For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್': ಇಡೀ ಸಂಚಿಕೆಯನ್ನು ಕೊಂದ ಒಂದು ಆಪಲ್.!

  |

  Recommended Video

  Bigg Boss Kannada 7 : Bhoomi Shetty comes to the rescue | FILMIBEAT KANNADA

  'ಬಿಗ್ ಬಾಸ್' ಮನೆಯಲ್ಲಿ ಯಾವ ವಿಚಾರಕ್ಕೆ ಕಿಚ್ಚು ಹೊತ್ತಿಕೊಳ್ಳುತ್ತೋ, ಇಲ್ವೋ.. ಆದರೆ ಅಡುಗೆ ಮನೆ ವಿಷಯಕ್ಕೆ ಮಾತ್ರ ಆಗಾಗ ಬೆಂಕಿ ಹೊತ್ತಿಕೊಳ್ಳುತ್ತಲೇ ಇರುತ್ತೆ. ಈ ಸೀಸನ್ ನಲ್ಲಿ ಮೊದಲ ವಾರ ಶಾಂತವಾಗಿದ್ದ 'ಬಿಗ್ ಬಾಸ್' ಮನೆಯಲ್ಲಿ ಈಗೀಗ ಗಲಾಟೆ ಆರಂಭವಾಗುತ್ತಿದೆ.

  ಊಟದ ವಿಚಾರವಾಗಿ ಕೆಲವರಿಗೆ ಕೆಟ್ಟದಾಗಿ ಬೈಯ್ದರು ಎಂಬ ಕಾರಣಕ್ಕೆ ಜೈಜಗದೀಶ್ ಮತ್ತು ಕಿಶನ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೀಗ ಒಂದೇ ಒಂದು ಆಪಲ್ ಗಾಗಿ ಚೈತ್ರ ಕೋಟೂರು, ಸುಜಾತ ಮತ್ತು ಚಂದನ್ ಆಚಾರ್ ನಡುವೆ ವಾಕ್ಸಮರ ನಡೆದಿದೆ.

  ಎಷ್ಟರಮಟ್ಟಿಗೆ ಅಂದ್ರೆ, ನಿನ್ನೆ ಪ್ರಸಾರವಾದ ಇಡೀ ಸಂಚಿಕೆಯಲ್ಲಿ ಆಪಲ್ ಮಾತ್ರ ಸದ್ದು ಮಾಡಿದೆ. ಒಂದು ಆಪಲ್ ಗಾಗಿ ಒಂದು ಸಂಚಿಕೆ ತುಂಬುವಷ್ಟು ರಂಪ ಮಾಡಿದ್ದಾರೆ 'ಬಿಗ್ ಬಾಸ್' ಸ್ಪರ್ಧಿಗಳು.! ಮುಂದೆ ಓದಿರಿ...

  ರಾತ್ರಿ ಆಪಲ್ ತಿಂದ ಚೈತ್ರ ಕೋಟೂರು

  ರಾತ್ರಿ ಆಪಲ್ ತಿಂದ ಚೈತ್ರ ಕೋಟೂರು

  ಮೊನ್ನೆ ರಾತ್ರಿ ಚೈತ್ರ ಕೋಟೂರು ಒಂದು ಆಪಲ್ ತಿಂದಿದ್ದಾರೆ. ಆಪಲ್ ತಿನ್ನುವ ಮುನ್ನ ಅಡುಗೆ ಮನೆಯ ಡಿಪಾರ್ಟ್ಮೆಂಟ್ ಗೆ ಸೇರಿದ್ದ ಚಂದನ್ ಆಚಾರ್ ಪರ್ಮಿಶನ್ ಕೇಳಿದ್ದಾರೆ. ಚೈತ್ರ ಕೋಟೂರುಗೆ ಚಂದನ್ ಆಚಾರ್ ಪರ್ಮಿಶನ್ ಕೊಟ್ಟಿದ್ದಾರೆ. ಆಪಲ್ ತಿನ್ನುವಾಗ ಅದೇ ಚಂದನ್ ಆಚಾರ್, ಪ್ರತಾಪ್, ರಾಜು ತಾಳಿಕೋಟೆ ಜೊತೆಗೂ ಹಂಚಿಕೊಂಡು ತಿಂದಿದ್ದಾರೆ.

  ನಿಮಗೆ ಗೊತ್ತಾ.. ಚೈತ್ರ ಕೋಟೂರುಗೆ ಈಗಾಗಲೇ ಮದುವೆ ಆಗಿದ್ಯಂತೆ.! ನಿಮಗೆ ಗೊತ್ತಾ.. ಚೈತ್ರ ಕೋಟೂರುಗೆ ಈಗಾಗಲೇ ಮದುವೆ ಆಗಿದ್ಯಂತೆ.!

  ಸುಜಾತ ಪರ್ಮಿಶನ್ ಕೇಳಬೇಕಿತ್ತು.!

  ಸುಜಾತ ಪರ್ಮಿಶನ್ ಕೇಳಬೇಕಿತ್ತು.!

  ಅಡುಗೆ ಮಾಡುವ ಜವಾಬ್ದಾರಿಯನ್ನು ಸುಜಾತ ವಹಿಸಿಕೊಂಡಿದ್ದಾರೆ. ಹೀಗಾಗಿ, ಅಡುಗೆ ಮನೆಯಲ್ಲಿ ಏನನ್ನಾದರೂ ತಿನ್ನುವ ಮುನ್ನ ಸುಜಾತ ಪರ್ಮಿಶನ್ ತೆಗೆದುಕೊಳ್ಳಬೇಕು. ರಾತ್ರಿ ಸುಜಾತ ಮಲಗಿದ್ದರಿಂದ, ಚಂದನ್ ಆಚಾರ್ ಪರ್ಮಿಶನ್ ಕೇಳಿದ್ದಾರೆ ಚೈತ್ರ ಕೋಟೂರು. ''ಆಪಲ್ ತೆಗೆದುಕೊಳ್ಳಿ. ಬೆಳಗ್ಗೆ ಸುಜಾತಗೆ ವಿಷಯ ತಿಳಿಸಿ'' ಎಂದು ಚಂದನ್ ಆಚಾರ್ ಹೇಳಿದ್ದರು. ಬೆಳಗ್ಗೆ ಸುಜಾತ ಗೆ ಚೈತ್ರ ಕೋಟೂರು ಹೇಳುವ ಮುನ್ನ 'ಬಿಗ್ ಬಾಸ್' ಮನೆಯಲ್ಲಿ ಆಪಲ್ ಟಾಪಿಕ್ ರೈಸ್ ಆಗಿತ್ತು.

  ಜೈಜಗದೀಶ್ ಮೇಲೆ ಇದೇನಿದು ಗಂಭೀರ ಆರೋಪ.?ಜೈಜಗದೀಶ್ ಮೇಲೆ ಇದೇನಿದು ಗಂಭೀರ ಆರೋಪ.?

  ಕಳ್ಳಿ ಎಂದ ಸುಜಾತ

  ಕಳ್ಳಿ ಎಂದ ಸುಜಾತ

  ಒಂದು ಆಪಲ್ ವಿಷಯಕ್ಕೆ ದೊಡ್ಡ ರಾದ್ಧಾಂತ ಆಗಿ ''ರಾತ್ರೋರಾತ್ರಿ ಕದ್ದು ತಿನ್ನುತ್ತಾರೆ. ಕಾಮನ್ ಸೆನ್ಸ್ ಇಲ್ಲ. ಇನ್ಮೇಲೆ ಯಾರೂ ಅಡುಗೆ ಮನೆಗೆ ಕಾಲಿಡುವಂತಿಲ್ಲ'' ಅಂತೆಲ್ಲಾ ಹೇಳುತ್ತ ಗರಂ ಆಗಿದ್ದರು ಸುಜಾತ.

  'ಬಿಗ್ ಬಾಸ್ ಕನ್ನಡ-7': ಟಾರ್ಗೆಟ್ ಆದ 'ಅನ್ನಪೂರ್ಣೇಶ್ವರಿ' ಸುಜಾತ'ಬಿಗ್ ಬಾಸ್ ಕನ್ನಡ-7': ಟಾರ್ಗೆಟ್ ಆದ 'ಅನ್ನಪೂರ್ಣೇಶ್ವರಿ' ಸುಜಾತ

  ಕಿರಿಕಿರಿ ಮಾಡಿದ ಚಂದನ್ ಆಚಾರ್

  ಕಿರಿಕಿರಿ ಮಾಡಿದ ಚಂದನ್ ಆಚಾರ್

  ರಾತ್ರಿ ಪರ್ಮಿಶನ್ ಕೊಟ್ಟ ಚಂದನ್ ಆಚಾರ್ ಬೆಳಗ್ಗೆ ಚೈತ್ರ ಕೋಟೂರ್ ಗೆ ಕಿರಿಕಿರಿ ಮಾಡಿದರು. ''ನನ್ನ ಜೊತೆಗೆ ಚಂದನ್ ಕೂಡ ತಿಂದರು'' ಅಂತ ಚೈತ್ರ ಹೇಳಿದ್ದಕ್ಕೆ ಅದು ತಪ್ಪು ಅಂತ ಎಲ್ಲರಲ್ಲಿಯೂ ರಿಜಿಸ್ಟರ್ ಆಗಲು ಪದೇ ಪದೇ ''ಡೀಸೆನ್ಸಿ ಇಲ್ಲ'' ಅಂತ ಹೇಳಿ ಹೇಳಿ ಚೈತ್ರ ಪಿತ್ತ ನೆತ್ತಿಗೇರಿಸಿದರು.

  ಚೈತ್ರ ಕಣ್ಣೀರಧಾರೆ

  ಚೈತ್ರ ಕಣ್ಣೀರಧಾರೆ

  ಚೈತ್ರ ಕೋಟೂರು ಕಂಡ್ರೆ ಕೆಲವರಿಗೆ ಅಷ್ಟಕಷ್ಟೆ. ಎಲ್ಲರೊಂದಿಗೆ ಬೆರೆಯಲು ಆಕೆ ಪ್ರಯತ್ನ ಪಟ್ಟರೂ ಕೆಲವರು ಮಾತ್ರ ಚೈತ್ರ ರನ್ನ ಅನವಶ್ಯಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಹೀಗಾಗಿ ಚೈತ್ರ ಕೋಟೂರು ಮೇಲೆ ತಿರುಗಿ ಬೀಳಲು ಒಂದು ಆಪಲ್ ನೆಪವಾಗಿತ್ತು ಅಷ್ಟೇ.

  ತಾಯಿಯ ಕ್ಷಮೆ ಕೇಳಿ ಭಾವುಕರಾದ ರಾಜು ತಾಳಿಕೋಟೆತಾಯಿಯ ಕ್ಷಮೆ ಕೇಳಿ ಭಾವುಕರಾದ ರಾಜು ತಾಳಿಕೋಟೆ

  ಇಡೀ ಸಂಚಿಕೆಯನ್ನ ಕೊಂದ ಆಪಲ್

  ಇಡೀ ಸಂಚಿಕೆಯನ್ನ ಕೊಂದ ಆಪಲ್

  ಆಲ್ಮೋಸ್ಟ್ ನಿನ್ನೆಯ ಇಡೀ ಸಂಚಿಕೆ ಒಂದು ಆಪಲ್ ಸುತ್ತವೇ ಸುತ್ತಿತ್ತು. ಟಾಸ್ಕ್ ಗಳ ನಡುವೆ ಹೈಲೈಟ್ ಆಗಿದ್ದು ಆಪಲ್ ಕಿತ್ತಾಟ. ಆಪಲ್ ಕಿತ್ತಾಟದಿಂದಾಗಿ ಕೆಲವರು ಚೈತ್ರ ಕೋಟೂರುಗೆ ಹತ್ತರವಾದರೆ, ಹಲವರಿಗೆ ಚಂದನ್ ಆಚಾರ್ ಡಬಲ್ ಗೇಮ್ ಅರ್ಥ ಆಯ್ತು.

  ಚಿತ್ರಕೃಪೆ: ಕಲರ್ಸ್ ಕನ್ನಡ/ವೂಟ್

  English summary
  Bigg Boss Kannada 7: Day 11: Verbal spat over Chandan Achar, Sujatha and Chaitra Kotur over an Apple.
  Friday, October 25, 2019, 9:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X