For Quick Alerts
  ALLOW NOTIFICATIONS  
  For Daily Alerts

  ಮುಂದಿನ ತಿಂಗಳಿನಿಂದ 'ಬಿಗ್ ಬಾಸ್ ಕನ್ನಡ-6' ಪ್ರಾರಂಭ.?

  By Harshitha
  |
  Big Boss Kannada Season 6 : ರೆಡಿ ಆಗ್ರಪ್ಪಾ ಬಿಗ್ ಬಾಸ್ 6 ನೋಡೋಕೆ..! | Filmibeat Kannada

  'ಬಿಗ್ ಬಾಸ್' ಬಗ್ಗೆ ಯಾರು ಎಷ್ಟೇ ಛೀಮಾರಿ ಹಾಕಿದರೂ, ಈ ರಿಯಾಲಿಟಿ ಶೋನ ನೋಡುವವರ ಸಂಖ್ಯೆ ಮಾತ್ರ ಕಮ್ಮಿ ಆಗಿಲ್ಲ. 'ಬಿಗ್ ಬಾಸ್' ಯಾವಾಗ ಶುರುವಾಗುತ್ತೋ ಅಂತ ಬಕಪಕ್ಷಿಗಳಂತೆ ಕಾಯುವ ವೀಕ್ಷಕರಿದ್ದಾರೆ.

  ಕನ್ನಡ ಕಿರುತೆರೆಯಲ್ಲಿ ಇಲ್ಲಿಯವರೆಗೂ ಐದು 'ಬಿಗ್ ಬಾಸ್' ಆವೃತ್ತಿಗಳು ಪ್ರಸಾರ ಆಗಿವೆ. ಈ ಐದೂ ಸೀಸನ್ ಗಳು ವಿವಾದಗಳ ನಡುವೆ ಜನಪ್ರಿಯತೆ ಪಡೆದಿವೆ. ಇದೀಗ ಎಲ್ಲರ ಕಣ್ಣು ಆರನೇ ಸೀಸನ್ ನತ್ತ ನೆಟ್ಟಿದೆ.

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ 'ಇವರೆಲ್ಲ' ಸ್ಪರ್ಧಿಗಳಂತೆ.! ಹೌದೇನು.?'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ 'ಇವರೆಲ್ಲ' ಸ್ಪರ್ಧಿಗಳಂತೆ.! ಹೌದೇನು.?

  'ಬಿಗ್ ಬಾಸ್ ಕನ್ನಡ-6' ಶೋದ ಪ್ರೀ ಪ್ರೊಡಕ್ಷನ್ ಕೆಲಸಗಳಿಗೆ ಈಗಾಗಲೇ ಚಾಲನೆ ಕೊಟ್ಟಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ 'ಬಿಗ್ ಬಾಸ್' ಮನೆಯೊಳಗೆ ಬಂಧಿಯಾಗುವ ಅವಕಾಶ ಸಾಮಾನ್ಯ ಜನರಿಗಿದೆ.

  ವೂಟ್ ಮೂಲಕ ಅರ್ಜಿ ಸಲ್ಲಿಸಿ 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಅವಕಾಶ 'ಕಾಮನ್ ಮ್ಯಾನ್' ಗಿಟ್ಟಿಸಿಕೊಳ್ಳಬಹುದು. ಮೂಲಗಳ ಪ್ರಕಾರ, ಸಾಮಾನ್ಯ ಜನರ ಆಯ್ಕೆ ಪ್ರಕ್ರಿಯೆ ಶುರುವಾಗಿದ್ದು, ಆಡಿಷನ್ಸ್ ಸದ್ದಿಲ್ಲದೇ ನಡೆಯುತ್ತಿದೆ.

  'ಬಿಗ್ ಬಾಸ್ ಕನ್ನಡ-6': ಈ ಬಾರಿ ದೊಡ್ಮನೆ ಸೇರುವವರ ಸಂಭಾವ್ಯ ಪಟ್ಟಿ ಇಲ್ಲಿದೆ'ಬಿಗ್ ಬಾಸ್ ಕನ್ನಡ-6': ಈ ಬಾರಿ ದೊಡ್ಮನೆ ಸೇರುವವರ ಸಂಭಾವ್ಯ ಪಟ್ಟಿ ಇಲ್ಲಿದೆ

  'ಬಿಗ್ ಬಾಸ್ ಕನ್ನಡ-5'ನಲ್ಲಿ ಮೇಘ, ಸುಮಾ ರಾಜ್ ಕುಮಾರ್, ನಿವೇದಿತಾ ಗೌಡ, ದಿವಾಕರ್, ಸಮೀರಾಚಾರ್ಯ ಹಾಗೂ ರಿಯಾಝ್ 'ಕಾಮನ್ ಮ್ಯಾನ್' ವರ್ಗದಲ್ಲಿ ಆಯ್ಕೆ ಆಗಿದ್ದರು.

  ಈ ಬಾರಿ ಎಷ್ಟು ಮಂದಿ ಜನ ಸಾಮಾನ್ಯರಿಗೆ ಅವಕಾಶ ಇದೆ ಅನ್ನೋದಿನ್ನೂ ಪಕ್ಕಾ ಆಗಿಲ್ಲ. ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಇನ್ನೂ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಸೆಪ್ಟೆಂಬರ್ ನಿಂದಲೇ 'ಬಿಗ್ ಬಾಸ್ ಕನ್ನಡ-6' ಆರಂಭವಾಗುವ ಸಾಧ್ಯತೆ ಇದೆ.

  'ಬಿಗ್ ಬಾಸ್'ನಲ್ಲಿ ನೀವೂ ಸ್ಪರ್ಧಿಸಬೇಕಾ.? ಹಾಗಿದ್ರೆ, ಕೂಡಲೆ ಈ ಕೆಲಸ ಮಾಡಿ..'ಬಿಗ್ ಬಾಸ್'ನಲ್ಲಿ ನೀವೂ ಸ್ಪರ್ಧಿಸಬೇಕಾ.? ಹಾಗಿದ್ರೆ, ಕೂಡಲೆ ಈ ಕೆಲಸ ಮಾಡಿ..

  ಎಂದಿನಂತೆ ಕಿಚ್ಚ ಸುದೀಪ್ ನಿರೂಪಣೆಯಲ್ಲಿ 'ಬಿಗ್ ಬಾಸ್ ಕನ್ನಡ-6' ಮೂಡಿಬರಲಿದೆ. 'ಬಿಗ್ ಬಾಸ್' ಬಗ್ಗೆ ಹೆಚ್ಚಿನ ಮಾಹಿತಿ ಕೊಡ್ತಾಯಿರ್ತೀವಿ, 'ಫಿಲ್ಮಿಬೀಟ್ ಕನ್ನಡ' ಪುಟಕ್ಕೆ ಭೇಟಿ ನೀಡುತ್ತಿರಿ.

  English summary
  Bigg Boss is back in Kannada. According to latest Grapevine, Bigg Boss Kannada 6 reality show may start from September 2018.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X