For Quick Alerts
  ALLOW NOTIFICATIONS  
  For Daily Alerts

  ವೀಕ್ಷಕರ ಕೃಪೆಯಿಂದ 'ಜೆಂಟಲ್ ಮ್ಯಾನ್' ಧನರಾಜ್ ಗೆ ಸಿಕ್ಕಿದ್ದು ಮೂರು ಲಕ್ಷ ರೂಪಾಯಿ.!

  |

  'ಬಿಗ್ ಬಾಸ್ ಕನ್ನಡ-6 'ಕಾರ್ಯಕ್ರಮದಲ್ಲಿ ವೀಕ್ಷಕರು ಅತಿ ಹೆಚ್ಚು ಇಷ್ಟ ಪಟ್ಟ ಸ್ಪರ್ಧಿಗಳ ಪೈಕಿ ಧನರಾಜ್ ಕೂಡ ಒಬ್ಬರು. ಟಾಪ್ ಫೈವ್ ಲೆವೆಲ್ ಗೆ ಧನರಾಜ್ ಲಗ್ಗೆ ಹಾಕೇ ಹಾಕುತ್ತಾರೆ ಎಂಬ ನಂಬಿಕೆ ವೀಕ್ಷಕರಿಗೆ ಇತ್ತು. ಆದರೆ ದುರದೃಷ್ಟವಶಾತ್, ಫಿನಾಲೆ ವಾರಕ್ಕೆ ಕಾಲಿಡುವ ಮುಂಚೆಯೇ ಧನರಾಜ್ ಎಲಿಮಿನೇಟ್ ಆದರು. 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಗೆಲ್ಲುವ ಧನರಾಜ್ ಕನಸು ನುಚ್ಚುನೂರಾಯಿತು.

  'ಬಿಗ್ ಬಾಸ್' ಕಾರ್ಯಕ್ರಮ ಗೆಲ್ಲದಿದ್ದರೂ ಧನರಾಜ್ ಮೇಲೆ ವೀಕ್ಷಕರು ಇಟ್ಟಿರುವ ಪ್ರೀತಿ ಮಾತ್ರ ಕೊಂಚ ಕೂಡ ಕಮ್ಮಿ ಆಗಿಲ್ಲ. ಅದಕ್ಕೆ ಸಾಕ್ಷಿ ಧನರಾಜ್ ಸಿಕ್ಕಿರುವ ಮೂರು ಲಕ್ಷ ರೂಪಾಯಿ.!

  ಹೌದು, 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಮುಕ್ತಾಯಗೊಳ್ಳುವ ಒಂದು ವಾರ ಮುನ್ನವೇ ಔಟಾದ ಧನರಾಜ್ ಅವರಿಗೆ ಬಹುಮಾನದ ರೂಪದಲ್ಲಿ ಮೂರು ಲಕ್ಷ ರೂಪಾಯಿ ಸಿಕ್ಕಿದೆ. ಅದು ಹೇಗೆ ಅಂತೀರಾ... ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  'ಬಿಗ್ ಬಾಸ್' ಮನೆಯಲ್ಲಿ ನಡೆದಿತ್ತು ವಿಶಿಷ್ಟ ಸ್ಪರ್ಧೆ

  'ಬಿಗ್ ಬಾಸ್' ಮನೆಯಲ್ಲಿ ನಡೆದಿತ್ತು ವಿಶಿಷ್ಟ ಸ್ಪರ್ಧೆ

  'ಬಿಗ್ ಬಾಸ್' ಮನೆಯಲ್ಲಿ 91 ನೇ ದಿನ ಇಂಡಿಯಾ ಗೇಟ್ ಕ್ಲಾಸಿಕ್ ಬಾಸ್ಮತಿ ರೈಸ್ ಕಡೆಯಿಂದ ಒಂದು ವಿಶಿಷ್ಟ ಸ್ಪರ್ಧೆ ಆಯೋಜಿಸಲಾಗಿತ್ತು. ಇದರ ಅನುಸಾರ ಧನರಾಜ್, ಆಂಡ್ರೂ ಮತ್ತು ನವೀನ್ ಬಾಸ್ಮತಿ ರೈಸ್ ಬಳಸಿ 3 ಖಾದ್ಯಗಳನ್ನು ತಯಾರಿಸಬೇಕಿತ್ತು. 3 ಖಾದ್ಯಗಳ ಪೈಕಿ ಯಾವುದು ಹೆಚ್ಚು ರುಚಿಕರವಾಗಿರುತ್ತದೋ, ಅವರಿಗೆ ಇಂಡಿಯಾ ಗೇಟ್ ಕ್ಲಾಸಿಕ್ ಬಾಸ್ಮತಿ ರೈಸ್ ವತಿಯಿಂದ ಮೂರು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.

  ಕಮರಿದ ಧನರಾಜ್ ಕನಸು: ಬೆಂಕಿಗೆ ಆಹುತಿಯಾದ ಧನರಾಜ್ ಫೋಟೋಗಳು.!

  ಸುದೀಪ್ ತೀರ್ಪು ನೀಡಬೇಕಿತ್ತು

  ಸುದೀಪ್ ತೀರ್ಪು ನೀಡಬೇಕಿತ್ತು

  ಇಂಡಿಯಾ ಗೇಟ್ ಕ್ಲಾಸಿಕ್ ಬಾಸ್ಮತಿ ರೈಸ್ ಬಳಸಿ ಧನರಾಜ್, ಆಂಡ್ರೂ ಮತ್ತು ನವೀನ್... ಹೈದರಾಬಾದಿ ಬಿರಿಯಾನಿ, ಕಾಶ್ಮೀರಿ ಪಲಾವ್ ಮತ್ತು ಬಾಸ್ಮತಿ ರೈಸ್ ಪಿಲಾಫ್ ತಯಾರಿಸಬೇಕಿತ್ತು. ಈ ಮೂರು ಖಾದ್ಯಗಳ ಪೈಕಿ ಯಾವುದು ಬೆಸ್ಟ್ ಎಂಬುದನ್ನು ಸುದೀಪ್ ನಿರ್ಧರಿಸಬೇಕಿತ್ತು. ಆದ್ರೆ 3 ಖಾದ್ಯಗಳ ರುಚಿ ಚೆನ್ನಾಗಿತ್ತು ಎಂದ ಸುದೀಪ್ ಯಾವುದೇ ತೀರ್ಮಾನ ತೆಗೆದುಕೊಳ್ಳಲಿಲ್ಲ.

  ಒಳ್ಳೆಯವರನ್ನು ಹೊರಗೆ ತಳ್ಳುವ 'ಡಬ್ಬಾ' ಬಿಗ್ ಬಾಸ್ ಗೆ ಮಹಾ ಮಂಗಳಾರತಿ ಎತ್ತಿದ ವೀಕ್ಷಕರು.!

  'ವಿಜೇತ'ರ ತೀರ್ಮಾನ ವೀಕ್ಷಕರ ಹೆಗಲಿಗೆ.!

  'ವಿಜೇತ'ರ ತೀರ್ಮಾನ ವೀಕ್ಷಕರ ಹೆಗಲಿಗೆ.!

  'ಬಿಗ್ ಬಾಸ್' ಸ್ಪರ್ಧಿಗಳು ತಯಾರಿಸಿದ 3 ಖಾದ್ಯಗಳನ್ನು ಕಿಚ್ಚ ಸುದೀಪ್ ಮೆಚ್ಚಿದ್ದರಿಂದ ವಿಜೇತರನ್ನು ಆಯ್ಕೆ ಮಾಡುವ ಅಧಿಕಾರವನ್ನು 'ಬಿಗ್ ಬಾಸ್' ವೀಕ್ಷಕರಿಗೆ ವರ್ಗಾಯಿಸಿದರು. ಸೋಷಿಯಲ್ ಮೀಡಿಯಾದಲ್ಲಿ ಯಾವ ಖಾದ್ಯಕ್ಕೆ ವೀಕ್ಷಕರಿಂದ ಹೆಚ್ಚು ಮೆಚ್ಚುಗೆ ವ್ಯಕ್ತವಾಗುತ್ತದೋ, ಅದನ್ನು ತಯಾರಿಸಿದವರು ವಿಜೇತರಾಗಿದ್ದಾರೆ ಎಂದು 'ಬಿಗ್ ಬಾಸ್' ಘೋಷಿಸಿದ್ದರು.

  'ಬಿಗ್ ಬಾಸ್' ಮನೆಯಿಂದ ಧನರಾಜ್ ಹೊರಬಂದಿದ್ದಕ್ಕೆ ಪ್ರಥಮ್ ಬೇಸರ.!

  ಧನರಾಜ್ ಮಾಡಿದ್ದ ಅಡುಗೆಗೆ ಮೆಚ್ಚುಗೆ

  ಧನರಾಜ್ ಮಾಡಿದ್ದ ಅಡುಗೆಗೆ ಮೆಚ್ಚುಗೆ

  ಧನರಾಜ್ ಮಾಡಿದ್ದ ಬಾಸ್ಮತಿ ರೈಸ್ ಪಿಲಾಫ್ ಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಮೆಚ್ಚುಗೆ ವ್ಯಕ್ತವಾಯಿತು. ಪರಿಣಾಮ ಅವರಿಗೆ ಮೂರು ಲಕ್ಷ ರೂಪಾಯಿ ಬಹುಮಾನ ಲಭಿಸಿದೆ. 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಫಿನಾಲೆ ವೇಳೆ ಧನರಾಜ್ ಗೆ ಮೂರು ಲಕ್ಷ ರೂಪಾಯಿ ಬಹುಮಾನವನ್ನು ನೀಡಲಾಯಿತು. ಒಟ್ನಲ್ಲಿ ವೀಕ್ಷಕರ ಕೃಪೆಯಿಂದ ಧನರಾಜ್ ಗೆ 3 ಲಕ್ಷ ಅಂತೂ ಸಿಕ್ತು.!

  English summary
  Bigg Boss Kannada 6: Dhanraj gets Rs.3 Lakhs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X