twitter
    For Quick Alerts
    ALLOW NOTIFICATIONS  
    For Daily Alerts

    'ಬಿಗ್ ಬಾಸ್' ಶಶಿ ಕುಮಾರ್ 'ಫೇಕ್' ರೈತ ಅಲ್ಲ.. ಸಾಕ್ಷಿ ಬೇಕಾ.?

    |

    Recommended Video

    Bigg Boss Kannada Season 6: ಬಿಗ್ ಬಾಸ್' ಶಶಿ ಕುಮಾರ್ 'ಫೇಕ್' ರೈತ ಅಲ್ಲ.. ಸಾಕ್ಷಿ ಬೇಕಾ.? |Oneindia Kannada

    'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದಲ್ಲಿ ರೈತರಿಗೊಂದು ಅವಕಾಶ ಕೊಡಿ ಎಂಬ ಬೇಡಿಕೆ ಆಗಾಗ ಕೇಳಿಬರುತ್ತಲೇ ಇತ್ತು. ವೀಕ್ಷಕರ ಈ ಬೇಡಿಕೆಗೆ 'ಬಿಗ್ ಬಾಸ್' ಅಸ್ತು ಎಂದಿದ್ದು 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ.! ಅದು ಆಧುನಿಕ ರೈತ ಶಶಿ ಕುಮಾರ್ ಮೂಲಕ.

    ನೋಡಲು ಹ್ಯಾಂಡ್ಸಮ್ ಆಗಿರುವ ಶಶಿ ಕುಮಾರ್ 'ಆಧುನಿಕ ರೈತ' ಅಂತ 'ಬಿಗ್ ಬಾಸ್' ವೇದಿಕೆ ಮೇಲೆ ಪರಿಚಿತಗೊಂಡಾಗ ವೀಕ್ಷಕರು ಕಣ್ಣು ಬಾಯಿ ಬಿಟ್ಟಿದ್ದುಂಟು. ಎಷ್ಟೋ ಜನ ಶಶಿ ರೈತ ಅಲ್ಲ.. ಸೀರಿಯಲ್ ನಟ ಅಂತ ವಾದಿಸಿದ್ದರು. ಅಸಲಿಗೆ, ಶಶಿ ಸೀರಿಯಲ್ ನಲ್ಲಿ ಅಭಿನಯಿಸಿದ್ದಾರೆ ನಿಜ. ಆದ್ರೆ, ಕೃಷಿ ವಿಭಾಗದಲ್ಲಿ ಮಾಸ್ಟರ್ ಡಿಗ್ರಿ ಪಡೆದು 'ವೃತ್ತಿ'ಯಲ್ಲಿ ರೈತ ಆಗಿರುವುದು ವಾಸ್ತವ.

    ಶಶಿ 'ರೈತ' ಎಂಬ ಮುಖವಾಡ ಧರಿಸಿದ್ದಾರೆ... ಶಶಿ 'ಫೇಕ್' ರೈತ... ಅಂತೆಲ್ಲಾ ಮಾತುಗಳು 'ಬಿಗ್ ಬಾಸ್' ಮನೆಯಲ್ಲೂ ಕೇಳಿಬಂದಿದೆ. ಅಂಥವರಿಗೆ ಸಾಕ್ಷಿ ಇಲ್ಲಿದೆ. ಮುಂದೆ ಓದಿರಿ...

    ಕೃಷಿ ವಿಭಾಗದಲ್ಲಿ ಪದವಿ

    ಕೃಷಿ ವಿಭಾಗದಲ್ಲಿ ಪದವಿ

    ಕೃಷಿ ವಿಭಾಗದಲ್ಲಿ ಶಶಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಬರೀ ಶಶಿ ಮಾತ್ರ ಅಲ್ಲ... ಅವರ ಸಹೋದರ ಮತ್ತು ಸಹೋದರಿ ಕೂಡ ಅಗ್ರಿಕಲ್ಚರ್ ವ್ಯಾಸಂಗ ಮಾಡಿದ್ದಾರೆ.

    ಆಧುನಿಕ ರೈತ ಶಶಿಕುಮಾರ್ 5 ಚಿನ್ನದ ಪದಕಕ್ಕೆ ಒಡೆಯ.! ಎಲ್ಲಿ, ಹೇಗೆ.?ಆಧುನಿಕ ರೈತ ಶಶಿಕುಮಾರ್ 5 ಚಿನ್ನದ ಪದಕಕ್ಕೆ ಒಡೆಯ.! ಎಲ್ಲಿ, ಹೇಗೆ.?

    ಶಶಿ ತಾತ ರೈತ

    ಶಶಿ ತಾತ ರೈತ

    ಶಶಿ ಮೂಲತಃ ಚಿಂತಾಮಣಿಯವರು. ಚಿಂತಾಮಣಿಯಲ್ಲಿ ಶಶಿ ತಾತ (ತಂದೆಯ ತಂದೆ) ಹತ್ತು ಎಕರೆ ಜಮೀನು ಹೊಂದಿದ್ದರು. ಆಗಿನ ಕಾಲಕ್ಕೆ ಆ ಹೋಬಳಿಯಲ್ಲಿ ಹೆಚ್ಚು ಬೆಳೆ ಬೆಳೆಯುತ್ತಿದ್ದದ್ದು ಇದೇ ಶಶಿ ಕುಟುಂಬಸ್ಥರು. ಶಶಿ ತಾತ ಕಡಲೆಕಾಯಿ, ಭತ್ತ, ರಾಗಿ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದರಂತೆ.

    ಏನು.. ಶಶಿ 'ರೈತ' ಅಂತ ಸುಳ್ಳು ಹೇಳಿಕೊಂಡು 'ಬಿಗ್ ಬಾಸ್' ಮನೆಗೆ ಬಂದ್ರಾ.?ಏನು.. ಶಶಿ 'ರೈತ' ಅಂತ ಸುಳ್ಳು ಹೇಳಿಕೊಂಡು 'ಬಿಗ್ ಬಾಸ್' ಮನೆಗೆ ಬಂದ್ರಾ.?

    ಕೃಷಿ ಕೈಬಿಟ್ಟ ಶಶಿ ತಂದೆ

    ಕೃಷಿ ಕೈಬಿಟ್ಟ ಶಶಿ ತಂದೆ

    ಶಶಿ ತಾತ ತೀರಿಕೊಂಡ ಮೇಲೆ ಕೃಷಿಯಲ್ಲಿ ಕುಟುಂಬಕ್ಕೆ ನಷ್ಟ ಉಂಟಾಯಿತು. ಹೀಗಾಗಿ, ಕೃಷಿಯನ್ನ ಬಿಟ್ಟು ಶಶಿ ತಂದೆ ಶ್ರೀರಾಮ್ ರೆಡ್ಡಿ ಹೋಟೆಲ್ ಶುರು ಮಾಡಿದರು. ಆರೇಳು ವರ್ಷ ಹೋಟೆಲ್ ನಡೆಸಿದ ಮೇಲೆ ಟೆಕ್ಸ್ ಟೈಲ್ಸ್ ಅಂಗಡಿ ಇಟ್ಟುಕೊಂಡರು. ಈಗಲೂ ಚಿಂತಾಮಣಿಯಲ್ಲಿ ಅವರ ಬಳಿ ಟೆಕ್ಸ್ ಟೈಲ್ ಅಂಗಡಿ ಇದೆ.

    ಕೃಷಿ ಕೆಲಸ ಮಾಡುತ್ತಿರುವ ಶಶಿ

    ಕೃಷಿ ಕೆಲಸ ಮಾಡುತ್ತಿರುವ ಶಶಿ

    ರಾಮನಗರದ ಬಳಿ ನಾಲ್ಕು ಎಕರೆ ಭೂಮಿಯನ್ನ ಭೋಗ್ಯಕ್ಕೆ ಪಡೆದು ಅದರಲ್ಲಿ ಶಶಿ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಜೊತೆಗೆ ಜೋಳ, ಟೋಮೋಟೋ ಮುಂತಾದವುಗಳನ್ನು ಬೆಳೆಯುತ್ತಿದ್ದಾರಂತೆ. ಹಾಗಂತ ತಂದೆ ಶ್ರೀರಾಮ್ ರೆಡ್ಡಿ ಹೇಳುತ್ತಾರೆ.

    ಹೆಮ್ಮೆ ಇದೆ.!

    ಹೆಮ್ಮೆ ಇದೆ.!

    'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಶಶಿ ಗ್ರ್ಯಾಂಡ್ ಫಿನಾಲೆವರೆಗೂ ಬಂದಿರುವುದಕ್ಕೆ ತಂದೆ ಶ್ರೀರಾಮ್ ರೆಡ್ಡಿಗೆ ಹೆಮ್ಮೆ ಇದೆ. ಫೈನಲ್ 5 ಹಂತ ತಲುಪಿರುವ ಶಶಿ 'ಬಿಗ್ ಬಾಸ್' ವಿನ್ನರ್ ಆಗ್ತಾರಾ, ನೋಡಬೇಕು.

    English summary
    Bigg Boss Kannada 6: Shashi Kumar is not a Fake farmer says his father Sriram Reddy.
    Friday, January 25, 2019, 16:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X