For Quick Alerts
  ALLOW NOTIFICATIONS  
  For Daily Alerts

  ಕಳಪೆ ಪ್ರದರ್ಶನ ಕೊಟ್ಟ ರಾಪಿಡ್ ರಶ್ಮಿಗೆ ಜೈಲೇ ಗತಿ.!

  |
  Bigg Boss Kannada Season 6: ಕಳಪೆ ಪ್ರದರ್ಶನ ನೀಡಿದ ರಾಪಿಡ್ ರಶ್ಮಿಗೆ ಜೈಲೇ ಗತಿ | FILMIBEAT KANNADA

  ಯಾಕೋ ಈ ವಾರ ರಾಪಿಡ್ ರಶ್ಮಿ ಪಾಲಿಗೆ ಚೆನ್ನಾಗಿರಲಿಲ್ಲ. ಕ್ಯಾಪ್ಟನ್ ಆಗಿ ಶಶಿ ಕುಮಾರ್ ಆಯ್ಕೆ ಆದ್ಮೇಲೆ ರಶ್ಮಿಗೆ ಬ್ಯಾಡ್ ಲಕ್ ಶುರುವಾಯ್ತು. ಅಲ್ಲಿಯವರೆಗೂ ಅಡುಗೆ ಮನೆಯಲ್ಲಿ ಹಾಯಾಗಿ ಇದ್ದ ರಶ್ಮಿಯನ್ನ ಬಾತ್ ರೂಮ್ ಡಿಪಾರ್ಟ್ಮೆಂಟ್ ಗೆ ಶಿಫ್ಟ್ ಮಾಡಿದ್ದು ಇದೇ ಶಶಿ.

  ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಾದರೂ ಪರ್ಫಾರ್ಮ್ ಮಾಡಲು ರಶ್ಮಿ ಕಾಯುತ್ತಿದ್ದರೆ, ಆಕೆಗೆ ಸರಿಯಾಗಿ ಅವಕಾಶ ಸಿಗಲಿಲ್ಲ. ಬಂಡಿ ಎಳೆಯುವ ಚಟುವಟಿಕೆಯಲ್ಲಿ ಭಾಗವಹಿಸಲು ರಶ್ಮಿ ರೆಡಿ ಇದ್ದರೂ, ಆಕೆಗೆ ಉಳಿದವರು ಚಾನ್ಸ್ ಕೊಡಲಿಲ್ಲ. ಇದರಿಂದ ಸಿಟ್ಟಿಗೆದ್ದ ರಶ್ಮಿ ರಂಪ ಮಾಡಿದರು.

  ಎಲ್ಲರ ಮೇಲೆ ಸಿಟ್ಟು ಮಾಡಿಕೊಂಡಿದ್ದ ರಶ್ಮಿ, ತಮಗೆ ಕೊಟ್ಟಿದ್ದ ರಾಜಣ್ಣ ಕ್ಯಾರೆಕ್ಟರ್ ನಿಂದ ಆಗಾಗ ಹೊರಗೆ ಬರುತ್ತಿದ್ದರು. ಇದನ್ನೆಲ್ಲ ಗಮನಿಸಿದ 'ಬಿಗ್ ಬಾಸ್' ಮನೆ ಸದಸ್ಯರು ರಶ್ಮಿಗೆ ಈ ವಾರ 'ಕಳಪೆ' ಹಣೆಪಟ್ಟಿ ನೀಡಿದ್ದಾರೆ. ಸಾಲದಕ್ಕೆ ಆಕೆಯನ್ನು ಜೈಲಿಗೆ ತಳ್ಳಿದ್ದಾರೆ. ಮುಂದೆ ಓದಿರಿ...

  ರಶ್ಮಿಗೆ 'ಕಳಪೆ' ಹಣೆಪಟ್ಟಿ

  ರಶ್ಮಿಗೆ 'ಕಳಪೆ' ಹಣೆಪಟ್ಟಿ

  ಈ ವಾರ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ 'ಕಳಪೆ' ಪ್ರದರ್ಶನ ನೀಡಿದ ಒಬ್ಬ ಸದಸ್ಯರನ್ನು ಎಲ್ಲರೂ ಆಯ್ಕೆ ಮಾಡಬೇಕಿತ್ತು. ಆಗ ಬಹುತೇಕರ ಬಾಯಿಂದ ಬಂದ ಹೆಸರು ರಶ್ಮಿ. ಹೀಗಾಗಿ, ರಶ್ಮಿಗೆ 'ಕಳಪೆ' ಹಣೆಪಟ್ಟಿ ಸಿಕ್ಕಿತು.

  ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ರಾಪಿಡ್ ರಶ್ಮಿಗೆ ಸುದೀಪ್ ಹೇಳಿದ್ದೇನು.? ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ರಾಪಿಡ್ ರಶ್ಮಿಗೆ ಸುದೀಪ್ ಹೇಳಿದ್ದೇನು.?

  ರಶ್ಮಿ ಜೈಲಿಗೆ ಹೋಗಬೇಕು.!

  ರಶ್ಮಿ ಜೈಲಿಗೆ ಹೋಗಬೇಕು.!

  ವಾರದಲ್ಲಿ ಕಳಪೆ ಪ್ರದರ್ಶನ ನೀಡಿದ ಇಬ್ಬರನ್ನು ಜೈಲಿಗೆ ಹಾಕುವ ಪದ್ದತಿ 'ಬಿಗ್ ಬಾಸ್' ಮನೆಯಲ್ಲಿ ಇದೆ. ಮನೆಯವರ ಆಯ್ಕೆ ಪ್ರಕಾರ, ರಶ್ಮಿ 'ಕಳಪೆ' ಪ್ರದರ್ಶನ ನೀಡಿರುವ ಕಾರಣ, ಈ ವಾರ ಆಕೆ ಜೈಲಿಗೆ ಹೋಗಲೇಬೇಕು.

  ಅಂದು ಹಾಲಿಗಾಗಿ ಕಿತ್ತಾಟ: ಇಂದು ಮೊಟ್ಟೆಗಾಗಿ ರಂಪಾಟ.!ಅಂದು ಹಾಲಿಗಾಗಿ ಕಿತ್ತಾಟ: ಇಂದು ಮೊಟ್ಟೆಗಾಗಿ ರಂಪಾಟ.!

  ಆನಂದ್ ಕೂಡ ಜೈಲಲ್ಲಿ.!

  ಆನಂದ್ ಕೂಡ ಜೈಲಲ್ಲಿ.!

  ಕ್ಯಾಪ್ಟನ್ ಶಶಿ ಆಯ್ಕೆ ಪ್ರಕಾರ, ಈ ವಾರ 'ಕಳಪೆ' ಪ್ರದರ್ಶನ ನೀಡಿರುವವರು ಆನಂದ್ ಮಾಲಗತ್ತಿ. ಹೀಗಾಗಿ ಆನಂದ್ ಕೂಡ ರಶ್ಮಿ ಜೊತೆ ಕಂಬಿ ಎಣಿಸಬೇಕು.

  'ಬಿಗ್ ಬಾಸ್' ಮನೆಯಲ್ಲಿ ಆನಂದ್ ಒಂಥರಾ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ.!'ಬಿಗ್ ಬಾಸ್' ಮನೆಯಲ್ಲಿ ಆನಂದ್ ಒಂಥರಾ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ.!

  ನಿಮ್ಮ ಅಭಿಪ್ರಾಯ ಏನು.?

  ನಿಮ್ಮ ಅಭಿಪ್ರಾಯ ಏನು.?

  'ಹೆಣ್ಣಾಗು ಗಂಡಾಗು' ಟಾಸ್ಕ್ ನಲ್ಲಿ ರಶ್ಮಿ ಮತ್ತು ಆನಂದ್ ಕಳಪೆ ಪ್ರದರ್ಶನ ನೀಡಿದರು ಅಂತ ನಿಮಗೆ ಅನಿಸುತ್ತಾ.? ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Bigg Boss Kannada 6: Day 31: Rapid Rashmi is the worst performer of the week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X