twitter
    For Quick Alerts
    ALLOW NOTIFICATIONS  
    For Daily Alerts

    'ಬಿಗ್ ಬಾಸ್' ಮನೆಯಲ್ಲಿ ವಿಶೇಷ ಅತಿಥಿಗಳು: ಇನ್ಮೇಲೆ ಇವರೇ ಗೊಂಬೆ ಆಡ್ಸೋರು.!

    |

    'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಕೊನೆಯ ಹಂತ ತಲುಪಿದೆ. ಇನ್ನೆರಡು ವಾರಗಳಲ್ಲಿ 'ಬಿಗ್ ಬಾಸ್ ಕನ್ನಡ-6' ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಹೀಗಿರುವಾಗಲೇ, ವಿಶೇಷ ಅತಿಥಿಗಳು 'ಬಿಗ್ ಬಾಸ್' ಮನೆಯ ಔಟ್ ಹೌಸ್ ಗೆ ಕಾಲಿಟ್ಟಿದ್ದಾರೆ.

    'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಔಟ್ ಹೌಸ್ ಬಾಗಿಲು ತೆಗೆಯಲಾಗಿದೆ. ಔಟ್ ಹೌಸ್ ನಲ್ಲಿ ಇದ್ದುಕೊಂಡು ಎಲ್ಲರ ಚಲನ ವಲನ ಗಮನಿಸುತ್ತಾ, ಸ್ಪರ್ಧಿಗಳನ್ನ ಗೊಂಬೆಯ ಹಾಗೆ ಆಡಿಸಲು ವಿಶೇಷ ಅತಿಥಿಗಳು ಸಜ್ಜಾಗಿದ್ದಾರೆ.

    ವಿಶೇಷ ಅತಿಥಿಗಳಿಗೆ 'ಬಿಗ್ ಬಾಸ್' ವಿಶೇಷ ಅಧಿಕಾರವನ್ನೂ ನೀಡಿದ್ದಾರೆ. ಹೀಗಾಗಿ, ಸ್ಪರ್ಧಿಗಳ ಗೇಮ್ ಪ್ಲಾನ್ ಈ ವಾರ ವರ್ಕ್ ಆಗುವುದು ತುಂಬಾ ಕಷ್ಟ.

    ಅಸಲಿಗೆ, 'ಬಿಗ್ ಬಾಸ್' ಮನೆಗೆ ಬಂದಿರುವ ವಿಶೇಷ ಅತಿಥಿಗಳು ಯಾರು ಅಂದ್ರಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

    ಒಳ್ಳೆ ಹುಡುಗ ಪ್ರಥಮ್

    ಒಳ್ಳೆ ಹುಡುಗ ಪ್ರಥಮ್

    'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ವಿಜೇತ ಒಳ್ಳೆ ಹುಡುಗ ಪ್ರಥಮ್ ಸದ್ಯ ವಿಶೇಷ ಅತಿಥಿಯಾಗಿ 'ಬಿಗ್ ಬಾಸ್' ಮನೆಯ ಔಟ್ ಹೌಸ್ ಪ್ರವೇಶಿಸಿದ್ದಾರೆ. ಮಾತಲ್ಲೇ ಮನೆ ಕಟ್ಟುವ ಪ್ರಥಮ್, 'ಬಿಗ್ ಬಾಸ್' ಮನೆಯಲ್ಲಿ ಈ ಬಾರಿ ಏನೆಲ್ಲ ಮಾಡಬಹುದು ಎಂಬುದೇ ಕುತೂಹಲ.

    ಸುದೀಪ್ ಕಡೆಯಿಂದ ಸತತವಾಗಿ ಎರಡು ಬಾರಿ ಚಪ್ಪಾಳೆ ಗಿಟ್ಟಿಸಿದ ನವೀನ್.! ಸುದೀಪ್ ಕಡೆಯಿಂದ ಸತತವಾಗಿ ಎರಡು ಬಾರಿ ಚಪ್ಪಾಳೆ ಗಿಟ್ಟಿಸಿದ ನವೀನ್.!

    ಕಿರಿಕ್ ಕೀರ್ತಿ

    ಕಿರಿಕ್ ಕೀರ್ತಿ

    'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ರನ್ನರ್ ಅಪ್ ಆಗಿದ್ದ ಕಿರಿಕ್ ಕೀರ್ತಿ ಇದೀಗ 'ಬಿಗ್ ಬಾಸ್' ಮನೆಗೆ ಸ್ಪೆಷಲ್ ಗೆಸ್ಟ್ ಆಗಿ ಎಂಟ್ರಿಕೊಟ್ಟಿದ್ದಾರೆ. ಪ್ರಥಮ್ ಜೊತೆಗೆ ಕಿರಿಕ್ ಮಾಡಿಕೊಂಡಿದ್ದ ಕೀರ್ತಿ, ಈ ಬಾರಿ ಯಾರೊಂದಿಗೆ ಕಿರಿಕ್ ಮಾಡ್ತಾರೋ, ಏನೋ.?!

    ಇಂದಿನ 'ಬಿಗ್ ಬಾಸ್' ಶೋನಲ್ಲಿ ಇರ್ತಾರೆ ಮೂರು ನಟಿಯರು ಇಂದಿನ 'ಬಿಗ್ ಬಾಸ್' ಶೋನಲ್ಲಿ ಇರ್ತಾರೆ ಮೂರು ನಟಿಯರು

    ಸಂಜನಾ

    ಸಂಜನಾ

    'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಬೇಬಿ ಡಾಲ್ ಸಂಜನಾ ಮತ್ತೆ 'ಬಿಗ್ ಬಾಸ್' ಮನೆ ಪ್ರವೇಶಿಸಿದ್ದಾರೆ. ಔಟ್ ಹೌಸ್ ನಲ್ಲಿದ್ದುಕೊಂಡು ಸ್ಪರ್ಧಿಗಳಿಗೆ ಸಂಜನಾ ಯಾವೆಲ್ಲ ಟಾಸ್ಕ್ ಕೊಡ್ತಾರೋ, ನೋಡೋಣ.

    ಕೃಷಿ ತಾಪಂಡ

    ಕೃಷಿ ತಾಪಂಡ

    ಕೊಡಗಿನ ಕುವರಿ ಕೃಷಿ ತಾಪಂಡ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು. ಇದೀಗ ಈ ಆವೃತ್ತಿಯಲ್ಲಿ ವಿಶೇಷ ಅತಿಥಿಯಾಗಿ ಬಂದಿದ್ದಾರೆ.

    ಸಮೀರಾಚಾರ್ಯ

    ಸಮೀರಾಚಾರ್ಯ

    'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಬೇರೆ ಅಡುಗೆ ಮಾಡಿಕೊಂಡು ಹಲವು ಜಗಳಗಳಿಗೆ ಸಾಕ್ಷಿ ಆಗಿದ್ದ ಸಮೀರಾಚಾರ್ಯ ಇದೀಗ 'ಬಿಗ್ ಬಾಸ್ ಕನ್ನಡ-'6' ಕಾರ್ಯಕ್ರಮಕ್ಕೆ ಸ್ಪೆಷಲ್ ಗೆಸ್ಟ್ ಆಗಿ ಕಾಲಿಟ್ಟಿದ್ದಾರೆ.

    English summary
    Bigg Boss Kannada 6: Week 13: Special Guests in Bigg Boss House.
    Tuesday, January 15, 2019, 17:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X