For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಅರಿವಿಗೆ ಬಂತು ಚೈತ್ರ ಕೋಟೂರು ಗೇಮ್ ಪ್ಲಾನ್.!

  |

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಅದಾಗಲೇ ಮೂರು ವಾರಗಳು ಉರುಳಿವೆ. ಮೊದಲ ಎರಡು ವಾರ 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ಸದ್ದು ಮಾಡಿದವರು ಯಾರು ಅಂದ್ರೆ ಎಲ್ಲರಿಗೂ ಥಟ್ ಅಂತ ನೆನಪಾಗುವ ಹೆಸರು ರವಿ ಬೆಳಗೆರೆ ಬಿಟ್ಟರೆ ಚೈತ್ರ ಕೋಟೂರು.

  ಹೌದು, ಮೊದಲ ಎರಡು ವಾರ ಶೈನ್ ಶೆಟ್ಟಿ ಜೊತೆಗಿನ ಲವ್ ಆಂಗಲ್, ಆಪಲ್ ಗಲಾಟೆ ಸೇರಿದಂತೆ ಹಲವು ವಾದ-ವಿವಾದ-ವಾಕ್ಸಮರಗಳಿಗೆ ಚೈತ್ರ ಕೋಟೂರು ಸಾಕ್ಷಿ ಆಗಿದ್ದರು. ಕಾಕತಾಳೀಯ ಅಂದ್ರೆ ಈ ಎರಡೂ ವಾರಗಳು ಚೈತ್ರ ಕೋಟೂರು ನಾಮಿನೇಟ್ ಆಗಿದ್ದರು.

  ಎರಡು ವಾರ ಪಟಾಕಿಯಂತೆ ಸೌಂಡ್ ಮಾಡಿದ ಚೈತ್ರ ಕೋಟೂರು ಮೂರನೇ ವಾರ ಸೈಲೆಂಟ್ ಆಗಿದ್ದರು. ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಷಯ ಏನಂದ್ರೆ ಮೂರನೇ ವಾರ ಚೈತ್ರ ಕೋಟೂರು ನಾಮಿನೇಟ್ ಆಗಿರಲಿಲ್ಲ. ಸೇಫ್ ಆಗಿದ್ದ ಕಾರಣ ಚೈತ್ರ ಕೋಟೂರು ಕ್ಯಾಮರಗಳಲ್ಲಿ ಫೋಕಸ್ ಆಗಲು ಪ್ರಯತ್ನ ಪಡಲಿಲ್ವಾ.? ಹೀಗೊಂದು ಅನುಮಾನ ವೀಕ್ಷಕರಲ್ಲಿದೆ.

  ಇದನ್ನೇ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಚೈತ್ರ ಕೋಟೂರು ಬಳಿ ಪ್ರಶ್ನಿಸಿದರು. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

  ಪ್ರಶ್ನೆ ಮಾಡಿದ ಕಿಚ್ಚ ಸುದೀಪ್

  ಪ್ರಶ್ನೆ ಮಾಡಿದ ಕಿಚ್ಚ ಸುದೀಪ್

  ''ಈ ವಾರ ತುಂಬಾ ಸೈಲೆಂಟ್ ಆಗಿದ್ರಿ. ಕಳೆದ ಎರಡು ವಾರ ಒಳ್ಳೆಯ ಎನರ್ಜಿ ಇತ್ತು. ಆದರೆ ಈ ವಾರ ಉತ್ಸಾಹ ಕಮ್ಮಿ ಇತ್ತು. ಮುಂಚೆ ಇದ್ದ ಚೈತ್ರ ಕೋಟೂರು ಈ ವಾರ ಇರಲಿಲ್ಲ. ನೀವು ಆಕ್ಟೀವ್ ಆಗಿರಬೇಕು ಅಂದ್ರೆ ನಾಮಿನೇಟ್ ಆಗಿರಬೇಕು'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಚೈತ್ರ ಕೋಟೂರುಗೆ ಸುದೀಪ್ ಪ್ರಶ್ನಿಸಿದರು. ಅದಕ್ಕೆ ಚೈತ್ರ ಕೋಟೂರು ಕೊಟ್ಟ ಉತ್ತರ ಏನ್ಗೊತ್ತಾ.?

  'ಮಜಾ'ಕ್ಕಾಗಿ ಚೈತ್ರ ಕೋಟೂರು ಹೀಗೆಲ್ಲ ಮಾಡ್ತಿದ್ದಾರಾ.?'ಮಜಾ'ಕ್ಕಾಗಿ ಚೈತ್ರ ಕೋಟೂರು ಹೀಗೆಲ್ಲ ಮಾಡ್ತಿದ್ದಾರಾ.?

  ಚೈತ್ರ ಕೋಟೂರು ಕೊಟ್ಟ ಉತ್ತರ ಏನು.?

  ಚೈತ್ರ ಕೋಟೂರು ಕೊಟ್ಟ ಉತ್ತರ ಏನು.?

  ''ಎರಡು ವಾರ ನಾನು ನಾಮಿನೇಟ್ ಆಗಿದ್ದರಿಂದ ಒಂದು ಆಸೆ ಬಂದಿತ್ತು. ಒಂದು ವಾರ ನಾಮಿನೇಟ್ ಆಗದೇ ಇರಬೇಕು ಅಂತ ತುಂಬಾ ಅನಿಸಿತ್ತು. ನನ್ನ ಇಚ್ಛೆಯಂತೆ ಈ ವಾರ ಆಯ್ತು. ಈ ವಾರ ನಾನು ಹೆಚ್ಚು ತೊಡಗಿಸಿಕೊಳ್ಳುವುದಕ್ಕಿಂತ ಎಲ್ಲರನ್ನೂ ಗಮನಿಸುತ್ತಿದ್ದೆ'' ಎಂದು ಕಿಚ್ಚ ಸುದೀಪ್ ಗೆ ಚೈತ್ರ ಕೋಟೂರು ಸಬೂಬು ನೀಡಿದರು.

  ನಿಮಗೆ ಗೊತ್ತಾ.. ಚೈತ್ರ ಕೋಟೂರುಗೆ ಈಗಾಗಲೇ ಮದುವೆ ಆಗಿದ್ಯಂತೆ.!ನಿಮಗೆ ಗೊತ್ತಾ.. ಚೈತ್ರ ಕೋಟೂರುಗೆ ಈಗಾಗಲೇ ಮದುವೆ ಆಗಿದ್ಯಂತೆ.!

  ಎಲ್ಲರ ಅಭಿಪ್ರಾಯ ಕೂಡ ಇದೇ.!

  ಎಲ್ಲರ ಅಭಿಪ್ರಾಯ ಕೂಡ ಇದೇ.!

  ''ಚೈತ್ರ ಕೋಟೂರು ಖಂಡಿತ ಸೈಲೆಂಟ್ ಆಗಿದ್ದರು. ನಾಮಿನೇಟ್ ಆಗಿಲ್ಲ ಎಂಬ ಖುಷಿಯಲ್ಲಿ ತೇಲಾಡುತ್ತಿದ್ದರು. ಇದೇ ನಿಜವಾದ ಚೈತ್ರ ಅಂತ ನನಗೆ ಅನಿಸುತ್ತದೆ'' ಎಂದು ಸುದೀಪ್ ಮುಂದೆ ಹರೀಶ್ ರಾಜ್ ಹೇಳಿದರು. ಇನ್ನೂ ಸುಜಾತ ಕೂಡ ''ಚೈತ್ರ ಎಲ್ಲರ ಜೊತೆ ಬೆರೆಯುತ್ತಿದ್ದಾರೆ. ಮುಂಚೆ ತುಂಬಾ ಅಗ್ರೆಸ್ಸಿವ್ ಆಗಿದ್ದರು. ಈಗ ಆ ಅಗ್ರೆಸ್ಸಿವ್ನೆಸ್ ಸ್ವಲ್ಪ ಕಮ್ಮಿ ಆಗಿದೆ'' ಎಂದರು.

  ಇದು ಕಾಳ್ ಹಾಕ್ತಿರೋದಾ ಇಲ್ಲ ಗೇಮ್ ಸ್ಟ್ರಾಟೆಜಿನಾ.? ಚೈತ್ರ ತಲೆಯಲ್ಲಿ ಏನಿದೆ.?ಇದು ಕಾಳ್ ಹಾಕ್ತಿರೋದಾ ಇಲ್ಲ ಗೇಮ್ ಸ್ಟ್ರಾಟೆಜಿನಾ.? ಚೈತ್ರ ತಲೆಯಲ್ಲಿ ಏನಿದೆ.?

  ಸುದೀಪ್ ಅರಿವಿಗೆ ಬಂತು ಚೈತ್ರ ಗೇಮ್ ಪ್ಲಾನ್

  ಸುದೀಪ್ ಅರಿವಿಗೆ ಬಂತು ಚೈತ್ರ ಗೇಮ್ ಪ್ಲಾನ್

  ನಾಮಿನೇಟ್ ಆದಾಗ ಏನಾದರೂ ಒಂದು ಕಿರಿಕ್ ಮಾಡಿಕೊಳ್ಳುವುದು.. ಕಣ್ಣೀರು ಹಾಕಿ ಸಿಂಪಥಿ ಗಿಟ್ಟಿಸಿಕೊಳ್ಳುವುದು.. ಚರ್ಚೆಯ ಕೇಂದ್ರಬಿಂದು ಆಗುವುದು.. ನಾಮಿನೇಟ್ ಆಗದೇ ಇದ್ದಾಗ ಸೈಲೆಂಟ್ ಆಗಿ ಸೈಡ್ ನಲ್ಲಿರುವುದು ಸದ್ಯಕ್ಕೆ ಚೈತ್ರ ಕೋಟೂರು ಗೇಮ್ ಪ್ಲಾನ್ ಆಗಿದೆ. ಇದು ಸುದೀಪ್ ಅರಿವಿಗೆ ಬಂದಿರುವ ಕಾರಣ ಚೈತ್ರ ಕೋಟೂರು ರನ್ನ ಪ್ರಶ್ನಿಸಿದ್ದಾರೆ. ''ವ್ಯತ್ಯಾಸ ಎದ್ದು ಕಾಣುತ್ತಿರುವುದಕ್ಕೆ ಹೇಳುತ್ತಿದ್ದೇನೆ'' ಅಂತ ಸುದೀಪ್ ಪದೇ ಪದೇ ಹೇಳಿದರೂ ಚೈತ್ರ ಕೋಟೂರು ಸಬೂಬು ನೀಡುತ್ತಿದ್ದರು. ಅಂದ್ಹಾಗೆ, ಚೈತ್ರ ಕೋಟೂರು ಸ್ಟ್ರಾಟೆಜಿ ಮಾಡಿಕೊಂಡು ಆಡುತ್ತಿದ್ದಾರೆ ಅಂತ ನಿಮಗೂ ಅನಿಸುತ್ತಾ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Bigg Boss Kannada 7: Day 20: Kiccha Sudeep reveals Chaitra Kotur's game plan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X