For Quick Alerts
  ALLOW NOTIFICATIONS  
  For Daily Alerts

  ನಾಮಿನೇಷನ್ ನಲ್ಲಿ 'ಗ್ರೂಪ್' ಉಳಿಸಿದ ಕವಿತಾ ವಿರುದ್ಧ ಸ್ಪರ್ಧಿಗಳು ಸಿಡಿಮಿಡಿ.!

  |
  Bigg Boss Kannada Season 6 : ನಾಮಿನೇಷನ್ ನಲ್ಲಿ 'ಗ್ರೂಪ್' ಉಳಿಸಿದ ಕವಿತಾ ವಿರುದ್ಧ ಸ್ಪರ್ಧಿಗಳು ಸಿಡಿಮಿಡಿ.!

  ನಿಮಗೆಲ್ಲ ಗೊತ್ತಿರುವ ಹಾಗೆ ಈ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿರುವವರು ಕವಿತಾ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಜಯಶ್ರೀ ಮತ್ತು ಶಶಿ ಹೆಸರನ್ನ ಯಾರು ತೆಗೆದುಕೊಳ್ಳಲಿಲ್ಲ. ಹೀಗಾಗಿ, ಅವರಿಬ್ಬರು ಈ ವಾರ ಸೇಫ್ ಆಗಿದ್ದರು.

  ಸೇಫ್ ಆಗಿರುವ ಸ್ಪರ್ಧಿಗಳ ಪೈಕಿ ಇಬ್ಬರನ್ನು ನಾಮಿನೇಟ್ ಮಾಡುವ ಅಧಿಕಾರ ಕವಿತಾಗೆ ಸಿಕ್ಕಾಗ, ಆಕೆ ಆಯ್ದುಕೊಂಡಿದ್ದು ನವೀನ್ ಮತ್ತು ರಶ್ಮಿ ಹೆಸರನ್ನು.! ನಾಮಿನೇಷನ್ ವೇಳೆ ಜಯಶ್ರೀ ಮತ್ತು ಶಶಿ ಹೆಸರನ್ನು ತೆಗೆದುಕೊಳ್ಳದ ಕವಿತಾ ವಿರುದ್ಧ ಇತರೆ ಸ್ಪರ್ಧಿಗಳು ಸಿಡಿಮಿಡಿಗೊಂಡರು.

  ಕವಿತಾ-ಶಶಿ-ಜಯಶ್ರೀ... ಗ್ರೂಪ್ ಮಾಡಿಕೊಂಡು ಆಟ ಆಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಈ 'ತ್ರಿಮೂರ್ತಿ'ಗಳು ಸೇಫ್ ಆಗಿರುವುದು ಇತರರಿಗೆ ಕಿರಿಕಿರಿ ತರಿಸಿದೆ.

  'ಬಿಗ್ ಬಾಸ್': ಈ ವಾರ ಅಕ್ಷತಾಗೆ ನೀವೆಲ್ಲ ವೋಟ್ ಹಾಕ್ತೀರಾ.?

  ''ಕವಿತಾ.. ಅವಳ ಗ್ರೂಪ್ ನಲ್ಲಿ ಒಬ್ಬರನ್ನ ನಾಮಿನೇಟ್ ಮಾಡಿದ್ರೆ, ಫೇರ್ ಆಗಿ ಆಡುತ್ತಿದ್ದಾರೆ ಎನ್ನಬಹುದಿತ್ತು. ಅಲ್ಲೂ ಗ್ರೂಪ್ ಮಾಡಿಕೊಂಡು ಆಡುತ್ತಿದ್ದಾರೆ. ಹಾಗ್ನೋಡಿದ್ರೆ, ಇಡೀ ವಾರ ಜಯಶ್ರೀ ಏನೂ ಮಾಡಿಲ್ಲ. ನಾಮಿನೇಷನ್ ಗೆ ಬಂದಿಲ್ಲ ಅಂದ್ರೆ, ಜನರು ಹೊರಗೆ ಹಾಕಲು ನಾವೇ ಚಾನ್ಸ್ ಕೊಡದ ಹಾಗೆ ಆಯ್ತಲ್ಲ'' ಅನ್ನೋದು ರಾಪಿಡ್ ರಶ್ಮಿ ವಾದ.

  ''ಈ ಮೂವರು ಸೇಫ್ ಆಗಿ ಇದ್ದು ಇದ್ದು ಫೈನಲ್ ವರೆಗೂ ಬಂದುಬಿಡ್ತಾರೆ'' ಎಂಬುದು ಬಹುತೇಕ ಸ್ಪರ್ಧಿಗಳ ಅಭಿಪ್ರಾಯ.

  ಕ್ಷಣಾರ್ಧದಲ್ಲಿ ಡೇಂಜರ್ ಝೋನ್ ನಿಂದ ಬಚಾವ್ ಆದ ರಾಕೇಶ್.!

  ಹಾಗ್ನೋಡಿದ್ರೆ, ಕವಿತಾ ಕ್ಯಾಪ್ಟನ್ ಆಗಲು ಸಹಾಯ ಮಾಡಿದವರು ನವೀನ್. ಆದ್ರೆ, ನವೀನ್ ರನ್ನೇ ಕವಿತಾ ನಾಮಿನೇಟ್ ಮಾಡಿದರು. ಹೀಗಾಗಿ, ''ಇವಳನ್ನ ಕ್ಯಾಪ್ಟನ್ ಮಾಡಲು ನಾನು ನಿಂತುಕೊಂಡೆ.. ಹಿಂಗೆ ಅಂತ ಗೊತ್ತಿದ್ರೆ, ಹೊಡೆದು ಬೀಳಿಸುತ್ತಿದ್ದೆ'' ಅಂತ ಬೇಸರ ಪಟ್ಟುಕೊಳ್ತಿದ್ರು.

  ಇತ್ತ ಕವಿತಾ, ''ಜಯಶ್ರೀ ರನ್ನ ನಾಮಿನೇಟ್ ಮಾಡಲು ನನಗೆ ಯಾವುದೇ ಕಾರಣ ಇರಲಿಲ್ಲ'' ಅಂತ ತಮ್ಮ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ.

  ದುರಂತ ಅಂದ್ರೆ, ಸೇಫ್ ಆಗಿದ್ದ ಜಯಶ್ರೀ.. 'ನನ್ ಬಲೂನೇ ಸ್ಟ್ರಾಂಗು ಗುರು' ಚಟುವಟಿಕೆ ಮುಗಿದ್ಮೇಲೆ ನಾಮಿನೇಟ್ ಆಗ್ಬಿಟ್ಟರು. ಅದಕ್ಕೆ ಕಾರಣ ರಾಕೇಶ್.

  ಅಂದ್ಹಾಗೆ, ಈ ವಾರ ಅಕ್ಷತಾ, ಆಂಡಿ, ಸೋನು, ಧನರಾಜ್, ರಶ್ಮಿ, ನವೀನ್ ಮತ್ತು ಜಯಶ್ರೀ ನಾಮಿನೇಟ್ ಆಗಿದ್ದಾರೆ. ಈ ಏಳು ಜನರ ಪೈಕಿ ನಿಮ್ಮ ಮತ ಯಾರಿಗೆ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ..

  English summary
  Bigg Boss Kannada 6: Day 43: Kavitha Gowda is partial towards her group.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X