For Quick Alerts
  ALLOW NOTIFICATIONS  
  For Daily Alerts

  ನಂಬಿದ್ರೆ ನಂಬಿ...ಮೂರು ಬೊಂಬೆಗಳಿಂದ ಆಂಡಿಗೆ ಹೊಸ ಹುರುಪು ಬಂದಿದೆ.!

  |
  Bigg Boss Kannada Season 6: ನಂಬಿದ್ರೆ ನಂಬಿ...ಮೂರು ಬೊಂಬೆಗಳಿಂದ ಆಂಡಿಗೆ ಹೊಸ ಹುರುಪು ಬಂದಿದೆ.!

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಮೂರು ಬೊಂಬೆಗಳ ರೂಪದಲ್ಲಿ ಮೇಘಶ್ರೀ, ಜೀವಿತಾ ಮತ್ತು ನಿವೇದಿತಾ ಗೌಡ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿದ್ದಾರೆ.

  ಈ ಮೂವರು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೇಲೆ ಆಂಡಿಗೆ ಪಾಸಿಟಿವಿಟಿ ಹೆಚ್ಚಾಗಿದ್ಯಂತೆ. ಹೀಗಾಗಿ, ಆಂಡಿ ಯಾರಿಗೂ ಕಿರಿಕಿರಿ ಮಾಡುತ್ತಿಲ್ಲ.!

  ನಂಬಿದ್ರೆ ನಂಬಿ... ಮೂವರು ಹುಡುಗಿಯರು ಬಂದ್ಮೇಲೆ ಆಂಡಿ ಬದಲಾಗಿದ್ದಾರೆ ಅಂತ ಸ್ವತಃ ಶಶಿ ಕುಮಾರ್ ಹೇಳಿದ್ದಾರೆ. ಶಶಿ ಮಾತನ್ನ ಆಂಡಿ ಕೂಡ ಅಕ್ಷರಶಃ ಒಪ್ಪುತ್ತಾರೆ.

  ರಾಕೇಶ್ ಗೆ ಮಾನ, ಮರ್ಯಾದೆ ಇಲ್ಲ ಎಂದ ಆಂಡಿ: ಕಣ್ಣೀರಿಟ್ಟ ಅಕ್ಷತಾ.!

  ''ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಶುರುವಾದ ಮೇಲೆ ನನ್ನಲ್ಲಿ ನೆಗೆಟಿವಿಟಿ ಜಾಸ್ತಿ ಆಯ್ತು. ಅದನ್ನೇ ಇಲ್ಲಿಯವರೆಗೂ ಕ್ಯಾರಿ ಮಾಡಿದೆ. ನನ್ನಲ್ಲಿ ಇರುವ ಪಾಸಿಟಿವಿಟಿ ಮರೆತು ಹೋಗಿದ್ದೆ. ಮೂರು ಜನ ತುಂಬಾ ಪಾಸಿಟಿವಿಟಿ ತಂದಿದ್ದಾರೆ. ಹೀಗಾಗಿ ನನಗೆ ಚೇಂಜ್ ಓವರ್ ಸಿಕ್ಕಿದೆ. ನನಗೆ ವೈಲ್ಡ್ ಕಾರ್ಡ್ ಸಿಕ್ಕ ಹಾಗಾಗಿದೆ'' ಎಂದು ಸುದೀಪ್ ಮುಂದೆ ಆಂಡ್ರ್ಯೂ ಖುಷಿಯಿಂದ ಹೇಳಿಕೊಂಡಿದ್ದಾರೆ.

  ಮಾತು ತಪ್ಪಿದ ಆಂಡಿ: ಈ ಚೆಂದಕ್ಕೆ ಆ ಡ್ರಾಮಾ ಬೇಕಿತ್ತಾ.?

  ಜೊತೆಗೆ ಆಡಿದ ಮಾತಿನ ಪರಿಣಾಮ, ಅರ್ಧ ತಲೆ ಬೋಳಿಸಿಕೊಂಡ ಆಂಡಿ ಇನ್ಮುಂದೆ ಚೆನ್ನಾಗಿ ಆಡುವ ಭರವಸೆ ಕೊಟ್ಟಿದ್ದಾರೆ.

  'ಅರ್ಧ ತಲೆ ಬೋಳಿಸಿಕೊಳ್ಳುವೆ' ಎಂದು ಹೊಸ ಸವಾಲೆಸೆದ ಆಂಡಿ.!

  ಅಂದ್ಹಾಗೆ ನಿವೇದಿತಾ ಗೌಡಗೆ ಆಂಡಿ ಕಂಡ್ರೆ ಇಷ್ಟ ಅಂತೆ. ಹಾಗಾದ್ರೆ, ಇನ್ಮುಂದೆ ಆಂಡಿ ಕಿರಿಕಿರಿ ಮಾಡುವುದನ್ನು ನಿಲ್ಲಿಸುತ್ತಾರಾ.? 'ಬಿಗ್ ಬಾಸ್' ಮನೆಯಲ್ಲಿ ಯಾವಾಗ, ಏನಾಗುತ್ತೆ ಅಂತ ಹೇಳುವುದು ಕಷ್ಟ ಬಿಡಿ.!

  English summary
  Bigg Boss Kannada 6: Week 8: Andrew gets positivity from wild card contestants.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X