For Quick Alerts
  ALLOW NOTIFICATIONS  
  For Daily Alerts

  ಆಂಡ್ರ್ಯೂಗೆ ಹೋಲಿಸಿದರೆ 'ಒಳ್ಳೆ ಹುಡುಗ' ಪ್ರಥಮ್ ಎಷ್ಟೋ ವಾಸಿ.!

  |
  ಆಂಡ್ರ್ಯೂಗೆ ಹೋಲಿಸಿದರೆ 'ಒಳ್ಳೆ ಹುಡುಗ' ಪ್ರಥಮ್ ಎಷ್ಟೋ ವಾಸಿ.! | FILMIBEAT KANNADA

  ''ಆಂಡ್ರ್ಯೂಗೆ ಹೋಲಿಸಿದರೆ ಪ್ರಥಮ್ ಎಷ್ಟೋ ವಾಸಿ'' - ಹೀಗಂತ ನಾವು ಹೇಳ್ತಿಲ್ಲ. ಬದಲಾಗಿ, ಗ್ಲಾಮರ್ ಗರ್ಲ್ 'ಬಿಗ್ ಬಾಸ್' ಸ್ಪರ್ಧಿ ಸಂಜನಾ ಹೇಳಿದ್ದಾರೆ.

  ಹಾಗ್ನೋಡಿದ್ರೆ, 'ಒಳ್ಳೆ ಹುಡುಗ' ಪ್ರಥಮ್ ಮತ್ತು ಸಂಜನಾ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಒಟ್ಟಿಗೆ ಸ್ಪರ್ಧಿಸಿದ್ದರು. ಸಂಜನಾಗೆ ಮಾತ್ರ ಅಲ್ಲ.. ಎಲ್ಲಾ ಸ್ಪರ್ಧಿಗಳಿಗೂ ಪ್ರಥಮ್ ತಮ್ಮದೇ ಸ್ಟೈಲ್ ನಲ್ಲಿ ಬಿಸಿ ಮುಟ್ಟಿಸಿದ್ದರು.

  ಮಾತಲ್ಲೇ ಎಲ್ಲರನ್ನೂ ಸೋಲಿಸಿ ಪ್ರಥಮ್ 'ಬಿಗ್ ಬಾಸ್' ವಿನ್ನರ್ ಆದರು. ಪ್ರಥಮ್ ತರಹ ಆಗಬೇಕು ಎಂಬ ಮನಸ್ಥಿತಿಯನ್ನು ಇಟ್ಟುಕೊಂಡು ತಲೆ-ಬುಡವಿಲ್ಲದೇ, ಸುಖಾಸುಮ್ಮನೆ ಪ್ರತಿ ದಿನ ಆಂಡ್ರ್ಯೂ ಜಗಳ ಆಡುತ್ತಿದ್ದಾರೆ.

  ಕಾಲು ಕೆರೆದುಕೊಂಡು ಜಗಳ ಮಾಡುವ ಆಂಡಿ ಕಿರಿಕಿರಿಯನ್ನು ಎರಡು ದಿನ ನೋಡಿ ಸಂಜನಾಗೆ ಸಾಕಾಗಿದೆ. ಹೀಗಾಗಿ, ''ಪ್ರಥಮ್ ಎಷ್ಟೋ ವಾಸಿ. ನಮಗೆ ಇಷ್ಟೊಂದೆಲ್ಲಾ ಟಾರ್ಚರ್ ಕೊಟ್ಟಿರಲಿಲ್ಲ'' ಎಂದು ಸಂಜನಾ ಹೇಳಿದ್ದಾರೆ. ಮುಂದೆ ಓದಿರಿ...

  ಚಪಾತಿ ವಿಷಯಕ್ಕೆ ಜಗಳ

  ಚಪಾತಿ ವಿಷಯಕ್ಕೆ ಜಗಳ

  ಸುಮ್ ಸುಮ್ಮನೆ ಕ್ಯಾತೆ ತೆಗೆಯುವುದರಲ್ಲಿ ಆಂಡ್ರ್ಯೂ ನಂಬರ್ ಒನ್. 'ಬಿಗ್ ಬಾಸ್' ಮನೆಗೆ ಬಂದಿರುವ ವಿಶೇಷ ಅತಿಥಿಗಳಿಗೆ ತಿಂಡಿ ಕಳುಹಿಸಬೇಕಾದ ಕಾರಣ ಧನರಾಜ್, ಕವಿತಾ ಮತ್ತು ಆಂಡಿ ಚಪಾತಿ ಮಾಡುತ್ತಿದ್ದರು. ಈ ನಡುವೆ ಇದ್ದಕ್ಕಿದ್ದಂತೆ ಆಂಡಿ ಕಿರಿಕ್ ಶುರು ಮಾಡಿದರು.

  ಅಂದು ಹಂಗ್ ಮಾಡಿದ್ದ ಆಂಡ್ರ್ಯೂಗೆ ಇಂದು ಹಿಂಗ್ ಆಯ್ತು.!

  ಸಂಜನಾಗೆ ಕಿರಿಕಿರಿ

  ಸಂಜನಾಗೆ ಕಿರಿಕಿರಿ

  ಕಾರಣವಿಲ್ಲದೇ ತರ್ಲೆ ಮಾಡುತ್ತಿದ್ದ ಆಂಡಿಯನ್ನ ನೋಡಿ ಸಂಜನಾಗೆ ಕಿರಿಕಿರಿ ಶುರುವಾಯ್ತು. ''ಟಿವಿಯನ್ನ ಆಫ್ ಮಾಡಿ'' ಎನ್ನುವ ಮಟ್ಟಕ್ಕೆ ಸಂಜನಾ ಬೇಸೆತ್ತು ಹೋಗಿದ್ದರು. ಆಗಲೇ, ''ಪ್ರಥಮ್ ಎಷ್ಟೋ ವಾಸಿ. ನಮಗೆ ಇಷ್ಟೊಂದೆಲ್ಲಾ ಟಾರ್ಚರ್ ಕೊಟ್ಟಿರಲಿಲ್ಲ'' ಎಂದು ಸಂಜನಾ ಹೇಳಿದ್ದು.

  ಒಂದು ಚಪಾತಿ, ಪೀಸ್ ಹೀರೇಕಾಯಿಗಾಗಿ ಜಗಳ ಆಡಿದ ರಾಕೇಶ್ ಗುಡ್ನೆಸ್ ಎಲ್ಲಿ ಹೋಯ್ತು.?

  ಗರಂ ಆದ ಕಿರಿಕ್ ಕೀರ್ತಿ

  ಗರಂ ಆದ ಕಿರಿಕ್ ಕೀರ್ತಿ

  ''ನಿಮ್ಮ ಚಪಾತಿಯೂ ಬೇಡ. ನೀವೂ ಬೇಡ. ಹೀಗೆ ಹಸಿವು ಮಾಡಿಕೊಂಡು ಇದ್ದು ಬಿಡುತ್ತೇವೆ. ಹಾಳಾಗಿ ಹೋಗಿಬಿಡಿ ಥೂ.. ನಿಮ್ದೇನ್ ಜನ್ಮ ಗುರು'' ಎಂದು ಫೋನ್ ಮಾಡಿ ಸ್ಪರ್ಧಿಗಳ ಬಗ್ಗೆ ಕಿರಿಕ್ ಕೀರ್ತಿ ಬೇಸರ ವ್ಯಕ್ತಪಡಿಸಿದರು.

  ಆಂಡಿಯನ್ನ ಅಪ್ಪ ಹೊರಗೆ ಕರ್ಕೊಂಡು ಹೋಗಲಿಲ್ಲ: ಎಲ್ಲಾ ನಾಟಕ ಅಷ್ಟೇ.!

  ಮಂಗಳಾರತಿ ಮಾಡಿದ ಪ್ರಥಮ್

  ಮಂಗಳಾರತಿ ಮಾಡಿದ ಪ್ರಥಮ್

  ಅತಿರೇಕದಿಂದ ವರ್ತಿಸುತ್ತಿದ್ದ ಆಂಡಿಗೆ ಫೋನ್ ಮಾಡಿ ಪ್ರಥಮ್ ಮಂಗಳಾರತಿ ಮಾಡಿದರು. ನಿಜ ಹೇಳ್ಬೇಕು ಅಂದ್ರೆ, ಆಂಡಿಗೆ ಸುದೀಪ್ ಎಷ್ಟೋ ಬಾರಿ ಪಾಠ ಮಾಡಿದ್ದಾರೆ. ಆದ್ರೆ, ಆಂಡಿ ಮಾತ್ರ ಸುಧಾರಿಸಿಕೊಂಡಿಲ್ಲ.

  English summary
  Bigg Boss Kannada 6: Pratham is far better than Andrew says Sanjana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X