For Quick Alerts
  ALLOW NOTIFICATIONS  
  For Daily Alerts

  ರಾಕೇಶ್ ಮಾತನ್ನ ಕೇಳಲಿಲ್ಲ ಅಂದಿದ್ರೆ, ಅಕ್ಷತಾ ಬಕ್ರಾ ಆಗ್ತಿರ್ಲಿಲ್ಲ.!

  |
  Bigg Boss Kannada Season 6: ರಾಕೇಶ್ ಮಾತನ್ನ ಕೇಳಲಿಲ್ಲ ಅಂದಿದ್ರೆ, ಅಕ್ಷತಾ ಬಕ್ರಾ ಆಗ್ತಿರ್ಲಿಲ್ಲ.!

  'ಬಿಗ್ ಬಾಸ್' ಮನೆಯಲ್ಲಿ ಕಳೆದ ವಾರ ದೊಡ್ಡ ಫೂಲ್ ಆಗಿದ್ದು ಅಕ್ಷತಾ ಮತ್ತು ರಾಕೇಶ್. 'ಬಿಗ್ ಬಾಸ್' ಕೊಟ್ಟಿದ್ದ ಪ್ರಾಂಕ್ ಚಟುವಟಿಕೆಯನ್ನ ಇಟ್ಟುಕೊಂಡು ಎಲ್ಲರೂ ರಾಕೇಶ್ ಮತ್ತು ಅಕ್ಷತಾ ರನ್ನ ಬಕ್ರಾ ಮಾಡಿದರು.

  'ಮಿಡ್ ವೀಕ್ ಎವಿಕ್ಷನ್' ಹೆಸರಿನಲ್ಲಿ 'ಬಿಗ್ ಬಾಸ್' ನೀಡಿದ್ದ ಪ್ರಾಂಕ್ ಚಟುವಟಿಕೆಯಲ್ಲಿ ಬಹುಮತದಿಂದ ಅಕ್ಷತಾ ರನ್ನ ಔಟ್ ಮಾಡಬೇಕಿತ್ತು. ಎಲ್ಲರೂ ನಾಟಕ ಮಾಡುತ್ತಿದ್ದರೂ, ರಾಕೇಶ್ ಮತ್ತು ಅಕ್ಷತಾಗೆ ಯಾವುದೇ ಅನುಮಾನ ಬರಲಿಲ್ಲ.

  ರಾಕೇಶ್ ಮತ್ತು ಅಕ್ಷತಾ ರನ್ನ ಬಿಟ್ಟು, ಮಿಕ್ಕವರೆಲ್ಲರ ಜೊತೆಗೆ ಮಾತುಕತೆ ನಡೆಸಿದ ಧನರಾಜ್ ಮೇಲೆ ಅಕ್ಷತಾಗೆ ಡೌಟ್ ಬಂದಿತ್ತು. ಆದ್ರೆ, ಅಷ್ಟರಲ್ಲಿ ತಮ್ಮ ಅಭಿಪ್ರಾಯವನ್ನ ರಾಕೇಶ್, ಅಕ್ಷತಾ ಮೇಲೆ ಹೇರಿಕೆ ಮಾಡಿದರು. ಇದರಿಂದ ಅಕ್ಷತಾ ಕೂಡ ಎಲಿಮಿನೇಷನ್ ಟೆನ್ಷನ್ ಗೆ ಒಳಗಾದರು.

  ಒಂದು ವೇಳೆ ರಾಕೇಶ್ ಮಾತನ್ನ ಕೇಳದೆ, ತಮ್ಮ ಅಭಿಪ್ರಾಯಕ್ಕೆ ಬೆಲೆ ಕೊಟ್ಟಿದ್ದರೆ ಅಕ್ಷತಾ ಫೂಲ್ ಆಗುತ್ತಿರಲಿಲ್ಲ.! ಅದಕ್ಕೆ ಸುದೀಪ್ ಆಡಿದ ಮಾತುಗಳೇ ಸಾಕ್ಷಿ. ಮುಂದೆ ಓದಿರಿ...

  ರಾಕೇಶ್ ಗೆ ಅಳು ಜಾಸ್ತಿ

  ರಾಕೇಶ್ ಗೆ ಅಳು ಜಾಸ್ತಿ

  ''ಮಿಡ್ ವೀಕ್ ಎವಿಕ್ಷನ್ ಪ್ರಾಂಕ್ ವೇಳೆ ಅಕ್ಷತಾಗಿಂತ ಜಾಸ್ತಿ ಕಣ್ಣೀರು ಹಾಕಿದ್ದು ತಾವು.. ಅವತ್ತು ಅಕ್ಷತಾ ಹೋಗದೇ ಇದ್ದರೂ, ಇವತ್ತು ಹೋಗಬಹುದು'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ರಾಕೇಶ್ ನ ಸುದೀಪ್ ಪ್ರಶ್ನಿಸಿದರು.

  ಈ ಪ್ರಾಂಕ್ ಬೇಕಿತ್ತಾ 'ಬಿಗ್ ಬಾಸ್'.? ಇದನ್ನೆಲ್ಲ ನೋಡುವ ಕರ್ಮ ನಮಗ್ಯಾಕೆ.?

  ಇವತ್ತು ಹೋದರೂ ಅಳುವೆ.!

  ಇವತ್ತು ಹೋದರೂ ಅಳುವೆ.!

  ಸುದೀಪ್ ಕೇಳಿದ ಪ್ರಶ್ನೆ, ''ನನಗೆ ಅದು ರಿಯಲ್ ಅನಿಸ್ತು. ಹೀಗಾಗಿ ಅಳು ಬಂತು. ಇವತ್ತು ಹೋದರೂ ಅಳುತ್ತೇನೆ'' ಎಂದರು ರಾಕೇಶ್.

  'ಬಿಗ್ ಬಾಸ್' ಮನೆಯಲ್ಲಿ ಹೈಡ್ರಾಮಾ: ಬಕ್ರಾ ಆದ ರಾಕೇಶ್-ಅಕ್ಷತಾ.!

  ಅಕ್ಷತಾಗೆ ಸುದೀಪ್ ಸಲಹೆ

  ಅಕ್ಷತಾಗೆ ಸುದೀಪ್ ಸಲಹೆ

  ''ರಾಕೇಶ್ ಗೆ ಏನೂ ಡೌಟ್ ಬರಲಿಲ್ಲ. ಅಕ್ಷತಾಗೆ ಡೌಟ್ ಬರುವುದಕ್ಕಿತ್ತು. ಅಷ್ಟರಲ್ಲಿ ರಾಕೇಶ್ ಕಟ್ ಮಾಡಿದ್ರು'' ಎಂದ ಸುದೀಪ್, ಅಕ್ಷತಾ ಗೆ ಕೊಟ್ಟ ಸಲಹೆ ಇದು - ''ನಮ್ಮ ಅಭಿಪ್ರಾಯಗಳನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ. ಕೆಲವೊಮ್ಮೆ ನಮ್ಮ ಅಭಿಪ್ರಾಯಗಳು ಬಹಳ ಮುಖ್ಯ''

  ತಾಳಿ ಕಟ್ಟಿದ ಪತಿ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಅಕ್ಷತಾ ಹೀಗೇ ಹೇಳೋದಾ.?

  ಯಾವುದೂ ಫ್ಲಾಪ್ ಆಗಿಲ್ಲ.!

  ಯಾವುದೂ ಫ್ಲಾಪ್ ಆಗಿಲ್ಲ.!

  ''ಇವತ್ತಿನವರೆಗೂ ಬಿಗ್ ಬಾಸ್ ಕೊಟ್ಟಿರುವ ಟಾಸ್ಕ್ ಗಳು ಫ್ಲಾಪ್ ಆಗಿಲ್ಲ.

  ಕಾರಣ, ಅಷ್ಟು ಚೆನ್ನಾಗಿ ನಿಮ್ಮನ್ನ ಅನಲೈಸ್ ಮಾಡಿರುತ್ತಾರೆ'' ಎಂದರು ಸುದೀಪ್. ಅಲ್ಲಿಗೆ, ರಾಕೇಶ್-ಅಕ್ಷತಾ ವರ್ತನೆ ಹೀಗೇ ಇರುತ್ತೆ ಎಂಬುದನ್ನ ಅರಿತು 'ಮಿಡ್ ವೀಕ್ ಎವಿಕ್ಷನ್' ಪ್ರಾಂಕ್ ಟಾಸ್ಕ್ ಕೊಟ್ಟಿರಬಹುದೇ.?!

  'ಬಿಗ್ ಬಾಸ್' ಮನೆಯಲ್ಲಿ ಹೈಡ್ರಾಮಾ: ಬಕ್ರಾ ಆದ ರಾಕೇಶ್-ಅಕ್ಷತಾ.!

  English summary
  Bigg Boss Kannada 6: Week 7: Sudeep advices Akshata to give importance to her own opinion.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X