For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಯಿಂದ ಹೊರಬಂದ ನಿವೇದಿತಾ ಗೌಡ

  |

  'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಗ್ರ್ಯಾಂಡ್ ಫಿನಾಲೆವರೆಗೂ ತಲುಪಿದ್ದ ನಿವೇದಿತಾ ಗೌಡ 'ಬಿಗ್ ಬಾಸ್ ಕನ್ನಡ-6' ಶೋನಲ್ಲಿ ವಿಶೇಷ ಅತಿಥಿಯಾಗಿ ಎಂಟ್ರಿಕೊಟ್ಟಿದ್ದರು.

  'ಬಿಗ್ ಬಾಸ್' ಮನೆಯೊಳಗೆ ಹದಿನೇಳು ದಿನಗಳ ಕಾಲ ಒಂಥರಾ ಪಾಸಿಟೀವ್ ಫೀಲ್ ಕೊಟ್ಟ ನಿವೇದಿತಾ ಗೌಡ ಇದೀಗ ಹೊರಬಂದಿದ್ದಾರೆ.

  ಹಾಗ್ನೋಡಿದ್ರೆ, ನಿವೇದಿತಾ ಗೌಡ ಸ್ಪೆಷಲ್ ಗೆಸ್ಟ್ ಆಗಿ ಬಂದಿರುವುದು ಇತರೆ ಸ್ಪರ್ಧಿಗಳಿಗೆ ಗೊತ್ತಿರಲಿಲ್ಲ. ಎಲ್ಲರಿಗೂ ತಾನು ಸ್ಪರ್ಧಿ ಅಂತಲೇ ನಿವೇದಿತಾ ಗೌಡ ನಂಬಿಸಿದ್ದರು.

  ನಿವೇದಿತಾ ಗೌಡಗೆ ಭೇಷ್ ಎಂದು ಹಾಡಿ ಹೊಗಳಿದ ಕಿಚ್ಚ ಸುದೀಪ್.!

  ಆದ್ರೆ, 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ''ನಿವೇದಿತಾ ಗೌಡ ಬಂದಿರುವುದು ಅತಿಥಿಯಾಗಿ'' ಎಂಬ ಗುಟ್ಟನ್ನು ಕಿಚ್ಚ ಸುದೀಪ್ ರಟ್ಟು ಮಾಡಿದರು. ಬಳಿಕ 'ಬಿಗ್ ಬಾಸ್' ಮನೆಯಿಂದ ನಿವೇದಿತಾ ಗೌಡಗೆ ಬೀಳ್ಕೊಡುಗೆ ನೀಡಲಾಯಿತು.

  'ಬಿಗ್ ಬಾಸ್' ಮನೆಯೊಳಗೆ ನಿವೇದಿತಾ ಒಂಥರಾ ಆಟಕ್ಕುಂಟು ಲೆಕ್ಕಕ್ಕಿಲ್ಲ.!

  ಗಾಯಕ ಮತ್ತು ಸಂಗೀತ ಸಂಯೋಜಕ ನವೀನ್ ಸಜ್ಜು, ನಿವೇದಿತಾಗಾಗಿ ಒಂದು ಹಾಡನ್ನ ಹಾಡಿದ್ದು ವಿಶೇಷ. ಕಳೆದ ಬಾರಿ ನಿವೇದಿತಾಗಾಗಿ ಚಂದನ್ ಶೆಟ್ಟಿ 'ಗೊಂಬೆ ಗೊಂಬೆ' ಹಾಡನ್ನ ರೆಡಿ ಮಾಡಿದ್ದರು.

  ಮೂವರು ಹುಡುಗಿಯರು ಬಂದ್ರು: 'ಬಿಗ್ ಬಾಸ್' ಮನೆಯ ಆಟದ ದಿಕ್ಕೇ ಬದಲಾಯ್ತು.!

  ಒಟ್ನಲ್ಲಿ, ವೈಲ್ಡ್ ಕಾರ್ಡ್ ಮೂಲಕ 'ಬಿಗ್ ಬಾಸ್' ಮನೆಗೆ ಬಂದಿದ್ದ ಮೂರು ಗೊಂಬೆಗಳ ಪೈಕಿ ಎರಡು ಗೊಂಬೆಗಳು ಔಟ್ ಆಗಿವೆ. ಇನ್ಮುಂದೆ ಆಟ ಹೇಗಿರುತ್ತೋ, ನೋಡಬೇಕು.

  English summary
  Bigg Boss Kannada 6: Week 10: Niveditha Gowda bids good bye to Bigg Boss House.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X