಷತಾ-ರಾಕೇಶ್ ಗೆ ''ಗಂಡ-ಹೆಂಡತಿ'' ಅಂತ ಆಂಡ್ರ್ಯೂ ಕಾಮೆಂಟ್ ಮಾಡಿದಾಗ ರಾಕೇಶ್ ಸಿಕ್ಕಾಪಟ್ಟೆ ಗರಂ ಆಗಿದ್ದರು. ಆಗ ಬೇರೆ ಯಾರೂ ಚಕಾರ ಎತ್ತಲಿಲ್ಲ. ಆದ್ರೆ, 'ಕಾಲ್ ಸೆಂಟರ್' ಟಾಸ್ಕ್ ನಲ್ಲಿ ರಾಕೇಶ್ ತೋರಿದ ವರ್ತನೆಯಿಂದ ಸಿಟ್ಟಿಗೆದ್ದ ಧನರಾಜ್, ಜಯಶ್ರೀ ಮತ್ತು ಸೋನು ಬಿಸಿ ಮುಟ್ಟಿಸಿದ್ದಾರೆ. ಮುಂದೆ ಓದಿರಿ...

  'ಬಿಗ್ ಬಾಸ್' ನೀಡಿದ್ದ ಲಕ್ಷುರಿ ಬಜೆಟ್ ಟಾಸ್ಕ್

  'ಬಿಗ್ ಬಾಸ್' ನೀಡಿದ್ದ ಲಕ್ಷುರಿ ಬಜೆಟ್ ಟಾಸ್ಕ್

  'ಬಿಗ್ ಬಾಸ್ ಕಾಲ್ ಸೆಂಟರ್' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ಈ ವಾರ ನೀಡಲಾಗಿತ್ತು. ಇದರಲ್ಲಿ ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಭಜಿಸಲಾಗಿತ್ತು. ಮೊದಲ ಸುತ್ತಿನಲ್ಲಿ ಕವಿತಾ, ಜಯಶ್ರೀ, ಶಶಿ, ಧನರಾಜ್, ನಯನ ಮತ್ತು ಸೋನು ಗ್ರಾಹಕ ಸೇವಾ ಪ್ರತಿನಿಧಿಗಳ ಕಾರ್ಯ ನಿರ್ವಹಿಸಬೇಕಿತ್ತು. ಇನ್ನೂ ರಶ್ಮಿ, ರಾಕೇಶ್, ಅಕ್ಷತಾ, ಆನಂದ್, ನವೀನ್, ಆಂಡ್ರ್ಯೂ ಗ್ರಾಹಕರಾಗಿ ಕರೆ ಮಾಡಬೇಕಿತ್ತು. ಟಾಸ್ಕ್ ನ ಸಂಚಾಲಕರಾಗಿ ಮುರಳಿ ಇದ್ದರು. ಗ್ರಾಹಕರು ಕರೆ ಮಾಡಿ ತಮ್ಮ ದೂರುಗಳು ಅಥವಾ ಯಾವುದೇ ಪ್ರಶ್ನೆಗಳನ್ನು ಕೇಳಬಹುದಿತ್ತು. 'ಬಿಗ್ ಬಾಸ್' ಮನೆಯೊಳಗೆ ನಡೆದಿರುವ ಅಥವಾ ಗ್ರಾಹಕ ಸೇವಾ ಪ್ರತಿನಿಧಿಯ ವೈಯುಕ್ತಿಕ ಪ್ರಶ್ನೆಗಳನ್ನು ಕೇಳಲು 'ಬಿಗ್ ಬಾಸ್' ಅವಕಾಶ ಕಲ್ಪಿಸಿದ್ದರು. ಗ್ರಾಹಕರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಗ್ರಾಹಕ ಸೇವಾ ಸಿಬ್ಬಂದಿ ಸಮಾಧಾನದಿಂದ ಉತ್ತರಿಸಬೇಕಿತ್ತು.

  ರಾಕೇಶ್-ಅಕ್ಷತಾ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ಡೌಟು.!

  ಮೊದಲ ದಿನ ಬಾಣ ಬಿಟ್ಟಿದ್ದ ರಾಕೇಶ್

  ಮೊದಲ ದಿನ ಬಾಣ ಬಿಟ್ಟಿದ್ದ ರಾಕೇಶ್

  ಮೊದಲ ದಿನ ಗ್ರಾಹಕರಾಗಿದ್ದ ರಾಕೇಶ್... ಗ್ರಾಹಕ ಸೇವಾ ಪ್ರತಿನಿಧಿಗಳಾಗಿದ್ದ ಸೋನು ಪಾಟೀಲ್, ಧನರಾಜ್ ಮತ್ತು ಜಯಶ್ರೀಗೆ ಕರೆ ಮಾಡಿ ಬೇಡದ ಪ್ರಶ್ನೆಗಳನ್ನೆಲ್ಲಾ ಕೇಳಿದ್ದರು. ಇದರಿಂದ ರೊಚ್ಚಿಗೆದ್ದ ಮೂವರು, ಮಾರನೇ ದಿನ ರಾಕೇಶ್-ಅಕ್ಷತಾ ನಡುವಿನ ಸಂಬಂಧದ ಕುರಿತು ಪ್ರಶ್ನೆ ಮಾಡ ತೊಡಗಿದರು.

  ರಾಕೇಶ್-ಅಕ್ಷತಾಗೆ ಗಂಡ-ಹೆಂಡತಿ ಎಂದುಬಿಟ್ಟ ಆಂಡ್ರ್ಯೂ.!

  ಧನರಾಜ್ ಗೆ ಸಿಟ್ಟು ಯಾಕೆ.?

  ಧನರಾಜ್ ಗೆ ಸಿಟ್ಟು ಯಾಕೆ.?

  ''ನೀವು ಹೆಂಡತಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದೀರಾ ಸರಿ. ಆದ್ರೆ, ನಿಮ್ಮ ಹೆಂಡತಿಯ ಗುಣಗಳನ್ನು ಬೇರೆಯವರಲ್ಲಿ ಹುಡುಕುತ್ತಿದ್ದೀರಾ. ಬಟ್ಟೆ ಇಸ್ತ್ರಿ ಮಾಡಿಕೊಡಿ ಅಂತ ಕೇಳ್ತೀರಾ'' ಅಂತ ಧನರಾಜ್ ಗೆ ರಾಕೇಶ್ ಪ್ರಶ್ನೆ ಮಾಡಿದ್ದರು. ಇದರಿಂದ ಕೋಪಗೊಂಡ ಧನರಾಜ್, ''ನಾನು ಬೇರೆಯವರ ಹೆಂಡತಿ ಜೊತೆ ಓಡಾಡುತ್ತಿಲ್ಲವಲ್ಲ.. ನಾನು ನನ್ನ ಹೆಂಡತಿ ಜೊತೆ ಇದ್ದೇನೆ'' ಎನ್ನುತ್ತಾ ತಮ್ಮಲ್ಲಿದ್ದ ಸಿಟ್ಟನ್ನು ಹೊರಹಾಕುತ್ತಿದ್ದರು.

  ಪರಸ್ಪರ ಹಾರ ಹಾಕಿಕೊಂಡ ರಾಕೇಶ್-ಕವಿತಾ: ಮುನಿಸಿಕೊಂಡ ಅಕ್ಷತಾ.!

  ಬೆವರಿಳಿಸಿದ ಧನರಾಜ್

  ಬೆವರಿಳಿಸಿದ ಧನರಾಜ್

  ''ಸಚಿನ್ ತೆಂಡುಲ್ಕರ್ ಗಿಂತ ದೊಡ್ಡ ಸಾಧನೆ ಮಾಡಿರುವೆ ಅಂತ ಹೇಳ್ತೀರಲ್ಲಾ.. ತಾವು 200 ಹೊಡೆದಿರುವುದು ಯಾವ ಕ್ರೀಡೆಯಲ್ಲಿ ಅಂತ ಹೇಳ್ತೀರಾ.?'' ಅಂತ ಪ್ರಶ್ನೆಯ ಬಾಣವನ್ನ ರಾಕೇಶ್ ಗೆ ಧನರಾಜ್ ಬಿಟ್ಟರು. ಅದಕ್ಕೆ ರಾಕೇಶ್ ಕೊಟ್ಟ ಉತ್ತರ - ''15 ವರ್ಷಗಳಿಂದ 200 ಹುಡುಗಿಯರನ್ನು ಡೇಟ್ ಮಾಡಿದ್ದೇನೆ''

  ಅಕ್ಷತಾ-ರಾಕೇಶ್ ನ ಮೊದಲು ಹೊರಗೆ ಹಾಕಿ: ಇದು ವೀಕ್ಷಕರ ಕೋರಿಕೆ.!

  ಗಂಡ-ಹೆಂಡತಿ ಸಂಬಂಧ ಅಂದ್ರೇನು ಗೊತ್ತಾ.?

  ಗಂಡ-ಹೆಂಡತಿ ಸಂಬಂಧ ಅಂದ್ರೇನು ಗೊತ್ತಾ.?

  ''ಗಂಡ-ಹೆಂಡತಿ ಸಂಬಂಧ ಅಂದ್ರೇನು ಅಂತ ಗೊತ್ತಾ.? ಇಡೀ ದಿನ ಒಬ್ಬ ಹುಡುಗಿಯ ಜೊತೆಯಲ್ಲೇ ಇದ್ದರೆ, ಹೊರಗಡೆ ಇರುವ ಗಂಡನಿಗೆ ಬೇಜಾರಾಗುತ್ತೆ ಎಂಬ ಸೆನ್ಸ್ ನಿಮಗೆ ಇದ್ಯಾ.? ಇಲ್ವಾ.? 200 ಹುಡುಗಿಯರ ಜೊತೆಗೆ ಇದ್ದ ವ್ಯಕ್ತಿ, ಮದುವೆ ಆಗಿರುವ ಓರ್ವ ಹುಡುಗಿ ಜೊತೆ ಜಾಸ್ತಿ ಕಾಲ ಕಳೆದರೆ ಆಕೆಯ ಗಂಡನಿಗೆ ಬೇಸರ ಆಗುತ್ತೆ ಅನ್ನೋದು ಬೇಡ್ವಾ.? ಲಿವಿಂಗ್-ಟು-ಗೆದರ್ ರಿಲೇಶನ್ ನಲ್ಲಿ ಇರುವ ನೀನು ಚೌಕಟನ್ನು ಮೀರಿ ಆಚೆ ಹೋಗಬಾರದು'' ಎಂದು ರಾಕೇಶ್ ಗೆ ಧನರಾಜ್ ಹೇಳಿದರು.

  ರಾಕೇಶ್ ಕೊಟ್ಟ ಸಬೂಬು ಏನು.?

  ರಾಕೇಶ್ ಕೊಟ್ಟ ಸಬೂಬು ಏನು.?

  ''ಮದುವೆ ಆಗಿರುವ ಹುಡುಗಿಯನ್ನ ಇದೇ ತರಹ ನೋಡಬೇಕು ಅಂತ ಹೇಳಿ ಹೇಳಿ ನಮ್ಮ ಇವತ್ತಿನ ಕಾಲದ ಗಂಡಸರು, ಹುಡುಗಿಯರನ್ನು ಬೇರೆ ತರಹ ಸಮಾಜದಿಂದ ಹೊರಗೆ ಕಳುಹಿಸಿದ್ದಾರೆ'' ಎಂದು ರಾಕೇಶ್ ಸಮರ್ಥಿಸಿಕೊಳ್ಳಲು ಮುಂದಾದಾಗ, ''ಕರ್ನಾಟಕದ ಗಂಡಸರು, ಭಾರತೀಯ ಗಂಡಸರು ನಿನ್ನನ್ನ ಮನೆ ಬಳಿ ಸೇರಿಸಲ್ಲ. ಇದು ಡ್ಯಾಮೇಜಿಂಗ್ ಹೇಳಿಕೆ'' ಎಂದರು ಧನರಾಜ್.

  ನಾನೇನೂ ತಪ್ಪು ಮಾಡಿಲ್ಲ.!

  ನಾನೇನೂ ತಪ್ಪು ಮಾಡಿಲ್ಲ.!

  ''ಎಲ್ಲರಿಗೂ ಒಂದೊಂದು ಭಾವನೆ ಇರುತ್ತೆ. ನಿಮ್ಮ ಮನಸ್ಸಿನಲ್ಲಿ ಶುದ್ಧತೆ ಇರಬೇಕು. ತಪ್ಪು ಹುಡುಕುವವರು ಕೆಟ್ಟ ಮನಸ್ಸು ಇರುವವರು. ನಾನೇನೂ ತಪ್ಪು ಮಾಡಿಲ್ಲ'' ಎಂದು ಉತ್ತರಿಸಿದರು ರಾಕೇಶ್.

  ಸೋನು ಮಾಡಿದ ದೂರು ಏನು.?

  ಸೋನು ಮಾಡಿದ ದೂರು ಏನು.?

  ''ನೀವು 200 ಹುಡುಗಿಯರ ಜೊತೆಗೆ ಡೇಟ್ ಮಾಡಿಕೊಂಡು, ಸದ್ಯಕ್ಕೆ ಒಂದು ಹುಡುಗಿಯ ಜೊತೆಗೆ ಲಿವಿಂಗ್-ಟು-ಗೆದರ್ ನಲ್ಲಿ ಇದ್ದುಕೊಂಡು, ಬಿಗ್ ಬಾಸ್ ಮನೆಯಲ್ಲಿ ನಿಮ್ಮವರ ಜೊತೆಗೆ ಇದ್ದೀರಾ.. 24 ಗಂಟೆ ಅಕ್ಷತಾ ಜೊತೆಗೆ ಅಂಟಿಕೊಂಡೇ ತಿರುಗುತ್ತೀರಾ... ಬಿಗ್ ಬಾಸ್ ಮನೆಯಲ್ಲಿ ಹುಡುಗಿಯರ ವಿಷಯದಲ್ಲಿ ಆಟ ಆಡುವ ಏಕೈಕ ವ್ಯಕ್ತಿ ರಾಕೇಶ್'' ಎಂದು ಸೋನು ಪಾಟೀಲ್ ದೂರಿದರು.

  ಜಯಶ್ರೀ ದೂರೇನು.?

  ಜಯಶ್ರೀ ದೂರೇನು.?

  ''ರಾಕೇಶ್ ಅವರೇ.. ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಟ ಆಡುತ್ತಿದ್ದೀರಾ. ಯಾರ ಜೊತೆ ಆಟ ಆಡುತ್ತಿದ್ದೀರಾ ಅಂತ ನೋಡಿಕೊಂಡು ಆಡಿ... ಮೂರು ಹೊತ್ತು ಒಬ್ಬಳ ಬಳಿಯೇ ಇರುತ್ತೀರಾ. ಅಕ್ಷತಾ ಮಾತ್ರ ಅಲ್ಲ.. ಬೇರೆಯವರ ಭಾವನೆಯನ್ನೂ ಅರ್ಥ ಮಾಡಿಕೊಳ್ಳಿ'' ಎಂದರು ಜಯಶ್ರೀ.

  ರಾಕೇಶ್ ಕೊಟ್ಟ ಉತ್ತರ ಏನು.?

  ರಾಕೇಶ್ ಕೊಟ್ಟ ಉತ್ತರ ಏನು.?

  ''ನನ್ನ ಪ್ರಕಾರ, ನಾನು ಎಲ್ಲರ ಭಾವನೆಯನ್ನೂ ಅರ್ಥ ಮಾಡಿಕೊಂಡಿದ್ದೇನೆ. ಇವತ್ತಿಂದ ಇನ್ನೂ ಜಾಸ್ತಿ ಅರ್ಥ ಮಾಡಿಕೊಳ್ಳುವೆ. ಅಕ್ಷತಾದು ಸ್ವಲ್ಪ ಜಾಸ್ತಿ ಅರ್ಥ ಮಾಡಿಕೊಂಡಿದ್ದೇನೆ ಅಷ್ಟೇ'' ಎಂದು ಉತ್ತರಿಸಿದರು ರಾಕೇಶ್.

  ಬೆನ್ನು ತಟ್ಟಿದ ಅಕ್ಷತಾ

  ಬೆನ್ನು ತಟ್ಟಿದ ಅಕ್ಷತಾ

  ಎಲ್ಲರ ದೂರಿನ ಸಮಾಧಾನದಿಂದ ಉತ್ತರ ಕೊಟ್ಟ ರಾಕೇಶ್ ಗೆ ಬೆನ್ನು ತಟ್ಟಿ ಅಕ್ಷತಾ ಪ್ರಶಂಸಿಸಿದರು.

  English summary
  Bigg Boss Kannada 6: Day 37: Housemates question Rakesh and Akshata's relationship.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X