For Quick Alerts
  ALLOW NOTIFICATIONS  
  For Daily Alerts

  ಅಂದು ವಿಜಯಲಕ್ಷ್ಮಿ ಸಿಂಗ್ ರನ್ನ ಮದುವೆ ಆಗುವುದು ಜೈಜಗದೀಶ್ ಗೆ ಗೊತ್ತೇ ಇರಲಿಲ್ಲ.!

  |
  It was a shocking moment of Jai Jagadish life | FILMIBEAT KANNADA

  ಅದು 80-90 ರ ದಶಕ. ಸ್ಯಾಂಡಲ್ ವುಡ್ ನಲ್ಲಿ ಸ್ಮಾರ್ಟ್ ಹೀರೋ ಜೈಜಗದೀಶ್ ಗಟ್ಟಿಯಾಗಿ ನೆಲೆಯೂರಿದ್ದ ಕಾಲ. ಚಿತ್ರಗಳಲ್ಲಿ ಯಾವುದೇ ಪಾತ್ರ ಕೊಟ್ಟರೂ ಅದನ್ನ ಸಲೀಸಾಗಿ ನಿಭಾಯಿಸುತ್ತಿದ್ದ ಜೈಜಗದೀಶ್ ಗೆ ಗಾಂಧಿನಗರದಲ್ಲಿ ಬೇಡಿಕೆ ಇತ್ತು. ಆಗ ರೂಪ ಎಂಬುವರನ್ನ ಜೈಜಗದೀಶ್ ಪ್ರೀತಿಸಿ, ಮದುವೆ ಆದರು.

  ಮನೆಯವರ ವಿರೋಧ ಇದ್ದರೂ, ಅಭಿಮಾನ್ ಸ್ಟುಡಿಯೋದ ದೇವಸ್ಥಾನದಲ್ಲಿ ಜೈಜಗದೀಶ್-ರೂಪ ವಿವಾಹ ನಡೆದಿತ್ತು. ಆದರೆ, ದಾಂಪತ್ಯದಲ್ಲಿ ಮನಸ್ತಾಪ ಉಂಟಾಗಿ ಜೈಜಗದೀಶ್-ರೂಪ ವಿಚ್ಛೇದನ ಪಡೆದರು.

  ವಿಚ್ಛೇದನ ಪಡೆದ ನಂತರ ಒಂಟಿಯಾಗಿದ್ದ ಜೈಜಗದೀಶ್ ಬಾಳಲ್ಲಿ ತಂಗಾಳಿಯಾಗಿ ಬಂದಿದ್ದು ವಿಜಯಲಕ್ಷ್ಮಿ ಸಿಂಗ್. ಸಿನಿಮಾಗಳಲ್ಲಿ ಜೈಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ಒಟ್ಟಾಗಿ ಅಭಿನಯಿಸುತ್ತಿದ್ದರು. ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ಆದರೆ ಮದುವೆ ಆಗಲು ಜೈಜಗದೀಶ್ ಹಿಂದೇಟು ಹಾಕುತ್ತಿದ್ದರಂತೆ.

  ಇದೇ ಕಾರಣಕ್ಕೆ ಜೈಜಗದೀಶ್ ಗೆ ವಿಷಯ ತಿಳಿಸದೇ ದಿಢೀರ್ ಅಂತ ಮದುವೆ ಏರ್ಪಾಡು ಮಾಡಿದ್ದರಂತೆ ವಿಜಯಲಕ್ಷ್ಮಿ ಸಿಂಗ್. ಈ ಕಥೆಯನ್ನ ಜೈಜಗದೀಶ್ 'ಬಿಗ್ ಬಾಸ್' ಮನೆಯಲ್ಲಿ ಹೇಳಿದ್ದಾರೆ. ಮುಂದೆ ಓದಿರಿ...

  ಮದುವೆ ಸೆಟಪ್ ರೆಡಿ ಇತ್ತು.!

  ಮದುವೆ ಸೆಟಪ್ ರೆಡಿ ಇತ್ತು.!

  ''ನಾನು ಅವತ್ತು ಮೈಸೂರಿಗೆ ಹೊರಟಿದ್ದೆ. ''ನೀನು ಬರುವ ಹೊತ್ತಿಗೆ ಸದರ್ನ್ ಸ್ಟಾರ್ ಹೋಟೆಲ್ ನಲ್ಲಿ ಇರ್ತೀವಿ'' ಅಂತ ವಿಜಯಲಕ್ಷ್ಮಿ ಸಿಂಗ್ ಹೇಳಿದ್ದರು. ನಾನು ರೀಚ್ ಆಗುವ ಹೊತ್ತಿಗೆ 11.30 ಆಗಿತ್ತು. ಒಳಗೆ ಹೋದರೆ ಮದುವೆ ಸೆಟಪ್ ರೆಡಿ ಇತ್ತು'' ಎಂದು ತಮ್ಮ ಎರಡನೇ ಮದುವೆ ಬಗ್ಗೆ ಜೈಜಗದೀಶ್ ಮಾತನಾಡಲು ಆರಂಭಿಸಿದರು.

  ಕನ್ನಡದ ಆ 'ಸೂಪರ್ ಸ್ಟಾರ್' ನೆರವಿನಿಂದ ಜೈಜಗದೀಶ್ ಮೊದಲ ಮದುವೆ ಆಗಿತ್ತು.!ಕನ್ನಡದ ಆ 'ಸೂಪರ್ ಸ್ಟಾರ್' ನೆರವಿನಿಂದ ಜೈಜಗದೀಶ್ ಮೊದಲ ಮದುವೆ ಆಗಿತ್ತು.!

  ಮದುವೆ ಅಂತ ಗೊತ್ತಿರಲಿಲ್ಲ.!

  ಮದುವೆ ಅಂತ ಗೊತ್ತಿರಲಿಲ್ಲ.!

  ''ಇವತ್ತು ನಮ್ಮಿಬ್ಬರ ಮದುವೆ. ಸುಮ್ಮನೆ ಕೂತ್ಕೋ'' ಅಂತ ಅಂದು ವಿಜಯಲಕ್ಷ್ಮಿ ಸಿಂಗ್ ಹೇಳಿದ್ದರಂತೆ. ಮರು ಮಾತನಾಡದೇ ಅವತ್ತು ವಿಜಯಲಕ್ಷ್ಮಿ ಸಿಂಗ್ ಕೊರಳಿಗೆ ಜೈಜಗದೀಶ್ ತಾಳಿ ಕಟ್ಟಿದರು. ವಿಚಿತ್ರ ಅಂದ್ರೆ, ಅವತ್ತು ಮದುವೆ ನಡೆಯುತ್ತೆ ಅಂತ ಜೈಜಗದೀಶ್ ಗೆ ಗೊತ್ತೇ ಇರಲಿಲ್ಲ.

  ಮೊದಲ ಪತ್ನಿ ಮತ್ತು ಮಗಳ ರಹಸ್ಯ ಬಿಚ್ಚಿಟ್ಟು ಬಿಕ್ಕಿ ಬಿಕ್ಕಿ ಅತ್ತ ಜೈ ಜಗದೀಶ್ಮೊದಲ ಪತ್ನಿ ಮತ್ತು ಮಗಳ ರಹಸ್ಯ ಬಿಚ್ಚಿಟ್ಟು ಬಿಕ್ಕಿ ಬಿಕ್ಕಿ ಅತ್ತ ಜೈ ಜಗದೀಶ್

  ದಿಢೀರ್ ಅಂತ ಮದುವೆ ಯಾಕೆ.?

  ದಿಢೀರ್ ಅಂತ ಮದುವೆ ಯಾಕೆ.?

  ವಿಜಯಲಕ್ಷ್ಮಿ ಸಿಂಗ್ ರನ್ನ ಪ್ರೀತಿಸುತ್ತಿದ್ದರೂ, ಮದುವೆಯಾಗುವುದನ್ನು ಜೈಜಗದೀಶ್ ಮುಂದೂಡುತ್ತಿದ್ದರಂತೆ. ಕುಟುಂಬದಲ್ಲಿ ಒತ್ತಡ ಹೆಚ್ಚಾದ ಕಾರಣ ದಿಢೀರ್ ಅಂತ ಮದುವೆಗೆ ವಿಜಯಲಕ್ಷ್ಮಿ ಸಿಂಗ್ ಅರೇಂಜ್ ಮಾಡಿದರು. ಬೇರೆ ದಾರಿ ಇಲ್ಲದೆ ಜೈಜಗದೀಶ್ ಒಪ್ಪಿಕೊಂಡರು.

  ಬುಕ್ ಬರೆಯಬಹುದಂತೆ.!

  ಬುಕ್ ಬರೆಯಬಹುದಂತೆ.!

  ತಮ್ಮ ಮದುವೆ ಕಥೆ ಬಗ್ಗೆ ಒಂದು ಪುಸ್ತಕ ಬರೆಯಬಹುದು ಎಂದಿದ್ದಾರೆ ಜೈಜಗದೀಶ್. ಈಗಾಗಲೇ ಜೈಜಗದೀಶ್ ಬಗ್ಗೆ ಒಂದು ಪುಸ್ತಕ ಬರೆಯುವೆ ಅಂತ ರವಿ ಬೆಳಗೆರೆ ಹೇಳಿದ್ದಾರೆ. ಹಾಗಿದ್ದರೆ, ಪುಸ್ತಕದಲ್ಲಿ ಎರಡು ಮದುವೆಯ ಸವಿವರ ಸಿಗಬಹುದೇನೋ.!

  English summary
  Bigg Boss Kannada 7: Jai Jagadeesh reveals his second marriage story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X