For Quick Alerts
  ALLOW NOTIFICATIONS  
  For Daily Alerts

  ಅರುಣಾಚಲ ಪ್ರದೇಶದ ರಾಜಧಾನಿ ರಾಯಚೂರು ಎಂದ 'ಚಿನ್ನು' ಕವಿತಾ.!

  |

  ಅರುಣಾಚಲ ಪ್ರದೇಶದ ರಾಜಧಾನಿ ಯಾವುದು.? ಈ ಪ್ರಶ್ನೆಗೆ ಉತ್ತರ ಹಲವರಿಗೆ ಗೊತ್ತಿಲ್ಲದೇ ಇರಬಹುದು. ಆದ್ರೆ, ಕರ್ನಾಟಕದಲ್ಲಿ ಹುಟ್ಟಿರುವವರು, ಕನ್ನಡಿಗರಾಗಿರುವವರು ಈ ಪ್ರಶ್ನೆಗೆ 'ರಾಯಚೂರು' ಅಂತ ಉತ್ತರ ಕೊಡಲು ಸಾಧ್ಯವೇ.?

  ತಮಾಷೆಯೋ.. ಅಥವಾ ಬಾಯಿ ತಪ್ಪಿಯೋ.. ಒಟ್ನಲ್ಲಿ ಅರುಣಾಚಲ ಪ್ರದೇಶದ ರಾಜಧಾನಿ ಯಾವುದು.? ಎಂಬ ಪ್ರಶ್ನೆ ಕೇಳಿದಾಗ ನಟಿ ಕವಿತಾ ಗೌಡ ಬಾಯಿಂದ ಬಂದಿದ್ದು 'ರಾಯಚೂರು'.!

  'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿನ 'ಚಿನ್ನು' ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ ಕವಿತಾ ಗೌಡ ಸದ್ಯ 'ಬಿಗ್ ಬಾಸ್' ಮನೆಯಲ್ಲಿದ್ದಾರೆ. 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಸ್ಪರ್ಧಿಯಾಗಿರುವ ಕವಿತಾ ಗೌಡ ಕೊಟ್ಟ 'ರಾಯಚೂರು' ಉತ್ತರಕ್ಕೆ ಕಿಚ್ಚ ಸುದೀಪ್ ಕೂಡ ಧಂಗಾಗಿದ್ದಾರೆ. ಮುಂದೆ ಓದಿರಿ...

  'ಬಿಗ್ ಬಾಸ್' ಮನೆಯಲ್ಲಿ ನಡೆಯಿತು ಕ್ವಿಝ್ ಶೋ.!

  'ಬಿಗ್ ಬಾಸ್' ಮನೆಯಲ್ಲಿ ನಡೆಯಿತು ಕ್ವಿಝ್ ಶೋ.!

  ಮಕ್ಕಳ ದಿನಾಚರಣೆ ಪ್ರಯುಕ್ತ 'ಬಿಗ್ ಬಾಸ್' ಮನೆಯಲ್ಲಿ ಒಂದು ಕ್ವಿಝ್ ಶೋ ನಡೆಯಿತು. ಸ್ಪರ್ಧಿ ಆನಂದ್ ಗೆ 'ಕ್ವಿಝ್ ಮಾಸ್ಟರ್' ಆಗುವ ಅವಕಾಶವನ್ನು 'ಬಿಗ್ ಬಾಸ್' ನೀಡಿದರು. ಅದರಂತೆ ಪ್ರಶ್ನೆಗಳನ್ನು ಸಿದ್ಧಪಡಿಸಿ ಆನಂದ್ 'ಕ್ವಿಝ್ ಶೋ' ನಡೆಸಿಕೊಟ್ಟರು.

  ವೀಕ್ಷಕರಿಗೆ ಒಂದು ಸಂಶಯವಿದೆ: ಕ್ಲಾರಿಟಿ ಕೊಡ್ತೀರಾ 'ಬಿಗ್ ಬಾಸ್'.?

  ಆನಂದ್ ಕೇಳಿದ ಪ್ರಶ್ನೆ ಏನು.?

  ಆನಂದ್ ಕೇಳಿದ ಪ್ರಶ್ನೆ ಏನು.?

  ''ಅರುಣಾಚಲ ಪ್ರದೇಶದ ರಾಜಧಾನಿ ಯಾವುದು.?'' ಎಂಬ ಪ್ರಶ್ನೆಯನ್ನ ಆನಂದ್ ಕೇಳಿದರು. ಅದಕ್ಕೆ ಕವಿತಾ ಗೌಡ ''ರಾಯಚೂರು'' ಅಂತ ಮೆಲ್ಲನೆ ಹೇಳಿದಾಗ, ''ಅದು ಕರ್ನಾಟಕದಲ್ಲಿ ಬರುತ್ತೆ'' ಅಂತ ಕವಿತಾಗೆ ಜಯಶ್ರೀ ಎಚ್ಚರಿಸಿದರು. ನಂತರ ಈ ಪ್ರಶ್ನೆಗೆ ಕವಿತಾ ಉತ್ತರ ಕೊಡಲಿಲ್ಲ.

  ಆಡಮ್ ನ ಔಟ್ ಮಾಡಿದ 'ಬಿಗ್ ಬಾಸ್'ಗೆ ಡೌನ್ ಡೌನ್ ಎಂದ ವೀಕ್ಷಕರು.!

  ಪ್ರಶ್ನೆ ಮಾಡಿದ ಸುದೀಪ್.!

  ಪ್ರಶ್ನೆ ಮಾಡಿದ ಸುದೀಪ್.!

  ಆನಂದ್ ನಡೆಸಿಕೊಟ್ಟ ಕ್ವಿಝ್ ಶೋ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಿಚ್ಚ ಸುದೀಪ್, ''ಅರುಣಾಚಲ ಪ್ರದೇಶದ ರಾಜಧಾನಿ ಯಾವುದು.?'' ಎಂಬ ಪ್ರಶ್ನೆ ಕುರಿತು ಮಾತಿಗಿಳಿದರು. ''ಸೈಕಲ್ ಗ್ಯಾಪ್ ನಲ್ಲಿ ಬಹಳ ದೊಡ್ಡ ವ್ಯಕ್ತಿ ರಾಯಚೂರು ಅಂತಲೂ ಹೇಳಿದರು'' ಎಂದ ಸುದೀಪ್, ಕವಿತಾಗೆ ರಾಯಚೂರು ಎಲ್ಲಿ ಬರುತ್ತೆ.? ಅಂತ ಪ್ರಶ್ನಿಸಿದರು. ಅದಕ್ಕೆ 'ಕರ್ನಾಟಕದಲ್ಲಿ' ಅಂತ ಕವಿತಾ ಉತ್ತರಿಸಿದರು.

  ಕವಿತಾ ಜೊತೆಗೆ ಅಂಟಿಕೊಂಡು ಇರುವುದೇ ಶಶಿ ಗೇಮ್ ಪ್ಲಾನ್ ಅಂತೆ.!

  ಉತ್ತರ ಕರ್ನಾಟಕದ ಹುಡುಗಿಗೆ ಸರಿಯಾಗಿ ಗೊತ್ತಿಲ್ಲ.!

  ಉತ್ತರ ಕರ್ನಾಟಕದ ಹುಡುಗಿಗೆ ಸರಿಯಾಗಿ ಗೊತ್ತಿಲ್ಲ.!

  ''ರಾಯಚೂರು ಯಾವ ಊರು ಪಕ್ಕಾ ಬರುತ್ತೆ.?'' ಎಂದು ಸುದೀಪ್ ಕೇಳಿದಾಗ, ''ಉತ್ತರ ಕರ್ನಾಟಕದಲ್ಲಿ.. ಗುಲ್ಬರ್ಗ ಪಕ್ಕದಲ್ಲಿ ಎಲ್ಲೋ ಬರುತ್ತೆ'' ಎಂದರು ಕವಿತಾ. ಇದೇ ಪ್ರಶ್ನೆಯನ್ನ ''ಉತ್ತರ ಕರ್ನಾಟಕದ ಮನೆ ಮಗಳು'' ಎಂದು ಪದೇ ಪದೇ ಹೇಳಿಕೊಳ್ಳುವ ಸೋನು ಪಾಟೀಲ್ ಗೆ ಸುದೀಪ್ ಕೇಳಿದರು. ಅದಕ್ಕೆ, ''ಗದಗ ಸೈಡ್ ಬರುತ್ತೆ ಅಂದುಕೊಳ್ಳುತ್ತೇನೆ'' ಎಂದರು ಸೋನು. ಅಚ್ಚರಿ ಅಂದ್ರೆ, ಸೋನು ಪಾಟೀಲ್ ಗೆ 'ಉತ್ತರ ಕರ್ನಾಟಕ' ಅಂತ ಯಾಕೆ ಕರೆಯುತ್ತಾರೆ ಅಂತಲೇ ಗೊತ್ತಿಲ್ಲ.!

  English summary
  Bigg Boss Kannada 6: Week 4: Kiccha Sudeep questions Kavitha Gowda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X