ಸುದೀಪ್ ಕಡೆಯಿಂದ ಸತತವಾಗಿ ಎರಡು ಬಾರಿ ಚಪ್ಪಾಳೆ ಗಿಟ್ಟಿಸಿದ ನವೀನ್.!
'ಬಿಗ್ ಬಾಸ್' ಕೊಡುವ ವಿಶೇಷ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ಕೊಡುವವರಿಗೆ ಸುದೀಪ್ ಕಡೆಯಿಂದ 'ಮೆಚ್ಚುಗೆಯ ಚಪ್ಪಾಳೆ' ಸಿಗುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ.
ಕಳೆದ ವಾರ ಕ್ಯಾಪ್ಟನ್ ಆಗಿ ಆಯ್ಕೆ ಆದ ನವೀನ್ ಸಜ್ಜುಗೆ ಸುದೀಪ್ ಚಪ್ಪಾಳೆ ತಟ್ಟಿದ್ದರು. ಈ ವಾರವೂ ಗಾಯಕ ನವೀನ್ ಸಜ್ಜು ರವರಿಗೆ ಸುದೀಪ್ ಕಡೆಯಿಂದ ಚಪ್ಪಾಳೆ ಲಭಿಸಿದೆ. ಸತತವಾಗಿ ಎರಡು ವಾರಗಳ ಕಾಲ ಸುದೀಪ್ ಕಡೆಯಿಂದ 'ಮೆಚ್ಚುಗೆಯ ಚಪ್ಪಾಳೆ' ಸಿಕ್ಕಿರುವುದು ನವೀನ್ ಸಜ್ಜುಗೆ ಮಾತ್ರ.

'ಬಿಗ್ ಬಾಸ್' ನೀಡಿದ್ದ ವಿಶೇಷ ಸವಾಲಿನಲ್ಲಿ ನವೀನ್ ಚೆನ್ನಾಗಿ ಪರ್ಫಾರ್ಮ್ ಮಾಡಿ ನವೀನ್ ವಿಜೇತರಾದರು. ಅಲ್ಲದೇ, ಗ್ರ್ಯಾಂಡ್ ಫಿನಾಲೆ ವೀಕ್ ಗೆ ಡೈರೆಕ್ಟ್ ಎಂಟ್ರಿ ಪಡೆದರು. ಹೀಗಾಗಿ, ಸುದೀಪ್ ಶ್ಲಾಘನೆ ನವೀನ್ ಪಾಲಾಗಿದೆ.
''ಈ ವಾರ ತುಂಬಾ ಅದ್ಭುತವಾಗಿ ಆಟ ಆಡಿದ್ರಿ. ಹೀಗಾಗಿ, ಈ ವಾರವೂ ಸ್ಪೆಷಲ್ ಚಪ್ಪಾಳೆ ನಿಮಗೆ. ಕಾರ್ ಟಾಸ್ಕ್ ನಲ್ಲಿ ನಿಮ್ಮ ಪ್ರದರ್ಶನ ಚೆನ್ನಾಗಿತ್ತು. ಒಂಟಿ ಕಾಲಿನಲ್ಲಿ ನಿಂತಿದ್ರಿ. ನಿಮಗೆ ವಿಶೇಷ ಅಧಿಕಾರ ಸಿಕ್ಕಿದೆ. ಫಿನಾಲೆ ವಾರಕ್ಕೆ ನಿಮಗೆ ಡೈರೆಕ್ಟ್ ಟಿಕೆಟ್ ಸಿಕ್ಕಿದೆ'' ಅಂತ ನವೀನ್ ಗೆ ಸುದೀಪ್ ಶುಭಾಶಯ ತಿಳಿಸಿದರು.


Click it and Unblock the Notifications











