For Quick Alerts
  ALLOW NOTIFICATIONS  
  For Daily Alerts

  ರಿಮೋಟ್ ಗ್ಯಾಂಗ್ ನಲ್ಲಿ ಬಿರುಕು: ಭಿನ್ನಮತ ಯಾವಾಗ ಸ್ಫೋಟಗೊಳ್ಳುತ್ತೋ.?

  |

  ಜಯಶ್ರೀ, ಕವಿತಾ ಗೌಡ, ಶಶಿ ಕುಮಾರ್ ಮತ್ತು ಧನರಾಜ್... 'ಬಿಗ್ ಬಾಸ್' ಮನೆಯಲ್ಲಿ ಈ ನಾಲ್ವರದ್ದು ಒಂದು ಗುಂಪು. ಆ ಗುಂಪಿಗೆ ರಿಮೋಟ್ ಗ್ಯಾಂಗ್ ಅಂತ ಹೆಸರು. ಸದ್ಯ ಈ ರಿಮೋಟ್ ಗ್ಯಾಂಗ್ ನಲ್ಲಿ ಎಲ್ಲವೂ ಸರಿ ಇಲ್ಲ.

  ಅತ್ತ ಶಶಿ ವರ್ತನೆ ಕವಿತಾಗೆ ಇಷ್ಟ ಆಗುತ್ತಿಲ್ಲ. ಇತ್ತ ಮುಖ ಗಂಟು ಹಾಕಿಕೊಂಡಿರುವ ಜಯಶ್ರೀ ಕಂಡ್ರೆ ಧನರಾಜ್ ಮತ್ತು ಶಶಿಗೆ ಆಗ್ಬರ್ತಿಲ್ಲ. ಶಶಿ ಮೇಲೆ ಜಯಶ್ರೀಗೆ ಬೇಸರ ಇದ್ದರೆ, ಜಯಶ್ರೀ ರನ್ನೇ ಕವಿತಾ ನಾಮಿನೇಟ್ ಮಾಡಿದ್ದಾರೆ.!

  ಇಷ್ಟು ದಿನ 'ಗ್ರೂಪ್' ಎಂದುಕೊಂಡು ಈ ನಾಲ್ವರು ಒಬ್ಬರನ್ನೊಬ್ಬರು ಸಪೋರ್ಟ್ ಮಾಡಿಕೊಂಡು ಆಟದಲ್ಲಿ ಸೇಫ್ ಆಗಿರುತ್ತಿದ್ದರು. ಆದ್ರೀಗ, ಈ ನಾಲ್ವರ ನಡುವೆ ಬಿರುಕು ಮೂಡಿದೆ. ಬೂದಿ ಮುಚ್ಚಿದ ಕೆಂಡದಂತಿರುವ ಭಿನ್ನಮತ ಯಾವಾಗ ಸ್ಫೋಟಗೊಳ್ಳುತ್ತೋ.?!

  ಜಯಶ್ರೀಗೆ ಕೋಪ ಯಾಕೆ.?

  ಜಯಶ್ರೀಗೆ ಕೋಪ ಯಾಕೆ.?

  'ಬಿಗ್ ಬಾಸ್ ವಿಶ್ವವಿದ್ಯಾನಿಲಯ' ಟಾಸ್ಕ್ ನಲ್ಲಿ ಜಯಶ್ರೀ ಚೆನ್ನಾಗಿ ಪರ್ಫಾರ್ಮ್ ಮಾಡಿದ್ದರೂ, ಕಮ್ಮಿ ಮಾರ್ಕ್ಸ್ ಸಿಕ್ಕಿತ್ತು. ಮಾರ್ಕ್ಸ್ ಆಧಾರದ ಮೇಲೆ ಶಶಿ, ಧನರಾಜ್ ಸೇರಿದಂತೆ ಎಲ್ಲರೂ 'ಕಳಪೆ' ಹಣೆಪಟ್ಟಿಯನ್ನ ಜಯಶ್ರೀಗೆ ಹೊರಿಸಿ, ಜೈಲಿಗೆ ಕಳುಹಿಸಿದರು. ಇದು ಜಯಶ್ರೀ ಕೋಪಕ್ಕೆ ಕಾರಣ.

  'ಬಿಗ್ ಬಾಸ್' ಮನೆಯ ರಿಮೋಟ್ ಗ್ಯಾಂಗ್ ನಲ್ಲಿ ಸದ್ಯದಲ್ಲೇ ಒಡಕು ಮೂಡೋದು ಪಕ್ಕಾ.!

  'ಗುಂಪಿ'ನ ಜೊತೆ ಮಾತನಾಡದ ಜಯಶ್ರೀ

  'ಗುಂಪಿ'ನ ಜೊತೆ ಮಾತನಾಡದ ಜಯಶ್ರೀ

  ಕೋಪಗೊಂಡಿದ್ದ ಜಯಶ್ರೀ ಜೈಲಿಗೆ ಹೋದ್ಮೇಲೆ, ಕವಿತಾ, ಶಶಿ ಮತ್ತು ಧನರಾಜ್ ಜೊತೆ ಸರಿಯಾಗಿ ಮಾತನಾಡಲಿಲ್ಲ. ಮುಖ ಗಂಟು ಮಾಡಿಕೊಂಡಿದ್ದರು. ಇದು ಶಶಿ ಮತ್ತು ಧನರಾಜ್ ಗೆ ಕಿರಿಕಿರಿ ತಂದಿದೆ.

  ನಾಮಿನೇಷನ್ ನಲ್ಲಿ 'ಗ್ರೂಪ್' ಉಳಿಸಿದ ಕವಿತಾ ವಿರುದ್ಧ ಸ್ಪರ್ಧಿಗಳು ಸಿಡಿಮಿಡಿ.!

  ಶಶಿ-ಧನರಾಜ್ ಗೆ ಬೇಸರ

  ಶಶಿ-ಧನರಾಜ್ ಗೆ ಬೇಸರ

  ''ಜೈಲಿಗೆ ಹೋದ ಮೇಲೆ ಜಯಶ್ರೀ ಮಾತನಾಡುತ್ತಿಲ್ಲ. ಕೋಪ ಮಾಡಿಕೊಂಡಿದ್ದಾರೆ. ಬೇರೆಯವರು ಹೋದರೆ ಖುಷಿಯಾಗಿ ಮಾತನಾಡುತ್ತಾರೆ. ನಾವು ಹೋದರೆ ಮಾತನಾಡುವುದಿಲ್ಲ. ಹೇಗಿದ್ದರೂ ಬಂದು ಮಾತನಾಡಿಸುತ್ತಾರೆ ಅಂತ ಆಗಬಾರದು'' ಎಂಬುದು ಶಶಿ ಮತ್ತು ಧನರಾಜ್ ಅಭಿಪ್ರಾಯ.

  ಏನ್ ಆಶ್ಚರ್ಯ: 'ಜೀವದ ಗೆಳತಿ' ಜಯಶ್ರೀಯನ್ನೇ ನಾಮಿನೇಟ್ ಮಾಡಿದ ಕವಿತಾ.!

  ಜಯಶ್ರೀ ವಾದ ಏನು.?

  ಜಯಶ್ರೀ ವಾದ ಏನು.?

  ''ಎಲ್ಲರೂ ಓವರ್ ಆಲ್ ಪರ್ಫಾಮೆನ್ಸ್ ನೋಡಬೇಕಿತ್ತು. ಆದ್ರೆ, ಅದಾಗಲಿಲ್ಲ. ನನಗೆ ನನ್ನ ಮೇಲೆ ಬೇಜಾರಾಗಿದೆ. ಜೈಲಿಗೆ ಬರುವುದು ಪ್ರಾಬ್ಲಂ ಅಲ್ಲ. ಆದ್ರೆ, ಪರ್ಫಾರ್ಮ್ ಮಾಡಿಲ್ಲ ಅಂತ ಹೇಳುವುದು ತಪ್ಪು'' ಎಂಬುದು ಜಯಶ್ರೀ ವಾದ.

  ಶಶಿ ಮೇಲೆ ಕವಿತಾಗೆ ಸಿಟ್ಟು: 'ಬಿಗ್ ಬಾಸ್' ಮನೆಯಲ್ಲಿ ಹೀಗೂ ಉಂಟು.!

  ಜಯಶ್ರೀಯನ್ನ ನಾಮಿನೇಟ್ ಮಾಡಿದ ಕವಿತಾ.!

  ಜಯಶ್ರೀಯನ್ನ ನಾಮಿನೇಟ್ ಮಾಡಿದ ಕವಿತಾ.!

  ಈ ವಾರದ ಅಚ್ಚರಿ ಅಂದ್ರೆ ಇದೇ.. ಒಂದೇ ಗ್ರೂಪ್ ನಲ್ಲಿ ಇದ್ದರೂ, ಜೀವದ ಗೆಳತಿ ಅಂತ ಕರೆದರೂ, ಜಯಶ್ರೀಯನ್ನೇ ಕವಿತಾ ನಾಮಿನೇಟ್ ಮಾಡಿದ್ದರು. ಈ ವಿಚಾರ ಜಯಶ್ರೀಗೆ ಇನ್ನೂ ಗೊತ್ತಾಗಿಲ್ಲ. ಆದ್ರೆ, ಈ ಸೀಕ್ರೆಟ್ ಶಶಿ ಮತ್ತು ಧನರಾಜ್ ಮುಂದೆ ಲೀಕ್ ಆಗಿದೆ.

  ಒಂದು ವೇಳೆ ಗೊತ್ತಾಗಿಬಿಟ್ಟರೆ...

  ಒಂದು ವೇಳೆ ಗೊತ್ತಾಗಿಬಿಟ್ಟರೆ...

  ''ನಾಮಿನೇಷನ್ ವಿಷಯ ಗೊತ್ತಾಗಿಬಿಟ್ಟರೆ, ಜಯಶ್ರೀ ತುಂಬಾ ಬೇಸರ ಮಾಡಿಕೊಳ್ಳುತ್ತಾರೆ. ಗ್ರೂಪ್ ನಲ್ಲಿದ್ದ ಮಾತ್ರಕ್ಕೆ ನಾಮಿನೇಟ್ ಮಾಡಬಾರದು, ಸಪೋರ್ಟ್ ಮಾಡಲೇಬೇಕು ಅಂದ್ರೆ ತಪ್ಪಾಗುತ್ತೆ. ಫೀಲ್ ಆಗುತ್ತೆ ನಿಜ. ಆದ್ರೆ, ಆಟದ ರೂಲ್ಸ್ ಫಾಲೋ ಮಾಡಬೇಕು'' ಎಂದಿದ್ದಾರೆ ಧನರಾಜ್.

  ಭಿನ್ನಮತ ಯಾವಾಗ ಸ್ಫೋಟಗೊಳ್ಳುತ್ತೋ.?

  ಭಿನ್ನಮತ ಯಾವಾಗ ಸ್ಫೋಟಗೊಳ್ಳುತ್ತೋ.?

  ಈ ನಾಲ್ವರ ನಡುವಿನ ಭಿನ್ನಮತ ಯಾವಾಗ ಸ್ಫೋಟಗೊಳ್ಳುತ್ತದೋ, ಗೊತ್ತಿಲ್ಲ. ಆದ್ರೆ, ಗ್ರೂಪ್ ನಲ್ಲಿ ಮಾತ್ರ ಡೈನಾಮಿಕ್ಸ್ ಚೇಂಜ್ ಆಗಿದೆ.

  English summary
  Bigg Boss Kannada 6: Day 60: All is not well with Remote Gang.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X