Don't Miss!
- Sports
ಫಿಟ್ನೆಸ್ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್ ತೇರ್ಗಡೆ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಬುಮ್ರಾ ವಾಪಸ್?
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಓಹ್.. ವಾಸುಕಿ ವೈಭವ್ ಮದುವೆ ಆಗುವ ಹುಡುಗಿ ಭೂಮಿ ಶೆಟ್ಟಿ ತರಹ ಇರ್ಬೇಕು.!
Recommended Video
'ಬಿಗ್ ಬಾಸ್' ಮನೆಯಲ್ಲಿ ಸದ್ದಿಲ್ಲದೆ ಒಂದು ಪ್ರೇಮ ಕಥೆ ಶುರುವಾಗಿದ್ಯಾ.? ಇಂಥ ಒಂದು ಅನುಮಾನ ಮೂಡಲು ಕಾರಣವಾಗಿದ್ದು ನಿನ್ನೆ ಪ್ರಸಾರವಾದ ಸಂಚಿಕೆ. ಅದರಲ್ಲಿ ಸಂಗೀತ ನಿರ್ದೇಶಕ ವಾಸುಕಿ ವೈಭವ್ ತಾವು ಮದುವೆ ಆಗುವ ಹುಡುಗಿ ಹೇಗಿರಬೇಕು ಎಂಬುದನ್ನ ವಿವರಿಸಿದ್ದರು.
ಆ ವಿವರಣೆಯಲ್ಲಿದ್ದ ಎಲ್ಲಾ ಕ್ವಾಲಿಟಿಗಳು ಕಿರುತೆರೆ ನಟಿ ಭೂಮಿ ಶೆಟ್ಟಿಯನ್ನೇ ಬೆಟ್ಟು ಮಾಡಿ ತೋರಿಸುತ್ತಿತ್ತು. ಹಾಗಾದ್ರೆ, ವಾಸುಕಿ ವೈಭವ್ ಮತ್ತು ಭೂಮಿ ಶೆಟ್ಟಿ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದ್ಯಾ.?
ಅಸಲಿಗೆ, ನಿನ್ನ ಆಗಿದ್ದೇನು ಎಂಬುದನ್ನ ಸಂಪೂರ್ಣವಾಗಿ ಹೇಳ್ತೀವಿ ಕೇಳಿ...
ದೊಡ್ಮನೆಯಲ್ಲಿ 'ಬಿಗ್ ಬಾಸ್ ದರ್ಬಾರ್' ಟಾಸ್ಕ್ ನಡೆಯುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಇದೇ ಚಟುವಟಿಕೆಯಲ್ಲಿ ರಾಜ ಜೈಜಗದೀಶ್ ಮುಂದೆ ಸಾಮ್ರಾಜ್ಯದಲ್ಲಿ ಇರುವ ವಧು-ವರರ ಅನ್ವೇಷಣೆ ನಡೆಯಿತು. ಆಗ ಮಲ್ಲಿಗೆಪುರದಿಂದ ಬಂದಿದ್ದ ವಾಸುಕಿ ವೈಭವ್ ರನ್ನ ರಾಜಮಾತೆ ಸುಜಾತ ಪರಿಚಯಿಸಿದರು. ಜೊತೆಗೆ ವಾಸುಕಿ ವೈಭವ್ ಮದುವೆ ಆಗುವ ಹುಡುಗಿಯಲ್ಲಿ ಇರಬೇಕಾದ ಗುಣಗಳನ್ನು ಬಹಿರಂಗ ಪಡಿಸಿದರು.
ಚೈತ್ರಾಗೆ
ಸಿಕ್ಕ
ವಿಶೇಷ
ಅಧಿಕಾರದಿಂದ
ವಾಸುಕಿ
ವೈಭವ್
ಗೆ
ಸಂಕಷ್ಟ
ವಾಸುಕಿ ವೈಭವ್ ಮದುವೆ ಆಗುವ ಹುಡುಗಿಗೆ ಅಡುಗೆ ಗೊತ್ತಿರಬೇಕು. ಗುಂಗುರು ಕೂದಲು ಇರಬೇಕು, ಗುಂಡು ಮುಖ ಇರಬೇಕು, ಸಂಪಿಗೆ ಮೂಗು ಇರಬೇಕು, ಮೂಗುತಿ ಸುಂದರಿ ಆಗಿರಬೇಕು, ದಾಳಿಂಬೆ ತರಹ ಹಲ್ಲುಗಳಿರಬೇಕು. ನಕ್ಕರೆ ಸೀದಾ ಹೋಗಿ ಕೆನ್ನೆಗೆ ಮುತ್ತು ಕೊಡುವಂತಿರಬೇಕು. ಗೋಧಿಬಣ್ಣ, ಜೇನು ತುಪ್ಪದ ಬಣ್ಣ ಇದ್ದರೂ ನಡೆಯುತ್ತದೆ. ಹಸನ್ಮುಖಿ ಆಗಿರಬೇಕು. ಕಲೆಯಲ್ಲಿ ಅಭಿರುಚಿ ಇರಬೇಕು. ಸೈಲೆಂಟ್ ಆಗಿ ಇರಬೇಕು. ವರದಕ್ಷಿಣೆ ಬೇಡ. ದುಡ್ಡಿನ ವ್ಯಾಮೋಹ ಇರಬಾರದು.
ವಾಸುಕಿ ವೈಭವ್ ಪಟ್ಟಿ ಮಾಡಿದ್ದ ಈ ಎಲ್ಲಾ ಗುಣಗಳನ್ನು ಸುಜಾತ ಓದುತ್ತಿದ್ದರೆ, ಕ್ಯಾಮರಾಗಳು ಭೂಮಿ ಶೆಟ್ಟಿಯನ್ನೇ ಫೋಕಸ್ ಮಾಡುತ್ತಿತ್ತು. ಅಲ್ಲಿಗೆ, ಭೂಮಿ ಶೆಟ್ಟಿ ಮೇಲೆ ವಾಸುಕಿ ವೈಭವ್ ಗೆ ಮನಸ್ಸಾಗಿದ್ಯಾ.? ಭೂಮಿ ಶೆಟ್ಟಿ ಮತ್ತು ವಾಸುಕಿ ವೈಭವ್ ಪರಸ್ಪರ ಇಷ್ಟ ಪಡುತ್ತಿದ್ದಾರಾ.? ಈ ಡೌಟ್ 'ಬಿಗ್ ಬಾಸ್' ಮನೆಯಲ್ಲಿ ಇರುವ ಕಿಶನ್ ಗೂ ಬಂದಿದೆ. ಅದನ್ನ ನೇರವಾಗಿ ವಾಸುಕಿ ವೈಭವ್ ಗೆ ಕೇಳಿದಾಗ ''ಭೂಮಿ ಶೆಟ್ಟಿ ಇನ್ನೂ ತುಂಬಾ ಚಿಕ್ಕ ಹುಡುಗಿ. ಹಾಗೇನಿಲ್ಲ'' ಎಂದು ಸ್ಪಷ್ಟ ಪಡಿಸಿದರು.
ಕುಂದಾಪುರದ
ಮೀನು
ರಾಯಲ್
ಶೆಟ್ರನ್ನ
ಮೆಚ್ಚಿದ
ಕಿಚ್ಚ
ಸುದೀಪ್.!
ಏನೇ ಇರಲಿ, ಬಿಡಲಿ... ಟಾಸ್ಕ್ ಗಾಗಿಯೋ ಅಥವಾ ಟಾಸ್ಕ್ ಹೊರತಾಗಿಯೋ.. ಒಟ್ನಲ್ಲಿ 'ಬಿಗ್ ಬಾಸ್' ಮನೆಯಲ್ಲಿ ವಾಸುಕಿ ವೈಭವ್ ಮತ್ತು ಭೂಮಿ ಶೆಟ್ಟಿಯನ್ನ ಮ್ಯಾಚ್ ಮಾಡಲಾಗಿದೆ.