For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಮಾತು ಕೇಳದ ಅಕ್ಷತಾಗೆ ತಾಯಿ ಕಡೆಯಿಂದ ಬಂತು ಕಟ್ಟುನಿಟ್ಟಿನ ಆದೇಶ.!

  |

  'ಬಿಗ್ ಬಾಸ್ ಕನ್ನಡ'ದಲ್ಲಿ ಈಗಾಗಲೇ ಐದು ಆವೃತ್ತಿಗಳು ಮುಗಿದು ಹೋಗಿದೆ. ಈ ಐದೂ ಆವೃತ್ತಿಗಳಲ್ಲಿ ಲಿಂಕಪ್, ಲವ್ ಟ್ರೈಯಾಂಗಲ್ ಆಗಿದೆ ನಿಜ. ಆದ್ರೆ, ಯಾವುದೂ ಕೂಡ ವಿವಾದದ ಕೇಂದ್ರಬಿಂದು ಆಗಿರಲಿಲ್ಲ.

  ಆದ್ರೆ, 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಅಕ್ಷತಾ ಮತ್ತು ರಾಕೇಶ್ ನಡುವಿನ Intense ಫ್ರೆಂಡ್ ಶಿಪ್ ಮಾತ್ರ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. 'ಬಿಗ್ ಬಾಸ್' ಮನೆಯ ಸ್ಪರ್ಧಿಗಳೇ ಇವರಿಬ್ಬರಿಗೂ ಛೀಮಾರಿ ಹಾಕಿದ್ದರು.

  ವಾದ-ವಿವಾದ-ಚರ್ಚೆ-ಡ್ರಾಮಾ ಎಲ್ಲಾ ಮುಗಿದ್ಮೇಲೆ, 'ಒಂದು ವಾರ ರಾಕೇಶ್ ಜೊತೆ ಮಾತನಾಡಲ್ಲ' ಅಂತ ಸುದೀಪ್ ಮುಂದೆ ಅಕ್ಷತಾ ಮಾತು ಕೊಟ್ಟಿದ್ದರು. ಇದಾದ ಮೇಲೂ 'ಬಿಗ್ ಬಾಸ್' ಮನೆಯಲ್ಲಿ ಹೈಡ್ರಾಮಾ ನಡೆಯಿತು.

  ಅಕ್ಷತಾ-ರಾಕೇಶ್ ನ ಮೊದಲು ಹೊರಗೆ ಹಾಕಿ ಅಂತ ವೀಕ್ಷಕರಂತೂ ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡುತ್ತಿದ್ದಾರೆ. ಇವೆಲ್ಲವನ್ನೂ ನೋಡಿ ನೋಡಿ ಬೇಸೆತ್ತ ಅಕ್ಷತಾ ತಾಯಿ, ಮಗಳಿಗಾಗಿ ಒಂದು ಖಡಕ್ ಸಂದೇಶ ಕಳುಹಿಸಿದ್ದಾರೆ. ಅದೇನು ಅಂತ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಅಕ್ಷತಾಗೆ ಬಂತು ಸಂದೇಶ.!

  ಅಕ್ಷತಾಗೆ ಬಂತು ಸಂದೇಶ.!

  'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಅಕ್ಷತಾ ಗಾಗಿ ತಾಯಿ ಕಡೆಯಿಂದ ಒಂದು ಸಂದೇಶ ಬಂತು. ಅದರಲ್ಲಿ ''ರಾಕೇಶ್ ಇಂದ ದೂರ ಇರು'' ಅಂತ ತಾಯಿ ಮಗಳಿಗೆ ಕಟ್ಟುನಿಟ್ಟಾಗಿ ಹೇಳಿದ್ದಾರೆ.

  ಮಾತು ತಪ್ಪಿದಕ್ಕೆ ಸುದೀಪ್ ಮುಂದೆ ತಲೆ ಬಾಗಿ ಕ್ಷಮೆ ಕೇಳಿದ ಅಕ್ಷತಾ

  ಅಕ್ಷತಾ ತಾಯಿ ಹೇಳಿದ್ದೇನು.?

  ಅಕ್ಷತಾ ತಾಯಿ ಹೇಳಿದ್ದೇನು.?

  ವಾಯ್ಸ್ ಮೆಸೇಜ್ ನಲ್ಲಿ, ''ಹಾಯ್ ಮಗಳೇ.. ಚೆನ್ನಾಗಿ ಆಟ ಆಡುತ್ತಿದ್ದೀಯಾ. ಆದ್ರೆ, ಕೆಲವೊಂದು ಸಲ ನಿನ್ನೆ ನೋಡೋಕೆ ಕಷ್ಟ ಆಗುತ್ತೆ. ರಾಕೇಶ್ ಇಂದ ದೂರ ಇರು. ಇಲ್ಲಿ ನಿನ್ನ ನಂಬಿರುವ ಎಷ್ಟೊಂದು ಜೀವಗಳಿವೆ. ಎಲ್ಲರನ್ನೂ ಚೆನ್ನಾಗಿ ನೋಡಿಕೋ. ನಿನ್ನ ಆಟವನ್ನ ಯಾರಿಗೂ ಬಿಟ್ಟುಕೊಡಬೇಡ. ನಿನ್ನ ಊರಿಗೆ ಒಳ್ಳೆಯ ಹೆಸರು ತೆಗೆದುಕೊಂಡು ಬಾ. ಆಡೋರ ಬಾಯಿಗೆ ಆಹಾರ ಆಗಬೇಡ. ಅತಿಯಾದರೆ ಅಮೃತವೂ ವಿಷವೇ.! ನಿನ್ನ ತಮಾಷೆ ಗುಣ ಇಲ್ಲಿ ಎದ್ದು ಕಾಣುತ್ತಿಲ್ಲ. ಚೆನ್ನಾಗಿ ಆಟ ಆಡಿ ಗೆದ್ದು ಬಾ... ನಮ್ಮೆಲ್ಲರ ಆಶೀರ್ವಾದ ನಿಮ್ಮ ಮೇಲಿದೆ'' ಎಂದು ಅಕ್ಷತಾ ತಾಯಿ ಸಂದೇಶ ನೀಡಿದ್ದಾರೆ.

  ತಾಳಿ ಕಟ್ಟಿದ ಪತಿ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಅಕ್ಷತಾ ಹೀಗೇ ಹೇಳೋದಾ.?

  ಸಂದೇಶ ಕೇಳಿ ಶಾಕ್ ಆದ ಅಕ್ಷತಾ

  ಸಂದೇಶ ಕೇಳಿ ಶಾಕ್ ಆದ ಅಕ್ಷತಾ

  ತಾಯಿ ಹೇಳಿದ ಮಾತುಗಳನ್ನ ಕೇಳಿ ಅಕ್ಷತಾ ಕೊಂಚ ತಬ್ಬಿಬ್ಬಾದರು. ಅಕ್ಷತಾ ಕಣ್ಣಾಲಿಗಳು ಒದ್ದೆ ಆದವು. ಇತ್ತ ರಾಕೇಶ್ ಮುಖ ಬಾಡಿತು.

  ರಾಕೇಶ್-ಅಕ್ಷತಾ ಹೊರಹಾಕುವಂತೆ ಮೈಸೂರಿನಲ್ಲಿ ಬೀದಿಗಿಳಿದು ಪ್ರತಿಭಟನೆ

  ಅತ್ತ ರಾಕೇಶ್ ಗೆ ವೂಟ್ ಬಿಗ್ ಪ್ರಶ್ನೆ

  ಅತ್ತ ರಾಕೇಶ್ ಗೆ ವೂಟ್ ಬಿಗ್ ಪ್ರಶ್ನೆ

  ''ಅಕ್ಷತಾ ಅವರು ನಿಮ್ಮಿಂದ ದೂರ ಇರಲು ಪ್ರಯತ್ನ ಪಟ್ಟರೂ, ತಮಗೆ ಅದು ಒಪ್ಪಿಗೆ ಆಗ್ತಾ ಇಲ್ಲ. ನಿಮಗೆ ಅವರ ಫ್ರೆಂಡ್ ಶಿಪ್ ಇಂದ ದೂರ ಇರಲು ಆಗದೇ, ನೀವು ಅವರನ್ನ ಮಾತನಾಡಲು ಕನ್ವಿನ್ಸ್ ಮಾಡುತ್ತಿದ್ರಿ. ಯಾಕೆ.?'' ಎಂಬ ವೂಟ್ ಬಿಗ್ ಪ್ರಶ್ನೆಯನ್ನ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ರಾಕೇಶ್ ಮುಂದೆ ಸುದೀಪ್ ಇಟ್ಟರು.

  'ದಡ್ಡರ ತರಹ ಆಡುತ್ತಿದ್ದೀರಾ': ರಾಕೇಶ್-ಅಕ್ಷತಾ ವಿರುದ್ಧ ಗುಡುಗಿದ ಸುದೀಪ್

  ರಾಕೇಶ್ ಕೊಟ್ಟ ಸಮರ್ಥನೆ

  ರಾಕೇಶ್ ಕೊಟ್ಟ ಸಮರ್ಥನೆ

  ''ಈ ಮನೆಯಲ್ಲಿ ಅಕ್ಷತಾ ಜೊತೆಗೆ ಕನೆಕ್ಷನ್ ಬೆಳೆಯಿತು. ನಮ್ಮಿಬ್ಬರ ಮಧ್ಯೆ ಒಂದೊಳ್ಳೆ ಕನೆಕ್ಷನ್ ಇತ್ತು. ಅದನ್ನ ಯಾಕೆ ಕಳೆದುಕೊಳ್ಳಬೇಕು ಅಂತ ಮಾತನಾಡಿಸಲು ಪ್ರಯತ್ನ ಪಟ್ಟೆ. ವೈಯುಕ್ತಿಕವಾಗಿ ನಾನು ಬಲವಂತ ಮಾಡಿಲ್ಲ, ಕನ್ವಿನ್ಸ್ ಕೂಡ ಮಾಡಿಲ್ಲ. ಪ್ರಯತ್ನ ಮಾಡಿದ್ದೆ, ಆದರೆ ಒಂದೆರಡು ದಿನ ಕಳೆದ ಮೇಲೆ ಬಿಟ್ಟು ಬಿಟ್ಟೆ'' ಎಂದು ತಮ್ಮ ನಡೆಯನ್ನ ರಾಕೇಶ್ ಸಮರ್ಥಿಸಿಕೊಂಡರು.

  ಸೂಕ್ಷ್ಮತೆ ಅರ್ಥೈಸಿಕೊಳ್ಳದ, ಹೇಳಿದ್ದನ್ನ ಒಪ್ಪಿಕೊಳ್ಳದ ರಾಕೇಶ್-ಅಕ್ಷತಾಗೆ ಏನನ್ನಬೇಕು.?

  ಎಲ್ಲಾ ಮುಗಿದ ಮೇಲೆ

  ಎಲ್ಲಾ ಮುಗಿದ ಮೇಲೆ

  'ವಾರದ ಕಥೆ ಕಿಚ್ಚನ ಜೊತೆ' ಮುಗಿದ ಮೇಲೆ, ''ಇವತ್ತಾಗಿರುವ ವಿಷಯದಲ್ಲಿ ನನಗೆ ಸ್ವಲ್ಪ ನೆಗೆಟಿವ್ ಆಗಿದೆ. ಯಾಕಂದ್ರೆ, ನಾನೊಂಥರಾ ರಾಂಗ್ ಹುಡುಗ ಅಂತ ತೋರಿಸಿಬಿಟ್ಟರು. ಮಾತನಾಡಿಸಬೇಡ ಅಂತ ಹೇಳಿದ್ದರೂ, ಹೋಗಿ ಮಾತನಾಡಿಸಿದ್ದಕ್ಕೆ ರಾಂಗ್ ಮೆಸೇಜ್ ಬಂತು. ಆದ್ರೆ, ನನಗೆ ನಾನ್ಯಾರು ಅಂತ ಗೊತ್ತಿದೆ. ಹೀಗಾಗಿ ಅದರ ಬಗ್ಗೆ ನಾನು ಟೆನ್ಷನ್ ತೆಗೆದುಕೊಳ್ಳಲ್ಲ'' ಅಂತ ಅಕ್ಷತಾ ಬಳಿ ರಾಕೇಶ್ ಹೇಳಿದರು.

  ರಾಕೇಶ್ ಎಷ್ಟೇ ಬ್ರೇನ್ ವಾಶ್ ಮಾಡಿದರೂ ಅಕ್ಷತಾ ಬಗ್ಗಲಿಲ್ಲ.!

  ಅಕ್ಷತಾ ನಿರ್ಧಾರ

  ಅಕ್ಷತಾ ನಿರ್ಧಾರ

  ''ನಿಮ್ಮ ಫ್ಯಾಮಿಲಿ ಕಡೆಯಿಂದ ಒಂದು ಮೆಸೇಜ್ ಬಂದಿದೆ. ರಾಕೇಶ್ ಇಂದ ದೂರ ಇರು ಅಂತ. ಅದನ್ನ ನಾನು ನಿಮಗೆ ಬಿಡುವೆ. ನೀವು ನಿರ್ಧಾರ ಮಾಡಿ. ಅದಕ್ಕೆ ನಾನು ಗೌರವ ಕೊಡುವೆ'' ಎಂದು ಅಕ್ಷತಾಗೆ ರಾಕೇಶ್ ತಿಳಿಸಿದ್ದಾರೆ.

  ಇನ್ಮುಂದೆ ಹೇಗಿರ್ತಾರೆ.?

  ಇನ್ಮುಂದೆ ಹೇಗಿರ್ತಾರೆ.?

  ಅಕ್ಷತಾ-ರಾಕೇಶ್ ನಡುವಿನ ಗೆಳೆತನ ಇಲ್ಲಿಗೆ ಮುರಿದು ಬೀಳುತ್ತಾ.? ಅಥವಾ ಆಟಕ್ಕಾಗಿ ಅಕ್ಷತಾ-ರಾಕೇಶ್ ಜೊತೆಯಾಗಿ ಸಾಗುತ್ತಾರಾ.? ಎಂಬುದು ಸದ್ಯಕ್ಕೆ ಪ್ರಶ್ನೆಯಾಗಿ ಉಳಿದಿದೆ.

  English summary
  Bigg Boss Kannada 6: Week 7: Akshata gets a audio message from her mother, who tells her to maintain distance with MJ Rakesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X