For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಎಡಗೈಯಲ್ಲಿ 3 ಬಲಗೈಯಲ್ಲಿ 3: ಟ್ರೋಲ್ ಬೇಡವೇ ಬೇಡ ಸ್ವಾಮಿ.!

  |
  Bigg Boss Kannada Season 6: ಸುದೀಪ್ ಎಡಗೈಯಲ್ಲಿ 3 ಬಲಗೈಯಲ್ಲಿ 3: ಟ್ರೋಲ್ ಬೇಡವೇ ಬೇಡ ಸ್ವಾಮಿ.!

  'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ ಪ್ರತಿ ಸೀಸನ್ ಅಂತ್ಯದಲ್ಲೂ ವಿನ್ನರ್ ಯಾರಾಗಬಹುದು ಎಂಬ ನಿರೀಕ್ಷೆ ಹೇಗಿರುತ್ತೋ ಹಾಗೆಯೇ ಕಿಚ್ಚ ಸುದೀಪ್ ಯಾವ ಕೈಯನ್ನು ಎತ್ತಿ ವಿನ್ನರ್ ಘೋಷಣೆ ಮಾಡುತ್ತಾರೆ ಎಂಬ ಕುತೂಹಲ ಕೂಡ ಇದ್ದೇ ಇರುತ್ತದೆ.

  ಸತತ ಮೂರು ಬಾರಿ ತಮ್ಮ ಎಡ ಭಾಗದಲ್ಲಿ ಇದ್ದವರನ್ನು ವಿಜೇತರು ಎಂದು ಸುದೀಪ್ ಘೋಷಿಸಿಬಿಟ್ಟರು. ಆಗಲೇ ನೋಡಿ ಸುದೀಪ್ 'ಕೈ' ಪವಾಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗಿದ್ದು.

  'ಬಿಗ್ ಬಾಸ್ ಕನ್ನಡ-2'ರಲ್ಲಿ ಅಕುಲ್ ಬಾಲಾಜಿ, 'ಬಿಗ್ ಬಾಸ್ ಕನ್ನಡ-3'ರಲ್ಲಿ ಶೃತಿ ಮತ್ತು 'ಬಿಗ್ ಬಾಸ್ ಕನ್ನಡ-4'ರಲ್ಲಿ ಪ್ರಥಮ್... ಈ ಮೂವರೂ ಕಾಕತಾಳೀಯವೆಂಬಂತೆ ಸುದೀಪ್ ಎಡಭಾಗದಲ್ಲೇ ನಿಂತಿದ್ದರು.! ತಮ್ಮ ಎಡ ಭಾಗದಲ್ಲಿ ಇದ್ದವರ ಕೈಯನ್ನು ಹಿಡಿದು ತಮ್ಮ ಎಡಗೈ ಎತ್ತುವ ಮೂಲಕ ಸುದೀಪ್ ವಿನ್ನರ್ ಅನೌನ್ಸ್ ಮಾಡಿದ್ದರು.

  ಯಾವಾಗ ಇದು ಟ್ರೋಲ್ ಆಯ್ತೋ, ಸುದೀಪ್ ಎಚ್ಚೆತ್ತುಕೊಂಡರು. ಅದಕ್ಕೆ ನೋಡಿ.. ಕಳೆದ ಬಾರಿ ಮತ್ತು ಈ ಬಾರಿ ಹುಷಾರಾಗಿ ವಿನ್ನರ್ ಗಳನ್ನು ಬಲಭಾಗದಲ್ಲಿ ನಿಲ್ಲುವಂತೆ ನೋಡಿಕೊಂಡರು. ಮುಂದೆ ಓದಿರಿ....

  ಎಲ್ಲರ ಅಭಿಪ್ರಾಯ ಕೇಳಿದ ಸುದೀಪ್

  ಎಲ್ಲರ ಅಭಿಪ್ರಾಯ ಕೇಳಿದ ಸುದೀಪ್

  'ಬಿಗ್ ಬಾಸ್ ಕನ್ನಡ-6' ಗ್ರ್ಯಾಂಡ್ ಫಿನಾಲೆಯಲ್ಲಿ ಟಾಪ್ 2 ಹಂತ ತಲುಪಿದ್ದ ಶಶಿಕುಮಾರ್ ಮತ್ತು ನವೀನ್ ಸಜ್ಜು ಯಾವ ಕಡೆ ನಿಲ್ಲಬೇಕು ಎನ್ನುವ ಬಗ್ಗೆ ಇತರೆ ಸ್ಪರ್ಧಿಗಳ ಅಭಿಪ್ರಾಯವನ್ನು ಮೊದಲು ಸುದೀಪ್ ಕೇಳಿದರು. ಎಲ್ಲರೂ ಒಂದೊಂದು ರೀತಿ ಹೇಳಿದ ಮೇಲೆ ಸುದೀಪ್ ಒಂದು ಪ್ಲಾನ್ ಮಾಡಿದ್ದರು.

  'ಬಿಗ್ ಬಾಸ್' ಫಲಿತಾಂಶದಲ್ಲಿ ಸುದೀಪ್ 'ಕೈ'ಗಳ ಪವಾಡ

  ಶಶಿ ಬಲಗೈ ಬೇಡ

  ಶಶಿ ಬಲಗೈ ಬೇಡ

  'ಬಿಗ್ ಬಾಸ್' ಮನೆಯೊಳಗೆ ಇದ್ದಾಗ ತಮ್ಮ ಬಲಗೈಯನ್ನು ಶಶಿ ಮುರಿದುಕೊಂಡಿದ್ದರು. ಹೀಗಾಗಿ ಶಶಿ ಬಲಗೈ ಸಹವಾಸ ಬೇಡ ಎಂದು ಶಶಿ ರವರ ಎಡಗೈ ಹಿಡಿದುಕೊಳ್ಳಲು ಸುದೀಪ್ ಮನಸ್ಸು ಮಾಡಿದರು. ಅಂತಿಮವಾಗಿ ಶಶಿ ಎಡಗೈಯನ್ನು ಎತ್ತಿ ಹಿಡಿಯುವ ಮೂಲಕ 'ಬಿಗ್ ಬಾಸ್' ವಿನ್ನರ್ ಅಂತ ಸುದೀಪ್ ಅನೌನ್ಸ್ ಮಾಡಿದರು.

  ಬಿಗ್ ಬಾಸ್ 6ನೇ ಸೀಸನ್ ಅಂತ್ಯ : ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ ಕಿಚ್ಚ

  ಕಳೆದ ಬಾರಿ ಹೀಗೆ ಆಗಿತ್ತು.!

  ಕಳೆದ ಬಾರಿ ಹೀಗೆ ಆಗಿತ್ತು.!

  ಕಳೆದ ಸೀಸನ್ ನಲ್ಲಿ ಟ್ರೋಲ್ ಆಗಬಾರದು ಎಂಬ ಕಾರಣಕ್ಕೆ ವಿನ್ನರ್ ಚಂದನ್ ಶೆಟ್ಟಿ ಅವರನ್ನು ತಮ್ಮ ಬಲಭಾಗದಲ್ಲಿ ಕಿಚ್ಚ ಸುದೀಪ್ ನಿಲ್ಲಿಸಿಕೊಂಡಿದ್ದರು.

  ಫಿನಾಲೆ ಗ್ಯಾಪ್ ನಲ್ಲಿ 'ಬಿಗ್ ಬಾಸ್' ಸ್ಪರ್ಧಿಗಳಿಗೆ ಗ್ರಾಂಡ್ ಪಾರ್ಟಿ ಕೊಟ್ಟ ಕಿಚ್ಚ ಸುದೀಪ್

  ಮೊದಲ ಸೀಸನ್ ನಲ್ಲಿ ಏನಾಗಿತ್ತು.?

  ಮೊದಲ ಸೀಸನ್ ನಲ್ಲಿ ಏನಾಗಿತ್ತು.?

  ಮೊದಲನೇ ಸೀಸನ್ ನಲ್ಲಿ ವಿಜೇತರಾದ ವಿಜಯ ರಾಘವೇಂದ್ರ, ಕಿಚ್ಚ ಸುದೀಪ್ ರವರ ಬಲಭಾಗದಲ್ಲಿ ನಿಂತಿದ್ದರು. ಸುದೀಪ್ ಎಡಭಾಗದಲ್ಲಿ ನಿಂತಿದ್ದ ಅರುಣ್ ಸಾಗರ್ ರನ್ನರ್ ಅಪ್ ಆದರು.

  3 ಹಾಗೆ.. 3 ಹೀಗೆ..

  3 ಹಾಗೆ.. 3 ಹೀಗೆ..

  ಒಟ್ನಲ್ಲಿ 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ 6 ಸೀಸನ್ ಗಳಲ್ಲಿ 3 ವಿನ್ನರ್ ಗಳು ಸುದೀಪ್ ಬಲ ಭಾಗದಲ್ಲಿ ನಿಂತು ವಿನ್ನರ್ ಆಗಿದ್ದರೆ, ಉಳಿದ ಮೂವರು ಸುದೀಪ್ ಎಡ ಭಾಗದಲ್ಲಿ ನಿಂತು ಗೆಲುವು ಸಾಧಿಸಿದ್ದಾರೆ. ಇದರಲ್ಲಿ ಅಂತ ಸ್ಪೆಷಲ್ ಏನಿಲ್ಲದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಚರ್ಚೆ ನಡೆಯುತ್ತಲೇ ಇದೆ.

  English summary
  Bigg Boss Kannada 6: Sudeep avoids in getting trolled because of Hands.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X