For Quick Alerts
  ALLOW NOTIFICATIONS  
  For Daily Alerts

  ಏನು ಮಾಡೋದು ಅಂತ ಗೊತ್ತಾಗದೆ, ರಾಕೇಶ್-ಅಕ್ಷತಾ ಜಗಳ ಆಡುತ್ತಿದ್ದಾರೆ.!

  |

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಐವತ್ತು ದಿನಗಳ ಕಾಲ ಅತ್ಯಂತ ಆತ್ಮೀಯವಾಗಿ ಕಾಣಿಸಿಕೊಂಡವರು ಎಂ.ಜೆ.ರಾಕೇಶ್ ಮತ್ತು ಅಕ್ಷತಾ ಪಾಂಡವಪುರ. 'ನಾವು ಜಸ್ಟ್ ಫ್ರೆಂಡ್ಸ್' ಅಂತ ಹೇಳುತ್ತಾ ಅತಿ ಎನಿಸುವಷ್ಟು ಆಪ್ತವಾಗಿ ಇದ್ದ ಇವರಿಬ್ಬರು ಇದೀಗ ದೂರಾಗಿದ್ದಾರೆ.

  ತಾಯಿ ಕಡೆಯಿಂದ ಕಟ್ಟುನಿಟ್ಟಿನ ಆದೇಶ ಬಂದ ಮೇಲೆ ರಾಕೇಶ್ ರಿಂದ ಅಕ್ಷತಾ ದೂರ ಸರಿದಿದ್ದಾರೆ. ಅಕ್ಷತಾ ಮತ್ತು ರಾಕೇಶ್ ನಡುವೆ ಗ್ಯಾಪ್ ಹೆಚ್ಚಾದಂತೆ ಮನಸ್ತಾಪ, ಭಿನ್ನಾಭಿಪ್ರಾಯ, ಜಗಳ ಕೂಡ ಜಾಸ್ತಿ ಆಗುತ್ತಿದೆ.

  ಮುಂಚಿನಷ್ಟು ಆತ್ಮೀಯತೆ ಈಗ ಇಲ್ಲದೇ ಇರುವ ಕಾರಣ, ಏನು ಮಾಡಬೇಕು ಅಂತ ಗೊತ್ತಾಗದೆ ಅಕ್ಷತಾ ಮತ್ತು ರಾಕೇಶ್ ಜಗಳ ಮಾಡುತ್ತಿದ್ದಾರಾ.? ಈ ಅನುಮಾನ 'ಬಿಗ್ ಬಾಸ್' ಸ್ಪರ್ಧಿಗಳಿಗೂ ಬಂದಿದೆ, ವೀಕ್ಷಕರಿಗೂ ಬಂದಿದೆ. ಹೀಗಾಗಿ, 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಈ ಕುರಿತು ಸುದೀಪ್ ಪ್ರಶ್ನಿಸಿದರು. ಮುಂದೆ ಓದಿರಿ...

  'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆ

  'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆ

  ವಾರದ ಕಥೆಯನ್ನು ಇಟ್ಟುಕೊಂಡು ಪಂಚಾಯತಿ ನಡೆಸಿದ ಬಳಿಕ 'ಎಸ್/ನೋ' ಸುತ್ತಿಗೆ ಸುದೀಪ್ ಚಾಲನೆ ನೀಡಿದರು. ''ರಾಕೇಶ್ ಮತ್ತು ಅಕ್ಷತಾ ಈಗೇನು ಮಾಡಬೇಕು ಅಂತ ಗೊತ್ತಾಗದೆ, ಜಗಳ ಮಾಡಲು ಆರಂಭಿಸಿದ್ದಾರೆ'' ಎಂಬ ಹೇಳಿಕೆಯನ್ನು ಸುದೀಪ್ ನೀಡಿದರು. ಇದಕ್ಕೆ ಅಕ್ಷತಾ ಮತ್ತು ರಾಕೇಶ್ 'ನೋ' ಎಂದರೆ ಆಂಡಿ 'ಎಸ್' ಎಂದು ಉತ್ತರಿಸಿದರು.

  ಅಕ್ಷತಾ ವಿಚಾರದಲ್ಲಿ ರಾಕೇಶ್ ಮುಖವಾಡ ಕಳಚಿದ ಸುದೀಪ್.!

  ಆಂಡಿ ಕೊಟ್ಟ ಕಾರಣ ಏನು.?

  ಆಂಡಿ ಕೊಟ್ಟ ಕಾರಣ ಏನು.?

  ''ನವೀನ್ ಬಳಿ ಅಕ್ಷತಾ ಬಗ್ಗೆ ರಾಕೇಶ್ ಬೈಯ್ಯುತ್ತಿರುತ್ತಾನೆ. ನನ್ನ ಬಳಿ ರಾಕೇಶ್ ಬಗ್ಗೆ ಅಕ್ಷತಾ ಮಾತನಾಡುತ್ತಿರುತ್ತಾಳೆ. ಮಧ್ಯದಲ್ಲಿ ನಾವು ಅಯ್ಯೋ ಪಾಪ ಎನ್ನುವಷ್ಟರಲ್ಲಿ ರಾಕೇಶ್-ಅಕ್ಷತಾ ಇಬ್ಬರೂ ಒಟ್ಟಿಗೆ ಕೂತಿರುತ್ತಾರೆ. ಮೊದಲ ಐವತ್ತು ದಿನ ಅಂಟಿಕೊಂಡು ಹೋಗುವುದು ಸ್ಟ್ರಾಟೆಜಿ ಆಗಿತ್ತು. ಆಮೇಲೆ ದೂರ ಆದರು. ಎಲ್ಲರೂ ಇಗ್ನೋರ್ ಮಾಡಲು ಶುರು ಮಾಡಿದಾಗ, ಇಬ್ಬರದ್ದೂ ಬೇರೆ ಟ್ರ್ಯಾಕ್ ಆರಂಭಿಸಿದರು. ಒಟ್ನಲ್ಲಿ ಇವರಿಬ್ಬರು ಕಾಣಿಸಿಕೊಳ್ಳಬೇಕು ಅಷ್ಟೇ'' ಎಂಬುದು ಆಂಡಿ ಲೆಕ್ಕಾಚಾರ.

  ಅಕ್ಷತಾ ಮುಂದೆ ಹೀಗೊಂದು ಕಲರ್ ಕಾಗೆ ಹಾರಿಸಿದ್ದ ರಾಕೇಶ್.!

  ರಾಕೇಶ್ ಹೇಳಿದ್ದೇನು.?

  ರಾಕೇಶ್ ಹೇಳಿದ್ದೇನು.?

  ''ನನಗೆ ಇದು ಜರ್ನಿ. ಐವತ್ತು ದಿನ ನಮ್ಮ ನಡುವೆ ಇದ್ದ ಬಾಂಡಿಂಗ್ ಗೆ ಗೌರವ ಕೊಟ್ಟು ನಾವಿಬ್ಬರು ಚೆನ್ನಾಗಿದ್ವಿ. ಆದ್ರೆ ಅದನ್ನ ಸರಿಯಾಗಿ ಸ್ವೀಕರಿಸಲಿಲ್ಲ. ಹೀಗಾಗಿ ದೂರ ಆದ್ವಿ. ನಾನು ಕ್ಯಾಪ್ಟನ್ ಆಗಿದ್ದಾಗ, ಅಕ್ಷತಾನ ಸೇಫ್ ಮಾಡಲಿಲ್ಲ. ಆಗ ಜಗಳ ಆಯ್ತು. ಅದಕ್ಕೆ ಕಾರಣ ಕೊಟ್ಟಿರುವೆ. ಅವತ್ತಿಂದ ಪ್ರತಿ ದಿನ ಒಂದಲ್ಲಾ ಒಂದು ಕಾರಣಕ್ಕೆ ಅಕ್ಷತಾ ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ'' ಅಂತಾರೆ ರಾಕೇಶ್.

  ಅಕ್ಷತಾ-ರಾಕೇಶ್ ನಡುವೆ ಜೋರು ಜಟಾಪಟಿ: ಉರಿಯುತ್ತಿದೆ ವೈಮನಸ್ಯದ ಬೆಂಕಿ.!

  ಅಕ್ಷತಾ ಏನಂತಾರೆ.?

  ಅಕ್ಷತಾ ಏನಂತಾರೆ.?

  ''ನಾನು ಏನೇ ಮಾಡಿದರೂ, ರಾಕೇಶ್ ಗೆ ಅಟ್ಯಾಕ್ ಅಂತ ಅನಿಸುತ್ತಿದೆ. ಅವನ ಜೊತೆ ನಾನು ಮೊದಲಿನ ಹಾಗೆ ಇಲ್ಲ ಎನ್ನುವುದೇ ಇದಕ್ಕೆ ಕಾರಣ. ನಾಮಿನೇಷನ್ ನಲ್ಲಿ ನನ್ನನ್ನ ಸೇಫ್ ಮಾಡದೇ ಇರುವುದಕ್ಕೆ ನನಗೆ ಬೇಸರ ಆಗಿದೆ ನಿಜ. ಆದ್ರೆ ನಾನು ಯಾರಿಗೂ ಹಿಂಸೆ ಮಾಡಿಲ್ಲ. ಜಗಳ ಮಾಡಬೇಕು ಅಂತ ಮಾಡುತ್ತಿಲ್ಲ. ರಾಕೇಶ್ ರಿಂದಲೇ ಜಗಳ ಆಗುತ್ತಿರುವುದು. ಆದರೂ ಕೂಡ ಕೂತು ಮಾತನಾಡೋಣ ಅಂತ ಹೇಳ್ತೀನಿ. ಕೂತು ಮಾತನಾಡಿ ಬಗೆಹರಿಸಲು ರಾಕೇಶ್ ರೆಡಿ ಇಲ್ಲ. ಅವನ ಫೋಕಸ್ ಈಗ ಚೇಂಜ್ ಆಗಿದೆ'' ಎನ್ನುತ್ತಾರೆ ಅಕ್ಷತಾ.

  ಮುರಿದು ಬಿದ್ದ 'ಗೆಳೆತನ': ರಾಕೇಶ್-ಅಕ್ಷತಾ ನಡುವೆ ಈಗ ಬರೀ ಜಗಳ.!

  English summary
  Bigg Boss Kannada 6: Day 76: Is this the reason behind Rakesh-Akshata's fight.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X