For Quick Alerts
  ALLOW NOTIFICATIONS  
  For Daily Alerts

  ಅಕ್ಷತಾ ಮುಂದೆ ಹೀಗೊಂದು ಕಲರ್ ಕಾಗೆ ಹಾರಿಸಿದ್ದ ರಾಕೇಶ್.!

  |
  Bigg Boss Kannada Season 6: ಅಕ್ಷತಾ ಮುಂದೆ ಹೀಗೊಂದು ಕಲರ್ ಕಾಗೆ ಹಾರಿಸಿದ್ದ ರಾಕೇಶ್.! | FILMIBEAT KANNADA

  ನಿಜ ಜೀವನದಲ್ಲಿ 200 ಹುಡುಗಿಯರ ಜೊತೆಗೆ ಡೇಟಿಂಗ್ ಮಾಡಿರುವ ರಾಕೇಶ್ 'ಬಿಗ್ ಬಾಸ್' ಮನೆಯಲ್ಲೂ ಚೆಲುವೆಯರನ್ನ ತುಸು ಚೆನ್ನಾಗಿಯೇ ಇಂಪ್ರೆಸ್ ಮಾಡುತ್ತಿದ್ದಾರೆ.

  ಮೊದಮೊದಲು ಅಕ್ಷತಾ ಪಾಂಡವಪುರ ಜೊತೆಗೆ ಅತೀ ಎನಿಸುವಷ್ಟು ಆತ್ಮೀಯತೆ ಹೊಂದಿದ್ದವರು ರಾಕೇಶ್. ಅಕ್ಷತಾ ಜೊತೆ 'Intense ಫ್ರೆಂಡ್ ಶಿಪ್' ಇದ್ದಾಗ ಹೀಗೊಂದು ಕಲರ್ ಕಾಗೆ ಹಾರಿಸಿದ್ದರು ಮಿಸ್ಟರ್ ಎಂ.ಜೆ.ರಾಕೇಶ್.

  ಅದೇನಪ್ಪಾ ಅಂದ್ರೆ.. ಒಂದು ವೇಳೆ ಫೈನಲ್ ನಲ್ಲಿ ರಾಕೇಶ್ ಮತ್ತು ಅಕ್ಷತಾ ಇದ್ದರೆ, ಅಕಸ್ಮಾತ್ ರಾಕೇಶ್ ಗೆ ಅವಕಾಶ ಸಿಕ್ಕರೆ.. ಅಕ್ಷತಾಗೆ 'ಬಿಗ್ ಬಾಸ್' ವಿಜೇತರ ಟ್ರೋಫಿಯನ್ನ ರಾಕೇಶ್ ಬಿಟ್ಟುಕೊಡುತ್ತಾರಂತೆ.!

  ಅಕ್ಷತಾ ಋಣ ತೀರಿಸಲು ರಾಕೇಶ್ ಮನಸ್ಸು ಮಾಡಲೇ ಇಲ್ಲ.!

  ಹಾಗಂತ ಸ್ವತಃ ರಾಕೇಶ್, ಅಕ್ಷತಾಗೆ ಜೈಲಿನಲ್ಲಿ ಇರುವಾಗ ಹೇಳಿದ್ದರು. ''ಫೈನಲ್ ನಲ್ಲಿ ನಾನು ಮತ್ತು ನೀವು ಇದ್ದರೆ.. ಅಕಸ್ಮಾತ್ ನಾನು ಗೆದ್ದರೆ.. ನನಗೆ ಅವಕಾಶ ಇದ್ದರೆ.. ನಾನು ನಿಮಗೆ ಟ್ರೋಫಿ ಕೊಡುವೆ. ಕೊನೆಯ ವಾರದ ನಾಮಿನೇಷನ್ ಬಂದಾಗ, ನಿಮ್ಮನ್ನ ಸೇಫ್ ಮಾಡುವೆ'' ಅಂತೆಲ್ಲಾ ಹಿಂದೊಮ್ಮೆ ರಾಕೇಶ್ ಪುಂಗಿ ಊದಿದ್ದರು.

  ಕ್ಯಾಪ್ಟನ್ ರಾಕೇಶ್ ತೆಗೆದುಕೊಂಡ ನಿರ್ಧಾರ ಸರಿಯೋ.? ತಪ್ಪೋ.?

  ರಾಕೇಶ್ ಆಡಿದ ಮಾತುಗಳನ್ನೆಲ್ಲಾ ಅಕ್ಷತಾ ನಂಬಿದ್ದರು ಅಂತ ಕಾಣುತ್ತೆ. ಹೀಗಾಗಿ, ಕೈಯಲ್ಲಿ ಅಧಿಕಾರ ಸಿಕ್ಕಾಗ ರಾಕೇಶ್ ತನ್ನನ್ನು ಸೇಫ್ ಮಾಡುತ್ತಾರೆ ಎಂಬ ನಂಬಿಕೆ ಮೇಲೆ ಅಕ್ಷತಾ ನಿಂತಿದ್ದರು.

  ಈ ವಾರ ಅಕ್ಷತಾ ಪಾಂಡವಪುರ ಔಟ್ ಆಗಲು ಚಾನ್ಸೇ ಇಲ್ಲ.!

  ಆದ್ರೆ, ಅವಕಾಶ ಸಿಕ್ಕರೂ ಕ್ಯಾಪ್ಟನ್ ರಾಕೇಶ್, ಅಕ್ಷತಾನ ಸೇಫ್ ಮಾಡಲಿಲ್ಲ. ಹೀಗಾಗಿ, ಅಕ್ಷತಾ ಸಿಕ್ಕಾಪಟ್ಟೆ ಅಪ್ ಸೆಟ್ ಆಗಿದ್ದರು.

  ಪ್ರೀತಿಯ 'ಪುಟ್ಟ'ನ ಸೇಫ್ ಮಾಡದ ರಾಕೇಶ್: ಅಕ್ಷತಾ ನಿಮಗಿದು ಆಗ್ಬೇಕಿತ್ತು.!

  ''ಅಕ್ಷತಾ ಹೇಗಿದ್ದರೂ ಸೇಫ್ ಆಗುತ್ತಾರೆ. ಅದಕ್ಕೆ ನಾನು ಬಚಾವ್ ಮಾಡಲಿಲ್ಲ'' ಅಂತ ಈಗ ಕಾರಣ ಕೊಡುವ ರಾಕೇಶ್, ಇನ್ನೂ ಗೆಲುವನ್ನು ಅಕ್ಷತಾಗೆ ಬಿಟ್ಟುಕೊಡ್ತಾರಾ.?

  'ಇದು ಅನ್ಯಾಯ' ಅಂತಿದ್ದ ರಾಕೇಶ್, ಏಕ್ದಂ ಉಲ್ಟಾ ಹೊಡೆದಿದ್ದು ಯಾಕೆ.?

  ವಾಸ್ತವವನ್ನು ಮರೆತು ಕಲರ್ ಕಲರ್ ಕಾಗೆ ಹಾರಿಸುವ ರಾಕೇಶ್ ಬಣ್ಣ ಇದೀಗ 'ಬಿಗ್ ಬಾಸ್' ಮನೆಯಲ್ಲಿ ಬಯಲಾಗುತ್ತಿದೆ

  English summary
  Bigg Boss Kannada 6: Rakesh had made a promise to Akshata on Day 40.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X