For Quick Alerts
  ALLOW NOTIFICATIONS  
  For Daily Alerts

  ರಾಕೇಶ್ ಬಗ್ಗೆ ಅಕ್ಷತಾ ಪಾಂಡವಪುರ ತಾಯಿಗೆ ಕೆಂಡದಷ್ಟು ಕೋಪ.?

  |
  Bigg Boss Kannada Season 6:ರಾಕೇಶ್ ಬಗ್ಗೆ ಅಕ್ಷತಾ ಪಾಂಡವಪುರ ತಾಯಿಗೆ ಕೆಂಡದಷ್ಟು ಕೋಪ.? | FILMIBEAT KANNADA

  ''ರಾಕೇಶ್ ರಿಂದ ದೂರ ಇರು'' - ಈ ಒಂದು ಸಂದೇಶ 'ಬಿಗ್ ಬಾಸ್' ಸ್ಪರ್ಧಿ ಅಕ್ಷತಾ ಪಾಂಡವಪುರಗೆ ಸಿಕ್ಕಿದ್ದು ಆಕೆಯ ತಾಯಿಯಿಂದಲೇ.! ಅಮ್ಮನಿಂದ ಈ ಕಟ್ಟುನಿಟ್ಟಿನ ಆದೇಶ ಬಂದ್ಮೇಲೆ, ಅಕ್ಷತಾ ಮತ್ತು ರಾಕೇಶ್ ನಡುವೆ ಕಂದಕ ಸೃಷ್ಟಿಯಾಯ್ತು. ಆಮೇಲೆ ಮೆಗಾ ಸೀರಿಯಲ್ ತರಹ ದಿನಕ್ಕೊಂದು ಜಗಳ ನಡೆಯುತ್ತಿತ್ತು.

  ಅಕ್ಷತಾ ಮತ್ತು ರಾಕೇಶ್ ನಡುವೆ ಏನುಂಟು-ಏನಿಲ್ಲ... ನಮಗೆ ಗೊತ್ತಿಲ್ಲ. ಆದ್ರೆ, ರಾಕೇಶ್ ಕಂಡ್ರೆ ಮಾತ್ರ ಅಕ್ಷತಾ ತಾಯಿಗೆ ಆಗ್ಬರಲ್ಲ ಎಂಬುದು ನಿನ್ನೆಯ ಸಂಚಿಕೆಯಲ್ಲಿ ಸ್ಪಷ್ಟವಾಗಿ ಗೋಚರಿಸಿತು.

  'ಬಿಗ್ ಬಾಸ್' ಮನೆಯೊಳಗೆ ಅಕ್ಷತಾ ತಾಯಿ ಎಂಟ್ರಿಕೊಟ್ಟಾಗ, ರಾಕೇಶ್ ರನ್ನ ಅವಾಯ್ಡ್ ಮಾಡಿದರು. ರಾಕೇಶ್ ಜೊತೆಗೆ ಅಕ್ಷತಾ ತಾಯಿ ಮುಖ ಕೊಟ್ಟು ಮಾತನಾಡಲಿಲ್ಲ. ''ಬರೀ ರಾಕೇಶ್ ಹಿಂದೆ ಇರಬೇಡ. ಚೆನ್ನಾಗಿ ಆಟ ಆಡು'' ಅಂತ ಅಕ್ಷತಾಗೆ ತಾಯಿ ಅಂಬುಜಾಕ್ಷಿ ಕಿವಿಮಾತು ಹೇಳಿದರು. ಮುಂದೆ ಓದಿರಿ...

  'ಬಿಗ್ ಬಾಸ್' ಮನೆಯಲ್ಲಿ ಫ್ಯಾಮಿಲಿ ವೀಕ್

  'ಬಿಗ್ ಬಾಸ್' ಮನೆಯಲ್ಲಿ ಫ್ಯಾಮಿಲಿ ವೀಕ್

  'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸದ್ಯ ಫ್ಯಾಮಿಲಿ ವೀಕ್ ಚಾಲ್ತಿಯಲ್ಲಿದೆ. ಸ್ಪರ್ಧಿಗಳ ಕುಟುಂಬದವರು 'ಬಿಗ್ ಬಾಸ್' ಮನೆಯೊಳಗೆ ಒಬ್ಬೊಬ್ಬರಾಗಿ ಎಂಟ್ರಿಕೊಡುತ್ತಿದ್ದಾರೆ. ಇದರೊಂದಿಗೆ 'ರಿಮೋಟ್ ಕಂಟ್ರೋಲ್' ಟಾಸ್ಕ್ ಕೂಡ ನಡೆಯುತ್ತಿದೆ. ಇದರ ಅನುಸಾರ, ಅಕ್ಷತಾ ತಾಯಿ ಅಂಬುಜಾಕ್ಷಿ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟರು.

  ಅಕ್ಷತಾ ವಿಚಾರದಲ್ಲಿ ರಾಕೇಶ್ ಮುಖವಾಡ ಕಳಚಿದ ಸುದೀಪ್.!

  ರಾಕೇಶ್ ಮುಖವನ್ನ ನೋಡಲಿಲ್ಲ.!

  ರಾಕೇಶ್ ಮುಖವನ್ನ ನೋಡಲಿಲ್ಲ.!

  ಎಲ್ಲ ಸ್ಪರ್ಧಿಗಳನ್ನೂ ಅಕ್ಷತಾ ತಾಯಿ ಅಂಬುಜಾಕ್ಷಿ ಆತ್ಮೀಯವಾಗಿ ಮಾತನಾಡಿಸಿದರು. ಆದ್ರೆ, ರಾಕೇಶ್ ಮುಖವನ್ನು ನೋಡಲು ಮಾತ್ರ ಅವರು ಇಷ್ಟ ಪಡಲಿಲ್ಲ. ರಾಕೇಶ್ ರನ್ನ ಅಕ್ಷತಾ ಪರಿಚಯ ಮಾಡಿಸಿದಾಗ, ಅವರೊಂದಿಗೆ ಮುಖ ಕೊಟ್ಟು ಅಂಬುಜಾಕ್ಷಿ ಮಾತನಾಡಲಿಲ್ಲ.

  ಇನ್ನಾದರೂ ಅಕ್ಷತಾ ಪಾಂಡವಪುರ ಎಚ್ಚೆತ್ತುಕೊಂಡರೆ ಆಕೆಗೆ ಒಳಿತು.!

  ಮಗಳಿಗೆ ಕಿವಿಮಾತು

  ಮಗಳಿಗೆ ಕಿವಿಮಾತು

  ''ಗೆದ್ದು ಬಾ.. ಚೆನ್ನಾಗಿ ಆಟ ಆಡು.. ಬರೀ ರಾಕೇಶ್ ಹಿಂದೆ ಇರಬೇಡ.. ಯಾರ ಜೊತೆಗೂ ಜಗಳ ಆಡಬೇಡ.. ಕೋಪ ಮಾಡಿಕೊಳ್ಳಬೇಡ'' ಎಂದು ಮಗಳು ಅಕ್ಷತಾಗೆ ತಾಯಿ ಅಂಬುಜಾಕ್ಷಿ ಸಲಹೆ ನೀಡಿದರು.

  ಎಂ.ಜೆ.ರಾಕೇಶ್ ಜೊತೆ ಸೇರಿ ಅಕ್ಷತಾ ಪಾಂಡವಪುರ ಫೂಲ್ ಆಗುತ್ತಿದ್ದಾರೆ.!

  ರಾಕೇಶ್ ಜೊತೆಗೆ ಮಾತನಾಡಲು ಇಷ್ಟ ಇರಲಿಲ್ಲ.!

  ರಾಕೇಶ್ ಜೊತೆಗೆ ಮಾತನಾಡಲು ಇಷ್ಟ ಇರಲಿಲ್ಲ.!

  ರಾಕೇಶ್ ಜೊತೆಗೆ ಮಾತನಾಡಲು ಅಂಬುಜಾಕ್ಷಿ ಅವರಿಗೆ ಇಷ್ಟ ಇರಲಿಲ್ಲ. ಆದರೂ, ''ಎಲ್ಲರನ್ನೂ ಮಾತನಾಡಿಸು. ಇಲ್ಲಾಂದ್ರೆ, ಬೇಜಾರು ಮಾಡಿಕೊಳ್ಳುತ್ತಾನೆ'' ಅಂತ ತಾಯಿಗೆ ಅಕ್ಷತಾ ಹೇಳಿದರು.

  ಏನು ಮಾಡೋದು ಅಂತ ಗೊತ್ತಾಗದೆ, ರಾಕೇಶ್-ಅಕ್ಷತಾ ಜಗಳ ಆಡುತ್ತಿದ್ದಾರೆ.!

  ಮುಂದೆ ಬಂದ ರಾಕೇಶ್

  ಮುಂದೆ ಬಂದ ರಾಕೇಶ್

  ''ನನ್ನ ಮೇಲೆ ಕೋಪ ಇದ್ಯಾ..?'' ಎನ್ನುತ್ತಾ ಅಕ್ಷತಾ ತಾಯಿಯನ್ನ ಮಾತನಾಡಿಸಲು ರಾಕೇಶ್ ಮುಂದಾದರು. ಆಗ, ''ಇಲ್ಲ'' ಎಂದರು. ''ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ'' ಎಂದು ರಾಕೇಶ್ ಕೇಳಿಕೊಂಡಾಗ, ''ನೀನು ನನ್ನ ಮಗನ ಥರ'' ಅಂತ ಅಂಬುಜಾಕ್ಷಿ ಹೇಳಿದರು.

  ಮಟನ್ ಚಾಪ್ಸ್ ತಯಾರು ಮಾಡಿದ ಅಕ್ಷತಾ ತಾಯಿ

  ಮಟನ್ ಚಾಪ್ಸ್ ತಯಾರು ಮಾಡಿದ ಅಕ್ಷತಾ ತಾಯಿ

  'ಬಿಗ್ ಬಾಸ್' ಮನೆಯ ಸ್ಪರ್ಧಿಗಳಿಗೆಲ್ಲಾ ಅಕ್ಷತಾ ತಾಯಿ ಮಟನ್ ಚಾಪ್ಸ್ ತಯಾರು ಮಾಡಿದರು. ಅಕ್ಷತಾ ತಾಯಿ ಅಂಬುಜಾಕ್ಷಿ ಅವರಿಗೆ ಆಂಡಿ, ಧನರಾಜ್ ಮತ್ತು ನವೀನ್ ಫೇವರಿಟ್ ಸ್ಪರ್ಧಿಗಳಂತೆ.!

  ಪರಸ್ಪರ ಕ್ಷಮೆಯಾಚಿಸಿದ ಅಕ್ಷತಾ-ರಾಕೇಶ್

  ಪರಸ್ಪರ ಕ್ಷಮೆಯಾಚಿಸಿದ ಅಕ್ಷತಾ-ರಾಕೇಶ್

  ಅಮ್ಮ ಅಂಬುಜಾಕ್ಷಿ ಬಂದು ಹೋದ್ಮೇಲೆ, ರಾಕೇಶ್ ಬಳಿ ಅಕ್ಷತಾ ಕ್ಷಮೆ ಕೇಳಿದರು. ಹಾಗೇ, ರಾಕೇಶ್ ಕೂಡ ಕ್ಷಮೆಯಾಚಿಸಿದರು. ಇನ್ಮುಂದೆ ಇವರಿಬ್ಬರ ನಡುವಿನ ಈಕ್ವೇಶನ್ ಯಾವ ರೀತಿ ಇರುತ್ತೋ, ನೋಡಬೇಕು.

  English summary
  Bigg Boss Kannada 6: Day 79: Akshata's mother avoids Rakesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X