TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
'ಬಿಗ್ ಬಾಸ್' ವಿನ್ನರ್ ಟ್ರೋಫಿ ಎತ್ತಿ ಹಿಡಿಯುವ 'ಚಿನ್ನು' ಕವಿತಾ ಕನಸು ನುಚ್ಚು ನೂರು.!

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಶುರುವಾದಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದ್ದ ಸ್ಪರ್ಧಿ ಕವಿತಾ ಗೌಡ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮೂಲಕ ವೀಕ್ಷಕರ ಮನ ಗೆದ್ದಿದ್ದ ಕವಿತಾ ಗೌಡ, 'ಬಿಗ್ ಬಾಸ್' ಶೋ ಕೂಡ ಗೆಲ್ಲಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು.
ಆದ್ರೆ, ಅಭಿಮಾನಿಗಳ ಆಸೆಗೆ ಇಂದು ಬಕೆಟ್ ಗಟ್ಟಲೆ ತಣ್ಣೀರು ಎರಚಿದಂತಾಗಿದೆ. ನಟಿ ಕವಿತಾ ಗೌಡ ಕನಸು ನುಚ್ಚು ನೂರಾಗಿದೆ. ಗೆಲ್ಲಲು ಇನ್ನೊಂದೇ ಒಂದು ಹೆಜ್ಜೆ ಬಾಕಿ ಇರುವಾಗ, ಕವಿತಾ ಗೌಡ ಎಡವಿದ್ದಾರೆ.
ಶ್ರುತಿ ಬಳಿಕ 'ಬಿಗ್ ಬಾಸ್' ಎರಡನೇ ಮಹಿಳಾ ವಿಜೇತ ಸ್ಪರ್ಧಿ ಆಗ್ತಾರ ಕವಿತಾ?
ಟಾಪ್ 3 ಹಂತಕ್ಕೆ ಏರಿದ್ದ ಕವಿತಾ ಗೌಡ, ಫಿನಾಲೆ ರೇಸ್ ನಿಂದ ಇಂದು ಹೊರಬಿದ್ದಿದ್ದಾರೆ. ಕವಿತಾ ಗೌಡ ಜೊತೆಗೆ ಶಶಿ ಕುಮಾರ್ ಮತ್ತು ನವೀನ್ ಸಜ್ಜು ಗ್ರ್ಯಾಂಡ್ ಫಿನಾಲೆಯ ಟಾಪ್ 3 ಸ್ಥಾನ ತಲುಪಿದ್ದರು. ಈ ಮೂವರ ಪೈಕಿ ಮೊದಲು ಸೂಟ್ ಕೇಸ್ ಹಿಡಿದು 'ಬಿಗ್ ಬಾಸ್' ಮನೆಯಿಂದ ಹೊರಬಂದವರು ಕವಿತಾ ಗೌಡ.
''ನನ್ನ ಮಗಳು ಗೆದ್ದೇ ಗೆಲ್ಲುತ್ತಾಳೆ ಎಂಬ ನಂಬಿಕೆ ಇದೆ'' ಎಂದು ಕವಿತಾ ಗೌಡ ತಾಯಿ ಆಶಾ ಹೇಳಿದ್ದರು. ಅದರೆ ಆ ಮಾತು ನಿಜ ಆಗಲಿಲ್ಲ.
''ಔಟ್ ಆಗಿದ್ದಕ್ಕೆ ಬೇಜಾರು ಇದೆ. ಬ್ಯಾಡ್ ಲಕ್ ಅಂತ ಹೇಳಲ್ಲ. ಟಾಪ್ 3 ಹಂತಕ್ಕೆ ಬಂದಿರುವುದು ಏನೂ ಸುಮ್ಮನೆ ಅಲ್ಲ. ಖುಷಿ ಆಗಿದ್ದೇನೆ. ನನ್ನ ತಾಯಿ ನಮ್ಮನ್ನ ತುಂಬಾ ಕಷ್ಟ ಪಟ್ಟು ಬೆಳೆಸಿದ್ದಾರೆ. ನಾನಿಲ್ಲಿವರೆಗೂ ಬಂದು ನಿಲ್ಲಲು ನನ್ನ ತಾಯಿ ಕಾರಣ. ತುಂಬಾ ಜನರ ಮನ ಗೆದ್ದಿದ್ದೇನೆ'' ಅಂತ ಕವಿತಾ ಗೌಡ ಹೇಳಿದರು. ಮಗಳು ಔಟ್ ಆಗಿದ್ದಕ್ಕೆ ತಾಯಿ ಆಶಾ ಕಣ್ಣೀರಿಟ್ಟರು.
ಕವಿತಾ ಹೊರಗೆ ಬಂದ್ಮೇಲೆ ಕಪಾಳಕ್ಕೆ ಹೊಡೆಯುವೆ ಎಂದು ಗುಡುಗಿದ ಅಕ್ಷತಾ.! ಯಾಕೆ.?
ಮಾರ್ಡನ್ ರೈತ ಶಶಿ ಕುಮಾರ್ ಮತ್ತು ಗಾಯಕ/ಸಂಗೀತ ಸಂಯೋಜಕ ನವೀನ್ ಸಜ್ಜು ಟಾಪ್ 2 ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ. ಸದ್ಯ ಇವರಿಬ್ಬರ ಪೈಕಿ ಗೆಲ್ಲೋರು ಯಾರು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ.