For Quick Alerts
  ALLOW NOTIFICATIONS  
  For Daily Alerts

  ಅಕ್ಷತಾಗೆ ರಾಕೇಶ್ 'ಥರ್ಡ್ ಕ್ಲಾಸ್' ಎಂದಿದ್ದು ಸರಿನಾ.?

  |

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ 'ವಿಚಿತ್ರ' ಅಂತ ಅನಿಸೋದು ಅಕ್ಷತಾ ಮತ್ತು ರಾಕೇಶ್ ನಡುವಿನ ಬಾಂಧವ್ಯ. ಯಾಕಂದ್ರೆ, ಇವರಿಬ್ಬರು ಅದ್ಯಾವಾಗ, ಯಾಕೆ ಜಗಳ ಆಡುತ್ತಾರೋ.? ಹೇಗೆ ರಾಜಿ ಮಾಡಿಕೊಳ್ತಾರೋ.? ಎಂಬುದೇ ಗೊತ್ತಾಗಲ್ಲ.

  ಒಂದೊಂದು ಬಾರಿ ಒಂದೊಂದು ರೀತಿ ಇದ್ದು, ಒಂದೊಂದು ಹೇಳಿಕೆ ನೀಡುವ ಇವಬ್ಬರದ್ದು ಗೇಮ್ ಪ್ಲಾನೋ, ಸ್ಟ್ರಾಟೆಜಿನೋ... ಅರ್ಥವಾಗದು. ಇತ್ತೀಚೆಗೆ ನಡೆದ ಜಗಳವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ...

  ವಿನಾಕಾರಣ ''ಲೋ ಮಗನೇ ಕತ್ತಿನ ಪಟ್ಟಿ ಹಿಡಿದು ಕಪಾಳಕ್ಕೆ ಹೊಡೆಯುವೆ'' ಅಂತ ಅಕ್ಷತಾ ಹೇಳಿದರೆ, ಆಕೆಗೆ ''ಡೌನ್ ಮಾರ್ಕೆಟ್, ಥರ್ಡ್ ಕ್ಲಾಸ್'' ಅಂತೆಲ್ಲಾ ರಾಕೇಶ್ ಬೈದಿದ್ದರು.

  ಇವರಿಬ್ಬರ ಈ ಜಗಳ ಡ್ರಾಮಾವನ್ನ ನೋಡಿ ನೋಡಿ ಬೇಸೆತ್ತ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಏನಂದರು ಗೊತ್ತಾ.?

  ಇದೆಲ್ಲ ಬೇಕಾ.?

  ಇದೆಲ್ಲ ಬೇಕಾ.?

  ''ಡೌನ್ ಮಾರ್ಕೆಟ್, ಥರ್ಡ್ ಕ್ಲಾಸ್ ಅಂತೆಲ್ಲಾ ಅಕ್ಷತಾಗೆ ಹೇಳುತ್ತೀರಾ. ಇದೆಲ್ಲ ಬೇಕಾ.? ಎರಡು ಊರಿನ ಮಧ್ಯೆ ಜಗಳ ಆಗುತ್ತಿದೆ ಅಂದ್ರೆ, ಒಬ್ಬರು ಕತ್ತಿಯನ್ನು ಕೆಳಗೆ ಬಿಟ್ಟರೆ ಮಾತ್ರ ನೆಮ್ಮದಿ. ಇಲ್ಲಾಂದ್ರೆ ಹೆಣಗಳು ಉರುಳುತ್ತವೆ'' ಎಂದು ರಾಕೇಶ್ ಗೆ ಸುದೀಪ್ ಬುದ್ಧಿವಾದ ಹೇಳಿದರು.

  ಎಂ.ಜೆ.ರಾಕೇಶ್ ಜೊತೆ ಸೇರಿ ಅಕ್ಷತಾ ಪಾಂಡವಪುರ ಫೂಲ್ ಆಗುತ್ತಿದ್ದಾರೆ.!

  ಯಾಕೆ ಬೇಕಿತ್ತು.?

  ಯಾಕೆ ಬೇಕಿತ್ತು.?

  ''ನಿಮಗೆ ಕೆಲವು ಇಷ್ಟ ಆಗಲಿಲ್ಲ ಅಂದ್ರೆ, 'ಲೋ ಮಗನೇ.. ಕತ್ತಿನ ಪಟ್ಟಿ ಹಿಡಿದು ಕಪಾಳಕ್ಕೆ ಹೊಡೆಯುವೆ ಅಂತೆಲ್ಲಾ ಮಾತನಾಡುತ್ತೀರಾ. ಆದ್ರೆ, ಅಲ್ಲಿ ಜಗಳವೇ ಇರಲ್ಲ. ಹಳೇ ಸಿಟ್ಟನ್ನ ಇಟ್ಟುಕೊಂಡು ಏನೇನೋ ಮಾತಾಡ್ತೀರಾ. ಯಾರಾದರೂ ನಿಮಗೆ ಅದೇ ತರಹ ಮಾತನಾಡಿದರೆ.? ಇದು ಯಾಕೆ ಬೇಕಿತ್ತು.?'' ಎಂದು ಅಕ್ಷತಾಗೆ ಸುದೀಪ್ ಪ್ರಶ್ನಿಸಿದರು.

  ರಾಕೇಶ್ ಬಗ್ಗೆ ಅಕ್ಷತಾ ಪಾಂಡವಪುರ ತಾಯಿಗೆ ಕೆಂಡದಷ್ಟು ಕೋಪ.?

  ಅರ್ಥ ಮಾಡಿಕೊಳ್ಳುವುದು ಕಷ್ಟ

  ಅರ್ಥ ಮಾಡಿಕೊಳ್ಳುವುದು ಕಷ್ಟ

  ''ಅಕ್ಷತಾ ಮತ್ತು ರಾಕೇಶ್ ನಡುವೆ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಅರ್ಥ ಆಗಬೇಕು ಅಂತಲೂ ಅಲ್ಲ. ಆದ್ರೆ ಜೋಪಾನ. ಜಗಳ ಯಾಕೆ ಆಗುತ್ತೆ ಅಂತ ಗೊತ್ತಾಗಲ್ಲ. ಆದ್ರೆ, ಜಗಳ ಆದ್ಮೇಲೆ ರಾಜಿ ಆಗುತ್ತೆ. ರಾಜಿ ಆದ್ಮೇಲೆ ಮಿಕ್ಕಿದ್ದೆಲ್ಲ ಸಣ್ಣದಾಗಿ ಕಾಣುತ್ತದೆ'' ಎಂದು ಸುದೀಪ್ ಹೇಳಿದಾಗ, ''ಆ ತರಹ ಮಾತನಾಡಿದ್ದಕ್ಕೆ ಕ್ಷಮೆ ಕೇಳಿದ್ದೇನೆ'' ಅಂತ ಅಕ್ಷತಾ ಹೇಳಿದರು.

  ಏನು ಮಾಡೋದು ಅಂತ ಗೊತ್ತಾಗದೆ, ರಾಕೇಶ್-ಅಕ್ಷತಾ ಜಗಳ ಆಡುತ್ತಿದ್ದಾರೆ.!

  ಏನು ಪ್ರಾಬ್ಲಂ.?

  ಏನು ಪ್ರಾಬ್ಲಂ.?

  ''ಕ್ಷಮೆ ಕೇಳಿದ್ದೀರಾ. ಆದ್ರೆ, ನಿಮ್ಮಿಬ್ಬರ ನಡುವಿನ ಪ್ರಾಬ್ಲಂ ಏನು.?'' ಎಂದು ಸುದೀಪ್ ಪ್ರಶ್ನಿಸಿದರು. ಅದಕ್ಕೆ, ''ರಾಕೇಶ್ ಗೆ ನಾನು ಈ ಮನೆಯಲ್ಲಿ ಇರುವುದೇ ಪ್ರಾಬ್ಲಂ ಅನ್ಸುತ್ತೆ'' ಅಂತ ಅಕ್ಷತಾ ಹೇಳಿದರು. ಆಗ, ''ನಿಮ್ಮ ಪ್ರಾಬ್ಲಂ ನ ನೀವೇ ಬಗೆಹರಿಸಿಕೊಳ್ಳಿ'' ಎಂದು ನುಡಿದರು ಸುದೀಪ್.

  ಅಕ್ಷತಾ ವಿಚಾರದಲ್ಲಿ ರಾಕೇಶ್ ಮುಖವಾಡ ಕಳಚಿದ ಸುದೀಪ್.!

  English summary
  Bigg Boss Kannada 6: Day 83: Sort out problems amongst yourself says Sudeep to Akshata and Rakesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X