For Quick Alerts
  ALLOW NOTIFICATIONS  
  For Daily Alerts

  ಭೂಮಿ ಶೆಟ್ಟಿ-ದೀಪಿಕಾ ದಾಸ್ ಲಿಪ್ ಲಾಕ್: ವಾಸುಕಿ ವೈಭವ್ ಗೆ ಶಾಕ್.!

  |

  ಇಂತಹ ಒಂದು ಘಟನೆ 'ಬಿಗ್ ಬಾಸ್' ಮನೆಯಲ್ಲಿ ನಡೆಯಬಹುದು ಅಂತ ಸಂಗೀತ ನಿರ್ದೇಶಕ ವಾಸುಕಿ ವೈಭವ್ ನಿರೀಕ್ಷೆ ಮಾಡಿದ್ರೋ, ಇಲ್ವೋ..

  ಬೆಳ್ ಬೆಳಗ್ಗೆ ಎದ್ದು.. ನಿದ್ದೆ ಕಣ್ಣಲ್ಲಿ ಸ್ಟೋರ್ ರೂಮ್ ಗೆ ಹೋದ ವಾಸುಕಿ ವೈಭವ್ ಗೆ ದೊಡ್ಡ ಶಾಕ್ ಕಾದಿತ್ತು.

  ಅಲ್ಲಿ ಅಂಥದ್ದೇನಾಗಿತ್ತು ಅಂದ್ರೆ, ಕರಾವಳಿ ಕುವರಿ ಭೂಮಿ ಶೆಟ್ಟಿ ತುಟಿಗೆ 'ನಾಗಿಣಿ' ದೀಪಿಕಾ ದಾಸ್ ತುಟಿ ಒತ್ತಿ ಕಿಸ್ ಕೊಡ್ತಿದ್ರು. ಅದನ್ನ ನೋಡಿ ವಾಸುಕಿ ವೈಭವ್ ಗೆ ತಲೆ ತಿರುಗಿದ ಹಾಗಾಗಿದೆ. ತಕ್ಷಣ ವಾಸುಕಿ ವೈಭವ್ ಕಣ್ಣರಳಿದೆ.

  ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿಯ ಲಿಪ್ ಲಾಕ್ ನೋಡಿ ಶಾಕ್ ಆದ್ಮೇಲೆ ಲಿವಿಂಗ್ ಏರಿಯಾಗೆ ಬಂದು ಹರೀಶ್ ರಾಜ್, ಚಂದನಾ ಮತ್ತು ಚೈತ್ರ ಕೋಟೂರುಗೆ ವಾಸುಕಿ ವೈಭವ್ 'ಕಿಸ್ ಕಹಾನಿ' ವಿವರಿಸಿದರು.

  ದೀಪಿಕಾ ದಾಸ್ 'ಬಿಗ್' ಮನೆಯಲ್ಲಿ ಉಳಿದಿದ್ದರೆ ಅದಕ್ಕೆ 'ಗ್ಲಾಮರ್' ಮಾತ್ರ ಕಾರಣ!ದೀಪಿಕಾ ದಾಸ್ 'ಬಿಗ್' ಮನೆಯಲ್ಲಿ ಉಳಿದಿದ್ದರೆ ಅದಕ್ಕೆ 'ಗ್ಲಾಮರ್' ಮಾತ್ರ ಕಾರಣ!

  ''ಇವರಿಬ್ಬರು (ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ) ಸರಿ ಇಲ್ಲ'' ಅಂತ ಶುರು ಮಾಡಿ 'ಒಂದು ಮುತ್ತಿನ ಕಥೆ' ಹೇಳಿದರು ವಾಸುಕಿ ವೈಭವ್. ಆಗ ನಿದ್ದೆ ಕಣ್ಣಲ್ಲಿ ಏನೇನೋ ಮಾತಾಡ್ತಾ ಇದ್ದಾರೆ ಅಂತ ದೀಪಿಕಾ ದಾಸ್ ಹೇಳಿದ್ರೆ, ''ಇವಾಗ ಕೊಡ್ತೀವಿ ನೋಡಿ'' ಎನ್ನುತ್ತಾ ಭೂಮಿ ಶೆಟ್ಟಿ ಮತ್ತೆ ದೀಪಿಕಾ ದಾಸ್ ಗೆ ಲಿಪ್ ಟು ಲಿಪ್ ಕಿಸ್ ಕೊಟ್ಟರು.

  ರಣರಂಗದ ನಡುವೆಯೂ ಬಿಗ್ ಮನೆಯಲ್ಲಿ ಸದ್ದು ಮಾಡಿದ ಕಿಶನ್ ಕಿಸ್ಸಿಂಗ್ ದೃಶ್ಯರಣರಂಗದ ನಡುವೆಯೂ ಬಿಗ್ ಮನೆಯಲ್ಲಿ ಸದ್ದು ಮಾಡಿದ ಕಿಶನ್ ಕಿಸ್ಸಿಂಗ್ ದೃಶ್ಯ

  'ಬಿಗ್ ಬಾಸ್' ಮನೆಯಲ್ಲಿ ಈ ಕಿಸ್ ಕಹಾನಿ ಅಷ್ಟೊಂದು ಸದ್ದು ಮಾಡಿಲ್ಲ. ವಾಹಿನಿಯಲ್ಲಿ ಪ್ರಸಾರ ಆಗುವ ಸಂಚಿಕೆಯಲ್ಲೂ ಇದು ಪ್ರಸಾರ ಆಗಿಲ್ಲ. ವೂಟ್ ನಲ್ಲಿ ಮಾತ್ರ ಮುತ್ತಿನ ಕ್ಲಿಪ್ ಇರುವುದರಿಂದ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.

  English summary
  Bigg Boss Kannada 7: Day 23: Deepika Das and Bhoomi Shetty lip lock.
  Thursday, November 7, 2019, 15:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X