For Quick Alerts
  ALLOW NOTIFICATIONS  
  For Daily Alerts

  ಆಟ ಗೆದ್ದೆ ಎಂದುಕೊಂಡವರಿಗೆ ದೊಡ್ಡ ಶಾಕ್ ನೀಡಿದ 'ಬಿಗ್ ಬಾಸ್'.!

  |

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ನಾಲ್ಕನೇ ವಾರ ಸ್ಪರ್ಧಿಗಳಿಗೆ 'ಗೊಂಬೆ ಆಟವಯ್ಯ' ಎಂಬ ಚಟುವಟಿಕೆಯನ್ನ 'ಬಿಗ್ ಬಾಸ್' ನೀಡಿದ್ದರು. ಟಾಸ್ಕ್ ಅನುಸಾರ ಕಾಲ ಕಾಲಕ್ಕೆ 'ಬಿಗ್ ಬಾಸ್' ಬೇಡಿಕೆ ಇಡುವಂತೆ ಗೊಂಬೆಗಳನ್ನು ಸ್ಪರ್ಧಿಗಳು ತಯಾರಿಸಬೇಕಿತ್ತು.

  ತಯಾರಾದ ಗೊಂಬೆಗಳ ಕ್ವಾಲಿಟಿಯನ್ನ ಚೆಕ್ ಮಾಡುವ ಜವಾಬ್ದಾರಿ ಉಭಯ ತಂಡದ ಕ್ಯಾಪ್ಟನ್ ಗಳಿಗಿತ್ತು. ರಾಪಿಡ್ ರಶ್ಮಿ ಕೆಂಪು ತಂಡದ ಕ್ಯಾಪ್ಟನ್ ಆಗಿದ್ದರೆ, ಅಕ್ಷತಾ ಪಾಂಡವಪುರ ನೀಲಿ ತಂಡದ ಕ್ಯಾಪ್ಟನ್ ಆದರು. ಇಬ್ಬರೂ ಹರಾಜಿನಲ್ಲಿ ಗೊಂಬೆ ತಯಾರಿಸುವ ನೌಕರರನ್ನು ಖರೀದಿಸಿದರು.

  'ಗೊಂಬೆ ಆಟವಯ್ಯ' ಟಾಸ್ಕ್ ನಲ್ಲಿ ನಾವೇ ಗೆದ್ವಿ ಅಂತ ನೀಲಿ ತಂಡ ಲೆಕ್ಕಾಚಾರ ಹಾಕಿತ್ತು. ಆದರೆ ಎಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದು 'ಬಿಗ್ ಬಾಸ್'. ಸರಾಗವಾಗಿ ಟಾಸ್ಕ್ ನಡೆದರೂ, ಚಟುವಟಿಕೆಯಲ್ಲಿ ಸ್ಪರ್ಧಿಗಳೆಲ್ಲಾ ವಿಫಲರಾದರು ಎಂದು 'ಬಿಗ್ ಬಾಸ್' ಘೋಷಿಸಿದರು. ಪರಿಣಾಮ, ಈ ವಾರ 'ಬಿಗ್ ಬಾಸ್' ಮನೆ ಸದಸ್ಯರಿಗೆ ಲಕ್ಷುರಿ ಬಜೆಟ್ ಇಲ್ಲ. ಮುಂದೆ ಓದಿರಿ...

  ಟಾಸ್ಕ್ ನಲ್ಲಿ ಎಲ್ಲರೂ ವಿಫಲ

  ಟಾಸ್ಕ್ ನಲ್ಲಿ ಎಲ್ಲರೂ ವಿಫಲ

  'ಗೊಂಬೆ ಆಟವಯ್ಯ' ಚಟುವಟಿಕೆಯಲ್ಲಿ ಮನೆಯ ಸದಸ್ಯರು 80 ಗೊಂಬೆಗಳನ್ನು ಮಾಡಿ ಬಿಗ್ ಬಾಸ್ ಗೆ ನೀಡಬೇಕಿತ್ತು. ಆದ್ರೆ, ಕೇವಲ 16 ಗೊಂಬೆಗಳನ್ನು ನೀಡುವಲ್ಲಿ ಮಾತ್ರ ಸ್ಪರ್ಧಿಗಳು ಸಫಲರಾದರು. ಹೀಗಾಗಿ, ಟಾಸ್ಕ್ ವಿಫಲಗೊಂಡಿದೆ ಎಂದು 'ಬಿಗ್ ಬಾಸ್' ಅನೌನ್ಸ್ ಮಾಡಿದರು.

  ಉತ್ತರ ಕರ್ನಾಟಕದ ಮಂದಿಯನ್ನ ಸೋನು ಪಾಟೀಲ್ ದುರುಪಯೋಗ ಪಡಿಸಿಕೊಳ್ತಿದ್ದಾರಾ.?

  ಅಕ್ಷತಾ ಮೇಲೆ ಹಲವರಿಗೆ ಸಿಟ್ಟು

  ಅಕ್ಷತಾ ಮೇಲೆ ಹಲವರಿಗೆ ಸಿಟ್ಟು

  ಕೆಂಪು ತಂಡ ತಯಾರಿಸಿದ ಗೊಂಬೆಗಳನ್ನ ರಿಜೆಕ್ಟ್ ಮಾಡಿದವರು ಅಕ್ಷತಾ. ಆಟವನ್ನ ಅರ್ಥೈಸಿಕೊಳ್ಳದೇ, ತಮ್ಮ ತಂಡದ ಗೆಲುವಿಗಾಗಿ 'ಕೆಂಪು' ತಂಡದ ಗೊಂಬೆಗಳನ್ನು ರಿಜೆಕ್ಟ್ ಮಾಡಿದ ಅಕ್ಷತಾ ವಿರುದ್ಧ ಬಹುತೇಕ ಸ್ಪರ್ಧಿಗಳು ಸಿಡಿಮಿಡಿಗೊಂಡರು.

  ಕವಿತಾ ಜೊತೆಗೆ ಅಂಟಿಕೊಂಡು ಇರುವುದೇ ಶಶಿ ಗೇಮ್ ಪ್ಲಾನ್ ಅಂತೆ.!

  ಕ್ಷಮೆ ಕೇಳಿದ ಅಕ್ಷತಾ

  ಕ್ಷಮೆ ಕೇಳಿದ ಅಕ್ಷತಾ

  ''ಲಕ್ಷುರಿ ಬಜೆಟ್ ಪಾಯಿಂಟ್ಸ್ ಕಟ್ ಆಗಿರುವುದರಲ್ಲಿ ನನ್ನ ಪಾತ್ರ ಪ್ರಮುಖವಾಗಿದೆ. ನನ್ನ ಟೀಮ್ ಜೊತೆ ನಾನು ಆಟವಾಡಿದೆ. ನನ್ನ ಕಡೆಯಿಂದ ತಪ್ಪಾಗಿದೆ. ರಶ್ಮಿ ಕಡೆಯಿಂದಲೂ ತಪ್ಪಾಗಿದೆ. ರಶ್ಮಿಗಿಂತ ಜಾಸ್ತಿ ನನ್ನದೇ ತಪ್ಪಾಗಿರಬಹುದು. ದಯವಿಟ್ಟು ಕ್ಷಮಿಸಿ'' ಎಂದು ಅಕ್ಷತಾ ಕ್ಷಮೆ ಕೇಳಿದರು. ಹಾಗೇ, ರಶ್ಮಿ ಕೂಡ ಕ್ಷಮೆಯಾಚಿಸಿದರು.

  ಸೋನು ಪಾಟೀಲ್ ದೊಡ್ಡ ಡವ್ ರಾಣಿ, ಆಕೆಯದ್ದು ಚೀಪ್ ಗೇಮ್ ಎಂದ ವೀಕ್ಷಕರು.!

  ಕ್ಯಾಪ್ಟನ್ ಪ್ರತಿಸ್ಪರ್ಧಿ ಯಾರ್ಯಾರು.?

  ಕ್ಯಾಪ್ಟನ್ ಪ್ರತಿಸ್ಪರ್ಧಿ ಯಾರ್ಯಾರು.?

  ಚಟುವಟಿಕೆ ಮುಗಿಯುವ ಹೊತ್ತಿಗೆ ನಯನ ಬಳಿ ಅತಿ ಹೆಚ್ಚು ಹಣ ಇತ್ತು. ಇನ್ನೂ ಅತಿ ಹೆಚ್ಚು ಗೊಂಬೆಗಳನ್ನು ಹೊಂದಿದ್ದ ತಂಡದ ನಾಯಕಿ ರಶ್ಮಿ. ಹೀಗಾಗಿ, ಇವರಿಬ್ಬರೂ ಕ್ಯಾಪ್ಟನ್ ಪ್ರತಿಸ್ಪರ್ಧಿಗಳಾದರು. ಇನ್ನೂ ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಶಶಿ ಮತ್ತು ಜಯಶ್ರೀ ಕೂಡ ಕ್ಯಾಪ್ಟನ್ ರೇಸ್ ನಲ್ಲಿದ್ದಾರೆ.

  ಜೈಲು ಸೇರಿದವರಾರು.?

  ಜೈಲು ಸೇರಿದವರಾರು.?

  'ಗೊಂಬೆ ಆಟವಯ್ಯ' ಚಟುವಟಿಕೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಧನರಾಜ್ ಮತ್ತು ಸೋನು ಪಾಟೀಲ್ ಜೈಲು ಪಾಲಾದರು.

  English summary
  Bigg Boss Kannada 6: Week 4: Contestants lose luxury budget points

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X