ಬಿಗ್ ಬಾಸ್.. ಈ ಬಾರಿ ನೀವು ವೀಕ್ಷಕರಿಗೆ ಈ ಅವಕಾಶ ನೀಡಿಲ್ಲ ಯಾಕೆ.?
'ಬಿಗ್ ಬಾಸ್ ಕನ್ನಡ'ದಲ್ಲಿ ಈಗಾಗಲೇ ಐದು ಆವೃತ್ತಿಗಳು ಪೂರ್ಣಗೊಂಡಿದೆ. ಈ ಐದೂ ಸೀಸನ್ ಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ ನಿಜ. ಆದ್ರೆ, ಕಳೆದ ಆವೃತ್ತಿಗಳಲ್ಲಿ ಇದ್ದ ಒಂದು ಅಂಶ ಈ ಬಾರಿ ಮಿಸ್ ಆಗಿದೆ.
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಅದಾಗಲೇ ಆರು ವಾರಗಳು ಉರುಳಿದೆ. ಈ ಆರು ವಾರಗಳಲ್ಲಿ ಸ್ಪರ್ಧಿಗಳಿಗೆ ನೇರವಾಗಿ ಪ್ರಶ್ನೆ ಕೇಳುವ ಅವಕಾಶ ವೀಕ್ಷಕರಿಗೆ ಸಿಗಲೇ ಇಲ್ಲ.
ಅರ್ಥಾತ್... 'ಕಾಲರ್ ಆಫ್ ದಿ ವೀಕ್'ಗೆ 'ಬಿಗ್ ಬಾಸ್' ಈ ಬಾರಿ ಅವಕಾಶ ಮಾಡಿಕೊಟ್ಟಿಲ್ಲ.

'ಬಿಗ್ ಬಾಸ್' ಕಾರ್ಯಕ್ರಮವನ್ನು ಪ್ರತಿ ದಿನ ನೋಡುವ ವೀಕ್ಷಕರ ತಲೆಯಲ್ಲಿ ಕೆಲವೊಂದು ಪ್ರಶ್ನೆಗಳು ಇದ್ದೇ ಇರುತ್ತದೆ. ಆ ಪ್ರಶ್ನೆಗಳಿಗೆ ಉತ್ತರ ಪಡೆಯಲು ಲಕ್ಕಿ ವೀಕ್ಷಕರೊಬ್ಬರಿಗೆ 'ಕಾಲರ್ ಆಫ್ ದಿ ವೀಕ್' ಮೂಲಕ 'ಬಿಗ್ ಬಾಸ್' ಕಳೆದ ಆವೃತ್ತಿಗಳಲ್ಲಿ ಅವಕಾಶ ನೀಡಿದ್ದರು.
ಆದ್ರೆ, ಈ ಬಾರಿ 'ಕಾಲರ್ ಆಫ್ ದಿ ವೀಕ್' ಎಂಬ ಕಾನ್ಸೆಪ್ಟ್ ಇಲ್ಲವೇ ಇಲ್ಲ. 'ವೂಟ್ ಬಿಗ್ ಪ್ರಶ್ನೆ'ಯಲ್ಲಿ ನೀಡಲಾದ ಪ್ರಶ್ನೆಗಳಿಗೆ ವೀಕ್ಷಕರು ವೋಟ್ ಮಾಡಬಹುದೇ ವಿನಃ ವೀಕ್ಷಕರ ನೇರ ಪ್ರಶ್ನೆಗಳಿಗೆ 'ಬಿಗ್ ಬಾಸ್' ಮಣೆ ಹಾಕುತ್ತಿಲ್ಲ.
ಇದು ಸಹಜವಾಗಿ ಕೆಲ ವೀಕ್ಷಕರಿಗೆ ಬೇಸರ ತರಿಸಿದೆ. ಹೀಗಾಗಿ, ತಮಗೆ ಅನಿಸಿದ ಅಭಿಪ್ರಾಯಗಳನ್ನು ವೀಕ್ಷಕರು ಫೇಸ್ ಬುಕ್ ನಲ್ಲೇ ಹಂಚಿಕೊಳ್ಳುತ್ತಿದ್ದಾರೆ.


Click it and Unblock the Notifications











