For Quick Alerts
  ALLOW NOTIFICATIONS  
  For Daily Alerts

  ಮಾಡೋದೆಲ್ಲಾ ಮಾಡಿದ್ರೂ ಸಮರ್ಥನೆ ನೀಡುವಲ್ಲಿ ರಾಕೇಶ್ ಎತ್ತಿದ ಕೈ.!

  |
  Bigg boss kannada season 6 : ಮಾಡೋದೆಲ್ಲಾ ಮಾಡಿದ್ರೂ ಸಮರ್ಥನೆ ನೀಡುವಲ್ಲಿ ರಾಕೇಶ್ ಎತ್ತಿದ ಕೈ.!

  ಹೇಳಿ ಕೇಳಿ ಎಂ.ಜೆ ರಾಕೇಶ್ ರೇಡಿಯೋ ಜಾಕಿ. ಇವರಿಗೆ ಮಾತೇ ಬಂಡವಾಳ. ಮಾತಲ್ಲೇ ಮನೆ ಕಟ್ಟುವ ರಾಕೇಶ್ 'ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಮೈಂಡ್ ಆಗಲು ಎಲ್ಲಾ ರೀತಿಯ ಕಸರತ್ತು ಮಾಡುತ್ತಿದ್ದಾರೆ.

  ಅಕ್ಷತಾ ಜೊತೆಗೆ 'ಬ್ಯಾಟಿಂಗ್' ಮಾಡುತ್ತಿರುವ ರಾಕೇಶ್ ಬಗ್ಗೆ 'ಬಿಗ್ ಬಾಸ್' ಸ್ಪರ್ಧಿಗಳೇ ತಲೆಗೊಂದು ಕಾಮೆಂಟ್ ಮಾಡಿದ್ದರು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ, ಎಲ್ಲದರಲ್ಲೂ ತಾನೇ ಸರಿ ಅಂತ ಸಮರ್ಥಿಸಿಕೊಂಡು ಗೇಮ್ ಬಗ್ಗೆಯೇ ಸದಾ ಪ್ಲಾನ್ ಮಾಡುವಲ್ಲಿ ರಾಕೇಶ್ ಸಕ್ರಿಯರಾಗಿದ್ದಾರೆ.

  ''ರಾಕೇಶ್ ಜೊತೆಗೆ ಒಂದು ವಾರ ಮಾತನಾಡುವುದಿಲ್ಲ'' ಅಂತ ಸುದೀಪ್ ಗೆ ಅಕ್ಷತಾ ಮಾತು ಕೊಟ್ಟಿದ್ದರೂ, ಅದನ್ನ ಗೌರವಿಸದೇ... ಪದೇ ಪದೇ ಅಕ್ಷತಾ ಬಳಿ ಹೋಗಿ ರಾಕೇಶ್ ಬ್ರೇನ್ ವಾಶ್ ಮಾಡಿದ್ದರು. 'ಬ್ಯಾಟಿಂಗ್ ಆಡೋಣ' ಅಂತ ಕನ್ವಿನ್ಸ್ ಮಾಡಿದ್ದರು.

  ಮಾತು ತಪ್ಪಿದಕ್ಕೆ ಸುದೀಪ್ ಮುಂದೆ ತಲೆ ಬಾಗಿ ಕ್ಷಮೆ ಕೇಳಿದ ಅಕ್ಷತಾ

  ಅಕ್ಷತಾ ಜೊತೆಗೆ ರಾಕೇಶ್ ಈ ರೀತಿ ನಡೆದುಕೊಂಡಿದ್ದು ಯಾಕೆ ಅನ್ನೋದೇ 'ವೂಟ್ ಬಿಗ್ ಪ್ರಶ್ನೆ' ಆಗಿತ್ತು. ಮಾಡಿದ್ದನ್ನ ಒಪ್ಪಿಕೊಳ್ಳದ ರಾಕೇಶ್, 'ವೂಟ್ ಬಿಗ್ ಪ್ರಶ್ನೆ'ಗೂ ಸಮರ್ಥನೆ ಕೊಟ್ಟರು.! ಮುಂದೆ ಓದಿರಿ...

  ವೂಟ್ ಬಿಗ್ ಪ್ರಶ್ನೆ

  ವೂಟ್ ಬಿಗ್ ಪ್ರಶ್ನೆ

  ''ಅಕ್ಷತಾ ಅವರು ನಿಮ್ಮಿಂದ ದೂರ ಇರಲು ಪ್ರಯತ್ನ ಪಟ್ಟರೂ, ತಮಗೆ ಅದು ಒಪ್ಪಿಗೆ ಆಗ್ತಾ ಇಲ್ಲ. ನಿಮಗೆ ಅವರ ಫ್ರೆಂಡ್ ಶಿಪ್ ಇಂದ ದೂರ ಇರಲು ಆಗದೇ, ನೀವು ಅವರನ್ನ ಮಾತನಾಡಲು ಕನ್ವಿನ್ಸ್ ಮಾಡುತ್ತಿದ್ರಿ. ಯಾಕೆ.?'' ಎಂಬ ವೂಟ್ ಬಿಗ್ ಪ್ರಶ್ನೆಯನ್ನ ರಾಕೇಶ್ ಮುಂದೆ ಸುದೀಪ್ ಇಟ್ಟರು.

  ಸೂಕ್ಷ್ಮತೆ ಅರ್ಥೈಸಿಕೊಳ್ಳದ, ಹೇಳಿದ್ದನ್ನ ಒಪ್ಪಿಕೊಳ್ಳದ ರಾಕೇಶ್-ಅಕ್ಷತಾಗೆ ಏನನ್ನಬೇಕು.?

  ರಾಕೇಶ್ ಕೊಟ್ಟ ಸಮರ್ಥನೆ

  ರಾಕೇಶ್ ಕೊಟ್ಟ ಸಮರ್ಥನೆ

  ''ಈ ಮನೆಯಲ್ಲಿ ಅಕ್ಷತಾ ಜೊತೆಗೆ ಕನೆಕ್ಷನ್ ಬೆಳೆಯಿತು. ನಮ್ಮಿಬ್ಬರ ಮಧ್ಯೆ ಒಂದೊಳ್ಳೆ ಕನೆಕ್ಷನ್ ಇತ್ತು. ಅದನ್ನ ಯಾಕೆ ಕಳೆದುಕೊಳ್ಳಬೇಕು ಅಂತ ಮಾತನಾಡಿಸಲು ಪ್ರಯತ್ನ ಪಟ್ಟೆ. ವೈಯುಕ್ತಿಕವಾಗಿ ನಾನು ಬಲವಂತ ಮಾಡಿಲ್ಲ, ಕನ್ವಿನ್ಸ್ ಕೂಡ ಮಾಡಿಲ್ಲ. ಪ್ರಯತ್ನ ಮಾಡಿದ್ದೆ, ಆದರೆ ಒಂದೆರಡು ದಿನ ಕಳೆದ ಮೇಲೆ ಬಿಟ್ಟು ಬಿಟ್ಟೆ'' ಎಂದು ತಮ್ಮ ನಡೆಯನ್ನ ರಾಕೇಶ್ ಸಮರ್ಥಿಸಿಕೊಂಡರು.

  ತಾನೇ ಸರಿ ಎನ್ನುವ 'ಸ್ವಾರ್ಥಿ' ರಾಕೇಶ್ ಬಾಯಿಗೆ ಬೀಗ ಜಡಿದ ಸುದೀಪ್.!

  ಈಗ ಅರ್ಥ ಆಗಿದೆ.!

  ಈಗ ಅರ್ಥ ಆಗಿದೆ.!

  ವೂಟ್ ಬಿಗ್ ಪ್ರಶ್ನೆ ಬಂದ ಮೇಲೆ ''ನನ್ನನ್ನ ನೆಗೆಟಿವ್ ಆಗಿ ತೋರಿಸಿದ್ದಾರೆ. ನನಗೆ ಗೊತ್ತು ನಾನು ಏನು ಅಂತ.. ಹೀಗಾಗಿ ನಾನು ಟೆನ್ಷನ್ ಮಾಡಿಕೊಳ್ಳಲ್ಲ'' ಅಂತ ಅಕ್ಷತಾ ಬಳಿ ಹೋಗಿ ರಾಕೇಶ್ ಹೇಳಿದ್ದಾರೆ.

  ರಾಕೇಶ್ ಎಷ್ಟೇ ಬ್ರೇನ್ ವಾಶ್ ಮಾಡಿದರೂ ಅಕ್ಷತಾ ಬಗ್ಗಲಿಲ್ಲ.!

  ಮುಂದೆ ಹೇಗಿರ್ತಾರೆ.?

  ಮುಂದೆ ಹೇಗಿರ್ತಾರೆ.?

  ಒಂದು ಕಡೆ ವೂಟ್ ಬಿಗ್ ಪ್ರಶ್ನೆ. ಇನ್ನೊಂದು ಅಕ್ಷತಾ ತಾಯಿ ಕಡೆಯಿಂದ ಬಂದ ವಾಯ್ಸ್ ಮೆಸೇಜ್. ಎರಡನ್ನೂ ಕೇಳಿ ತಮ್ಮ ತಪ್ಪನ್ನ ಅರ್ಥ ಮಾಡಿಕೊಂಡು ರಾಕೇಶ್ ಇರ್ತಾರೋ, ಅಥವಾ ಮರಳಿ ಅಕ್ಷತಾ ಜೊತೆಗೆ 'ಬ್ಯಾಟಿಂಗ್' ಶುರು ಮಾಡುತ್ತಾರೋ.. ನೋಡಬೇಕು.

  English summary
  Bigg Boss Kannada 6: Week 7: Voot Big Question for MJ Rakesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X