For Quick Alerts
  ALLOW NOTIFICATIONS  
  For Daily Alerts

  'ಕಂಟ್ರೋಲ್ ನಲ್ಲಿ ಇರಿ' ಎಂದು ಮಾರ್ಡನ್ ರೈತ ಶಶಿಗೆ ಕಿವಿ ಹಿಂಡಿದ ಸುದೀಪ್

  |
  Bigg Boss Kannada Season 6: ಕಂಟ್ರೋಲ್ ನಲ್ಲಿ ಇರಿ' ಎಂದು ಮಾರ್ಡನ್ ರೈತ ಶಶಿಗೆ ಕಿವಿ ಹಿಂಡಿದ ಸುದೀಪ್

  'ಆಧುನಿಕ ರೈತ' ಎಂಬ ಇಮೇಜಿನೊಂದಿಗೆ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟವರು ಶಶಿ ಕುಮಾರ್. ನೋಡಲು ಸ್ಮಾರ್ಟ್ ಆಗಿ ಕಾಣುವ ಶಶಿ ತುಂಬಾ ಸಾಫ್ಟ್ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಯಾಕಂದ್ರೆ, ಮೊನ್ನೆಯಷ್ಟೇ ಆವೇಶಕ್ಕೆ ಒಳಗಾಗಿ ತಮ್ಮ ಕೈ ಮೂಳೆಯನ್ನೇ ಶಶಿ ಮುರಿದುಕೊಂಡಿದ್ದರು.

  ಕವಿತಾ ಮ್ಯಾಟರ್ ನಲ್ಲಿ ತಲೆ ಹಾಕದೆ, ಸೈಲೆಂಟ್ ಆಗಿ ಇದ್ದಿದ್ದರೆ, ಶಶಿ ಕೈಮೂಳೆಗಳು ಸೇಫ್ ಆಗಿ ಇರುತ್ತಿತ್ತು. ಆದ್ರೆ, ಒಂದ್ಕಡೆ ಕವಿತಾ ಗೊಳೋ ಅಂತ ಅಳುತ್ತಿದ್ದರೆ, ಇತ್ತ ಗರಂ ಆಗಿ ರೊಚ್ಚಿಗೆದ್ದವರು ಶಶಿ ಮತ್ತು ಜಯಶ್ರೀ.

  ಶಶಿ ಮತ್ತು ಆಂಡ್ರ್ಯೂ ನಡುವೆ ಮಾತಿಗೆ ಮಾತು ಬೆಳೆದು ಕೋಪಕ್ಕೆ ತುತ್ತಾದ ಶಶಿ ಗೋಡೆಗೆ ಕೈ ಗುದ್ದುಕೊಂಡರು. ಪರಿಣಾಮ, ಶಶಿ ಕೈಯಲ್ಲಿರುವ ಎರಡು ಮೂಳೆಗಳು ಮುರಿದು ಹೋಗಿವೆ. ಮೂರು ವಾರಗಳ ಕಾಲ ವಿಶ್ರಾಂತಿಯನ್ನು ವೈದ್ಯರು ಸೂಚಿಸಿದ್ದಾರೆ.

  'ಬಿಗ್ ಬಾಸ್' ಮನೆಯಲ್ಲಿ ಕೈ ಮುರಿದುಕೊಂಡು ಕೂತರೆ ಆಟ ಆಡಲು ಸಾಧ್ಯವೇ.? ಟಾಸ್ಕ್ ನಲ್ಲಿ ಚೆನ್ನಾಗಿ ಪರ್ಫಾಮ್ ಮಾಡದೆ, ನಾಮಿನೇಟ್ ಆಗಿ ಶಶಿ ಔಟ್ ಆಗುವ ಸಾಧ್ಯತೆಗಳು ಕೂಡ ಇವೆ. ಹೀಗಾಗಿ, ''ಕಂಟ್ರೋಲ್ ನಲ್ಲಿ ಇರಿ'' ಎಂದು ಶಶಿಗೆ ಸುದೀಪ್ ಕಿವಿ ಹಿಂಡಿದರು. ಮುಂದೆ ಓದಿರಿ...

  ಶಶಿಗೆ ಕವಿತಾ 'ಪಾಠ'

  ಶಶಿಗೆ ಕವಿತಾ 'ಪಾಠ'

  ಶಶಿ ಕೈ ಮೂಳೆ ಮುರಿದಿದೆ ಅಂತ ಗೊತ್ತಾದ್ಮೇಲೆ, ಕಣ್ಣೀರು ಸುರಿಸುತ್ತಿದ್ದ ಕವಿತಾ ಕೂಲ್ ಆಗಿ ''ಯಾಕಿದು.. ಅಷ್ಟೊಂದು ಕೋಪ ಅವಶ್ಯಕತೆ ಇರಲಿಲ್ಲ. ನಿನಗೆ ಇದು ದೊಡ್ಡ ಪಾಠ'' ಅಂತ ಶಶಿಗೆ ಪಾಠ ಮಾಡಿದರು.

  'ತ್ರಿಮೂರ್ತಿ'ಗಳಿಗೆ ಕ್ಲಾಸ್ ತೆಗೆದುಕೊಂಡ ಸುದೀಪ್: ತಪ್ಪೊಪ್ಪಿಕೊಂಡ ಕವಿತಾ.!

  ಕವಿತಾ ಟೈಮ್ ಕೊಡಬಾರದಿತ್ತು.!

  ಕವಿತಾ ಟೈಮ್ ಕೊಡಬಾರದಿತ್ತು.!

  ''ಇವಳು (ಕವಿತಾ) ಅವನಿಗೆ (ಆಂಡ್ರ್ಯೂ) ಟೈಮ್ ಕೊಡದೇ ಇದ್ದಿದ್ರೆ, ಇಲ್ಲಿಯವರೆಗೂ ಬರುತ್ತಿರಲಿಲ್ಲ'' ಅಂತ ಕೈ ಮೂಳೆ ಮುರಿದುಕೊಂಡು ಬಂದ್ಮೇಲೆ ಶಶಿ ಹೇಳಿದ್ದಾರೆ.

  ಕವಿತಾ-ಆಂಡ್ರ್ಯೂ ಜಗಳಕ್ಕೆ ಶಶಿ ಸೀಮೆಎಣ್ಣೆಯಾದ್ರೆ, ಜಯಶ್ರೀ ಬೆಂಕಿಪಟ್ಟಣ.!

  ಹುಡುಗಿಯರು ಕ್ಲೀನ್ ಬೌಲ್ಡ್ ಆಗಿರ್ತಾರಂತೆ.!

  ಹುಡುಗಿಯರು ಕ್ಲೀನ್ ಬೌಲ್ಡ್ ಆಗಿರ್ತಾರಂತೆ.!

  ಕವಿತಾ ಪರವಾಗಿ ನಿಂತು ಶಶಿ ಕೈಮೂಳೆ ಮುರಿದುಕೊಂಡಿದ್ದಕ್ಕೆ, ''ಬೇಜಾನ್ ಜನ ಹುಡುಗಿಯರು ಇದರಿಂದ ಶಶಿಗೆ ಬಿದ್ದು ಹೋಗಿರುತ್ತಾರೆ'' ಎಂಬುದು ಜಯಶ್ರೀ ಲೆಕ್ಕಾಚಾರ.

  ಕಣ್ಣೀರಿಟ್ಟು ಕೂಗಾಡಿದ ಕವಿತಾ, ಅತ್ತ ಆಂಡ್ರ್ಯೂ, ರೊಚ್ಚಿಗೆದ್ದ ಶಶಿ ಕೈಗೆ ಪೆಟ್ಟು.!

  ಸುದೀಪ್ ಹೇಳಿದ್ದೇನು.?

  ಸುದೀಪ್ ಹೇಳಿದ್ದೇನು.?

  ''ಮೊದಲ ಬಾರಿಗೆ ಹೊಡೆದುಕೊಂಡಾಗ ಮರದ ಗೋಡೆ ಆಗಿತ್ತು. ಮರದ ಗೋಡೆ ಅಂದುಕೊಂಡು ಎರಡನೇ ಬಾರಿ ಜೋರಾಗಿ ಹೊಡೆಯಲು ಹೋದ್ರಿ. ದುರಾದೃಷ್ಟವಶಾತ್ ಕಾಂಕ್ರೀಟ್ ಗೋಡೆ ಆಗಿತ್ತು. ಲೆಕ್ಕಾಚಾರ ತಪ್ಪಿತು. ಮೂಳೆಗಳು ಮುರಿದ್ವು. ಮನಸ್ಸು, ಆವೇಶ, ಭಾವನೆಗಳನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಿ... ಕೆಲವೊಮ್ಮೆ ನಮ್ಮದು ಯಾವುದಲ್ಲವೋ, ಅದು ನಮ್ಮದಲ್ಲ. ಅನ್ಯಾಯವಾಗಿ ಕೈ ಡ್ಯಾಮೇಜ್ ಮಾಡಿಕೊಂಡ್ರಿ'' ಎನ್ನುತ್ತಾ ಶಶಿಗೆ ಸುದೀಪ್ ಕಿವಿ ಹಿಂಡಿದರು.

  ಕವಿತಾ ಕಣ್ಣೀರಿಟ್ಟು ರಂಪಾಟ ಮಾಡಲು ಕಾರಣ ಆಂಡ್ರ್ಯೂ ಅಲ್ಲ, ಮತ್ಯಾರು.?

  English summary
  Bigg Boss Kannada 6: Week 5: Sudeep advices Shashi over Andrew-Kavitha 'deal' issue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X